ಕಳೆದ ವಾರವಷ್ಟೇ ದೆಹಲಿ ಯಾತ್ರೆ ಮಾಡಿದ್ದ ಸಿಎಂ ಮತ್ತೆ ಮುಂದಿನ ವಾರ ಡೆಲ್ಲಿಗೆ ಹೋಗೋ ಪ್ಲ್ಯಾನ್ ಹಾಕೊಂಡಿದ್ದಾರೆ. ಸವಾಲುಗಳಿವೆ ಕೇಂದ್ರದ ಜೊತೆ ಉತ್ತಮ ಸಂಬಂಧ ಇರ್ಬೇಕು, ಅದಕ್ಕಾಗಿ ಹೋಗಿ ಬರ್ಲಿ. ಆದ್ರೆ ಪದೇ ಪದೇ ರಾಷ್ಟ್ರ ರಾಜಧಾನಿಗೆ ಹೋಗೋ ಸಿಎಂ ಇತ್ತ ರಾಜ್ಯ ರಾಜಧಾನಿ ಪ್ರವಾಸ ಮಾಡದೇ ಬೆಂಗಳೂರನ್ನ ನಿರ್ಲಕ್ಷಿಸಿದ್ರೆ ಹೇಗೆ? ಹೀಗೊಂದು ಪ್ರಶ್ನೆ ಇದೀಗ ಹುಟ್ಕೊಂಡಿದೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿ ಅಸಮಾಧಾನ ಭುಗಿಲೇಳಬಾರದು. ದೆಹಲಿ ನಾಯಕರಿಗೆ ಕಾಲಕಾಲಕ್ಕೆ …
Read More »ಸಲಗ ಚಿತ್ರವಿಮರ್ಶೆ: ರೌಡಿಸಂ ಲೋಕದ ‘ವಸ್ತುನಿಷ್ಠ ರಗಡ್’ ಅನಾವರಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೃತ್ತಿ ಜೀವನಕ್ಕೆ ಬಹುದೊಡ್ಡ ಬ್ರೇಕ್ ಕೊಟ್ಟ ‘ಓಂ’ ಸಿನಿಮಾದಲ್ಲಿ ನಾಯಕ ಅನಿರೀಕ್ಷಿತವಾಗಿ ಮಚ್ಚು ಹಿಡಿದಿರುತ್ತಾನೆ. ಸಲಗದಲ್ಲಿ, ಪ್ರತೀಕಾರಕ್ಕಾಗಿ ಲಾಂಗ್ ಹಿಡಿಯುತ್ತಾನೆ. ದುನಿಯಾ ವಿಜಯ್ ಆಲಿಯಾಸ್ ವಿಜಯ್ ಕುಮಾರ್ ನಿರ್ದೇಶಿಸಿ, ನಟಿಸಿರುವ ಸಲಗ ಚಿತ್ರದ ಒನ್ ಲೈನ್ ಕಥೆಯಿದು. ‘ವರ್ಲ್ಡ್ ಯಾವ ಕಲರ್ ನಲ್ಲಿದ್ದರೇನು, ಅಂಡರ್ ವರ್ಲ್ಡ್ ಮಾತ್ರ ರೆಡ್ ಕಲರ್’ ಎನ್ನುವ ಡೈಲಾಗುಗಳು ಟೀಸರ್ ನಲ್ಲಿವೆ. ಸಲಗ ‘ಎ’ ಸರ್ಟಿಫಿಕೇಟ್ ಸಿನಿಮಾ. ಹಾಗಾಗಿ, ಚಿತ್ರದಲ್ಲಿ …
Read More »ಬೆಂಗಳೂರಿಗೆ ಹೊರಟಿದ್ದ ಟ್ರಕ್‌ನಲ್ಲಿದ್ದ 9,000 ಮೊಬೈಲ್ ಲೂಟಿ
ಮಥುರಾ: ಬೆಂಗಳೂರಿಗೆ ಹೊರಟಿದ್ದ ಟ್ರಕ್‌ನಿಂದ 7 ಕೋಟಿ ರೂಪಾಯಿ ಮೌಲ್ಯದ ಸುಮಾರು 9,000 ಮೊಬೈಲ್ ಫೋನ್‌ಗಳನ್ನು ಲೂಟಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿಗಳು ಚಾಲಕನನ್ನು ಥಳಿಸಿ ವಾಹನದಿಂದ ಹೊರಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ‘ಒಪ್ಪೋ ಮೊಬೈಲ್ ಕಂಪನಿಯ ಮ್ಯಾನೇಜರ್ ಸಚಿನ್ ಮಾನವ್ ಸಲ್ಲಿಸಿದ ದೂರಿನಲ್ಲಿ, ಫರೂಖಾಬಾದ್ ಜಿಲ್ಲೆಯ ಚಾಲಕ ಮುನೀಶ್ ಯಾದವ್ ಅವರು ಅಕ್ಟೋಬರ್ 5 ರಂದು ಬೆಳಿಗ್ಗೆ ಗ್ರೇಟರ್ ನೋಯ್ಡಾದಿಂದ ಮೊಬೈಲ್‌ಗಳನ್ನು ತುಂಬಿದ್ದ ಟ್ರಕ್ …
Read More »ಸಿಎಂ ನೋಡಲು ಬಂದ ಬಾಲಕನಿಗೆ ಪೊಲೀಸ್ ಏಟು: ರಕ್ತ ಸುರಿಸಿಕೊಂಡು ಹೋದ ಬಾಲಕ
ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮುಖ್ಯಮಂತ್ರಿಯನ್ನು ನೋಡಲು ಬಂದ ಬಾಲಕನ ತಲೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಟೋಪಿಯಿಂದ ಹೊಡೆದಿದ್ದರಿಂದ ಗಾಯವಾಗಿ ರಕ್ತ ಸುರಿದಿದೆ. ನಿತಿನ್ ಎಂಬ ಬಾಲಕ ಗಾಯಗೊಂಡಿದ್ದಾನೆ. ಕಾರ್ಯಕ್ರಮ ಇನ್ನೂ ಆರಂಭವಾಗಿರಲಿಲ್ಲ. ಮುಖ್ಯಮಂತ್ರಿ ಸಹಿತ ಗಣ್ಯರು ಸಭಾಂಗಣಕ್ಕೆ ಬಂದಿರಲಿಲ್ಲ. ಈ ಸಮಯದಲ್ಲಿ ವೇದಿಕೆಯ ಪಕ್ಕಕ್ಕೆ ಬಂದಿದ್ದ ಬಾಲಕನ ತಲೆಗೆ ಪೊಲೀಸರೊಬ್ಬರು ಟೋಪಿಯಿಂದ ಹೊಡೆದಾಗ ಗಾಯವಾಗಿ ರಕ್ತ ಬಂದಿದೆ. ‘ನಾನು ಹೊಡೆದಿಲ್ಲ. ಬಾಲಕನೇ …
Read More »ಡೆಂಘೆ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು
ಗದಗ: ಲಕ್ಷಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಡೆಂಘೆ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಶುಕ್ರವಾರ ಮೃತಪಟ್ಟಿದ್ದಾಳೆ. ವೈಶಾಲಿ ಶಿವಪ್ಪ ಲಮಾಣಿ (16) ಮೃತೆ. ಈಕೆ ಮುಳಗುಂದದ ಮುರಾರ್ಜಿ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ಅ.5ರಂದು ವಸತಿ ಶಾಲೆಯಲ್ಲಿಯೇ ಜ್ವರ ಕಾಣಿಸಿಕೊಂಡಿದ್ದರಿಂದ ಮನೆಗೆ ಆಗಮಿಸಿದ್ದಳು. 7ರಂದು ಲಕ್ಷೆಮೕಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಗುಣವಾಗದ್ದರಿಂದ ಅ.14ರಂದು ಧಾರವಾಡ ಎಸ್ಡಿಎಂಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಾವನ್ನಪ್ಪಿದ್ದಾಳೆ ಎಂದು ಪಾಲಕರು ತಿಳಿಸಿದ್ದಾರೆ.
Read More »ಅನಾಥ ಸಹೋದರಿಯರಿಗೆ ಓದಿಸುವ ಭರವಸೆ ನೀಡಿದ ಸಚಿವ ಆರ್ ಅಶೋಕ್
ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಅಶೋಕ್, ಸ್ಮಶಾನಕ್ಕೆ ಜಾಗ ನೀಡಿದರೆ 25-30 ಲಕ್ಷ ರೂ. ಕೊಡುತ್ತೇವೆ. ಒಂದು ಎಕರೆ ಭೂಮಿಗೆ 25-30 ಲಕ್ಷ ರೂ. ಕೊಡುತ್ತೇವೆ ಅಂತ ತಿಳಿಸಿದ್ದಾರೆ. ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಅಣಜಿ ಗ್ರಾಮದ ಇಬ್ಬರು ಸಹೋದರಿಯರು ತಂದೆ- ತಾಯಿ ಕಳೆದುಕೊಂಡು ಅನಾಥರಾಗಿದ್ದು, ಇಬ್ಬರು ಸಹೋದರಿಯರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ತೆಗೆದುಕೊಂಡಿದ್ದಾರೆ. 10ನೇ ತರಗತಿಯವರೆಗೆ ಓದಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿನಿಯರ …
Read More »ವಿಕಲಚೇತನರಿಗೆ ಇ-ಸ್ಕಾಲರ್ ಶಿಫ್ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಹಾವೇರಿ: ಪ್ರಸಕ್ತ 2021-22 ನೇ ಸಾಲಿಗೆ ಕೇಂದ್ರ ಸರ್ಕಾರದ ಇ-ಸ್ಕಾಲರ್‍ಶಿಪ್ ( E-Scholarship ) ಸೌಲಭ್ಯಕ್ಕೆ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರೀಮೆಟ್ರಿಕ್ ವಿದ್ಯಾರ್ಥಿಗಳು ನವೆಂಬರ್ 15 ರೊಳಗಾಗಿ ಹಾಗೂ ಪೋಸ್ಟ್ ಮೆಟ್ರಿಕ್ ಮತ್ತು ಟಾಪ್‍ಕ್ಲಾಸ್ ವಿದ್ಯಾರ್ಥಿಗಳು ನವೆಂಬರ್ 30 ರೊಳಗಾಗಿ ವೆಬ್‍ಸೈಟ್ https://scholarships.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಾವೇರಿ ತಾ. ಲಕ್ಷ್ಮವ್ವ ಈಳಗೇರ- 9632052188, ಬ್ಯಾಡಗಿ ತಾ.ನಾಗರಾಜ ಅಗಸನಹಳ್ಳಿ- 9900554583, ಶಿಗ್ಗಾಂವ ತಾ. ಸಿದ್ದಪ್ಪ ಮಸಳಿ- …
Read More »ವಿವಾಹಿತ ಅಕ್ಕನ ಜೊತೆ ಡಿಂಗ್ಡಾಂಗ್.. ಎಗ್ ರೈಸ್ ತಿನ್ನಿಸಿ ಖಲ್ಲಾಸ್
ಬೆಂಗಳೂರು: ವ್ಯಕ್ತಿಯೊರ್ವನನ್ನು ಕೊಲೆ ಮಾಡಿ ಮೃತದೇಹವನ್ನು ಪೊಲಿಸ್ ಠಾಣೆಗೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ತನ್ನ ಅಕ್ಕ ಅಪರಿಚತರೊಡನೆ ಸಂಬಂಧ ಹೊಂದಿದ್ದಕ್ಕಾಗಿ ಕೆರಳಿದ ತಮ್ಮ ವ್ಯಕ್ತಿಯನ್ನು ಬರ್ಬರವಾಗಿ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಎಗ್ರೈಸ್ ತಿನ್ನಿಸಿ ಪ್ರಾಣ ತೆಗೆದ ಹಂತಕರು..! ಆರೋಪಿಯ ಅಕ್ಕ ಮೃತ ಭಾಸ್ಕರ್ ನ ಜೊತೆ ಬೇರೆ ಮನೆ ಮಾಡಲು ಅಣಿಯಾಗುವ ಸುದ್ದಿ ಕೇಳಿ ಕೆರಳಿದ್ದ ಆರೋಪಿ ಮುನಿರಾಜು ಕೆಲ ಸಹಚರರೊಂದಿಗೆ ಅಕ್ಕನ …
Read More »ಪೌಷ್ಟಿಕ ಆಹಾರದಿಂದ ಆರೋಗ್ಯ ವೃದ್ಧಿ
ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕಲ್ಯಾ ಗ್ರಾಮದಲ್ಲಿ ಶನಿವಾರ ವಿಶ್ವ ಆಹಾರ ದಿನ ಆಚರಿಸಲಾಯಿತು. ವಿಜ್ಞಾನಿ ಡಾ.ಸೌಜನ್ಯ ಎಸ್. ಮಾತನಾಡಿ, ವಿಶ್ವಸಂಸ್ಥೆಯು ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯ ಗೌರವಾರ್ಥವಾಗಿ ಈ ದಿನದಂದು ವಿಶ್ವದಾದ್ಯಂತ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ ಎಂದರು. ವಿಶ್ವ ಆಹಾರ ದಿನಾಚರಣೆಯು ಮುಖ್ಯವಾಗಿ ಜಾಗತಿಕ ಹಸಿವು ನಿಭಾಯಿಸಲು ಮೀಸಲಾದ ದಿನವಾಗಿದೆ. ಅಂದು ಪ್ರಪಂಚದಾದ್ಯಂತ ಜನರು …
Read More »ಮಂಗಳೂರು ಮಾಲ್‌ಗಳಿಗೆ , ಚಿತ್ರ ಮಂದಿರಗಳಿಗೆ ಭೇಟಿ ನೀಡಲು ಲಸಿಕೆಯ ಎರಡೂ ಲಸಿಕೆ ಕಡ್ಡಾಯ
ಮಂಗಳೂರು,: ನಗರ ಮತ್ತು ದಕ್ಷಿಣ ಕನ್ನಡದ ಇತರೆಡೆ ಜನರು ಕೋವಿಡ್ ವಿರೋಧಿ ಲಸಿಕೆಯನ್ನು ಎರಡು ಡೋಸ್‌ಗಳನ್ನು ತಪ್ಪದೇ ಪಡೆಯಬೇಕು. ಲಸಿಕೆ ಇಲ್ಲದವರು ಮಾಲ್‌ಗಳು ಅಥವಾ ಚಿತ್ರಮಂದಿರಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಈ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಮತ್ತು ಅಧಿಕಾರಿಗಳು ಲಸಿಕೆ ಹಾಕದೆ ಜನರ ಮೇಲೆ ಕಣ್ಣಿಡುತ್ತಾರೆ ಮತ್ತು ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆರಂಭದಲ್ಲಿ, ತಪ್ಪು ಕಲ್ಪನೆಗಳಿಂದಾಗಿ, ಅನೇಕರು ಲಸಿಕೆ ಹಾಕುವುದನ್ನು ಬಿಟ್ಟುಬಿಟ್ಟರು.ಕರೋನವೈರಸ್ ಎರಡನೇ ತರಂಗದ ಸಮಯದಲ್ಲಿ, ಹೆಚ್ಚಿನವರು ಲಸಿಕೆ …
Read More »
Laxmi News 24×7