Breaking News

ರಾಜಕೀಯ

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಾಗರೀಕರಿಗೊಂದು ‘ಸುವರ್ಣಾವಕಾಶ’, ಇಲ್ಲಿದೆ ಮಾಹಿತಿ

ಬೆಂಗಳೂರು: ಭಾರತ ಚುನಾವಣಾ ಆಯೋಗವು ದಿನಾಂಕ 01-01-2022 ರ ಅರ್ಹತಾ ದಿನಾಂಕಕ್ಕೆ ಒಳಪಟ್ಟಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೂರ್ವ ಪರಿಷ್ಕರಣಾ ಕಾರ್ಯಚಟುವಟಿಕೆಗಳಾದ ಮತದಾರರ ಪಟ್ಟಿಗಳಲ್ಲಿ ದೋಷಗಳನ್ನು ಗುರ್ತಿಸಿ ಸರಿಪಡಿಸುವುದು. ಮೃತ ಮತ್ತು ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರ ವಿವರಗಳನ್ನು ಗುರ್ತಿಸಿ ಮಾಹಿತಿಯನ್ನು ಸಂಗ್ರಹಿಸುವುದು. ಮತಗಟ್ಟೆಗಳ ಭೌತಿಕ ಪರಿಶೀಲನೆ ಮುಂತಾದವುಗಳನ್ನು ಆಗಸ್ಟ್ 09 ರಿಂದ ಅಕ್ಟೋಬರ್ 31 ರವರೆಗೆ ಮತಗಟ್ಟೆ …

Read More »

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ವಿಜಯಪುರ : ಬಿಜೆಪಿ ನಾಯಕರು ಹಣ ಹಂಚಿಕೆ ಎಂದು ಜಮೀರ್ ಅಹ್ಮದ್ ತಮ್ಮ ಪಕ್ಷದ ಭಾವನೆಯನ್ನು ಹೊರಹಾಕಿದ್ದಾರೆ. ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕುಟುಕಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಮೀರ್ ಅವರು ಮೊದಲಿನಿಂದ ಅದೇ ಕರಾಮತ್ತು ಮಾಡಿಕೊಂಡು ಬಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ನಿನ್ನೆ 13 ಕಡೆಗಳಲ್ಲಿ ಪ್ರಚಾರ ಸಭೆಗಳನ್ನು ಮಾಡಿದ್ದಾರೆ. ಹಳ್ಳಿಗಳಲ್ಲಿ ಬಿಜೆಪಿ ಪರ ದೊಡ್ಡ …

Read More »

ಲಂಬಾಣಿ ಮಹಿಳೆಯರ ಜೊತೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ

ವಿಜಯಪುರ: ಸಿಂದಗಿ ಬೈಎಲೆಕ್ಷನ್ ಅಖಾಡ(Sindagi By Election) ಇಂದು ಮತ್ತಷ್ಟು ರಂಗೇರಿದೆ. ಮಾಜಿ ಸಿಎಂ ಸಿದ್ದರಾಮಯ್ಯ(siddaramaiah) ಪ್ರಚಾರಕ್ಕಾಗಿ ವಿಜಯಪುರಕ್ಕೆ ಆಗಮಿಸಿದ್ದು ಈ ವೇಳೆ ಅಭಿಮಾನಿಗಳು ಜಯಘೋಷ ಕೂಗಿದ್ದಾರೆ. ಸಿದ್ದರಾಮಯ್ಯ ಸಿಂದಗಿಯಲ್ಲಿ ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಯ್ಯ ಸಾಹೇಬ್ರಗೆ ಜಯ್ ಎಂದು ಅಭಿಮಾನಿಗಳು ಜಯಘೋಷ ಕೂಗಿ ಸ್ವಾಗತಿಸಿದ್ದಾರೆ. ಲಂಬಾಣಿ ನೃತ್ಯ ಮಾಡಿದ ಸಿದ್ದರಾಮಯ್ಯ ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಲಂಬಾಣಿ ಸಮಾಜದ ಮತಗಳನ್ನು ಸೆಳೆಯಲು ಕೈ ತಂತ್ರ ರೂಪಿಸಿದ್ದು …

Read More »

ವಿಧಾನಸೌಧಕ್ಕೆ ಬೀಗ ಜಡಿದು ಪ್ರಚಾರಕ್ಕೆ ಬಂದ ಸಚಿವರು ಎಂಬ ಟೀಕೆಗೆ ಸಿಎಂ ತಿರುಗೇಟು

ವಿಜಯಪುರ: ವಿಧಾನಸೌಧಕ್ಕೆ ಬೀಗ ಜಡಿದು ಸಚಿವರು ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಆ ಥರ ಏನಿಲ್ಲಾ, ಎರಡೆರಡು ಮೂರು ಮೂರು ದಿನ ನಮ್ಮ ಸಚಿವರು ಬಂದು-ಹೋಗಿ ಮಾಡ್ತಿದ್ದಾರೆ. ಅವರು ಹಿಂದೆ ಏನೆಲ್ಲಾ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದೇನೆ, ಯಾವುದೇ ಕೆಲಸಗಳೂ ನಿಂತಿಲ್ಲ. ಎಂದಿದ್ದಾರೆ. ಪ್ರಾದೇಶಿಕ ಪಕ್ಷವನ್ನು ಬಿಜೆಪಿ, ಕಾಂಗ್ರೆಸ್ ಮುಗಿಸುತ್ತವೆ ಎಂಬ ದೇವೇಗೌಡರ …

Read More »

ಖತಲ್‌ ರಾತ್ರಿ ಮಾಡುವವರೇ ಕಾಂಗ್ರೆಸ್ಸಿಗರು: ಬಸವರಾಜ ಬೊಮ್ಮಾಯಿ

ವಿಜಯಪುರ: ‘ಖತಲ್‌ ರಾತ್ರಿ’ ಮಾಡುವವರೇ ಕಾಂಗ್ರೆಸ್ ಪಕ್ಷದವರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸಿಂದಗಿ ಮತಕ್ಷೇತ್ರದ ಕನ್ನೂಳ್ಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ಅಂಗವಾಗಿ ನಡೆದ ರೋಡ್ ಶೋ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ವಾರ್ಥ ರಾಜಕಾರಣ ಮಾಡಿ, ಗಳಿಸಿದ್ದ ಹಣವನ್ನು ಹಂಚುತ್ತಾರೆ ಎಂದು ದೂರಿದರು. ‘ಡಿಕೆಶಿ ವಿವಿಧ ಉಪ ಚುನಾವಣೆಗಳಲ್ಲಿ ಗೋಣಿ ಚೀಲದಲ್ಲಿ ಹಣ ಹಂಚಿದ್ದಾರೆ. ಅವರ ಅನುಭವವನ್ನು ಹೇಳುವ …

Read More »

ಯಾವತ್ತಾದರೂ ಕುರಿ ಕಾಯ್ದಿದ್ದೀರೇನು?: ಸೀನಿಯರ್​-ಜೂನಿಯರ್ ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ

ವಿಜಯಪುರ: ಕಂಬಳಿ ಹಾಕಿಕೊಳ್ಳಲೂ ಯೋಗ್ಯತೆ ಬೇಕು ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿಗೆ ಟಾಂಗ್ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ನೀವೇನಾದರೂ ಕುರಿ ಕಾಯ್ದಿದ್ದೀರೇನು? ಎಂದು ತಿರುಗೇಟು ನೀಡಿದರು. ಸಿಂದಗಿಯಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂದು ಬಸವರಾಜ ಬೊಮ್ಮಾಯಿ ಭಾಷಣ ಬಿಗಿದಿದ್ದಾರೆ. ನಾನು ಕೇಳುತ್ತೇನೆ, ‘ಸೀನಿಯರ್ ಬೊಮ್ಮಾಯಿ, ಬಸವರಾಜ ಬೊಮ್ಮಾಯಿ ಯಾವತ್ತಾದರೂ ಕುರಿ ಕಾಯ್ದಿದ್ದೀರೇನು?’ ಎಂದು ಪ್ರಶ್ನಿಸಿದರು.   ನಾನು ಕುರಿ ಕಾಯ್ದಿದಿನಯ್ಯ..! ಕಂಬಳಿ …

Read More »

ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ವಿಚಾರವಾಗಿ ಸೋಮವಾರ ಟ್ವೀಟ್‌ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದೆ. ‘ವೀರಶೈವ, ಲಿಂಗಾಯತ ಎಂದು ವಿಭಜನೆಯ ಬೆಂಕಿ ಹಚ್ಚಿದ ನೀವು ಯಾವ ಆಧಾರದಲ್ಲಿ ಜಾತಿ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂಬುದಾಗಿ ಹೇಳುತ್ತೀರಿ ಸಿದ್ದರಾಮಯ್ಯ?’ ಎಂದು …

Read More »

ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ: ಹೆಗ್ಗಡೆ

ಬೆಳ್ತಂಗಡಿ: ತೃಪ್ತಿಯ ಜೀವನ ಯಶಸ್ಸಿನ ಜೀವನಕ್ಕಿಂತ ಶ್ರೇಷ್ಠವಾದುದು. 800 ವರ್ಷಗಳ ಪರಂಪರೆಯಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯು ನನಗೆ ದಶಾವತಾರಗಳಲ್ಲಿ ಯೋಜನೆ ರೂಪಿಸಿ ತೃಪ್ತಿಕರ ಜೀವನ ಅನುಗ್ರಹಿಸಿದ್ದಾನೆ. ಶೀಘ್ರವೇ ಧಾರವಾ ಡದ ಎಸ್‌ಡಿಎಂ ವೈದ್ಯಕೀಯ ವಿದ್ಯಾಲಯದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ ಸ್ಥಾಪಿಸುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು. ಚತುರ್ದಾನ ಶ್ರೇಷ್ಠ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ 54ನೇ ವರ್ಷದ ವರ್ಧಂತಿ …

Read More »

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ 54 ನೇ ಪಟ್ಟಾಭಿಷೇಕ

ಬೆಳ್ತಂಗಡಿ: ಮಾನವನ ಸೇವೆಯೇ ಭಗವಂತನ ಸೇವೆ ಎಂಬುದನ್ನು ಅಕ್ಷರಶಃ ನಿರೂಪಿಸಿರುವ ಡಾ. ಹೆಗ್ಗಡೆ ಭಾರತ ರತ್ನಕ್ಕೆ ಅರ್ಹರು ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು. ಅವರು ಧರ್ಮಸ್ಥಳದಲ್ಲಿ ಆದಿತ್ಯವಾರ ನಡೆದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ 54 ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದಲ್ಲಿ ಶುಭಾಶಂಸನೆಗೈದರು. ಧರ್ಮಕ್ಕೆ ಹೊಸ ಸ್ವರೂಪವನ್ನು, ವ್ಯಾಖ್ಯಾನವನ್ನು ಡಾ. ಹೆಗ್ಗಡೆ ನೀಡಿದ್ದಾರೆ. ಪಟ್ಟಾಧಿಕಾರವನ್ನು ಅಧಿಕಾರ ಎಂದು ಭಾವಿಸದೆ ಸೇವಾದೀಕ್ಷೆಯಾಗಿ ಸ್ವೀಕರಿಸಿ ಕ್ಷೇತ್ರವನ್ನು ವಿಸ್ತಾರವಾಗಿ ವೈಶಾಲ್ಯದಿಂದ …

Read More »

ಸಿದ್ದರಾಮಯ್ಯ ಅಂಡ್ ಟೀಂ ಸಿಂಧಗಿಯಲ್ಲಿ ಬೀಡುಬಿಟ್ಟಿರೋದೆ ಜೆಡಿಎಸ್ ಸೋಲಿಸಿ, ಬಿಜೆಪಿಯನ್ನು ಗೆಲ್ಲಿಸೋದಕ್ಕಾಗಿ : ಹೆಚ್ ಡಿ ಕುಮಾರಸ್ವಾಮಿ

ಮೈಸೂರು : ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿ, ಬಿಜೆಪಿ ಗೆಲ್ಲಿಸೋದೆ ಸಿದ್ಧರಾಮಯ್ಯ ಮತ್ತು ಅವರ ತಂಡದ ಉದ್ದೇಶ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಜಿಲ್ಲೆಯ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಜಾತಿ ವಿಷ ಬೀಜ ಬಿತ್ತಿ, ಜಾತಿ ಜಾತಿಗಳನ್ನು ಒಡೆದರು. ಇದೇ ರೀತಿಯಲ್ಲೇ ಉಪ ಚುನಾವಣೆಯಲ್ಲಿ ಜಾತಿವಾರು ಸಭೆ ನಡೆಸಿ, ಜಾತಿ ಒಡೆಯುವಂತ ಕೆಲಸ …

Read More »