ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆ, ಮೋಡ ಕವಿದ ವಾತಾವರಣ ಹಾಗೂ ರೋಗಬಾಧೆಯಿಂದ ರಾಜ್ಯದಲ್ಲಿ ದ್ರಾಕ್ಷಿ ಬೆಳೆ ಅಪಾರ ಹಾನಿಗೊಳಗಾಗಿದೆ. ದ್ರಾಕ್ಷಿ ಬೆಳೆಯುವ ಸುಮಾರು 32,000 ಹೆಕ್ಟೇರ್ ಪ್ರದೇಶದ ಪೈಕಿ ಶೇ 60ರಿಂದ ಶೇ 65ರಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆಯಲ್ಲಿ ಅಂದಾಜು 26,500 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಉಳಿದಂತೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ದ್ರಾಕ್ಷಿ ಗಿಡವನ್ನು ಚಾಟ್ನಿ (ಪ್ರುನಿಂಗ್) …
Read More »ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿ
ಬೆಂಗಳೂರು : ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿಯಾದ ಘಟನೆ ನಡೆದಿದೆ. ಬಾಗಲಗುಂಟೆ ಸಮೀಪದ ಎಂಇಐ ಲೆಯೊಟ್ ನಲ್ಲಿ ತಮಿಳುನಾಡು ಮೂಲದ ಶಿವಕುಮಾರ ಎಂಬಾತ ಆರ್ ಎಸ್ ಟ್ರಾವೆಲ್ಸ್ ಕಂಪನಿ ಆರಂಭಿಸಿದ್ದ,ಮೊದ ಮೊದಲು ಅಟ್ಯಾಚ ಹೆಸರಲ್ಲಿ ಕೆಲವು ವಾಹನಗಳಿಗೆ ತಿಂಗಳು ತಿಂಗಳು ಸರಿಯಾಗಿ ಬಾಡಿಗೆ ಕೊಡುತ್ತಾ ನಂಬಿಕೆ ಗಳಿಸಿದ್ದ. ಈತನ ಮೇಲಿನ ನಂಬಿಕೆಯಿಂದ …
Read More »ಹಾವೇರಿ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದ ಪರಿಣಾಮ ನಾಲ್ಕು ಜನ ಗಂಭೀರವಾಗಿ ಗಾಯ
ಹಾವೇರಿ : ಹಾವೇರಿ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದ ಪರಿಣಾಮ ನಾಲ್ಕು ಜನ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಇಂದು ಬಸಾಪುರ ಗ್ರಾಮದಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ಅವಘಡ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡ ನಾಲ್ಕು ಜನರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ಹುಬ್ಬಳ್ಳಿ : ಹುಬ್ಬಳ್ಳಿಯ ಸಿದ್ದಾರೊಡ ಮಠದಲ್ಲಿರುವ ಕಲ್ಯಾಣಿ ಒಳಗೆ ವಿದ್ಯಾರ್ಥಿ ಈಜಲು ಹೋಗಿ ಮೃತಪಟ್ಟ ಘಟನೆ ನಡೆದಿದೆ.
ಹುಬ್ಬಳ್ಳಿ : ಹುಬ್ಬಳ್ಳಿಯ ಸಿದ್ದಾರೊಡ ಮಠದಲ್ಲಿರುವ ಕಲ್ಯಾಣಿ ಒಳಗೆ ವಿದ್ಯಾರ್ಥಿ ಈಜಲು ಹೋಗಿ ಮೃತಪಟ್ಟ ಘಟನೆ ನಡೆದಿದೆ. ಇಂದು ಮುಂಜಾನೆ ಸಿದ್ದಾರೊಡ ರ ಮಠದ ಕೆರೆಯಲ್ಲಿನ ಶ್ರೀ ಗುರುನಾಥರೂಢರ ಪೂಜೆಯನ್ನು ಸಲ್ಲಿಸಲು ಹೋಗಿದ್ದ ವಿದ್ಯಾರ್ಥಿ ಈಜಲು ಹೋಗಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಹಲವು ವರ್ಷಗಳಿಂದ ಸಿದ್ದಾರೊಡರ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉಮೇಶಪ್ಪ ಜಾಳಿಹಾಳ ಎಂದು ತಿಳಿದು ಬಂದಿದೆ. ಸುದ್ದಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ NDRF ಸಿಬ್ಬಂದಿ ಬಂದು …
Read More »ಣ್ಣೆ ಪಾರ್ಟಿಗೆಂದು ಆಹ್ವಾನಿಸಿ ಸ್ನೇಹಿತನನ್ನೇ ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ : ಎಣ್ಣೆ ಪಾರ್ಟಿಗೆಂದು ಆಹ್ವಾನಿಸಿ ಸ್ನೇಹಿತನನ್ನೇ ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಡಗಾವಿಯ ಸೂರಜ್ ಗೊಂದವಾಡ್ಕರ್ (23) ಕೊಲೆಯಾದ ದುರ್ದೈವಿ. ಮನೆಯಲ್ಲಿದ್ದ ಸೂರಜ್ಗೆ ಫೋನ್ ಮಾಡಿರುವ ದುಷ್ಕರ್ಮಿಗಳು, ಎಣ್ಣೆ ಪಾರ್ಟಿಗೆ ಆಹ್ವಾನಿಸಿದ್ದಾರೆ. ನಂತರ ಹಳೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಸ್ನೇಹಿತರೆಲ್ಲರೂ ಪಾರ್ಟಿ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ಬಳಿಕ ಸೂರಜ್ಗೆ ರಾಡ್ನಿಂದ ಹೊಡೆದು ಹತ್ಯೆಗೈದಿರುವ ದುಷ್ಕರ್ಮಿಗಳು, ರಸ್ತೆ ಪಕ್ಕ ಶವ ಎಸೆದು …
Read More »ಒಮಿಕ್ರಾನ್ ಭೀತಿ.. ಮುಂಜಾಗ್ರತಾ ಕ್ರಮ, ಚಟುವಟಿಕೆ ನಿರ್ಬಂಧ ಕುರಿತು ಇಂದು ನಿರ್ಧಾರ- ಸಚಿವ ಸುಧಾಕರ್
ಬೆಂಗಳೂರು: ಹೊಸ ಪ್ರಬೇಧದ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಯಾವ ರೀತಿ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಚಟುವಟಿಕೆಗಳ ಮೇಲೆ ನಿರ್ಬಂಧದ ಬಗ್ಗೆ ಇಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿವಿಧ ದೇಶಗಳಲ್ಲಿ ಹೊಸ ಪ್ರಬೇಧದ ವೈರಸ್ ಒಮಿಕ್ರೋನ್ ಪತ್ತೆಯಾಗಿದೆ. ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಯಾವೆಲ್ಲಾ ರೀತಿಯ ನಿರ್ಬಂಧ ಹೇರಬೇಕು. ಅಲ್ಲದೇ …
Read More »ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ರಾಜಧಾನಿಯ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಅಕ್ರಮ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ಮತ್ತು ಮೊಬೈಲ್, ಗಾಂಜಾ, ಇತರೆ ವಸ್ತುಗಳ ಪೂರೈಕೆ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದಾರೆ. ಸಿಸಿಬಿ ಪೊಲೀಸರ ದಾಳಿ ಇನ್ನೂ ಮುಂದುವರೆದಿದೆ.
Read More »ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?
ಮಂಗಳೂರು: ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ರತ್ನಾಕರ್ನ ಕಾಮಪುರಾಣದ ಅಸಹ್ಯ ಉಟ್ಟಿಸೋ ದೃಶ್ಯಗಳು ವೈರಲ್ ಆಗಿದ್ದು, ಆರೋಗ್ಯ ಕಚೇರಿಯಲ್ಲೇ ಹಲವು ದಿನದಿಂದ ಚೆಲ್ಲಾಟ ನಡೆಸಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದರೂ ತಡವಾಗಿ ಪ್ರಕರಣ ಬೆಳಕಿಗೆ ಬಂದಿದ್ದೇಕೆ? ಈ ಹಿಂದೆಯೇ ವೈದ್ಯ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಜತೆ ರತ್ನಾಕರ್ ನಡೆದುಕೊಳ್ಳುತ್ತಿರುವ ರೀತಿಯ ವಿರುದ್ಧ ಅನಾಮಿಕ ಪತ್ರವೊಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಂದಿತ್ತು. ಆಗಲೂ ಸಂತ್ರಸ್ತ ಮಹಿಳೆಯರೂ ಬಾಯ್ಬಿಟ್ಟಿರಲಿಲ್ಲ ಏಕೆ? ರತ್ನಾಕರ್ ಕಂಡರೆ ಸಂತ್ರಸ್ತೆಯರಿಗೆ …
Read More »ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ತಂಡವೊಂದರ ಪಾಲಾಗಲಿದ್ದಾರೆ ಕನ್ನಡಿಗ ಕೆಎಲ್ ರಾಹುಲ್..?
15ನೇ ಆವೃತ್ತಿಯ ಐಪಿಎಲ್‌ಗೆ ಆಟಗಾರರ ರಿಟೇನ್ ಪಟ್ಟಿ ಅಂತಿಮ ಹಂತದಲ್ಲಿದೆ. ಹಾಲಿ 8 ತಂಡಗಳಿಗೆ ತಲಾ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಆಟಗಾರರು ಬೇಕಿದ್ದರಷ್ಟೇ ತಮ್ಮ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮುಂದುವರಿಸಬಹುದು. ಇಲ್ಲವಾದರೆ ಹರಾಜಿಗೆ ದಾಖಲಿಸಬಹುದು. ಈ ಬಾರಿ ಲಖನೌ ಹಾಗೂ ಅಹಮದಾಬಾದ್ ತಂಡಗಳು ಕೂಡ ಸೇರ್ಪಡೆಗೊಂಡಿದ್ದು, ಸ್ಟಾರ್ ಆಟಗಾರರಿಗೆ ಮತ್ತಷ್ಟು ಡಿಮ್ಯಾಂಡ್ ಹೆಚ್ಚಾಗಿದೆ. ಕಳೆದೆರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್ ತಂಡದಿಂದ …
Read More »ಕುಷ್ಟಗಿ: ಪೊಲೀಸರ ಬಲೆಗೆ ಬಿದ್ದ ಟ್ರಾಲಿ ಸ್ಪೆಷಲಿಸ್ಟ್ ಕಳ್ಳರ ಗ್ಯಾಂಗ್
ಕುಷ್ಟಗಿ: ನಿಲ್ಲಿಸಿದ್ದ ರೈತರ ಟ್ರ್ಯಾಕ್ಟರ್ ಟ್ರಾಲಿ ಗಳನ್ನು ಕದ್ದು, ಮಾರುತ್ತಿದ್ದ ಟ್ರಾಲಿ ಸ್ಪೆಷಲಿಸ್ಟ್ ಕಳ್ಳರ ಗ್ಯಾಂಗನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದು, ಮೂರು ಟ್ರ್ಯಾಕ್ಟರ್ ಟ್ರಾಲಿ ವಶಪಡಿಸಿಕೊಂಡಿದ್ದಾರೆ. ಕಳೆದ ನ.26ರಂದು ಸಂಗನಾಳ ಗ್ರಾಮದ ಮುದಕನಗೌಡ ಭರಮಗೌಡ ಗೌಡ್ರು ಅವರು, ಗ್ರಾಮದ ನಿರುಪಾದೇಶ್ವರ ಮಠದ ಜಾಗದಲ್ಲಿ ನಿಲ್ಲಿಸಿದ್ದ ಟ್ರಾಲಿ ಕಳುವಾಗಿರುವ ಬಗ್ಗೆ ದೂರು ನೀಡಿದ್ದರು. ತಾವರಗೇರಾ ಪಿಎಸೈ ವೈಶಾಲಿ ಝಳಕಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನ.28ರಂದು ನಾಲ್ವರು ಸ್ಪೆಷಲಿಸ್ಟ್ ಕಳ್ಳರು ಟ್ರಾಲಿ ತೆಗೆದುಕೊಂಡು ಹೋಗುವಾಗ ಪೊಲೀಸರು …
Read More »
Laxmi News 24×7