Breaking News

ರಾಜಕೀಯ

ಸಂಪುಟದ ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಹೊಸಬರ ಸೇರ್ಪಡೆ: ಯತ್ನಾಳ ಹೇಳಿಕೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿನ ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಹೊಸಬರನ್ನು ತೆಗೆದುಕೊಳ್ಳಲಾಗುವುದು ಎಂಬುದಾಗಿ ಬಿಜೆಪಿ ಶಾಸಕ ಬಸನಗೌಡ ‍ಪಾಟೀಲ ಯತ್ನಾಳ ಅವರ ಹೇಳಿಕೆ ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ.   ಡಿಸೆಂಬರ್‌ 10 ರ ಬಳಿಕ ಸಂಪುಟ ಪುನರ್‌ರಚನೆ ಆಗಲಿದೆ ಎಂದು ಯತ್ನಾಳ ಗುರುವಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಹೇಳಿದ್ದರು. ಆದರೆ, ಬಿಜೆಪಿಯಲ್ಲಿನ ಉನ್ನತ ಮೂಲಗಳ ಪ್ರಕಾರ, ತಕ್ಷಣಕ್ಕೆ ಯಾವುದೇ ಬದಲಾವಣೆಗಳು ಇಲ್ಲ. ಜನವರಿ ಬಳಿಕ ಕೆಲವರನ್ನು ಕೈಬಿಟ್ಟು …

Read More »

ಕಿತ್ತೂರು ಕರ್ನಾಟಕ ಅಭಿವೃದ್ಧಿಯಾಗಲಿ : ಬೆಂಗಳೂರು ಡಾ. ಮಹಾಂತಲಿಂಗ ಶಿವಾಚಾರ್ಯರು

ಬೆಳಗಾವಿ :ಕಿತ್ತೂರು ಕರ್ನಾಟಕ ಎಂದು ಘೋಷಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ನಾವೆಲ್ಲರು ಅಭಿನಂದಿಸಲೇಬೇಕು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಗಡಿಭಾಗದಲ್ಲಿ ಕನ್ನಡದ ಉಳಿವಿಗೆ, ಕನ್ನಡದ ಬದುಕಿಗೆ ನಿರಂತರವಾಗಿ ಶ್ರಮಿಸುತಿದ್ದಾರೆ. ಕಿತ್ತೂರು ಕರ್ನಾಟಕ ಇವತ್ತು ಘೋಷಣೆಯಾಗುವುದರ ಮುಖಾಂತರ ಎಲ್ಲರ ಅಭಿನಂದನೆಗಳಿಗೆ ಮುಖ್ಯಮಂತ್ರಿಗಳು ಪಾತ್ರರಾಗಿದ್ದಾರೆ. ಬರುವ ಅಧಿವೇಶನದಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಅಖಂಡ ಕರ್ಣಾಟಕದ ಚಿಂತನೆಯ ಚರ್ಚೆಗಳು ಆಗಲಿ ಎಂದು ಬೆಂಗಳೂರು ವಿಭೂತಿಪುರ ವೀರಸಂಸ್ಥಾನ ಮಠದ ಡಾ. ಮಹಾಂತಲಿಂಗ …

Read More »

ಕಿರಿಕ್ ಕೀರ್ತಿ’ ಮೇಲೆ ಹಲ್ಲೆ : ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಬೆಂಗಳೂರಿನ ಸದಾಶಿವನಗರದ ಪಬ್ ನಲ್ಲಿ ತಡರಾತ್ರಿ ಬಿಗ್​ಬಾಸ್ ಸ್ಪರ್ಧಿ ಕಿರಿಕ್​ ಕೀರ್ತಿ ಮೇಲೆ ಬಿಯರರ್ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.ತಡರಾತ್ರಿ ಬೆಂಗಳೂರಿನ ಸದಾಶಿವನಗರದ ಪಬ್​ನಲ್ಲಿ ಪೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಕೀರ್ತಿ ಮೇಲೆ ವ್ಯಕ್ತಿಯೊಬ್ಬ ಬಿಯರ್​ ಬಾಟಲ್​ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.   ಸದಾಶಿವನಗರ ಪಬ್​ ಗೆ ಕಿರಿಕ್ ಕೀರ್ತಿ ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಕಿರಿಕ್​ ಕೀರ್ತಿ …

Read More »

ರಮೇಶ್ ಜಾರಕಿಹೊಳಿ ಯಾರನ್ನ ಸೋಲಿಸ್ತಾರೆ ಯಾರನ್ನ ಗೆಲ್ಲಸ್ತಾರೆ ಕಣ ಜಿದ್ದಾ ಜಿದ್ದಿಯಾಗಿ ಮಾರ್ಪಾಡಾಗು ತ್ತಿದೆ..

ಅಥಣಿ – ಬೆಳಗಾವಿ ವಿಧಾನ ಪರಿಷತ್ ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇನ್ನು ಒಂದು ವಾರ ಮಾತ್ರ ಪ್ರಚಾರಕ್ಕೆ ಅವಕಾಶವಿದ್ದು, ಜಿದ್ದಾ ಜಿದ್ದಿನ ಕಣ ಸದ್ದು ಮಾಡುತ್ತಿದೆ. ಈ ಮಧ್ಯೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿಕೆಗಳು ಅವರ ಅಭಿಮಾನಿಗಳು ಖಾತರದಿಂದ ಕಾಯುವಂತೆ ಮಾಡಿದೆ. ಒಂದೆಡೆ ಲಖನ್ ಸ್ಪರ್ಧೆ ಅವರ ವಯಕ್ತಿಕ ಎನ್ನುತ್ತಿರುವ ರಮೇಶ ಜಾರಕಿಹೊಳಿ ಇನ್ನೊಂದೆಡೆ ಕಾಂಗ್ರೆಸ್ ಸೋಲಿಸುವುದಕ್ಕಾಗಿಯೇ ಲಖನ್ ಕಣಕ್ಕಿಳಿಸಲಾಗಿದೆ ಎಂದು ನೇರವಾಗಿ ಹೇಳಿಕೆ …

Read More »

ಉಗಾರ್ ಶುಗರ್ಸ್ ಕಾರ್ಖಾನೆ ಕಾರ್ಮಿಕರು ಮುಷ್ಕರ ಹಿಂದಕ್ಕೆ

ಕಾಗವಾಡ ತಾಲೂಕಿನ ಉಗಾರ ಸಕ್ಕರೆ ಕಾರ್ಖಾನೆ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳಿಗಾಗಿ ಬುಧವಾರ ದಿನಾಂಕ 1 ರಂದು ಮುಷ್ಕರ ಪ್ರಾರಂಭಿಸಿದರು. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹೈಕೋರ್ಟ್ ಕ್ಕೆ ಮುಷ್ಕರ ಬಗ್ಗೆ ಅರ್ಜಿ ಸಲ್ಲಿಸಿದ್ದರು ಇದನ್ನು ವಿಚಾರಿಸಿದ ನ್ಯಾಯಾಧೀಶರು ಮಧ್ಯಾಂತರ ತಡೆಂiÀiಜ್ಞ ನೀಡಿದ್ದಾರೆ.ಸಕ್ಕರೆ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಖಜಾಂಚಿಗಳಾದ ಅನಿಲ್ ನಾವಿಲಗೆರ ಮಾಹಿತಿ ನೀಡುವಾಗ ಕಾರ್ಮಿಕರು ತಮ್ಮ ಹಲವಾರು ಬೇಡಿಕೆಗಳಿಗಾಗಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗಳಿಗೆ ತಮ್ಮ ಬೇಡಿಕೆ ಅರ್ಜಿಗಳು …

Read More »

ಎಸ್​ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳಲ್ಲಿ ಹೊಸ ಪ್ರಭೇದದ ವೈರಾಣು ಇಲ್ಲ: ಡಿಸಿ ಸ್ಪಷ್ಟನೆ

ಧಾರವಾಡ: ಇಲ್ಲಿನ ಸತ್ತೂರಿನಲ್ಲಿರುವ ಎಸ್​ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಬಾಕಿ ಇದ್ದ 140 ಜಿನೋಮ್ ಸಿಕ್ವೆನ್ಸಿಂಗ್ ವರದಿಗಳು ಲಭ್ಯವಾಗಿವೆ. ಇವುಗಳಲ್ಲಿ ಯಾವುದೇ ಹೊಸ ಪ್ರಭೇದದ ವೈರಾಣು ಕಂಡುಬಂದಿಲ್ಲ. ಹೀಗಾಗಿ, ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್​​ ಹೇಳಿದ್ದಾರೆ. ಎಸ್​ಡಿಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದ ಕೋವಿಡ್ ಪ್ರಕರಣಗಳ ಪ್ರಯೋಗಾಲಯ ಸ್ಯಾಂಪಲ್‌ಗಳನ್ನು ಜಿನೋಮ್ ಸಿಕ್ವೆನ್ಸಿಂಗ್‌ ಪತ್ತೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ನಿನ್ನೆ …

Read More »

ಕನಿಷ್ಠ ಪಕ್ಷ ಗ್ರಾ.ಪಂಚಾಯಿತಿಗೆ ಏನು ಬೇಕು, ಬೇಡ ಎಂಬ ಅರಿವೇ ಇಲ್ಲದವರು ಪರಿಷತ್‌ಗೆ ಆಯ್ಕೆಯಾಗ್ತಿದ್ದಾರೆ’

ಚಿಕ್ಕೋಡಿ: ಪ್ರಜ್ಞಾವಂತ ಬುದ್ಧಿಜೀವಿಗಳು, ಕಾನೂನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ವ್ಯಕ್ತಿಗಳು ಇರಬೇಕಾದ ವಿಧಾನ ಪರಿಷತ್​ನಲ್ಲಿ ಎಂಎಲ್ಎ, ಎಂಎಲ್​ಸಿ ಪದದ ಅರ್ಥವೇ ಗೊತ್ತಿಲ್ಲದವರು ಆಯ್ಕೆ ಆಗುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ. ಈಗ ತಮ್ಮ ತಮ್ಮ ಉದ್ಯೋಗದಲ್ಲಿ ಮಗ್ನರಾಗಿದ್ದವರನ್ನು ಪರಿಷತ್‌ಗೆ ಆಯ್ಕೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರಿಂದ ಮತ ಪಡೆದ ಈ ವ್ಯಕ್ತಿಗಳಿಗೆ ಕನಿಷ್ಠ ಪಕ್ಷ ಗ್ರಾಮ ಪಂಚಾಯಿತಿಗೆ ಏನು ಬೇಕು, ಏನು ಬೇಡ‌ ಎಂಬ ಪರಿಕಲ್ಪನೆಯೂ ಇಲ್ಲ …

Read More »

ದಿಢೀರ್ ಕುಸಿತಗೊಂಡ ಟ್ವಿಟರ್ ಬಳಕೆದಾರರ ಫಾಲೋವರ್ಸ್ ಸಂಖ್ಯೆ: ಕಾರಣವೇನು ಗೊತ್ತಾ.?

ನವದೆಹಲಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ( Micro-blogging site Twitter ) ಹಲವು ಬಳಕೆದಾರರು ( Twitter ) ಗುರುವಾರ ತಡವಾಗಿ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತಗೊಂಡಿದೆ ಎಂದು ದೂರಿದ್ದಾರೆ.   ಟ್ವಿಟರ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲವಾದರೂ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಮಸ್ಯೆಯನ್ನು ಸೃಷ್ಟಿಸುವ ಬಾಟ್ ಗಳನ್ನು ತೊಡೆದುಹಾಕಲು ಈ ಸ್ವಚ್ಛಗೊಳಿಸುವ ಕಾರ್ಯವನ್ನು ಆಗಾಗ್ಗೆ ನಡೆಸಿದೆ ಎನ್ನಲಾಗುತ್ತಿದೆ.   ಟ್ವಿಟರ್ ಬಳಕೆದಾರರು ( …

Read More »

ಜವಾದ್ ಚಂಡಮಾರುತದ ಎಫೆಕ್ಟ್ : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ

ಬೆಂಗಳೂರು : ಜವಾದ್ ಚಂಡಮಾರುತದ (Cyclone Jawad) ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ (Heavy rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.     ಶನಿವಾರ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಜವಾದ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಪರಿಣಾಮ ಕರ್ನಾಟಕದಲ್ಲಿ ಡಿಸೆಂಬರ್ 6 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ …

Read More »

ಒಮಿಕ್ರಾನ್​ಗೆ ಇಂದು ತಜ್ಞರ ಜೊತೆಗೂಡಿ CM ಮಂತ್ರ; ರಾಜ್ಯದಲ್ಲಿ ಜಾರಿಯಾಗುತ್ತಾ ಟಫ್ ರೂಲ್ಸ್​..?

ನವದೆಹಲಿ: ಆ ವೈರಿ ವೈರಸ್ ಭಾರತಕ್ಕೆ ಬರುತ್ತಾ? ಬರಬಹುದಾ? ಒಂದು ವೇಳೆ ಬಂದ್ರೆ ಮುಂದೇನು? ಅಂತಾ ಕಾಡಿದ್ದ ಪ್ರಶ್ನೆಗಳ ಗೊಂದಲಿಗೆ ಒಂದು ಉತ್ತರವಂತೂ ಸಿಕ್ಕಿದೆ. ಇಡೀ ಭಾರತದಲ್ಲೇ ಮೊದಲ ಬಾರಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ. ಬೆಂಗಳೂರಿನ ಏರ್​ಪೋರ್ಟ್​ ಗೇಟ್​ ಮೂಲಕ ರಾಜ್ಯಕ್ಕೆ ಎಂಟ್ರಿ ಕೊಟ್ಟ, ಒಮಿಕ್ರಾನ್ ಓಡಿಸಲು ಸಿಎಂ ಬೊಮ್ಮಾಯಿ ಇಂದು ಮಹತ್ವದ ಮೀಟಿಂಗ್ ಫಿಕ್ಸ್ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳಲ್ಲಿ ರಹಸ್ಯವಾಗಿ ಅಡಗಿ ಕೂತು ಸೌತ್ ಆಫ್ರಿಕಾದಿಂದ ಸದ್ದಿಲ್ಲದೇ ವಿಮಾನದ ಮೂಲಕ …

Read More »