Breaking News

ರಾಜಕೀಯ

ಬಾಲಕರನ್ನ ಬಳಸಿ ಬೈಕ್​ ಕಳ್ಳತನ ಮಾಡಿಸ್ತಿದ್ದ ಪೇದೆ ಅರೆಸ್ಟ್​​

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಜನರಿಗೆ ರಕ್ಷಣೆ ಒದಗಿಸಬೇಕಾದ ಹಾಗೂ ಸಾರ್ವಜನಿಕರ ಸ್ವತ್ತಿನ ಮೇಲೆ ಕಳ್ಳಕಾಕರ ಕಣ್ಣು ಬೀಳದಂತೆ ಕಾವಲು ಕಾಯಬೇಕಾದ ಪೊಲೀಸಪ್ಪನೇ ಕಳ್ಳತನಕ್ಕೆ ಸಾಥ್​ ನೀಡಿ ಪೊಲೀಸ್​ ಇಲಾಖೆ ತಲೆತಗ್ಗಿಸುವಂತೆ ಮಾಡಿದ್ದಾನೆ.   ಹೌದು, ಅಪ್ರಾಪ್ತರನ್ನು ಬಳಸಿಕೊಂಡು ಬೈಕ್​​ಗಳನ್ನು ಕಳ್ಳತನ ಮಾಡಿಸ್ತಿದ್ದ ಕಾನ್​ಸ್ಟೇಬಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ್ನು ಹೊನ್ನಪ್ಪ ಅಲಿಯಾಸ್​ ರವಿ ಎಂದು ಗುರುತಿಸಲಾಗಿದೆ. 2016ರ ಬ್ಯಾಚ್​ನ …

Read More »

ಜೆಡಿಎಸ್​ ಮುಖಂಡನ ಪುತ್ರನ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಲೇಡಿ ಎಸ್​ಐ ​ಜತೆಗಿನ ಲವ್ವಿಡವ್ವಿಯೇ ಮುಳುವಾಯ್ತಾ?

ಮೈಸೂರು: ಜೆಡಿಎಸ್​ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ ಆತ್ಮಹತ್ಯೆ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದ್ದು, ಲೇಡಿ ಸಬ್‌ ಇನ್ಸ್‌ಪೆಕ್ಟರ್​ ಹೆಸರು ತಳುಕು ಹಾಕಿಕೊಂಡಿದೆ. ನಿನ್ನೆ(ಡಿ.23) ರಾತ್ರಿ ಮರಟಿಕ್ಯಾತನಹಳ್ಳಿಯ ಅಪಾರ್ಟ್‌ಮೆಂಟ್​ನಲ್ಲಿ ಪ್ರದೀಪ್​ ನೇಣಿಗೆ ಶರಣಾಗಿದ್ದು, ಈ ಸಾವಿಗೆ ಲೇಡಿ ಸಬ್​ ಇನ್ಸ್‌ಪೆಕ್ಟರ್ ಜತೆಗಿನ ಪ್ರೇಮಪುರಾಣವೇ ಕಾರಣ ಎಂದು ಆಪ್ತ ವಲಯದಲ್ಲಿ ಗುಸುಗುಸು ಶುರುವಾಗಿದೆ.   ಪ್ರದೀಪ್​ ತಂದೆ ಬೆಳವಾಡಿ ಶಿವಮೂರ್ತಿ ಅವರು ಮೈಸೂರು ಜಿಲ್ಲಾ ಜೆಡಿಎಸ್​ನ ಖಜಾಂಚಿ. ಪ್ರದೀಪ್​ ತಾಯಿ …

Read More »

ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಈ ದಿನಾಂಕದಂದು ಶುರುವಾಗಲಿದೆ ‘ಕಿಸಾನ್ ಕ್ರೆಡಿಟ್ ಕಾರ್ಡ್’ ವಿತರಣಾ ಅಭಿಯಾನ

ಹಾವೇರಿ: ರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರಿಕೃತ ಬ್ಯಾಂಕ್, ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ನವಂಬರ್ 15 ರಿಂದ ಫೆಬ್ರುವರಿ 15ರವರೆಗೆ ಹೊಸ ಕಿಸಾನ ಕ್ರೆಡಿಟ್ ಕಾರ್ಡ್‍ಗಳನ್ನು ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.   ಆಸಕ್ತ ರೈತರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ಅರ್ಜಿ ನಮೂನೆ ಪಡೆದು ಆಧಾರ್, ಪಹಣಿ ಪತ್ರ, ಬ್ಯಾಂಕ್ ಖಾತೆ …

Read More »

ಐಟಿ ದಾಳಿ: ಉದ್ಯಮಿ ಮನೆಯಲ್ಲಿ 150 ಕೋಟಿ ರೂ. ಕ್ಯಾಷ್ ಪತ್ತೆ

ಕಾನ್ ಪುರದ ಉದ್ಯಮಿಯೊಬ್ಬರ ಮನೆಯಲ್ಲಿ 150 ಕೋಟಿ ರೂ. ಕ್ಯಾಷ್ ಪತ್ತೆಯಾಗಿದೆ. ಐಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದ ನಗದು ಪತ್ತೆಯಾಗಿದೆ. ಎರಡು ವಾರ್ಡ್ ರೂಬ್ ತುಂಬ ಕಂತೆ ಕಂತೆ ನೋಟುಗಳನ್ನು ಜೋಡಿಸಿನ ಇಡಲಾಗಿತ್ತು. ಇದರ ಜೊತೆಗೆ ತಲೆದಿಂಬಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ನೋಟುಗಳನ್ನು ಸುತ್ತಿಡಲಾಗಿತ್ತು. ತೆರಿಗೆ ವಂಚನೆ ಆರೋಪದ ಮೇಲೆ ಜಿಎಸ್ ಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು. ಅಪಾರ ಪ್ರಮಾಣದ ನಗದು ಪತ್ತೆಯಾದ …

Read More »

ಕೃಷಿ ವಿಶ್ವವಿದ್ಯಾಲಯಗಳ ಖಾಲಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ

ಬೆಳಗಾವಿ, ಡಿ.24- ರಾಜ್ಯದಲ್ಲಿರು ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಯವರು ಅನುಮತಿ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್‍ ಹೇಳಿದರು.   ವಿಧಾನ ಪರಿಷತ್‍ ನಲ್ಲಿ ಸದಸ್ಯ ಎಸ್‍.ವಿ.ಸಂಕನೂರು, ಅವರು ಪ್ರಶ್ನೆ ಕೇಳಿ ರಾಯಚೂರು ಹೊರತು ಪಡಿಸಿ, ಶಿವಮೊಗ್ಗ, ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ.60ಕ್ಕಿಂತ ಹೆಚ್ಚಿನ ಬೋಧಕ ಹುದ್ದೆಗಳು ಖಾಲಿ ಇವೆ. ಬೋಧಕ ಹುದ್ದೆಗಳು ಖಾಲಿ ಇರುವುದರಿಂದ ಸಂಶೋಧನೆ ಹಾಗೂ …

Read More »

ಪರಿಷತ್ ನಲ್ಲಿ ಬಹುಮತವಿಲ್ಲ,ಮುಂದೆ ನೋಡೋಣ: ಸಿಎಂ ಬೊಮ್ಮಾಯಿ

ಬೆಳಗಾವಿ : ಇಂದು ಮತಾಂತರ ವಿರೋಧಿ ಕಾಯ್ದೆ ವಿಧಾನ ಸಭೆಯಲ್ಲಿ ಪಾಸಾಗಿದ್ದು, ನಮಗೆ ಗೊತ್ತಿದೆ ಇವತ್ತಿನ ಪರಿಸ್ಥಿತಿಯಲ್ಲಿ ಪರಿಷತ್ ನಲ್ಲಿ ಬಹುಮತವಿಲ್ಲ, ಮುಂದೆ ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗುರುವಾರ ಹೇಳಿಕೆ ನೀಡಿದ್ದಾರೆ.   ಇಡೀ‌ ದಿನ ಚರ್ಚೆಗೆ ಅವಕಾಶ ನೀಡಲಾಗಿತ್ತು. ಆದರೆ ವಿಪಕ್ಷದವರು ರಾಜಕೀಯ ಭಾಷಣ ಮಾಡಿದರು . ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ, ಕಾನೂನು ಸಂವಿಧಾನ ಬದ್ದವಾಗಿದೆ. ಸಿದ್ದರಾಮಯ್ಯ ಅವರೇ ಸಚಿವ ಸಂಪುಟಕ್ಕೆ ತರಲು ಒಪ್ಪಿದ್ದರು. ಆದರೆ …

Read More »

ಕೇಂದ್ರ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

  ಅಥಣಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ನೀಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು. ಅಥಣಿ ಪಟ್ಟಣದಲ್ಲಿ ಪುರಸಭೆ ಚುನಾವಣಾ ನಿಮಿತ್ತ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಡಿ. 27ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ, ಕಾಂಗ್ರೆಸ್ ಪಕ್ಷದ ಶಕ್ತಿ ಬಲಪಡಿಸಬೇಕು ಎಂದರು. ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಹೆಚ್ಚಿನ ಅಭ್ಯರ್ಥಿಗಳು …

Read More »

ನನ್ನದು, ಈಶ್ವರಪ್ಪನದ್ದು ಲವ್ ಆಯಂಡ್ ಹೇಟ್ ರಿಲೇಷನ್‍ಶಿಪ್ ಎಂದ ಸಿದ್ದರಾಮಯ್ಯ

ಬೆಳಗಾವಿ, : ನನ್ನದು ಹಾಗೂ ಸಚಿವ ಕೆ.ಎಸ್.ಈಶ್ವರಪ್ಪನವರದ್ದು ಪ್ರೀತಿ ಮತ್ತು ದ್ವೇಷದ ಸಂಬಂಧ (ಲವ್ ಆಂಡ್ ಹೇಟ್) ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ ಪ್ರಸಂಗ ನಡೆಯಿತು. ಗುರುವಾರ ವಿಧಾನಸಭೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ವೇಳೆ ನನ್ನದು ಈಶ್ವರಪ್ಪನವರ ಸಂಬಂಧ ವಿಶೇಷ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ನಿಮ್ಮ ಹಾಗೂ ಈಶ್ವರಪ್ಪ ನಡುವಿನ ಸ್ನೇಹದ ಗುಟ್ಟೇನು ಎಂದು ಕಾಲೆಳೆದರು. ಈ ವೇಳೆ …

Read More »

ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಸೆಂಬರ್‌ಗೆ ಇಳಿಯುತ್ತಾರೆ ಎಂದಿದ್ದೆ, ಈಗ ಬೊಮ್ಮಾಯಿ ಅವರು ಜನವರಿಗೆ ಇಳಿಯುತ್ತಾರೆ: ಸಿ.ಎಂ. ಇಬ್ರಾಹಿಂ

ಬೆಳಗಾವಿ: ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಸೆಂಬರ್‌ಗೆ ಇಳಿಯುತ್ತಾರೆ ಎಂದಿದ್ದೆ, ಈಗ ಬೊಮ್ಮಾಯಿ ಅವರು ಜನವರಿಗೆ ಇಳಿಯುತ್ತಾರೆ ಎಂದು ಹೇಳಿದ್ದೇನೆ. ನಮ್ಮ ಭವಿಷ್ಯ ಸುಳ್ಳಾಗುವುದಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದಾರೆ.   ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಲ್ನೋಟಕ್ಕೆ ಎರಡು ಮೂರು ಹೆಸರು ಕೇಳಿ ಬರುತ್ತಿವೆ. ಬೊಮ್ಮಾಯಿ ಅವರ ಕಾಲು ಚೆನ್ನಾಗಿತ್ತು. ಕೆಲಸ ಮಾಡಿ ಕುಂಟುವಂತಾಗಿದೆ. ಮುಂಬಯಿಗೆ 12 ಜನರನ್ನು ಕರೆದುಕೊಂಡು ಹೋಗಿ ವೀಡಿಯೋ ಮಾಡಿಕೊಂಡು …

Read More »

ಕುಟುಂಬ ಸಮೇತ ದುಬೈಗೆ ಯಡಿಯೂರಪ್ಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತ ದುಬೈ ಪ್ರವಾಸ ಕೈಗೊಂಡಿದ್ದು, ನಾಳೆ ದುಬೈಗೆ ತೆರಳಲಿದ್ದಾರೆ. ಮೂರು ದಿನಗಳ ಪ್ರವಾಸಕ್ಕೆ ತೆರಳಲಿರುವ ಯಡಿಯೂರಪ್ಪ ದುಬೈ ಕನ್ನಡ ಸಂಘದ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಿನ್ನೆ ಬೆಳಗಾವಿಯ ಸುವರ್ಣಸೌಧದಲ್ಲಿ ಯಡಿಯೂರಪ್ಪ RTPCR ಟೆಸ್ಟ್ ಮಾಡಿಸಿದ್ದಾರೆ. ಇಂದು ಸಂಜೆ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿರುವ ಅವರು ನಾಳೆ ಕುಟುಂಬ ಸಮೇತರಾಗಿ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆನ್ನಲಾಗಿದೆ.

Read More »