Breaking News

ರಾಜಕೀಯ

ಸೀನಿಯರ್ ಆಫೀಸರ್ ಆದ್ರೂ ಅಷ್ಟು ಗೊತ್ತಾಗೋದಿಲ್ವಾ; ಐಜಿಪಿಗೆ ಗದರಿದ ಸಿಎಂ

ತುಮಕೂರು: ತ್ರಿವಿದ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಮೂರನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ ದಾಸೋಹ ದಿನಾಚರಣೆಗೆ ಚಾಲನೆ ನೀಡಿದರು. ಈ ವೇಳೆ ಜನ ಗುಂಪು ಸೇರಿದ್ದಕ್ಕೆ ಐಜಿಪಿ ಮೇಲೆ ಸಿಎಂ ಗದರಿದ ಪ್ರಸಂಗ ನಡೆದಿದೆ.   ಸಿದ್ದಂಗಂಗಾ ಮಠದ ಬಳಿ ಸಿಎಂ ಬೊಮ್ಮಾಯಿ ಕಾರು ಇಳಿಯುತ್ತಿದ್ದಂತೆ ಜನರು ಜಮಾವಣೆಗೊಂಡಿದ್ದಾರೆ. ಈ ವೇಳೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಡಿವೈ ಎಸ್ …

Read More »

2022: ಕೇಂದ್ರ ಬಜೆಟ್​ನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಕಿ- ಅಂಶಗಳು

ಕೇಂದ್ರ ಬಜೆಟ್ (Union Budget) ಎಂಬುದು ಪ್ರತಿ ವರ್ಷ ಭಾರತದಲ್ಲಿ ಬಿಡುಗಡೆ ಆಗುವ ಅತಿ ಮುಕ್ಯವಾದ ದಾಖಲಾತಿ. ಆದರೆ ಬಹಳ ಮಂದಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಬಜೆಟ್​ನ ಅತಿ ಮುಖ್ಯವಾದ ಸಂಖ್ಯೆಗಳ ವಿವರ ಇಲ್ಲಿದೆ. ಇತರ ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಒತ್ತಟ್ಟಿಗಿರಲಿ, ಬಹಳ ಸುಲಭಕ್ಕೆ ಅರ್ಥ ಆಗುವುದು ಬಜೆಟ್​ನ ಗಾತ್ರ. ಬಜೆಟ್​ ಗಾತ್ರ ಹೀಗಂದರೆ ಒಂದು ಹಣಕಾಸು ವರ್ಷದಲ್ಲಿ ಸರ್ಕಾರದಿಂದ ಮಾಡುವ ಅಂದಾಜು ವೆಚ್ಚ. 2021- 22ನೇ …

Read More »

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು: ಅಧಿಕೃತ ಘೋಷಣೆ ಒಂದೇ ಬಾಕಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೊವಿಡ್ ಸಭೆಯಲ್ಲಿ ವೀಕೆಂಡ್ ಕಫ್ರ್ವೂವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಒಂದೇ ಬಾಕಿಯಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಕೊವಿಡ್ ತಜ್ಞರ, ಸಚಿವರ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಹಲವು ಸಚಿವರು ವೀಕೆಂಡ್ ಕಫ್ರ್ಯೂವನ್ನು ಜಾರಿ ಮಾಡದಂತೆ ಹಲವು ಸಚಿವರು ಸಿಎಂ ರನ್ನು ಕೇಳಿಕೊಂಡರು. ಈ ವೇಳೆ ಸಚಿವರ ಮಾತಿಗೆ ಸಹಮತ …

Read More »

ಸಿದ್ಧಗಂಗಾ ಶ್ರೀಮಠದ ದಾಸೋಹ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮಿಯವರ ಲಿಂಗೈಕ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ದಾಸೋಹ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಠದ ವಿದ್ಯಾರ್ಥಿಗಳಿಗೆ ದಾಸೋಹ ಬಡಿಸಿದರು. ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮಿಯವರ ಲಿಂಗೈಕ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ದಾಸೋಹ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು. ಈ ವೇಳೆ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ದಾಸೋಹ ದಿನದ …

Read More »

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪ್ರಾರಂಭವಾದ ಕೊವಿಡ್ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶುಕ್ರವಾರ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃμÁ್ಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕೊವಿಡ್ ಪರಿಣಿತರು, ಸಚಿವರು, ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಡಾ. ಕೆ. ಸುಧಾಕರ್, ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, …

Read More »

ಕೊಪ್ಪಳದಲ್ಲಿ ಆರಂಭವಾಗಿದೆ We Stand With Suresh ಕ್ಯಾಂಪೇನ್: ಏನಿದು ಅಭಿಯಾನ?

ಕೊಪ್ಪಳ: ನಮ್ಮೂರಿಗೆ ರಸ್ತೆ (Road) ಇಲ್ಲ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ (Social Meda) ಅಪ್ಲೋಡ್ ಮಾಡಲಾಗಿತ್ತು. ಈ ಯುವಕನಿಗೆ ಪೊಲೀಸರು ಪ್ರಕರಣ ದಾಖಲಿಸಲಾಗುವುದು ಎಂಬ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ಬಗ್ಗೆ ನ್ಯೂಸ್ 18 ವರದಿ ಪ್ರಸಾರದ ವೇಳೆ ವಿಡಿಯೋ ಮಾಡಿದ ಯುವಕನಿಗೆ ತಲೆ ಸರಿ ಇಲ್ಲ ಎಂದು ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು (MLA Basavaraj Dadesaguru) ಹೇಳಿದ್ದರು. ಈ ಪ್ರಕರಣದ …

Read More »

ಮಕ್ಕಳಲ್ಲಿ ಕೋವಿಡ್‌ಅನ್ನು ಹೇಗೆ ನಿರ್ವಹಿಸುವುದು? ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೋವಿಡ್ ನಿರ್ವಹಣೆಗಾಗಿ ಪರಿಷ್ಕೃತ ಮಾರ್ಗಸೂಚಿಗಳನ್ನು ಕೇಂದ್ರವು ಗುರುವಾರ ಬಿಡುಗಡೆ ಮಾಡಿದೆ. ಒಮಿಕ್ರಾನ್ ರೂಪಾಂತರಕ್ಕೆ ಮುಖ್ಯವಾಗಿ ಕಾರಣವಾದ ಪ್ರಸ್ತುತ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಮಾರ್ಗದರ್ಶಿ ಸೂತ್ರಗಳನ್ನು ತಜ್ಞರ ಗುಂಪು ಪರಿಶೀಲಿಸಿದೆ.   ಹೊಸ ಮಾರ್ಗಸೂಚಿಗಳ ಪ್ರಕಾರ, ಸ್ಟೀರಾಯ್ಡ್‌ಗಳನ್ನು ಬಳಸಿದರೆ, ಕ್ಲಿನಿಕಲ್ ಸುಧಾರಣೆಗೆ ಒಳಪಟ್ಟು 10-14 ದಿನಗಳಲ್ಲಿ ಅವುಗಳನ್ನು ಮೊಟಕುಗೊಳಿಸಬೇಕು. ಕೋವಿಡ್ ನಂತರದ ಆರೈಕೆಗೆ ಕೇಂದ್ರವು ಹೆಚ್ಚಿನ ಒತ್ತು ನೀಡಿದೆ. ಐದು ವರ್ಷ ಮತ್ತು ಅದಕ್ಕಿಂತ …

Read More »

ಗರ್ಭಿಣಿ ಅರಣ್ಯಾಧಿಕಾರಿ ಮೇಲೆ ದಂಪತಿಗಳಿಂದ ಥಳಿತ.

ಮಹಾರಾಷ್ಟ್ರ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಗರ್ಭಿಣಿ ಅರಣ್ಯ ರಕ್ಷಕಿಯನ್ನು ಮಾಜಿ ಸರಪಂಚ್ ಮತ್ತು ಅವರ ಪತ್ನಿ ಕೂದಲು ಹಿಡಿದು ನೆಲಕ್ಕೆ ತಳ್ಳಿ ಎಳೆದಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.   ಇದನ್ನು ಭಾರತೀಯ ಅರಣ್ಯ ಸೇವಾ ಸಂಘವು ಅಮಾನುಷ ದಾಳಿಯನ್ನು ಖಂಡಿಸಿದೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಲವಾದ ನೀತಿಯನ್ನು ಒತ್ತಾಯಿಸಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ IFS ಅಸೋಸಿಯೇಷನ್ ​​ಬರೆದುಕೊಂಡಿದೆ, ‘ಮಹಾರಾಷ್ಟ್ರದಲ್ಲಿ ಸರ್ಕಾರಿ ಕೆಲಸ …

Read More »

ಬಡ ಮುಸ್ಲಿಂ ಯುವತಿಯೋರ್ವಳು ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 39 ನೇ ರ್ಯಾಂಕ್ ನಲ್ಲಿ ಆಯ್ಕೆ

ಕಡಬ, ಜ.20. ಗ್ರಾಮೀಣ ಭಾಗದ ಬಡ ಮುಸ್ಲಿಂ ಯುವತಿಯೋರ್ವಳು ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 39 ನೇ ರ್ಯಾಂಕ್ ನಲ್ಲಿ ಆಯ್ಕೆಯಾಗಿದ್ದಾರೆ. ಕುಂತೂರು ಸಮೀಪದ ಕೋಚಕಟ್ಟೆ ನಿವಾಸಿ ಎ.ಕೆ. ಇಸ್ಮಾಯಿಲ್ ಹಾಗೂ ಝುಬೈದಾ ಹೆಂತಾರು ದಂಪತಿಯ ನಾಲ್ವರು ಪುತ್ರಿಯರ ಪೈಕಿ ಕೊನೆಯವಳಾದ ಬದ್ರುನಿಶಾ ಇದೀಗ ಪಿಎಸ್‌ಐ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕಲಿತು ತನ್ನ ಸಹೋದರಿಯರಂತೆಯೇ ಉದ್ಯೋಗ ಗಿಟ್ಟಿಸೊಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ …

Read More »

ವಿಶ್ವದಾಖಲೆ ಬರೆದ ಹುಬ್ಬಳ್ಳಿ ಹುಡುಗಿ

ಹುಬ್ಬಳ್ಳಿ: ಸಾಮಾನ್ಯವಾಗಿ ದೊಡ್ಡ – ದೊಡ್ಡ ಬಾರ್​ಗಳಲ್ಲಿ ಬಾರ್​ಟೆಂಡರ್​ಗಳನ್ನು ನೀವು ನೋಡಿರ್ತೀರಾ. ಅದರಲ್ಲಿ ಬಾರ್​ಟೆಂಡರ್​ಗಳು ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌ ಹಾರಿರುತ್ತೇವೆ. ಅಂಥದ್ದರಲ್ಲಿ ಇಲ್ಲೋರ್ವ ಯುವತಿ ಗ್ರಾಮೀಣ ಪ್ರದೇಶದಿಂದ ಬಂದು ಬಾರ್​ಟೆಂಡರ್​ನಲ್ಲಿ ಇದೀಗ ವಿಶ್ವ ದಾಖಲೆ ಬರೆದಿದ್ದಾರೆ. ವಿಶ್ವದಾಖಲೆ ಬರೆದ ಹಳ್ಳಿ ಹುಡುಗಿಹೌದು. ಹೀಗೆ ಗಿರ ಗಿರ ಎಂದು ಬಾಟಲಿಗಳಲ್ಲಿ ತಿರುಗಿಸುತ್ತ ನೋಡುಗರನ್ನು ಅಚ್ಚರಿಗೆ ಒಳಪಡಿಸುವ ಇವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ. ಹೀಗೆ ಇವರ …

Read More »