Breaking News

ರಾಜಕೀಯ

ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ನಿಯೋಜಿಸುವ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಆಗಮಿಸಬೇಕು.: ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ

ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ನಿಯೋಜಿಸುವ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಆಗಮಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ ಬೆಳಗಾವಿ ಜಿಲ್ಲೆಗೆ ರಾಜ್ಯದಲ್ಲೇ ಅತ್ಯುತ್ತಮ ಹೆಸರಿದ್ದು ಈ ಬಾರಿಯೂ ಉತ್ತಮ ಪರೀಕ್ಷೆ ನಡೆಯುವಂತಾಗಲು ಎಲ್ಲರೂ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಸೂಚನೆ ನೀಡಿದರು. ಮಾರ್ಚ 28ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆ ಬುಧವಾರ ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಬೆಳಗಾವಿ …

Read More »

ಬೆಳಗಾವಿ ಮಹನಗರ ಪಾಲಿಕೆಯ 2022-23ನೇ ಸಾಲಿನ ಬಜೆಟ್‍ನ್ನು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಮಂಡಿಸಿದರು.

ಬೆಳಗಾವಿ ಮಹನಗರ ಪಾಲಿಕೆಯ 2022-23ನೇ ಸಾಲಿನ ಬಜೆಟ್‍ನ್ನು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಮಂಡಿಸಿದರು. 2022-23ನೇ ಸಾಲಿನಲ್ಲಿ 44,765.22 ಲಕ್ಷಗಳಷ್ಟು ಅಂದಾಜು ಆದಾಯವನ್ನು ನಿರೀಕ್ಷಿಸಲಾಗಿದ್ದು, 44,758.91 ಲಕ್ಷಗಳಷ್ಟು ಅಂದಾಜು ವೆಚ್ಚವನ್ನು ನಿರೀಕ್ಷೆ ಮಾಡಲಾಗಿದೆ. ಬೆಳಗಾವಿಯಲ್ಲಿ ಪಾಲಿಕೆ ಬಜೆಟ್‍ನ್ನು ಮಂಡಿಸಿದ ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ, ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡರು. ಬೀದಿ ದೀಪಗಳ ನಿರ್ವಹಣೆಗೆ 550ಲಕ್ಷ ರೂಪಾಯಿಗಳನ್ನು ವ್ಯಯ ಮಾಡಲು ನಿರ್ಧರಿಸಲಾಗಿದೆ. ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ ಎಲ್‍ಇಡಿ ಲೈಟ್ ಹಾಕಲು ಯೋಜಿಸದಲಾಗಿದೆ. ರಸ್ತೆ, …

Read More »

ಚರಂಡಿಗಿಳಿದು ಕೊಳಚೆ ಶುಚಿಗೊಳಿಸಿದ ಆಪ್ ಕೌನ್ಸಿಲರ್‌ಗೆ ಹಾಲಿನ ಸ್ನಾನ..!

ದೆಹಲಿ: ಇಲ್ಲಿನ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಹಸೀಬ್-ಉಲ್-ಹಸನ್ ಅವರು ಶಾಸ್ತ್ರಿ ಉದ್ಯಾನದಲ್ಲಿ ಕೊಳಚೆ ತುಂಬಿದ್ದ ಚರಂಡಿಗಿಳಿದು ನೀರನ್ನು ಸ್ವಚ್ಛಗೊಳಿಸಿದ ಪ್ರಸಂಗ ನಡೆದಿದೆ. ಇದಕ್ಕೆ ಪ್ರತಿಯಾಗಿ ಗೌರವ ಸಲ್ಲಿಸಿದ ಸಾರ್ವಜನಿಕರು, ಕೌನ್ಸಿಲರ್ ಅವರನ್ನು ಹಾಲಿನಲ್ಲೇ ಸ್ನಾನ ಮಾಡಿಸಿದ್ದಾರೆ. ಪೂರ್ವ ದೆಹಲಿಯ ಕೌನ್ಸಿಲರ್ ಆಗಿರುವ ಹಸನ್ ಬಿಳಿ ಕುರ್ತಾ ಧರಿಸಿ ಎದೆ ಮಟ್ಟದವರೆಗೆ ತುಂಬಿಕೊಂಡಿದ್ದ ಚರಂಡಿಗೆ ಇಳಿದು ಅಲ್ಲಿನ ಕೊಳಚೆಯನ್ನು ಶುಚಿಗೊಳಿಸಿದರು. ಚರಂಡಿಯಲ್ಲಿ ತೇಲುತ್ತಿದ್ದ ತ್ಯಾಜ್ಯ ವಸ್ತುಗಳನ್ನು ಹಸನ್ ತೆಗೆದು ಹಾಕಿದ್ದಾರೆ. …

Read More »

ಅದು ಜನರ‌ ಬೆವರ ಹಣವಾಗಿದೆ. ಅದರ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು : ಸಿಎಂ ಬೊಮ್ಮಾಯಿ-ಸಿದ್ದರಾಮಯ್ಯ ಜಟಾಪಟಿ

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧದ ಶೇ.40ರಷ್ಟು ಕಮಿಷನ್ ಆರೋಪ ಕುರಿತ ನಿಲುವಳಿ ಸೂಚನೆ ನೋಟಿಸ್ ತಿರಸ್ಕಾರವಾದ ವಿಷಯವು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷದ ನಡುವೆ ಜಟಾಪಟಿಗೆ ಕಾರಣವಾಯಿತು. ನಿಲುವಳಿ ನೋಟಿಸ್ ತಿರಸ್ಕಾರ ಮಾಡಿದ್ದ ಸ್ಪೀಕರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಈಗ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಕಮಿಷನ್​ ಆರೋಪದ ಬಗ್ಗೆ ಚರ್ಚೆ ನಡೆಸಲು ನಾನು ಬೆಳಗಾವಿ ಅಧಿವೇಶನದ ವೇಳೆ ನಿಲುವಳಿ ಸೂಚನೆ ಕೊಟ್ಟಿದ್ದೇನೆ. ಅದು …

Read More »

ರಾಜಕೀಯಕ್ಕಿಂತ ಕಾವೇರಿಯೇ ಮುಖ್ಯ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶನ

ಬೆಂಗಳೂರು: ಮೇಕೆದಾಟು ವಿಷಯದಲ್ಲಿ ರಾಜಕೀಯಕ್ಕಿಂತ ನಾಡಿನ ಜನರ ಹಿತ ಮುಖ್ಯ. ನಮ್ಮ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದ ವಿಷಯದಲ್ಲಿ ನಾವೆಲ್ಲ ಒಂದೇ ಎಂದು ನೆರೆ ರಾಜ್ಯಕ್ಕೆ ಸಂದೇಶ ಕಳುಹಿಸಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖ್ಯ ನಾಯಕರು ಮಾತಿನ ಚಾಟಿ ಬೀಸಿ ವಿಧಾನಸಭೆಯಿಂದಲೇ ತಮಿಳುನಾಡಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಮಂಗಳವಾರ ಪ್ರಶ್ನೋತ್ತರ ಕಲಾಪದ ಬಳಿಕ ಶೂನ್ಯ ವೇಳೆಯಲ್ಲಿ ತಮಿಳುನಾಡು ವಿಧಾನಸಭೆ ನಿರ್ಣಯದ ವಿಷಯ ಪ್ರಸ್ತಾಪವಾಯಿತು. ಈ ವೇಳೆ, ತಮಿಳುನಾಡಿನ ಗದಾ ಪ್ರಹಾರ …

Read More »

ಗ್ರಾಹಕರಿಗೆ ಮತ್ತೆ ಶಾಕ್​: ಎರಡನೇ ದಿನವು ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಏರಿಕೆ,

ನವದೆಹಲಿ: ನಾಲ್ಕೂವರೆ ತಿಂಗಳ ಬಳಿಕ ನಿನ್ನೆ (ಮಾ.22) ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ 80 ಪೈಸೆಗಳಷ್ಟು ಏರಿಕೆಯಾಗಿತ್ತು. ಇಂದು (ಮಾ.23) ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ 80 ಪೈಸೆ ಹೆಚ್ಚಳವಾಗಿದ್ದು, ಸಾಮಾನ್ಯ ಜನರಿಗೆ ಬ್ಯಾಕ್​ ಟು ಬ್ಯಾಕ್​ ಶಾಕ್​ ಎದುರಾಗುತ್ತಿದೆ. ಒಂದೆಡೆ ಯೂಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವು ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾವು …

Read More »

ಕದ್ರಿ ದೇವಳದ ಹುಂಡಿ ಹಣವನ್ನೇ ನುಂಗಿದ ಮಹಿಳಾ ಟ್ರಸ್ಟಿ!

ಮಂಗಳೂರು: ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದವರು, ಅಲ್ಲಿನ ಅಭಿವೃದ್ಧಿ ವಿಚಾರ ನೋಡುವುದು, ಹಿತ ಕಾಪಾಡುವ ಕೆಲಸ ಮಾಡಬೇಕು. ರಾಜ್ಯದಲ್ಲೇ ಬಹುತೇಕ ಆಸ್ತಿಕರು ಭೇಟಿ ನೀಡುವ ತಾಣ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ. ಇಲ್ಲಿನ ಮಹಿಳಾ ಟ್ರಸ್ಟಿಯೋರ್ವರು ಹುಂಡಿಯ ಹಣವನ್ನೇ ನುಂಗಿ ಹಾಕಿರುವುದು ಈಗ ಬಯಲಾಗಿದೆ. ಫೆಬ್ರವರಿಯಲ್ಲಿ ನಡೆದಿರುವ ಈ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ವಿಚಾರ ಹಲವು ತಿರುವು ಪಡೆದುಕೊಂಡಿದೆ. ಸ್ಥಳೀಯರು ಹಾಗೂ ದೇಗುಲದ ಭಕ್ತರು ಈ ಪ್ರಕರಣದ ಕುರಿತು …

Read More »

ಜೇಮ್ಸ್​’ ಪ್ರದರ್ಶನ ತಡೆಗೆ ಬಿಜೆಪಿ ಯತ್ನ!

ಬೆಂಗಳೂರು: ರಾಜ್ಯದ ಅನೇಕ ಕಡೆ ಬಿಜೆಪಿ ಶಾಸಕರು ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಜೇಮ್ಸ್​ ಪ್ರದರ್ಶನ ನಿಲ್ಲಿಸಿ ‘ದಿ ಕಾಶ್ಮೀರ್​ ಫೈಲ್ಸ್’​ ಚಿತ್ರ ಪ್ರದರ್ಶನ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ದೂರುಗಳಿವೆ. ಸರ್ಕಾರ ಕೂಡಲೇ ಈ ದೌರ್ಜನ್ಯಕ್ಕೆ ತಡೆ ಹಾಕಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.   ಸೋಮವಾರ ಜೇಮ್ಸ್​ ಚಿತ್ರದ ನಿರ್ಮಾಪಕ ಕಿಶೋರ್ ಅವರು​ ನನ್ನನ್ನು ಭೇಟಿಯಾಗಿ, ಅನೇಕ ಕಡೆಗಳಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಜೇಮ್ಸ್​ ಚಿತ್ರ ಪ್ರದರ್ಶನ …

Read More »

ಕಚ್ಚಾ ಬಾದಮ್​ ಹಾಡಿಗೆ ಪೊಲೀಸ್​ ಸಿಬ್ಬಂದಿ ಹಾಕಿದ ಸ್ಟೆಪ್ಸ್​:

ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸಿರುವ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್​ ರೀಮಿಕ್ಸ್​ ಹಾಡೇ ಕಣ್ಣು ಮುಂದೆ ಬರುತ್ತಿದೆ. ಇನ್ನೂ ಕೂಡ ಅದರ ಪ್ರಭಾವ ಮಾತ್ರ ಕಡಿಮೆಯಾಗಿಲ್ಲ. ಅಲ್ಲದೆ, ಈ ಹಾಡಿಗೆ ಫಿದಾ ಆದ ಎಷ್ಟೋ ಮಂದಿ ಸೊಂಟ ಬಳಕಿಸುತ್ತಿದ್ದಾರೆ. ಇದೀಗ ಪೊಲೀಸ್​ ಸಿಬ್ಬಂದಿ ಇದೇ ಹಾಡಿಗೆ ಡಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ …

Read More »

ಬಟ್ಟೆ ಬ್ಯಾಗ್​ನಿಂದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಎದುರಾಯ್ತು ಸಂಕಷ್ಟ!

ಮೈಸೂರು: ಬಟ್ಟೆ ಬ್ಯಾಗ್ ಖರೀದಿ ಹಗರಣದ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ರೋಹಿಣಿ ಸಿಂಧೂರಿ ಅವರು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೂರ್ವಾನುಮತಿ ಇಲ್ಲದೆ 14.71 ಲಕ್ಷ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು 14 ಕೋಟಿ ರೂ.ಗೆ ಖರೀದಿ ಮಾಡಿದ್ದರು. ಚಿಲ್ಲರೆ ಮಾರುಕಟ್ಟೆಯಲ್ಲಿ 10ರಿಂದ 13 ರೂ.ಗೆ ಸಿಗುವ ಪ್ರತಿ ಬ್ಯಾಗ್‌ಗೆ 52 ರೂ. ಕೊಡಲಾಗಿದೆ. ಸಾರ್ವಜನಿಕರ ತೆರಿಗೆ …

Read More »