ಮಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಪಾರದರ್ಶಕವಾದ ತನಿಖೆಯನ್ನು ನಡೆಸುತ್ತೇವೆ. ತನಿಖೆಯ ಆಧಾರದಲ್ಲಿ ಮುಂದೆ ಏನು ಎಂಬುವುದನ್ನು ಚರ್ಚಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದ ಬಗ್ಗೆ ಸಂಪೂರ್ಣ ವಿಚಾರಣೆ ಮಾಡುತ್ತೇವೆ. ಸಂತೋಷ್ ಪಾಟೀಲ್ ದೇಹ ಉಡುಪಿಯ ಲಾಡ್ಜ್ ನಲ್ಲಿ ಪತ್ತೆಯಾಗಿದೆ. ಖುದ್ದು ಎಸ್.ಪಿ ಸ್ಥಳಕ್ಕೆ ಹೋಗಿದ್ದಾರೆ ಪ್ರಾಥಮಿಕ ತನಿಖೆ ಈಗಷ್ಟೇ ನಡೆಯುತ್ತಿದೆ. ಪ್ರಾಥಮಿಕ …
Read More »ಸಂತೋಷ್ ಯಾರೆಂದೇ ನನಗೆ ಗೊತ್ತಿಲ್ಲ, : ಸಚಿವ ಈಶ್ವರಪ್ಪ
ಮೈಸೂರು: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರಪ್ಪ, ‘ಸಂತೋಷ್ ಯಾರು ಎಂದೇ ನನಗೆ ಗೊತ್ತಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ’ ಎಂದಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ …
Read More »ಈಶ್ವರಪ್ಪ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ,: ಈಶ್ವರ್ ಖಂಡ್ರೆ
ಬೆಂಗಳೂರು:ಗುತ್ತಿಗೆದಾರ ಸಂತೋಷ ಪಾಟೀಲ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬಲಿಪಶು ಆಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ ಸಚಿವ ಕೆ ಎಸ್ ಈಶ್ವರಪ್ಪ ಅವರ ಮೇಲೆ ನೇರ ಆರೋಪ ಮಾಡಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಮಾಡಬೇಕು ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಸರ್ಕಾರ …
Read More »ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ : ಉಡುಪಿಗೆ ಆಗಮಿಸಿದ ಕುಟುಂಬಿಕರು
ಉಡುಪಿ: ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿ ಉಡುಪಿಯ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಕುಟುಂಬಿಕರು ಮಂಗಳವಾರ ತಡರಾತ್ರಿ ಉಡುಪಿಗೆ ಆಗಮಿಸಿದರು. ಬೆಂಗಳೂರಿಂದ ಮತ್ತು ಬೆಳಗಾವಿಯಿಂದ ಬಂದಿರುವ ಸಹೋದರರು ಸೇರಿದಂತೆ ಎಂಟು ಮಂದಿ ಕುಟುಂಬಿಕರು ಘಟನೆ ನಡೆದ ಖಾಸಗಿ ಲಾಡ್ಜ್ ಗೆ ಆಗಮಿಸಿ ನೇರವಾಗಿ ಆತ್ಮಹತ್ಯೆ ಮಾಡಿಕೊಂಡ ರೂಮ್ ನಂಬರ್ 207 ತೆರಳಿದರು. ನಾವು ಬಾರದೆ ಯಾವುದೇ ತನಿಖೆ ಮುಂದುವರೆಸಬೇಡಿ …
Read More »ಇ-ಸ್ವತ್ತು ತಂತ್ರಾಂಶ ದುರುಪಯೋಗಪಡಿಸಿಕೊಂಡಿದ್ದ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್‌ನನ್ನು ಅಮಾನತು
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶ ದುರುಪಯೋಗಪಡಿಸಿಕೊಂಡಿದ್ದ ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್‌ನನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. 2021ರ ಸೆ.17ರಿಂದ 21ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇಒ ಅವರ ಇ-ಸ್ವತ್ತು ಲಾಗಿನ್ ಐಡಿಯನ್ನು ಹ್ಯಾಕ್ ಮಾಡಿ 36 ಕಂದಾಯ ಸೈಟುಗಳಿಗೆ ಇ-ಖಾತಾ ವಿತರಿಸಲಾಗಿತ್ತು.
Read More »ಬಿಜೆಪಿಯೇ ನನ್ನ ಗಂಡನನ್ನು ಸಮಾಧಿ ಮಾಡಿಬಿಡ್ತು; ಸಂತೋಷ್ ಪತ್ನಿ ಜಯಶ್ರೀ
ಬೆಳಗಾವಿ: ಬಿಜೆಪಿಯೇ ನನ್ನ ಗಂಡನನ್ನು ಸಮಾಧಿ ಮಾಡಿಬಿಡ್ತು ಎಂದು ಸಂತೋಷ್ ಪತ್ನಿ ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ರಾತ್ರಿ ನನ್ನ ಪತಿ ಸಂತೋಷ್ ನನ್ನ ಜೊತೆ ಮಾತನಾಡಿದ್ದರು. ಬೆಳಗ್ಗೆ ವೇಳೆಗೆ ಅವರ ಆತ್ಮಹತ್ಯೆ ಸುದ್ದಿ ಬಂದಿದೆ. ಮದುವೆಯಾಗಿ ಇನ್ನೂ ಮೂರು ವರ್ಷ ಆಗಿದೆ. ನಾನೇನು ಮಾಡಲಿ ಈಗ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನನ್ನ ಬಳೆ, ಸರ ಹೀಗೆ ಎಲ್ಲಾ ಒಡವೆಗಳನ್ನು ಅಡ ಇಟ್ಟು ಕಾಮಗಾರಿಗಳನ್ನು ಮಾಡಿಸಿದ್ದರು. ಆದ್ರೆ, …
Read More »ತ್ರಿಕೋನ ಪ್ರೇಮ ಕಥೆ ದುರಂತದಲ್ಲಿ ಅಂತ್ಯ; ಮೂವರೂ ಆತ್ಮಹತ್ಯೆಗೆ ಶರಣು!
ರಾಯಚೂರು: ತ್ರಿಕೋನ ಪ್ರೇಮಕಥೆಯೊಂದು ದುರಂತ್ಯ ಅಂತ್ಯಕಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಹೌದು, ಅವನಿಗೆ ಮದುವೆ ಆಗಿದೆ. ಆದರೂ ಮತ್ತೊಂದು ಯುವತಿಯೊಂದಿಗೆ ಪ್ರೀತಿ ಪ್ರೇಮ ಮುಂದುವರೆಸಿದ್ದನು. ಆದರೆ ಇದೀಗ ಮೂವರು ಸಾವಿನ ದಾರಿ ಹಿಡಿದಿದ್ದಾರೆ. ಇದೀಗ ಆತ್ಮಹತ್ಯೆಗೆ ಶರಣಾದ ಯುವತಿಯ ಹೆಸರು ಪಾರ್ವತಿ (34). ಈಕೆ ರಾಯಚೂರಿನ ಆರ್ ಟಿಪಿಎಸ್ ನಲ್ಲಿ ಮಹಿಳಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಕೈ ತುಂಬಾ ಸಂಬಳ ಬರುವ, ಇರೊಕ್ಕೊಂದು ಕ್ವಾಟ್ರಸ್ ಇದ್ದ ಈಕೆ ಬಿದ್ದಿದ್ದು …
Read More »ಬಿಜೆಪಿಯನ್ನು ಕಿತ್ತೆಸೆಯೋಕೆ ಅದೇನು ಕೊತ್ತಂಬರಿ ಸೊಪ್ಪೇ’?: ಸಚಿವ ಶ್ರೀರಾಮುಲು
ಮಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಯಾರಿಗೂ ಬೇಡವಾಗಿರುವ ಕೂಸಾಗಿದ್ದಾರೆ. ಅವರು ತಾಳ್ಮೆ ಕಳೆದುಕೊಂಡು ಮಾತನಾಡುತ್ತಿದ್ದಾರೆ. ‘ಬಿಜೆಪಿಯನ್ನು ಕಿತ್ತೆಸೆಯೋಕೆ ಅದೇನು ಕೊತ್ತಂಬರಿ ಸೊಪ್ಪೇ’? ಎಂದು ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಇಡೀ ದೇಶದಲ್ಲಿ, ರಾಜ್ಯದಲ್ಲಿ ಆಲದ ಮರವಾಗಿ ಬೆಳೆದು ನಿಂತಿದೆ. ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದ್ದು, ಪ್ರಧಾನಿ ಮೋದಿ ದೇಶಕ್ಕೆ ಸಮರ್ಥ ನಾಯಕರಾಗಿದ್ದಾರೆ ಎಂದರು. ದೇಶದಲ್ಲಿ ಕಾಂಗ್ರೆಸ್ ಯಾರಿಗೂ ಬೇಡವಾದ ಪಕ್ಷವಾಗಿದೆ. …
Read More »ಹಲವು ವರ್ಷಗಳಿಂದ ತಿರುಪತಿಗೆ ಬರುತ್ತಿದ್ದೇವೆ. ಆದರೆ, ಈಗ ಇರುವ ಪರಿಸ್ಥಿತಿ ಈ ಮೊದಲು ಎಂದೂ ಕಂಡಿರಲಿಲ್ಲ ಎಂದು ಭಕ್ತರೊಬ್ಬರು ಆಕ್ರೋಶ
ತಿರುಪತಿ, ಆಂಧ್ರಪ್ರದೇಶ : ಶ್ರೀವಾರಿ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ನೀಡುವ ಮೂರು ಕೇಂದ್ರಗಳಲ್ಲಿ ಭಕ್ತಾದಿಗಳು ಹೆಚ್ಚಾದ ಕಾರಣ ಉಂಟಾದ ನೂಕುನುಗ್ಗಲಿನಲ್ಲಿ ಮೂವರಿಗೆ ಗಾಯವಾಗಿದೆ. ಆ ಮೂವರನ್ನು ರುಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ನಂತರ ಗೋವಿಂದರಾಜಸ್ವಾಮಿ ಸತ್ರ, ಶ್ರೀನಿವಾಸಂ ಮತ್ತು ಭೂದೇವಿ ಕಾಂಪ್ಲೆಕ್ಸ್‌ಗಳಲ್ಲಿ ಸರ್ವದರ್ಶನ ಟೋಕನ್‌ಗಳನ್ನು ನೀಡಲಾಗಿರುವ ಕಾರಣದಿಂದ ನೂಕುನುಗ್ಗಲು ಸಂಭವಿಸಿದೆ ಎನ್ನಲಾಗಿದೆ. ಇದರೊಂದಿಗೆ ಸಣ್ಣ ಮಕ್ಕಳಿಗೆ ಆಹಾರ, ಕುಡಿಯುವ ನೀರಿನಂತಹ …
Read More »ನನ್ನ ಮೇಲೆ ಆಪಾದನೆ ಮಾಡಿದವ್ರು ಕೋರ್ಟ್‌ನಲ್ಲೇ ಪ್ರೂವ್ ಮಾಡ್ಬೇಕಿತ್ತು.. ಆತ್ಮಹತ್ಯೆಗೂ ನನ್ಗೂ ಸಂಬಂಧ ಇಲ್ಲ.. ಈಶ್ವರಪ್ಪ
ಮೈಸೂರು : ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಆತ ಯಾರೆಂಬುದು ನನಗೆ ಗೊತ್ತೇ ಇಲ್ಲ ಎಂದು ಸಚಿವ ಈಶ್ವರಪ್ಪ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಈಶ್ವರಪ್ಪ ಅವರು, ತಮ್ಮ ಇಲಾಖೆಯ ಮೇಲೆ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ. ಆತ ಯಾರೆಂಬುದು ನನಗೆ ಗೊತ್ತೇ ಇಲ್ಲ. ಈತ ನಮ್ಮ ಇಲಾಖೆಯ ಮೇಲೆ ಆರೋಪ ಮಾಡಿರುವ …
Read More »
Laxmi News 24×7