Breaking News

ರಾಜಕೀಯ

ಡಿಕೆಶಿ ಏನೇ ಮಾಡಿದ್ರು ಅಂಜುವ ಮಗ ನಾನಲ್ಲ: ಯತ್ನಾಳ್

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏನೇ ಮಾಡಿದರೂ ಅಂಜುವ ಮಗ ನಾನಲ್ಲ. ನಾನು ಅಂಜಿ ರಾಜಕಾರಣ ಮಾಡಲ್ಲ. ಡಿಕೆಶಿಗೆ ನನ್ನ ಭಯ ಹುಟ್ಟಿದೆ. ಕರ್ನಾಟಕದಲ್ಲಿ ರಾಜಕೀಯ ಭವಿಷ್ಯ ಮುಗಿಯುತ್ತದೆ ಎನ್ನುವ ಭಯ ಶುರುವಾಗಿದೆ ಎಂದು ಡಿಕೆಶಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಎಂ ಆಗಲು ಹೈಕಮಾಂಡ್ ಹಣ ನೀಡಬೇಕಾಗುತ್ತದೆ ಎಂದು ನಾನು ಹೇಳಿಲ್ಲ. ನಾನು ಹೇಳಿದ ಅರ್ಥ ಬೇರೆ ಇದೆ. ಸಿಎಂ ಮಾಡುತ್ತೇವೆ ಎಂದು …

Read More »

ಜಾಗ ಮಾರಾಟ ಹಿನ್ನೆಲೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಇಬ್ಬರ ಬಂಧನ

ಮಂಗಳೂರು : ವೃದ್ಧರೋರ್ವರ ಜಾಗ ಮಾರಾಟಕ್ಕೆ ಸಂಬಂಧಿಸಿ ನಕಲಿ ದಾಖಲೆ ಸೃಷ್ಟಿಸಿ 60 ಲ.ರೂ.ಗೂ ಅಧಿಕ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಉಡುಪಿಯ ಅಶೋಕ ಕುಮಾರ್‌(47) ಮತ್ತು ರೇಷ್ಮಾ ವಾಸುದೇವ್‌ ನಾಯಕ್‌ (36) ಎಂಬವರನ್ನು ಬಂಧಿಸಿದ್ದಾರೆ.   ಬೆಂಗಳೂರು ಮೂಲದ, ಪ್ರಸ್ತುತ ಬಜಪೆ ಬಳಿ ವಾಸವಿರುವ ಕ್ರಿಸ್ಟಿನ್‌ ಎಡ್ವಿನ್‌ ಜೋಸೆಫ್ ಗೋನ್ಸಾಲ್ವಿಸ್‌(84) ವಂಚನೆಗೊಳಗಾದವರು. ಅವರು ಉಡುಪಿ ಜಿಲ್ಲೆಯ ಮೂಡುತೋನ್ಸೆ ಗ್ರಾಮದಲ್ಲಿ 77 ಸೆಂಟ್ಸ್‌ ಜಾಗ ಹೊಂದಿದ್ದು ಅದನ್ನು ಮಾರಾಟ …

Read More »

ಪಿಎಸ್‌ಐ ಅಕ್ರಮ ನೇಮಕ: ಡಿವೈಎಸ್ಪಿ ಸಾಲಿ ಸೇರಿ 12 ಪೊಲೀಸ್ ಸಿಬ್ಬಂದಿ ಅಮಾನತು

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಿಐಡಿ ಬಂಧನಕ್ಕೆ ಒಳಗಾಗಿರುವ ರಾಯಚೂರು ಜಿಲ್ಲೆ ಲಿಂಗಸುಗೂರು ಉಪವಿಭಾಗದ ಡಿವೈಎಸ್ಪಿ ಮಲ್ಲಿಕಾರ್ಜುನ ‌ಸಾಲಿ ಹಾಗೂ ಕಲಬುರಗಿಯ ಬೆರಳಚ್ಚು ವಿಭಾಗದ ಆನಂದ ಮೇತ್ರಿ ಸೇರಿ 12 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.   ಗೃಹ ಇಲಾಖೆಯು ಹೊರಡಿಸಿದ ಅಮಾನತು ಆದೇಶವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೆ ಕಳಿಸಲಾಗಿತ್ತು. ಆದೇಶ ಪತ್ರಗಳನ್ನು ಸಿಬ್ಬಂದಿಯ ಮೂಲಕ ಇಲ್ಲಿನ ಐವಾನ್ ಇ ಶಾಹಿ ವಿಚಾರಣೆ ಎದುರಿಸುತ್ತಿರುವ …

Read More »

ನಾನು ಯಾರಿಗೂ ಐದು ಪೈಸೆಯನ್ನೂ ಕೊಡದೆ, ಚಹಾ ಕೂಡ ಕುಡಿಸದೆ ಮುಖ್ಯಮಂತ್ರಿಯಾಗಿದ್ದೆ’

ಬೆಳಗಾವಿ: ‘ನಾನು ಯಾರಿಗೂ ಐದು ಪೈಸೆಯನ್ನೂ ಕೊಡದೆ, ಚಹಾ ಕೂಡ ಕುಡಿಸದೆ ಮುಖ್ಯಮಂತ್ರಿಯಾಗಿದ್ದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿ, ‌ಶಾಸಕರು ಆಯ್ಕೆ ಮಾಡಿದ್ದರು. ಹೈಕಮಾಂಡ್ ಒಪ್ಪಿತ್ತು. ಐದು ವರ್ಷ ಯಾರಿಗೂ ಹಣ ಕೊಡದೆ ಮುಖ್ಯಮಂತ್ರಿ ಸ್ಥಾನವನ್ನು ನಿರ್ವಹಿಸಿದೆ’ ಎಂದು ಪ್ರತಿಕ್ರಿಯಿಸಿದರು. ಮಂತ್ರಿ ‌ಸ್ಥಾನದ ಆಕಾಂಕ್ಷಿಯಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ‘ದೆಹಲಿಯಿಂದ ನನ್ನ ಬಳಿಗೆ ಬಂದಿದ್ದ ಕೆಲವರು, …

Read More »

ಪ್ರಧಾನಿ ನರೇಂದ್ರ ಮೋದಿ ಅವರೇ ಸುಳ್ಳು ಹೇಳುತ್ತಾರೆ ಎಂದರೆ ಏನನ್ನಬೇಕು: ಸಿದ್ದರಾಮಯ್ಯ

ಬೆಳಗಾವಿ: ಕೋವಿಡ್‌-19ನಿಂದ ಸಂಭವಿಸಿರುವ ಸಾವಿನ ಸಂಖ್ಯೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಸುಳ್ಳು ಹೇಳುತ್ತಾರೆ ಎಂದರೆ ಏನನ್ನಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ ಪ್ರಶ್ನಿಸಿದರು. ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ದೇಶದಲ್ಲಿ ಕೋವಿಡ್-19ರಿಂದ ಮೃತಪಟ್ಟವರ ನಿಖರ ಸಂಖ್ಯೆಯನ್ನು ಬಹಿರಂಗಪಡಿಸುವುದಕ್ಕಾಗಿ ಮರಣ ಆಡಿಟ್ ನಡೆಸಬೇಕು’ ಎಂದು ಆಗ್ರಹಿಸಿದರು. ‘ಕೋವಿಡ್ ಸಾವಿನ‌ ವಿಷಯದಲ್ಲಿ ಸುಳ್ಳು ಲೆಕ್ಕ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು …

Read More »

ಯತ್ನಾಳ್ ಬಳಿ ₹ 2,500 ಕೋಟಿ ಕೇಳಿದ್ಯಾರು, ಕಳುಹಿಸಿದ್ಯಾರು? -ಸಿದ್ದರಾಮಯ್ಯ

ಬೆಳಗಾವಿ: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ₹ 2,500 ಕೋಟಿ ಕೇಳಿದವರಾರು,‌ ಕಳುಹಿಸಿದವರಾರು ಎನ್ನುವುದನ್ನು ತನಿಖೆ ನಡೆಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.   ಮುಖ್ಯಮಂತ್ರಿ ಅಥವಾ ಮಂತ್ರಿ ‌ಸ್ಥಾನದ ಆಕಾಂಕ್ಷಿಯಾಗಿರುವ ಯತ್ನಾಳ್ ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಹೇಳಿದರು. ‘ಯತ್ನಾಳ್ ಕೇಂದ್ರದ ಮಾಜಿ ಸಚಿವರಾಗಿದ್ದವರು. ಅಂಥವರೇ ₹ 2,500 ಕೋಟಿ ಕೇಳಿದ್ದರು ಎಂದು …

Read More »

ಮರಾಠಾ ಸಮುದಾಯದಕ್ಕೆ ಸಚಿವ ಸ್ಥಾನ ಕೊಡಬೇಕು: ರಮೇಶ ಜಾರಕಿಹೊಳಿ

ಬೆಳಗಾವಿ ಜಿಲ್ಲೆ): ಸಚಿವ ಸಂಪುಟ ಪುನರ್‌ರಚನೆ ಮಾತುಗಳು ಕೇಳಿಬರುತ್ತಿರುವ ನಡುವೆ, ಆಕಾಂಕ್ಷಿಗಳಾಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ ಇಲ್ಲಿ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.   ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನ ಕೊಡುವುದು, ಬಿಡುವುದು ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದು ಪ್ರತಿಕ್ರಿಯಿಸಿದರು. ‘ಅಥಣಿ ಶಾಸಕ ಮಹೇಶ ಕುಮಠಳ್ಳಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮಂತ್ರಿ ಸ್ಥಾನ ಬೇಡ; ಕ್ಷೇತ್ರದಲ್ಲಿ ನೀರಾವರಿ …

Read More »

ಶೌಚಾಲಯ ಗೋಡೆಗೆ ಗೌಪ್ಯ ಬಾಗಿಲು ನಿರ್ಮಿಸಿ ವೇಶ್ಯಾವಾಟಿಕೆ!

ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ವೇಶ್ಯಾವಾಟಿಕೆ (Prostitution) ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ಅರೆಸ್ಟ್ (Arrest) ಆಗಿದ್ದಾರೆ. ಹೊರ ರಾಜ್ಯದ ಯುವತಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಶೌಚಾಲಯ ಗೋಡೆಗೆ ಗೌಪ್ಯ ಬಾಗಿಲು ನಿರ್ಮಿಸಿ ಪ್ರವೇಶಕ್ಕೆ ವ್ಯವಸ್ಥೆ ಮಾಡಿದ್ದರು. ದಾಳಿ ವೇಳೆ ವೇಶ್ಯಾವಾಟಿಕೆ ಅಡ್ಡೆಯ ಕಳ್ಳ ಬಾಗಿಲು ರಹಸ್ಯ ಬಯಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆ ಮಾಹಿತಿ ಮೇರೆಗೆ ಚಿತ್ರದುರ್ಗ ಡಿಸಿಐಬಿ …

Read More »

ಅನಾರೋಗ್ಯದಿಂದ ಸ್ಯಾಂಡಲ್ ವುಡ್ ಹಾಸ್ಯನಟ ಮೋಹನ್ ಜುನೇಜಾ ನಿಧನ

ಬೆಂಗಳೂರು: ಅನಾರೋಗ್ಯದಿಂದ ಸ್ಯಾಂಡಲ್ ವುಡ್ ಹಾಸ್ಯನಟ ಮೋಹನ್ ಜುನೇಜಾ ನಿಧನರಾಗಿದ್ದಾರೆ. ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಶನಿವಾರ ಮೇ 7ರಂದು ವಿಧಿವಶರಾಗಿದ್ದಾರೆ.   ಇತ್ತೀಚೆಗೆ ತೆರೆಕಂಡು ಭಾರೀ ಯಶಸ್ಸು ಗಳಿಸಿದ ಕೆಜಿಎಫ್ ಭಾಗ ಒಂದು ಮತ್ತು ಎರಡು ಚಿತ್ರ ಸೇರಿದಂತೆ ನವಗ್ರಹ, ಗಣೇಶನ ಗಲಾಟೆ, ಜೋಗಿ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸ್ಯಾಂಡಲ್ ವುಡ್ ನ ಪ್ರಮುಖ ನಾಯಕ ನಟರ ಜೊತೆ ಹಾಸ್ಯನಟ …

Read More »

ತನಿಖಾಧಿಕಾರಿಗಳನ್ನೇ ಪ್ರಶ್ನಿಸಿದ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಸಚಿವ ಪ್ರಭು ಚೌಹಾಣ್‌ ಹಾಗೂ ಪರಿಷತ್‌ ಸದಸ್ಯ ಸಂಕನೂರು ಪತ್ರಗಳನ್ನು ತನಿಖಾಧಿಕಾರಿಗಳು ಹೇಗೆ ಆಧಾರ ರಹಿತವಾಗಿದೆ ಎಂದು ತೀರ್ಮಾನಿಸಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಗಾದರೆ ಸಂಪುಟ ಸಚಿವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಯಾವುದೇ ಬೆಲೆ ಇಲ್ಲವೇ? ಈ ದಾಖಲೆಗಳು ಪ್ರಕರಣಕ್ಕೆ ಸಂಬಂಧಿಸುವುದಿಲ್ಲವೇ? ಬಿಜೆಪಿ ಶಾಸಕರು ಹಾಗೂ ಸಚಿವರಿಗೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು …

Read More »