ಬೆಂಗಳೂರು, ಮೇ 17: ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಾತೃ ವೃಂದದಡಿ ವರದಿಗಾರರು-2, ಕಂಪ್ಯೂಟರ್ ಆಪರೇಟರ್-4, ಕಿರಿಯ ಸಹಾಯಕ-10, ಬೆರಳಚ್ಚುಗಾರರು-1, ದಲಾಯತ್-23 ಹೀಗೆ ಒಟ್ಟು 43 ಹುದ್ದೆಗಳು ಹಾಗೂ ಸ್ಥಳೀಯ ವೃಂದದಡಿ ವರದಿಗಾರರು-3, ಶೀಘ್ರಲಿಫಿಗಾರರು-2, ಕಿರಿಯ ಸಹಾಯಕರು-3, ಸ್ವಾಗತಕಾರರು-1, ಬೆರಳಚ್ಚುಗಾರರು-3, ಬಡಗಿ-1, ವಾಹನಚಾಲಕರು-8, ದಲಾಯತ್-11, ಸ್ವೀಪರ್-2 ಹೀಗೆ ಒಟ್ಟು 34 …
Read More »ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಮನೆ ಜವಾಬ್ದಾರಿಯಿಂದ ಹಿಡಿದು ದೇಶವನ್ನು ಮುನ್ನೆಡೆಸುವ ಮಹತ್ತರ ಜವಾಬ್ದಾರಿವರೆಗೂ ಮಹಿಳೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಈ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲವೆಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೇ ತೆಲಂಗಾಣದ ಈ 21 ವರ್ಷದ ಯುವತಿ. ತೆಲಂಗಾಣದ ಈ ಯುವತಿ ಯಶಸ್ವಿಯಾಗಿ ಲೈಟ್ ಕಂಬ ಹತ್ತುವ …
Read More »ಹಿರಿಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2022-23 ನೇ ಸಾಲಿನ ಬಜೆಟ್ ಅನುಷ್ಠಾನ, ಆಡಳಿತಕ್ಕೆ ಚುರುಕು, ಕಡತ ವಿಲೇವಾರಿ ಹಾಗೂ ಇನ್ನಿತರೆ ವಿಷಯಗಳ ಕುರಿತು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ವಿ ಸೋಮಣ್ಣ, ಜೆ ಸಿ ಮಾಧುಸ್ವಾಮಿ, ಮುನಿರತ್ನ, ಎಂ ಟಿ ಬಿ ನಾಗರಾಜ, ಡಾ. ನಾರಾಯಣಗೌಡ, ಅರಗ ಜ್ಞಾನೇಂದ್ರ, ಬೈರತಿ ಬಸವರಾಜ ಸೇರಿದಂತೆ ಎಲ್ಲ …
Read More »ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ
ಬೆಂಗಳೂರು: ಬೇಷರತ್ ಆಗಿ ಜೆಡಿಎಸ್ ಸೇರುತ್ತೇನೆ ಎಂದಿದ್ದ ಸಿ.ಎಂ.ಇಬ್ರಾಹಿಂ ಈಗ ಪರಿಷತ್ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿಚಾರ ಜೆಡಿಎಸ್ ನಾಯಕರಿಗೆ ಕಸಿವಿಸಿ ಸೃಷ್ಟಿಸಿದೆ. ಬದಲಾದ ಸನ್ನಿವೇಶದಲ್ಲಿ ಪರಿಷತ್ ಸ್ಥಾನಕ್ಕೆ ಒತ್ತಡ ಹಾಕುತ್ತಿರುವ ಇಬ್ರಾಹಿಂ, ನನಗೆ ಅವಕಾಶ ನೀಡಿದರೆ ಮುಸ್ಲಿಂ ಸಮುದಾಯಕ್ಕೆ ಒಳ್ಳೆಯ ಸಂದೇಶ ಕೊಟ್ಟಂತಾಗಲಿದೆ ಎಂಬ ದಾಳ ಉರುಳಿಸಿದ್ದಾರೆ. ಇಲ್ಲದೇ ಹೋದರೆ ಇಡೀ ಸಮುದಾಯ ಅನುಮಾನದಿಂದಲೇ ನೋಡುವಂತಾಗಲಿದೆ. ನನಗೆ ಪರಿಷತ್ ಸದಸ್ಯ ಸ್ಥಾನಕ್ಕೆ ಅವಕಾಶ ನೀಡಿ ಎಂದು ಇಬ್ರಾಹಿಂ …
Read More »ಬೇರೆಯವರ ಕೈಯಿಂದ ಕೇಕ್ ತಿನ್ನಿಸಿದ ಪ್ರಿಯಾಂಕಾ; ಡಿಕೆಶಿ ಬಗ್ಗೆ ಬಿಜೆಪಿ ಲೇವಡಿ
ದೆಹಲಿ: ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬ. ಅವರು ದೆಹಲಿಯಲ್ಲಿದ್ದುದರಿಂದ ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲೇ ಹುಟ್ಟುಹಬ್ಬ ಆಚರಿಸಲಾಗಿದೆ. ಈ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡಾ ಹಾಜರಿದ್ದರು. ಡಿ.ಕೆ.ಶಿವಕುಮಾರ್‌ಗೆ ಕೇಕ್ ತಿನ್ನಿಸಲು ಕೇರ್ ಎತ್ತಿಕೊಂಡ ಪ್ರಿಯಾಂಕಾ ಗಾಂಧಿ, ಅದನ್ನು ಬೇರೆ ನಾಯಕರೊಬ್ಬರ ಕೈಗೆ ಕೊಟ್ಟು ಅವರಿಂದ ಡಿ.ಕೆ.ಶಿವಕುಮಾರ್‌ಗೆ ಕೇಕ್ ತಿನ್ನಿಸಿದರು. ಈ ವಿಡಿಯೋವನ್ನು ಹಂಚಿಕೊಂಡಿರುವ ರಾಜ್ಯ ಬಿಜೆಪಿ, ಡಿ.ಕೆ.ಶಿವಕುಮಾರ್ ಅವರನ್ನು ಲೇವಡಿ ಮಾಡಿದೆ. ಡಿ.ಕೆ.ಶಿವಕುಮಾರ್ ಅವರೇ, ಅವರ …
Read More »ಒಂದು ರಾಷ್ಟ್ರ-ಒಂದು ಪಡಿತರ ಚೀಟಿ’ ಯೋಜನೆ
ಪಡಿತರ ಚೀಟಿದಾರರು ತಪ್ಪದೆ ಈ ಸುದ್ದಿ ಓದಿ. ನಿಮ್ಮ ಮೊಬೈಲ್ ನಂಬರ್ ಬದಲಾಗಿದ್ದರೆ, ಅದನ್ನು ಪಡಿತರ ಚೀಟಿಯಲ್ಲಿ ತಕ್ಷಣ ನವೀಕರಿಸಿ. ಪಡಿತರ ಚೀಟಿಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಹೇಗೆ ಸುಲಭವಾಗಿ ನವೀಕರಿಸಬಹುದು. ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ತುಂಬಾ ಸುಲಭ, ಇದನ್ನು ನೀವು ಮನೆಯಲ್ಲಿಯೇ ಕುಳಿತು ಸುಲಭವಾಗಿ ಮಾಡಬಹುದು. ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ 1. ಮೊದಲನೆಯದಾಗಿ ನೀವು ಈ ವೆಬ್ ಸೈಟ್‌ಗೆ …
Read More »ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ
ಧಾರವಾಡ: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ಇಲ್ಲಿಯ ವಿದ್ಯಾಗಿರಿಯಲ್ಲಿ ಸಂಭವಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಹುಬ್ಬಳ್ಳಿ ಮೂಲದ ವಿದ್ಯಾಧರ ಸಾಕರೆ ಎಂಬುವವರ ಕುಟುಂಬ ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಕಾರ್ಯಕ್ರಮಕ್ಕೆಂದು ಬರುತ್ತಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಬೆಂಕಿ ಹತ್ತಿದೆ. ತಕ್ಷಣ ಕಾರಿನಲ್ಲಿದ್ದ ಕುಟುಂಬದ ನಾಲ್ವರು ಕಾರಿನಿಂದ ಕೆಳಗಿಳಿದಿದ್ದಾರೆ. ಕ್ಷಣಮಾತ್ರದಲ್ಲಿ ಬೆಂಕಿ ಕಾರಿಗೆಲ್ಲ ಆವರಿಸಿಕೊಂಡಿದೆ. …
Read More »ಸಂಭ್ರಮದ ಫಕೀರೇಶ್ವರ ರಥೋತ್ಸವ
ಗದಗ): ಲಕ್ಷಾಂತರ ಜನರ ಹರ್ಷೋದ್ಘಾರ, ಭಕ್ತರ ಜಯಘೋಷಗಳ ಮಧ್ಯ ನಾಡಿನ ಹಿಂದು-ಮುಸ್ಲಿಂ ಭಾವೈಕತೆಯ ಕೇಂದ್ರ ಶಿರಹಟ್ಟಿ ಆರಾಧ್ಯ ದೈವ ಫಕೀರೇಶ್ವರ ಮಹಾರಥೋತ್ಸವ ಸೋಮವಾರ ಅಪಾರ ಭಕ್ತ ಸಮೂಹದ ನಡುವೆ ಸಂಭ್ರಮ, ಸಡಗರದೊಂದಿಗೆ ನಡೆಯಿತು. `ಫಕೀರೇಶ್ವರ ಮಹರಾಜ ಕಿ ಜೈ, ಧಿನ್ ಫಕೀರೇಶ” ಎಂಬ ಜಯಘೋಷ ಮೊಳಗಿತು. ಬೆಳಗ್ಗೆ ಕರ್ತೃ ಗದ್ದುಗೆಗೆ ಕ್ಷೀರಾಭಿಷೇಕದೊಂದಿಗೆ ಜಾತ್ರಾ ಮಹೋತ್ಸವ ಆರಂಭಗೊಂಡಿತು. ಸೋಮವಾರ ಬೆಳಗ್ಗೆ ಪುರ ಪ್ರವೇಶ ಮಾಡಿದ ಫಕೀರ ಸಿದ್ದರಾಮ ಶ್ರೀಗಳು, ಶ್ರೀ ಮಠಕ್ಕೆ …
Read More »ಕರಣ್ ಜೋಹಾರ್ @50; ಅದ್ಧೂರಿ ಹುಟ್ಟುಹಬ್ಬಕ್ಕೆ ಯಶ್‌ಗೆ ಆಹ್ವಾನ
ಬಾಲಿವುಡ್‌ನ ಖ್ಯಾತ ನಿರೂಪಕ, ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಇದೇ ತಿಂಗಳು ಮೇ 25ಕ್ಕೆ ಅವರಿಗೆ 50 ವರ್ಷ. ಈ ಬಾರಿಯ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲೇ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ದಕ್ಷಿಣದ ಅನೇಕ ಸ್ಟಾರ್ ನಟರನ್ನು ಮತ್ತು ನಿರ್ದೇಶಕರನ್ನು ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ. ಕರಣ್ ಜೋಹಾರ್ ಹುಟ್ಟುಹಬ್ಬವೆಂದರೆ ಬಿಟೌನ್‌ನಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಬಹುತೇಕ ಬಾಲಿವುಡ್ ಸಿಲೆಬ್ರಿಟಿಗಳು ಅವರ …
Read More »ನನ್ನ ಗಾಡಿಗೆ ನಾನೇ ಬೆಂಕಿ ಹಚ್ಚುತ್ತೇನೆ- ಅಧಿಕಾರಿಗಳ ಎದುರೇ ಗಾಡಿಗೆ ಬೆಂಕಿ ಹಚ್ಚಿದ ವ್ಯಾಪಾರಿ
ಚಿಕ್ಕಮಗಳೂರು: ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎಂದು ನಗರಸಭೆ ಅಧಿಕಾರಿಗಳ ಎದುರು ವ್ಯಾಪಾರಿ ಗಾಡಿಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯ ಬೀದಿಯಲ್ಲಿ ಪ್ರತಿನಿತ್ಯ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಿಕೊಂಡು 200-300 ರೂ. ದುಡಿದು ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಆದರೆ ನಗರಸಭೆ ಅಧಿಕಾರಿಗಳು ರಸ್ತೆ ಬದಿ ವ್ಯಾಪಾರ ನಡೆಸಬಾರದು ಎಂದು ವ್ಯಾಪಾರಿಗಳಿಗೆ ಸೂಚಿಸಿದ್ದರು. ಈ ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿದ್ದವರಲ್ಲಿ ಬಡ ವ್ಯಾಪಾರಿಯೊಬ್ಬ ಹಣ್ಣು …
Read More »
Laxmi News 24×7