Breaking News

ರಾಜಕೀಯ

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ

ಬೆಂಗಳೂರು: ಅಸ್ತಿತ್ವ ಕಳೆದುಕೊಂಡಿರುವುದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಪರಿಶೀಲನೆಯಿಂದ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 8 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಕ್ಷಗಳ ಪಟ್ಟಿಯಿಂದ ತೆಗದು ಹಾಕಲು ಚುನಾವಣ ಆಯೋಗ ತೀರ್ಮಾನಿಸಿದೆ.   ಇಂಡಿಯನ್‌ ಓಟರ್ ವೆಲ್‌ಫೇರ್‌ ಪಾರ್ಟಿ, ಕರ್ನಾಟಕ ಕ್ರಾಂತಿ ದಳ, ನವನಿರ್ಮಾಣ ನಾಗರಿಕ ಸಮಿತಿ, ರಾಷ್ಟ್ರೀಯ ಜನಾಂದೋಲನ ಪಕ್ಷ, ಸ್ವರ್ಣ ಯುಗ ಪಾರ್ಟಿ, ಟಿಪ್ಪು ಸುಲ್ತಾನ್‌ ನ್ಯಾಷನಲ್‌ ರಿಪಬ್ಲಿಕ್‌ ಪಾರ್ಟಿ, ಯುನೈಟೆಡ್‌ ಇಂಡಿಯನ್‌ ಡೆಮಾಕ್ರಟಿಕ್‌ ಕೌನ್ಸಿಲ್‌, ಅರಸ್‌ ಸಂಯುಕ್ತ …

Read More »

ರಾಜಸ್ಥಾನ ತಂಡದ ವಿರುದ್ಧ ಕಳಪೆ ಪ್ರದರ್ಶನ: ಆರ್ಸಿಬಿಯ ಮುಹಮ್ಮದ್‌ ಸಿರಾಜ್‌ ಕುಟುಂಬಸ್ಥರಿಗೆ ಆನ್‌ಲೈನ್‌ ನಿಂದನೆ

ಬೆಂಗಳೂರು: ಎರಡನೇ ಕ್ವಾಲಿಫೈರ್‌ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ಆಘಾತ ಎದುರಾಗಿದೆ. ರಾಜಸ್ತಾನ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಗಳಾದ ಯಶಸ್ವಿ ಜೈಸ್ವಾಲ್‌ ಹಾಗೂ ಜೋಸ್‌ ಬಟ್ಲರ್‌ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ್ದಾರೆ. ಬಟ್ಲರ್ ಮತ್ತು ಜೈಸ್ವಾಲ್ ಇಬ್ಬರೂ ಚೆನ್ನಾಗಿ ಆಟವನ್ನು ಪ್ರಾರಂಭಿಸಿದ್ದು, ಇನ್ನಿಂಗ್ಸ್‌ನ ಮೊದಲ ಆರು ಓವರ್‌ಗಳಲ್ಲಿ 60 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 158 ಗುರಿಯನ್ನು ಮಾತ್ರ ಎದುರಾಳಗಳಿಗೆ ನೀಡಲು ಸಾಧ್ಯವಾದ ಆರ್‌ಸಿಬಿಗೆ ಇವರ ಆಟವು ಮಾರಕವಾಗಿ ಪರಿಣಮಿಸಿದೆ. …

Read More »

5300 ಕೋಟಿ ಒಡೆಯ ರಾಜ್ಯಸಭೆಯ ಅಭ್ಯರ್ಥಿ!

ಹೈದರಾಬಾದ್‌, ಮೇ 27: ಹೆಟೆರೊ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಂಡಿ ಪಾರ್ಥ ಸಾರಥಿ ರೆಡ್ಡಿ ಅವರು ತಮ್ಮಬಳಿ 3,900 ಕೋಟಿ ರೂಪಾಯಿ ಆಸ್ತಿ ಮತ್ತು ಕುಟುಂಬ ಆಸ್ತಿ ಸೇರಿ ಒಟ್ಟು 5300 ಕೋಟಿ ಆಸ್ತಿಯೊಂದಿಗೆ ಭಾರತದ ಶ್ರೀಮಂತ ಸಂಸತ್ತಿನ ಸದಸ್ಯರಾಗಲು ಸಿದ್ಧರಾಗಿದ್ದಾರೆ. ಅವರನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಅವರ ಅಫಿಡವಿಟ್‌ನಲ್ಲಿ, ಪಾರ್ಥ ಸಾರಧಿ ಅವರು ಚರ ಆಸ್ತಿಯ ಭಾಗವಾಗಿ 3.3 ಲಕ್ಷ …

Read More »

ಆಡಿದ್ದು ಸಾಕು, ಮೊದಲು ಸ್ಟೇಡಿಯಂನಿಂದ ಆಚೆ ನಡೆಯಪ್ಪ: ಆರ್‌ಸಿಬಿ ಸ್ಟಾರ್ ಪ್ಲೇಯರ್ ವಿರುದ್ಧ ಫ್ಯಾನ್ಸ್ ಕಿಡಿ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪಯಣವನ್ನು ಮುಗಿಸಿದ್ದು, ಟೂರ್ನಿಯಿಂದ ಹೊರಬಿದ್ದಿದೆ.   ಹೌದು, ಇಂದು ( ಮೇ 27 ) ಅಹಮದಾಬಾದಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪ್ರತಿಷ್ಟಿತ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 7 ವಿಕೆಟ್‍ಗಳ ಭರ್ಜರಿ ಜಯವನ್ನು …

Read More »

ರಾಜ್ಯದಲ್ಲಿ ೬೫ ಸಾವಿರ ಕೋಟಿ ಬಂಡವಾಳ ಹೂಡಲು ಹಲವು ಕಂಪನಿಗಳು ತೋರಿವೆ ಬದ್ಧತೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬಂದಿವೆ. ಅಂದಾಜು ೬೫ ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಕಂಪನಿಗಳು ಬದ್ಧತೆ ತೋರಿವೆ. ಇದು ಕೈಗಾರಿಕೆ ಸ್ಥಾಪನೆಗೆ ರಾಜ್ಯ ನೀಡುತ್ತಿರುವ ಪ್ರೋತ್ಸಾಹ ಹಾಗೂ ನೀತಿ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಪೂರಕ ಪರಿಸರ, ನೀತಿ ನಿಯಮಗಳು, ತಂತ್ರಜ್ಞಾನ ಆಧಾರ, ಕೌಶಲ್ಯಯುತ ಮಾನವಸಂಪನ್ಮೂಲ, ಆರ್ ಎಂಡ್ ಡಿ ಕೇಂದ್ರಗಳು, ಉದ್ದಿಮೆಗಳಿಗೆ ನೀಡಲಾಗುವ …

Read More »

ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ BMW ಕಾರು ಪತ್ತೆ! ರಾತ್ರಿ ನಾನೇ ನೀರಲ್ಲಿ ಮುಳುಗಿಸಿದೆ ಎಂದ ಮಾಲೀಕ. ಏಕೆ ಗೊತ್ತಾ?

ಶ್ರೀರಂಗಪಟ್ಟಣ: ಇಲ್ಲೊಬ್ಬ ಭೂಪ ತನ್ನ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ್ದು, ಹರಸಾಹಸಪಟ್ಟು ಪೊಲೀಸರು ಆ ಕಾರನ್ನು ಹೊರ ತೆಗೆದ ಘಟನೆ ಗಂಜಾಂನ ನಿಮಿಷಾಂಬ-ಕರಿಘಟ್ಟ ಸೇತುವೆ ಬಳಿ ಸಂಭವಿಸಿದೆ. ಕಾರಿನ ಮಾಲೀಕ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ ನಿವಾಸಿ ರೂಪೇಶ್. ​ಬುಧವಾರ ರಾತ್ರಿ ಕಾರು ಚಲಾಯಿಸಿಕೊಂಡು ಬಂದ ರೂಪೇಶ್​, ಗಂಜಾಂನ ನಿಮಿಷಾಂಬ-ಕರಿಘಟ್ಟ ಸೇತುವೆ ಕೆಳಭಾಗದ ಕಾವೇರಿ ನದಿಯ ನೀರಲ್ಲಿ ಮುಳುಗಿಸಿದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಗುರುವಾರ ಬೆಳಗ್ಗೆ …

Read More »

ಉಕ್ರೇನ್-ರಷ್ಯಾ ಯದ್ಧದಿಂದ ಹತ್ತಾರು ಸಮಸ್ಯೆಗಳು ಹೆಚ್ಚಾಗಿವೆ.

ಬೆಂಗಳೂರು: ಸ್ವಿಟ್ಜರ್​ಲೆಂಡ್​ನ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ (Davos Summit 2022) ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸಭೆಯ ವಿವರಗಳನ್ನು ನಗರದಲ್ಲಿ ನೀಡಿದರು. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ದೇವೇಗೌಡ, ಎಸ್.ಎಂ.ಕೃಷ್ಣ ಮತ್ತು ಯಡಿಯೂರಪ್ಪ ಸಹ ದಾವೋಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ದೇಶಗಳ ಉದ್ಯೋಗಪತಿಗಳು ಒಂದೆಡೆ ಸೇರುವ ಶೃಂಗಸಭೆಗೆ ಈ ಬಾರಿ ಕೊವೊಡ್ ಹಿನ್ನೆಲೆಯಲ್ಲಿ ಸಾಕಷ್ಟು ಮಹತ್ವವಿತ್ತು ಎಂದು ಹೇಳಿದರು. ಕೊವಿಡ್​ನಿಂದಾಗಿ ಜಾಗತಿಕ ಆರ್ಥಿಕತೆಯು ಹಿಂಜರಿಕೆಯ …

Read More »

ಕನ್ನಡದ ನಟಿಯೊಬ್ಬಳು ಮಂಚಕ್ಕೆ ಕರೆದಿರೋ ಆರೋಪಕ್ಕೆ ನಟ ಶಿವರಾಜ್​ಕುಮಾರ್​ ಪ್ರತಿಕ್ರಿಯೆ ಹೀಗಿದೆ.

ಶಿರಸಿ (ಉತ್ತರ ಕನ್ನಡ): ಕನ್ನಡದ ಖ್ಯಾತ ನಟಿಯೊಬ್ಬಳು ನನಗೆ ಮಂಚಕ್ಕೆ ಕರೆದಿದ್ಲು. ಅವಕಾಶಕ್ಕಾಗಿ ಮಂಚ ಏರೋದು ಕನ್ನಡದಲ್ಲಿ ಕಾಮನ್. ನಾನು ಕನ್ನಡದ ಸಹವಾಸ ಬೇಡ ಅಂತ ಓಡಿ ಬಂದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು ತೆಲುಗು ನಿರ್ದೇಶಕ ಗೀತಕೃಷ್ಣ.   ಇದು ಭಾರಿ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಯೂಟರ್ನ್​ ಹೊಡೆದಿದ್ದ ಅವರು, ನಾನು ಕನ್ನಡಿಗರ ಬಗ್ಗೆ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿಲ್ಲ. ನಾನು ಒಬ್ಬ ನಿರ್ಮಾಪಕ ಕಮ್ ನಿರ್ದೇಶಕನಾಗಿದ್ದೇನೆ. ನನಗೆ …

Read More »

ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ

ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ ಬೆಳಗಾವಿ: ಗಡಿಭಾಗ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ತೋರಿದೆ. ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿ ಕುಣಿದ ಕಾರಣಕ್ಕೆ ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.   ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ವರನ ತಮ್ಮ …

Read More »

ಮೊಬೈಲ್​ ಕಳೆದು ಹೋದರೆ, ಕಳ್ಳತನವಾದ್ರೆ ಚಿಂತೆ ಬೇಡ.. ಈ ‘APP’​ ಹುಡುಕಿಕೊಡಲಿದೆ

ವಾರಾಣಸಿ(ಉತ್ತರ ಪ್ರದೇಶ): ಮೊಬೈಲ್​ ಕಳೆದು ಹೋದರೆ ಅಥವಾ ಕಳ್ಳತನವಾದರೆ ಸಿಮ್​ ಬ್ಲಾಕ್​ ಮಾಡಿಸಿ, ಸುಮ್ಮನಾಗಿ ಬಿಡುತ್ತೇವೆ. ಆದರೆ, ವಾರಣಾಸಿಯ ಇಬ್ಬರು ಯುವಕರು ಕಂಡು ಹಿಡಿದಿರುವ ಆಯಪ್​ನಿಂದ ನಾವು ಕಳೆದುಕೊಂಡಿರುವ ಫೋನ್ ವಾಪಸ್​ ಪಡೆದುಕೊಳ್ಳಬಹುದಾಗಿದೆ. ಅದಕ್ಕೋಸ್ಕರ ಕಳೆದ ಒಂದು ವರ್ಷದಿಂದ ಅವರು ಶ್ರಮಪಟ್ಟಿದ್ದಾರೆ. ಮೊಬೈಲ್​ ಕಳೆದು ಹೋದ್ರೆ, ಕಳ್ಳತನವಾದ್ರೆ ಚಿಂತೆ ಬೇಡ… ಈ ‘APP’​ ಹುಡುಕಿಕೊಡಲಿದೆ ನಿಮ್ಮ ಫೋನ್​​!ಕಾಶಿಯ ಇಬ್ಬರು ಇಂಜಿನಿಯರಿಂಗ್​​ ವಿದ್ಯಾರ್ಥಿಗಳು ಕಳೆದ ಹೋದ ಮೊಬೈಲ್ ಫೋನ್ ಪತ್ತೆ ಹಚ್ಚುವ ಆಯಪ್ …

Read More »