Breaking News

ರಾಜಕೀಯ

ಪಿಯುಸಿ ಪಠ್ಯ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಸಮಿತಿ ನೇಮಿಸಿದ ರಾಜ್ಯ ಸರ್ಕಾರ!

ಬೆಂಗಳೂರು : ದ್ವಿತೀಯ ಪಿಯುಸಿ ಪಠ್ಯ ಪರಿಷ್ಕರಣೆ ರೋಹಿತ್ ಚಕ್ರತೀರ್ಥ ಸಮಿತಿ ಮುಂದುವರಿಕೆಯಾಗಲಿದ್ದು, ರೋಹಿತ್ ಚಕ್ರತಿರ್ಥರನ್ನು ಪಿಯು ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ನೇಮಕ ಮಾಡಿದೆ.   ದ್ವಿತೀಯ ಪಿಯುಸಿ ಅಧ್ಯಾಯ 4.2 ಹೊಸ ಧರ್ಮಗಳ ಉದಯ ಪಠ್ಯಭಾಗ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಪಠ್ಯದಲ್ಲಿ ನಿರ್ದಿಷ್ಟ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. …

Read More »

ಗೋಕರ್ಣದಲ್ಲಿ ವೇಶ್ಯಾವಾಟಿಕೆ ದಂಧೆ: ನಾಲ್ವರು ಯುವತಿಯರ ರಕ್ಷಣೆ, ಓರ್ವನ ಬಂಧನ

ಕಾರವಾರ(ಉತ್ತರಕನ್ನಡ): ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದ ಫಾರ್ಮ್ ಹೌಸ್ ಮೇಲೆ ದಾಳಿ‌ ನಡೆಸಿದ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.   ಖಾಸಗಿ ಫಾರ್ಮ್ ಹೌಸ್​​ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಮುಂಬೈ, ಕೋಲ್ಕತ್ತಾ ಹಾಗೂ ಬಳ್ಳಾರಿ ಮೂಲದ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಮುರುಡೇಶ್ವರದ ತಿಮ್ಮಪ್ಪ ನಾಯ್ಕ ಎಂಬುವರನ್ನು ಬಂಧಿಸಿದ್ದಾರೆ. ಪ್ರವಾಸಿ ಮಂದಿರದ ಪಕ್ಕದಲ್ಲೇ ಇರುವ ಫಾರ್ಮ್ …

Read More »

ರೋಹಿತ್ ಚಕ್ರತೀರ್ಥ ಪಠ್ಯಪರಿಷ್ಕರಣಾ ಸಮಿತಿ ಬಸವಣ್ಣವರ ಪಠ್ಯ ವಿವಾದದ ಬೆನ್ನಲ್ಲೇ ಇದೀಗ ಅಂಬೇಡ್ಕರ್ ಪಠ್ಯದಲ್ಲೂ ವಿವಾದ

ಬೆಂಗಳೂರು : ರೋಹಿತ್ ಚಕ್ರತೀರ್ಥ ಪಠ್ಯಪರಿಷ್ಕರಣಾ ಸಮಿತಿ ಬಸವಣ್ಣವರ ಪಠ್ಯ ವಿವಾದದ ಬೆನ್ನಲ್ಲೇ ಇದೀಗ ಅಂಬೇಡ್ಕರ್ ಪಠ್ಯದಲ್ಲೂ ವಿವಾದ ಮಾಡಿಕೊಂಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ರೋಹಿತ್ ಚಕ್ರತೀರ್ಥ ಸಮಿತಿಯು ಬಸವಣ್ಣನವರ ಪಠ್ಯದ ವಿವಾದದ ಬೆನ್ನಲ್ಲೇ ಇದೀಗ ಅಂಬೇಡ್ಕರ್ ಕುರಿತ ಪಠ್ಯದಲ್ಲೂ ವಿವಾದ ಮಾಡಿಕೊಂಡಿದ್ದು, ಸಂವಿಧಾನದ ಕುರಿತ ಪಾಠದಲ್ಲಿ ಡಾ.ಬಿ.ಅಂಬೇಡ್ಕರ್ ಅವರಿಗೆ ಇರುವ ಸಂವಿಧಾನ ಶಿಲ್ಪಿ ಬಿರುದನ್ನು ಕೈಬಿಟ್ಟಿದೆ.     ರೋಹಿತ್ ಚಕ್ರತೀರ್ಥ ಸಮಿತಿಯ ನೇತೃತ್ವದಲ್ಲಿ ನಡೆದ ಪಠ್ಯ ಪರಿಷ್ಕರಣೆಯಲ್ಲಿ …

Read More »

ಪ್ರತಿ ದಿನವೂ ಎಣ್ಣೆ ಬೇಕು ಅಣ್ಣ.. ಮದ್ಯ ಇಲ್ಲದೇ ಆಹಾರ ತಿನ್ನಲ್ಲವಂತೆ ಈ ಹುಂಜ!

ಭಂಡಾರ(ಮಹಾರಾಷ್ಟ್ರ): ಮದ್ಯಪಾನ ಮಾಡಿದ ಬಳಿಕವೇ ಊಟ ಮಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣವಿದೆ. ಮಹಾರಾಷ್ಟ್ರದ ಭಂಡಾರದಲ್ಲಿರುವ ಹುಂಜವೊಂದು ಬೆಳಗಾಗುತ್ತಿದ್ದಂತೆ ಮದ್ಯ ಸೇವನೆ ನಂತರವೇ ಕಾಳು ತಿನ್ನಲು ಶುರು ಮಾಡುತ್ತೆ. ಮದ್ಯ ನೀಡದಿದ್ದರೆ ಹಠ ಹಿಡಿದು ಆಹಾರ, ನೀರು ಕೂಡ ಮುಟ್ಟಲ್ವಂತೆ. ಇದು ನಂಬಲು ತುಸು ಕಷ್ಟವಾದರೂ ಸತ್ಯ ಸಂಗತಿ ಅಂತಿದ್ದಾರೆ ಹುಂಜದ ಮಾಲೀಕರು. ಪ್ರತಿ ದಿನವೂ ಎಣ್ಣೆ ಬೇಕು ಅಣ್ಣ.. ಮದ್ಯ ಇಲ್ಲದೇ ಆಹಾರ …

Read More »

ಈ ಬಾರಿ 2023ಕ್ಕೆ ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬರೋದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ;H.D.K.

ಈ ಬಾರಿ 2023ಕ್ಕೆ ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬರೋದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಿಮ್ಮ ವಿರುದ್ಧ ವಯಕ್ತಿಕ ಷಡ್ಯಂತ್ರ ನಡೆಯುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಈ ಬಾರಿ ಯಾವುದೇ ರೀತಿಯ ವಯಕ್ತಿಕ ಸೇಡಿನ ರಾಜಕಾರಣ ನಡೆಯೋದಿಲ್ಲ. ಈ ಬಾರಿ 2023ಕ್ಕೆ ಜನತಾ ಸರ್ಕಾರ ಬರೋದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು …

Read More »

ರಾಜ್ಯ ಸಭೆ ಚುನಾವಣೆ : ಸೋನಿಯಾಗಾಂಧಿಯವರಿಗೆ ಮಾತನಾಡಿದ್ದಾರೆಂಬ ವದಂತಿ ಶುದ್ದ ಸುಳ್ಳು :H.D.K.

ರಾಜ್ಯ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರು, ಸೋನಿಯಾಗಾಂಧಿಯವರಿಗೆ ಮಾತನಾಡಿದ್ದಾರೆಂಬ ವದಂತಿ ಶುದ್ದ ಸುಳ್ಳು, ನಾನು ಯಾವ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಗುನ್ನಾ, ತಳಮಳ ಎಂಬ ಚರ್ಚೆಗಳು ಆಗತ್ತಾ ಇವೆ. ಆದರೆ ಯಾವುದೇ ರೀತಿಯ ತಳಮಳ, ನಡುಕ ಪಕ್ಷಕ್ಕೆ ಆಗಿಲ್ಲ. ಅದಕ್ಕಾಗಿಯೇ ನಾನು ರಾಜ್ಯಸಭಾ …

Read More »

ರಾಜ್ಯಸಭೆ ಚುನಾವಣೆ: ಪಕ್ಷೇತರ ಶಾಸಕರಿಗೆ ಭಾರೀ ಡಿಮ್ಯಾಂಡ್..!

ಬೆಂಗಳೂರು,ಜೂ.4- ರಾಜ್ಯಸಭೆ ಚುನಾವಣೆಯಲ್ಲಿ ಒಂದೊಂದು ಮತವು ಮೂರು ರಾಜಕೀಯ ಪಕ್ಷಗಳಿಗೆ ನಿರ್ಣಾಯಕವಾಗಿರುವುದರಿಂದ ಮೂವರು ಪಕ್ಷೇತರ ಶಾಸಕರಿಗೆ ಭಾರೀ ಡಿಮ್ಯಾಂಡ್ ಬಂದಿದೆ. ವಿಧಾನಸಭೆಯ ಒಟ್ಟು 224 ಸದಸ್ಯರಲ್ಲಿ ಮೂವರು ಪಕ್ಷೇತರ ಶಾಸಕರಿದ್ದಾರೆ. ಎಚ್.ನಾಗೇಶ್(ಮುಳಬಾಗಿಲು), ಶರತ್ ಬಚ್ಚೇಗೌಡ(ಹೊಸಕೋಟೆ) ಹಾಗೂ ಎನ್.ಮಹೇಶ್(ಕೊಳ್ಳೆಗಾಲ) ಅವರಿಗೆ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಗಾಳ ಬೀಸಿದ್ದಾರೆ. ಈಗಾಗಲೇ ಎನ್.ಮಹೇಶ್ ಅವರು ಬಿಜೆಪಿ ಜೊತೆ ಗುರುತಿಸಿಕೊಂಡು 2023ರ ವಿಧಾನಸಭೆ ಚುನಾವಣೆಯಲ್ಲಿ ಕೊಳ್ಳೆಗಾಲದಿಂದ …

Read More »

ಪಠ್ಯ ಪುಸ್ತಕ ಸಮಿತಿ ವಿಸರ್ಜನೆ ಆಗಿದೆ ಆದರೆ ರದ್ದು ಮಾಡಿಲ್ಲ:ಬೊಮ್ಮಾಯಿ

ಚಿತ್ರದುರ್ಗ, ಜೂ.4: ಪಠ್ಯ ಪುಸ್ತಕ ಸಮಿತಿ ವಿಸರ್ಜನೆ ಆಗಿದೆ ಆದರೆ ರದ್ದು ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ದೇವರ ಕೊಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಹೊಸ ಸಮಿತಿ ರಚನೆಯ ಅವಶ್ಯಕತೆ ಇಲ್ಲ. ನಮ್ಮದು ಬಸವ ಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ ಎಂದು ತಿಳಿಸಿದರು. ಇನ್ನು ಬಸವಣ್ಣನವರು ರಚಿಸಿದ ಹಲವಾರು ಅತ್ಯುತ್ತಮ ವಚನಗಳಿವೆ. ಬಸವಣ್ಣನವರ ಪಠ್ಯದಲ್ಲಿ …

Read More »

ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಆರಂಭಿಸುತ್ತೇವೆ; ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದಾದ್ಯಂತ ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಾಗಿ ಶುಕ್ರವಾರ ಹೇಳಿದ್ದಾರೆ. ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಆರ್‌ ಎಸ್.ಎಸ್‌ ನವರು ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್‌ ಹಾಕುತ್ತಿದ್ದಾರೆ. ನಮ್ಮವರು ಪ್ರತಿಭಟನೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಒಂದೇ ಒಂದು ಚಡ್ಡಿ ಸುಟ್ಟು ಹಾಕಿದ್ದಾರೆ. ಅದು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ದೊಡ್ಡ ಅಪರಾಧವಾಗಿ ಕಂಡಿದೆ ಎಂದು ಹೇಳಿದ್ದಾರೆ. …

Read More »

ಪಿಎಸ್‍ಐ ನೇಮಕಾತಿ ಅಕ್ರಮ- ಮತ್ತೋರ್ವನ ಬಂಧನ, ಬಂಧಿತ ಆರೋಪಿಗಳ ಸಂಖ್ಯೆ 39ಕ್ಕೆ ಏರಿಕೆ

ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧನ ಮಾಡಿದ್ದಾರೆ. ಜಿಲ್ಲೆಯ ಜೇವರ್ಗಿ ತಾಲೂಕಿನ ವಸಂತರಾಯ್ ನರಿಬೋಳ ಬಂಧನವಾದ ಇನ್ನೋರ್ವ ಆರೋಪಿಯಾಗಿದ್ದು, ಇಲ್ಲಿಯವರೆಗೆ ಅಕ್ರಮದಲ್ಲಿ ಭಾಗಿಯಾಗಿ ಬಂಧನವಾದ ಆರೋಪಿಗಳ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ವಸಂತರಾಯ್, ಅಭ್ಯರ್ಥಿ ಎನ್.ವಿ.ಸುನೀಲ್ ಕುಮಾರ್ ತಂದೆಯಾಗಿದ್ದು, ಸುನೀಲ್ ನನ್ನ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಕ್ಕೆ ಆರ್.ಡಿ.ಪಾಟೀಲ್ ಮೊರೆ ಹೋಗಿದ್ದರು. ಇತ್ತೀಚೆಗಷ್ಟೇ ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಅಭ್ಯರ್ಥಿಯಾಗಿದ್ದ ಶಾಂತಿಬಾಯಿ ಹಾಗೂ …

Read More »