ಬೆಂಗಳೂರು : ಅಗ್ನಿಪಥ್ ಯೋಜನೆ ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಿ …
Read More »ಕೌಜಲಗಿಯಲ್ಲಿಂದು ಜರುಗಿದ ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ*
ಗೋಕಾಕ್- 2019ಮತ್ತು 2021ನೇ ಸಾಲಿನ ನೆರೆ ಸಂತ್ರಸ್ತರ ಕೆಲವು ಮನೆಗಳು ಬ್ಲಾಕ್ ಆಗುತ್ತಿದ್ದು, ಅಂತಹ ಮನೆಗಳ ಬ್ಲಾಕ್ ತೆರವುಗೊಳಿಸಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ಸಂಜೆ ತಾಲೂಕಿನ ಕೌಜಲಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ್ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಅಹವಾಲುಗಳಿಗೆ ಸ್ಪಂದಿಸಿ …
Read More »ಇದೇ ಜೂನ್ 30 ರಂದು ನಿವೃತ್ತಿಯಾಗಬೇಕಿದ್ದ ಲೋಕೋಪಯೋಗಿ ಅಧೀಕ್ಷಕರ ಮನೆ ಹಾಗೂ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ
ಇದೇ ಜೂನ್ 30 ರಂದು ನಿವೃತ್ತಿಯಾಗಬೇಕಿದ್ದ ಲೋಕೋಪಯೋಗಿ ಅಧೀಕ್ಷಕರ ಮನೆ ಹಾಗೂ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಘಟನೆ ಬೆಳಗಾವಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ನಡೆದಿದೆ. ಇಂದು ಬೆಳ್ಳಂಬೆಳಿಗ್ಗೆ ಬೆಳಗಾವಿಯ ಲೋಕೋಪಯೋಗಿ ಅಧೀಕ್ಷಕರಾದ ಬಿ.ವೈ ಪವಾರ್ ರವರ ಮನೆ ಹಾಗೂ ಕಚೇರಿಯ ಮೇಲೆ ಎಸಿಬಿ ಅಧಿಕಾರಿಳು ದಾಳಿ ನಡೆಸಿದ್ದಾರೆ. ಬೆಳ್ಳಂ ಬೆಳಿಗ್ಗೆ 25ಕ್ಕೂ ಹೆಚ್ಚು ಸಿಬ್ಬಂದಿಯುಳ್ಳ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ವೃತ್ತಿ ಅಂಚಿನಲ್ಲಿದ್ದ ಹಿರಿಯ ಅಧಿಕಾರಿ …
Read More »ಬೆಳಗಾವಿ ವಕೀಲರ ಹೋರಾಟಕ್ಕೆ ಮಣಿದ ಸರ್ಕಾರ: ರಾಜ್ಯ ಗ್ರಾಹಕರ ಆಯೋಗ ಪೀಠ ಸ್ಥಾಪನೆಗೆ ಆದೇಶ
ಕರ್ನಾಟಕ ರಾಜ್ಯ ಗ್ರಾಹಕರ ಆಯೋಗದ ಪೀಠವನ್ನು ಬೆಳಗಾವಿಯಲ್ಲಿ ಶೀಘ್ರವೇ ಪ್ರಾರಂಭಿಸುವಂತೆ ಆಗ್ರಹಿಸಿ ಬೆಳಗಾವಿಯ ನ್ಯಾಯವಾದಿಗಳು ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ಬೆಳಗಾವಿಯಲ್ಲಿ ಪೀಠ ಆರಂಭಿಸಲು ಆದೇಶ ಹೊರಡಿಸಿದೆ. ಹೌದು ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಆಯೋಗದ ಪೀಠವನ್ನು ಆರಂಭಿಸುವಂತೆ ಆಗ್ರಹಿಸಿ ಬೆಳಗಾವಿಯ ನ್ಯಾಯವಾದಿಗಳು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ವಾಪಸ್ಸು ಪಡೆಯೋದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ …
Read More »ದಂತ ವೈದ್ಯರ ಎಡವಟ್ಟು – ಚಿಕಿತ್ಸೆ ಪಡೆದ ನಟಿಯ ಮುಖ ಸಂಪೂರ್ಣ ಚೇಂಚ್
ಬೆಂಗಳೂರು: ಜೆಪಿ ನಗರದ ಡೆಂಟಲ್ ಆಸ್ಪತ್ರೆಯೊಂದರಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ತೆಗೆದುಕೊಂಡ ನಟಿಯ ಮುಖ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಂಪೂರ್ಣ ಚೇಂಚ್ ಆಗಿರುವ ಘಟನೆ ಬೆಳಗಿಗೆ ಬಂದಿದೆ. ಹಲ್ಲು ನೋವಿನಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಜೆಪಿ ನಗರದ ಡೆಂಟಲ್ ಆಸ್ಪತ್ರೆಯೊಂದರಲ್ಲಿ ಕಳೆದ 28 ದಿನಗಳ ಹಿಂದೆ ಚಿಕಿತ್ಸೆ ತೆಗೆದುಕೊಂಡಿದ್ದರು. ಆ ಬಳಿಕ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಟಿಯ ಮುಖ ಸಂಪೂರ್ಣ ಊದಿಕೊಂಡು ರೂಪವೇ ಬದಲಾಗಿದೆ. ಇದೀಗ ಕಳೆದ ಇಪ್ಪತ್ತು ದಿನದಿಂದ ಮನೆಯಿಂದ …
Read More »ಎಸಿಬಿ ದಾಳಿ: ಉಡುಪಿಯ ಸಣ್ಣ ನೀರಾವರಿ ಅಧಿಕಾರಿ ಹರೀಶ್ ಮನೆಯಲ್ಲಿ ಚಿನ್ನದ ಖಜಾನೆ
ಉಡುಪಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಇಲಾಖೆಯ ಸಹಾಯಕ ಅಭಿಯಂತರ ಹರೀಶ್ ಅವರ ಕೊರಂಗ್ರಪಾಡಿಯ ಬೈಲೂರು ನಿವಾಸಕ್ಕೆ ಶುಕ್ರವಾರ ಮುಂಜಾನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. 1.5 ಕೆಜಿ ಚಿನ್ನ, ಮುಕ್ಕಾಲು ಕೆಜಿ ಬೆಳ್ಳಿ, ಇನ್ನೋವಾ ಕಾರು, ಮಾರುತಿ ಆಲ್ಟೋ 800, 2 ದ್ವಿಚಕ್ರವಾಹನಗಳು ಪತ್ತೆಯಾಗಿವೆ. 4.30 ಲ.ರೂ.ನಗದು ಹಾಗೂ ಅಪಾರ ಪ್ರಮಾಣದ ದಾಖಲೆ ಪತ್ರಗಳು ಮನೆಯಲ್ಲಿ ದೊರೆತಿವೆ. ಇವಿಷ್ಟೇ ಅಲ್ಲದೆ …
Read More »ಸೋನಿಯಾ-ರಾಹುಲ್‌ಗೆ ಸಮನ್ಸ್; ಬೆಳಗಾವಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಯಾದ ಇಡಿಯನ್ನು ದುರ್ಬಳಕೆ ಮಾಡಿಕೊಂಡು ಕೃತಕವಾಗಿ ಸೃಷ್ಟಿಸಿದ ಕೇಸ್ ನಲ್ಲಿ ತನಿಖೆ ಕೈಗೆತ್ತಿಕೊಂಡು ಕಾಂಗ್ರೆಸ್ ಪಕ್ಷದ ಗೌರವಾನ್ವಿತ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಭೂತಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿ ವಿನಾಕಾರಣ ಕಿರುಕುಳ ನೀಡುತ್ತಿರುವ ಕ್ರಮ ಸರಿಯಲ್ಲ ಎಂದು ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಗ್ರಾಮೀಣ ಹಾಗೂ ಬೆಳಗಾವಿ ನಗರ …
Read More »ಶಾಮನೂರು ಮೊಮ್ಮಗಳ ವರಿಸಿದ ಸಿಎಂ ಬೊಮ್ಮಾಯಿ ಆಪ್ತನ ಪುತ್ರ
ಶಾಮನೂರು ಶಿವಶಂಕರಪ್ಪನವರ ಮೊಮ್ಮಗಳಾದ ಅಕ್ಷತ ಹಾಗು ಸಿಎಂ ಬಸವರಾಜ ಬೊಮ್ಮಾಯಿಯರ ಆಪ್ತನ ಮಗನಾದ ಅಭಿಷೇಕ್ ಪಾಟೀಲ್ ಕಲ್ಯಾಣ ಅದ್ಧೂರಿಯಾಗಿ ಜರುಗಿತು. ದಾವಣಗೆರೆಯ ಬಾಪೂಜಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂ ಬೊಮ್ಮಾಯಿ ಬೆಳಿಗ್ಗೆಯೇ ಆಗಮಿಸಿದ್ದರು.
Read More »ಪೋಲೀಸ್ ಅಧಿಕಾರಿ ಉದಯ ರವಿ ಮನೆಗಳ ಮೇಲೆ ಎಸಿಬಿ ದಾಳಿ
ಗಂಗಾವತಿ : ಗಂಗಾವತಿ ಗ್ರಾಮೀಣ ವೃತ್ತದ ಪೊಲೀಸ್ ಅಧಿಕಾರಿಯಾಗಿದ್ದ ಪ್ರಸ್ತುತ ಪೊಲೀಸ್ ಗುಪ್ತಚರ ಇಲಾಖೆ ಅಧಿಕಾರಿ ಉದಯರವಿ ಅವರ ಗಂಗಾವತಿ ಮನೆ ಸೇರಿದಂತೆ ವಿವಿಧೆಡೆ ಇರುವ 4 ಮನೆಗಳ ಮೇಲೆ ಎಸಿಬಿ ಡಿವೈಎಸ್ಪಿ ಶಿವಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಆಂಜನೇಯ ನೇತೃತ್ವದ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ . ಉದಯರವಿ ಅವರು ಗಂಗಾವತಿ ನಗರ ಠಾಣೆ ಗ್ರಾಮೀಣ ಠಾಣೆಗಳಲ್ಲಿ ಪಿ ಐ ಆಗಿ ಕಾರ್ಯ ನಿರ್ವಹಿಸಿದ್ದರು.ಇತ್ತೀಚೆಗಷ್ಟೇ ಬೆಂಗಳೂರಿಗೆ …
Read More »ಪಂಚಾಯತ್‌ಗಳಲ್ಲಿ ಪತ್ನಿ ಬದಲು ಪತಿ ಅಧಿಕಾರಕ್ಕೆ ಬ್ರೇಕ್ !
ಬೆಂಗಳೂರು: ಗ್ರಾಮ ಪಂಚಾಯತ್‌ಗೆ ಚುನಾಯಿತರಾಗಿರುವ ಮಹಿಳೆಯು ತನ್ನ ಅಧಿಕಾರದಲ್ಲಿ ಗಂಡ ಅಥವಾ ಮನೆಯ ಬೇರೆ ಯಾರಾದರೂ ಹಸ್ತಕ್ಷೇಪ ನಡೆಸಲು ಅವಕಾಶ ನೀಡಿದರೆ ಆಕೆಯ ಸದಸ್ಯತ್ವವೇ ರದ್ದಾಗಲಿದೆ. ಇಂಥದ್ದೊಂದು ಕಟ್ಟುನಿಟ್ಟಿನ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ. ಸಿಎಂಗೆ ಮನವಿ : ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಸದಸ್ಯರುಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ, ಬಧಿಸಿದಂತೆ, ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಸದಸ್ಯರುಗಳ ಪರವಾಗಿ ಮಹಿಳಾ ಸದಸ್ಯರ ಪತಿ ಮತ್ತು ಮತ್ತು ಕುಟುಂಬದವರು ಪಂಚಾಯತಿಗಳ ಕಾರ್ಯಕಲಾಪಗಳಲ್ಲಿ …
Read More »
Laxmi News 24×7