Breaking News

ರಾಜಕೀಯ

ಪುನೀತ್‌ ರಾಜ್‌ ಕುಮಾರ್ ನೆನಪಿಗಾಗಿ ಆಂಬುಲೆನ್ಸ್ ದೇಣಿಗೆ ನೀಡಿದ ನಟ ಪ್ರಕಾಶ್‌ ರಾಜ್

ಮೈಸೂರು, ಆಗಸ್ಟ್‌ 6: ದಿವಂಗತ ನಟ ಪುನೀತ್‌ ರಾಜ್‌ ಕುಮಾರ್ ನೆನಪಿಗಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ‘ಅಪ್ಪು ಎಕ್ಸ್‌ಪ್ರೆಸ್’ ಆಂಬುಲೆನ್ಸ್ ಅನ್ನು ಮಿಷನ್‌ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ಪುನೀತ್ ರಾಜ್ ಕುಮಾರ್ ಕನ್ನಡ ನಾಡಿನ ಕಣ್ಮಣಿ. ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವದಾದ್ಯಂತ ತನ್ನ ಸಜ್ಜನಿಕೆ, ಸಮಾಜಸೇವೆ, ಒಳ್ಳೆಯತನ ಮತ್ತು ಅಭಿನಯದಿಂದ ಹೆಸರು ಮಾಡಿದ್ದಾರೆ. ಎಲ್ಲರ ಮನದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ. ಕರ್ನಾಟಕದಾದ್ಯಂತ …

Read More »

ಹೇಗಾದ್ರೂ ಮಾಡಿ ಜೈಲಿನಿಂದ ನನ್ನ ಹೊರಗಡೆ ಕರೆತನ್ನಿ ಅಮೃತ್ ಪೌಲ್ ರಂಪಾಟ

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪೌಲ್ ಖಿನ್ನತೆಗೆ ಒಳಗಾಗಿ ಜೈಲಿನಲ್ಲಿ ರಂಪಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ಪೌಲ್ ಅವರು ನಾನು ಹಿರಿಯ ಅಧಿಕಾರಗಳನ್ನು ನಂಬಿ ಮೋಸ ಹೋದೆ ಶಾಂತಕುಮಾರ್ ನಂಬಿ ನನ್ನ ಲೈಫ್ ಹಾಳಾಯ್ತು. ಹೇಗಾದ್ರೂ ಮಾಡಿ ಜೈಲಿನಿಂದ ನನ್ನ ಹೊರಗಡೆ ಕರೆತನ್ನಿ ಎಂದು ಕುಟುಂಬಸ್ಥರ ಬಳಿ ಗೋಗರೆಯುತ್ತಿದ್ದಾರೆ. ಇನ್ನೂ ಅಮೃತ್ ಪೌಲ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತ್ಯೇಕ …

Read More »

ಬಿಜೆಪಿ ಕಾರ್ಯಕರ್ತರ ದೊಣ್ಣೆಯಿಂದ ಥಳಿಸಿದ ಟಿಎಂಸಿ ಶಾಸಕ:

ಚಿನ್ಸುರಾ(ಪಶ್ಚಿಮಬಂಗಾಳ): ಮೆರವಣಿಗೆಯಲ್ಲಿ ಕೂಗಿದ ಘೋಷಣೆಗಳಿಂದ ಕ್ರೋಧಗೊಂಡ ಟಿಎಂಸಿ ಶಾಸಕ ಮತ್ತು ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರು ಬಿಜೆಪಿ ಬಾವುಟ ಅಳವಡಿಸಿದ್ದ ಕೋಲಿನಿಂದಲೇ ಅವರನ್ನು ಥಳಿಸಿದ್ದಾರೆ. ತೃಣಮೂಲ ಕಾಂಗ್ರೆಸ್​ ಶಾಸಕ ಅಸಿತ್ ಮಜುಂದಾರ್ ಹಲ್ಲೆ ನಡೆಸಿದ್ದಲ್ಲದೇ, ಹಲ್ಲೆ ಪ್ರೇರೇಪಣೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಆಗಿದ್ದೇನು?: ಬಿಜೆಪಿ ಕಾರ್ಯಕರ್ತರು ಆಡಳಿತ ಪಕ್ಷದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದರು. …

Read More »

ಮುಸ್ಲಿಂ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ

ಕೊಪ್ಪಳ ಜಿಲ್ಲೆ): ಜಿಲ್ಲೆಯ ಅಳವಂಡಿಯ ಮುಸ್ಲಿಂ ಕುಟುಂಬವೊಂದು ಹಿಂದೂ ಸಂಸ್ಕೃತಿಯ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿತು. ನಜುರುದ್ದೀನ್ ಬಿಸರಳ್ಳಿ‌ ಹಾಗೂ ರಜಿಯಾಬೇಗಂ ದಂಪತಿ ಮೂರು ವರ್ಷಗಳಿಂದ ಈ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಈ ಸಲವೂ ಎಲ್ಲ ಹಿಂದೂ ಧಾರ್ಮಿಕ ಸಂಪ್ರದಾಯ ಪಾಲಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಸಲುವಾಗಿ ಮನೆಗೆ ದೀಪಾಲಂಕಾರ ಮಾಡಿದ್ದರು. ಹೋಳಿಗೆ ನೈವೇದ್ಯ ಮಾಡಿ ಹಾಗೂ ವಿವಿಧ ತರಹದ ಹಣ್ಣುಗಳು ಸಮರ್ಪಿಸಿ ಭಾವೈಕ್ಯ ಮೆರೆದರು.   …

Read More »

ವಿದ್ಯುತ್​​ ಬಿಲ್​ ಹೆಚ್ಚು ಬರೋದಕ್ಕೆ ಮನೆಯಲ್ಲಿರುವ ಈ ಸಾಧನೆಗಳೇ ಕಾರಣ! ತಕ್ಷಣವೇ ಆಫ್​ ಮಾಡಿ

ಅಧಿಕ ವಿದ್ಯುತ್ ಬಿಲ್ ಜನತೆಗೆ ತಲೆನೋವಿನಂತಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯ ವಿದ್ಯುತ್ ಬಿಲ್ ಕಡಿಮೆ ಬರಬೇಕೆಂದು ಬಯಸುತ್ತಾನೆ. ಆದರೆ ಮನೆಯಲ್ಲಿ ಹಲವಾರು ಸಾಧನಗಳ ನಿರಂತರ ಬಳಕೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ವಿದ್ಯುತ್ ಬಿಲ್ ಅನ್ನು ನೀವು ಕಡಿತಗೊಳಿಸಬಹುದು. ನೀವು ಸಹ ವಿದ್ಯುತ್ ಬಿಲ್ನಿಂದ ತೊಂದರೆಗೀಡಾಗಿದ್ದರೆ ಮತ್ತು ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಬಯಸಿದರೆ, ನಿಮ್ಮ ಮನೆಯಲ್ಲಿ ಹೆಚ್ಚು ವಿದ್ಯುತ್ ಬಳಸುವ …

Read More »

ಎಸಿಬಿ ವಿಚಾರಣೆಗೆ ಹಾಜರಾದ ಜಮೀರ್ ಅಹಮದ್

ಬೆಂಗಳೂರು: ಶಾಸಕ ಜಮೀರ್ ಅಹಮದ್ ಖಾನ್ ಎಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. 10 ದಿನದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಭ್ರಷ್ಟಾಚಾರ ನಿಗ್ರಹ ದಳ ಇಲಾಖೆ ನೋಟಿಸ್ ನೀಡಿದ್ದ, ಹಿನ್ನೆಲೆಯಲ್ಲಿ ತನಿಖಾಧಿಕಾರಿ ಎಸಿಬಿ ಡಿವೈಎಸ್​ಪಿ ರವಿಶಂಕರ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ‌. ಕಳೆದ ಜುಲೈ 5 ರಂದು ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಫ್ಲ್ಯಾಟ್​ಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿ ವೇಳೆ ಅಕ್ರಮ ಆಸ್ತಿ …

Read More »

ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕರಿಗೆ ತಿಳುವಳಿಕೆ ನೀಡುವುದು ಅತ್ಯವಶ್ಯ- ಕರ್ನಾಟಕ ಬ್ಯಾಂಕ್ ಎಂ.ಡಿ ಮಹಾಬಳೇಶ್ವರ್..!!

ಬ್ಯಾಂಕಿನ ವ್ಯವಹಾರಗಳನ್ನು ಶಿಸ್ತಿನ ಇತಿ ಮಿತಿಯೊಳಗೆ ನಡೆಸುವುದು ಹೇಗೆ ಎಂಬುದು ಕೆಲವರಿಗೆ ಗೊತ್ತಿದೆ. ಇನ್ನೂ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಕುರಿತು ಗ್ರಾಹಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾಂಕ್ ಕಾರ್ಯಮಾಡುತ್ತಿದೆ ಎಂದು ಬ್ಯಾಂಕ್‍ನ ಎಂಡಿ ಮಹಾಬಳೇಶ್ವರ್ ರವರು ತಿಳಿಸಿದ್ದಾರೆ. : ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕಿನ ವ್ಯವಹಾರಗಳನ್ನು ಶಿಸ್ತಿನ ಇತಿ ಮಿತಿಯೊಳಗೆ ನಡೆಸುವುದು ಹೇಗೆ ಎಂಬುದು ಕೆಲವರಿಗೆ ಗೊತ್ತಿದೆ. ಇನ್ನೂ ಹಲವರಿಗೆ ಗೊತ್ತಿಲ್ಲ. …

Read More »

ಮಗ ನಾಪತ್ತೆ ಎಂದು ದೂರು: ತನಿಖೆ ವೇಳೆ ಮಲತಾಯಿಯ ಅನೈತಿಕ ಸಂಬಂಧ, ಭಯಾನಕ ಸಂಚು ಬಯಲು

ಬಾಗಲಕೋಟೆ: ಮಗ ನಾಪತ್ತೆ ಎಂದು ತಾಯಿ ದೂರು ನೀಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ತಾಯಿಯೇ ಖಳನಾಯಕಿ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದ್ದು, ಅನೈತಿಕ ಸಂಬಂಧ ಮತ್ತು ಆಸ್ತಿ ವಿಚಾರಕ್ಕೆ ಕೊಲೆಯಾಗಿರುವ ಸಂಗತಿ ಬಯಲಾಗಿದೆ.   ವಸಂತ ಮಾಲಿಂಗಪ್ಪ ಕುರಬಳ್ಳಿ(24) ಕೊಲೆಯಾದವ. ಈತ ಆರೋಪಿ ಕಮಲವ್ವಳ ದತ್ತು ಮಗ. ಗೋಣಿ ಚೀಲದಲ್ಲಿ ಶವ ಪತ್ತೆಯಾದ ಪ್ರಕರಣವನ್ನು ಬೆನ್ನತ್ತಿ ಹೋದಾಗ ಕಮಲವ್ವ ಕರಾಳ ಮುಖದ ಅನಾವರಣ ಆಗಿದೆ. ತನ್ನ ಅನೈತಿಕ …

Read More »

ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಹೈಕೋರ್ಟ್ ಸುತ್ತೋಲೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಕರೆ ನೀಡಿದ್ದು, ಇದಕ್ಕೆ ದೇಶದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.   ಇದರ ಭಾಗವಾಗಿ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಹಾಗೂ ನ್ಯಾಯಾಂಗ ಅಧಿಕಾರಿಗಳ ಮನೆಯಲ್ಲಿ ಆಗಸ್ಟ್ 13 ರಿಂದ 15 ರ ನಡುವೆ ರಾಷ್ಟ್ರಧ್ವಜ ಹಾರಿಸಲು ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.   ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ …

Read More »

ಸಿಎಂ ಬಸವರಾಜ ಬೊಮ್ಮಾಯಿಗೆ ಕೋವಿಡ್ ಪಾಸಿಟಿವ್ : ದೆಹಲಿ ಪ್ರವಾಸ ರದ್ದು

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು (Corona virus)ದೃಢಪಟ್ಟಿದ್ದು, ಇಂದಿನ ದೆಹಲಿ ಪ್ರವಾಸ ರದ್ದುಪಡಿಸಿದ್ದಾರೆ. ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ದಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Read More »