Breaking News

ರಾಜಕೀಯ

ಬಾಕಿ ಕೊಡಿ; ವಿದ್ಯುತ್‌ ಖರೀದಿಸಿ: ಕರ್ನಾಟಕ ಸೇರಿ 13 ರಾಜ್ಯಗಳಿಗೆ ತಡೆ

ಬಾಕಿ ಪಾವತಿ ಮಾಡುವವರೆಗೆ ವಿದ್ಯುತ್‌ ಖರೀದಿ ಮತ್ತು ವಿತರಣೆ ಮಾಡಬೇಡಿ’ ಎಂದು ಕರ್ನಾಟಕ ಸೇರಿದಂತೆ 13 ರಾಜ್ಯಗಳಿಗೆ ಕೇಂದ್ರ ಸರ್ಕಾರ ಫ‌ರ್ಮಾನು ಹೊರಡಿಸಿದೆ. ಖಾಸಗಿ ವಿದ್ಯುತ್‌ ಉತ್ಪಾದಕರಿಗೆ ಒಟ್ಟು 5,085 ಕೋಟಿ ರೂ. ಮೊತ್ತವನ್ನು ಈ ರಾಜ್ಯಗಳು ನೀಡಲು ಬಾಕಿ ಇವೆ. ದಕ್ಷಿಣ ಭಾರತದಿಂದ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿಕೊಂಡಿವೆ. ಇದರಿಂದ ವಿದ್ಯುತ್‌ ಪೂರೈಕೆ ಮತ್ತು ಸರಬರಾಜಿನ ಮೇಲೆ, ಗ್ರಾಹಕರ ಮೇಲೆ ಉಂಟಾಗುವ ಪರಿಣಾಮಗಳೇನು ನೋಡೋಣ. ಏನಿದು ಬೆಳವಣಿಗೆ? …

Read More »

ಯಮಕನಮರ್ಡಿ ಕ್ಷೇತ್ರದಲ್ಲಿ ನಮ್ಮವರೇ ನನ್ನ ವಿರುದ್ಧ ಹಣ ಹಂಚಿದ್ದರಿಂದ ಲೀಡ ಕಡಿಮೆ: ಸತೀಶ್ ಜಾರಕಿಹೊಳಿ

ಯಮಕನಮರ್ಡಿ ಕ್ಷೇತ್ರದಲ್ಲಿ ನಮ್ಮವರೇ ನನ್ನ ವಿರುದ್ಧ ಹಣ ಹಂಚಿದ್ದರಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಲು ಕಾರಣವಾಯಿತು. ಎಂದು ಅಚ್ಚರಿ ಹೇಳಿಕೆಯನ್ನು ನೀಡಿದ್ದು ಸಧ್ಯ ಸತೀಶ್ ಜಾರಕಿಹೊಳಿ ವಿರುದ್ಧ ಹಣ ಹಂಚಿದ ಕಾಂಗ್ರೆಸ್ ನಾಯಕರು ಯಾರು ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲೀಗ ಪ್ರಾರಂಭವಾಗಿದೆ. ಬೆಳಗಾವಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿರವರು, ಇದೇ ವೇಳೆ ಕಳೆದ ಬಾರಿ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಗೆಲುವಿನ ಅಂತರ ಕಡಿಮೆಯಾದ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ …

Read More »

ಮಹಿಳೆಯರು ಮತ್ತಷ್ಟು ಸಾಧನೆ ಮಾಡಬೇಕಿದೆ”: ಯುವ ನಾಯಕ ರಾಹುಲ ಜಾರಕಿಹೊಳಿ

ಯಾವುದೇ ದೇಶದ ಏಳಿಗೆ ಆ ದೇಶದ ಮಹಿಳೆಯರ ಪ್ರಗತಿಯನ್ನು ಅವಲಂಬಿಸಿದೆ. ಹೀಗಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹೀಗೆ ಎಲ್ಲ ರಂಗಗಳಲ್ಲಿ ಮಹಿಳೆಯರು ಮತ್ತಷ್ಟು ಸಾಧನೆ ಮಾಡಬೇಕಿದೆ” ಎಂದು ಯುವ ನಾಯಕ ರಾಹುಲ ಜಾರಕಿಹೊಳಿ ಅಭಿಪ್ರಾಯ ಪಟ್ಟರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳಗಾವಿ ವಲಯದ ಕಾಕತಿ, ಗೌಂಡವಾಡ, ಮುತ್ಯಾನ ಹಟ್ಟಿ ಗ್ರಾಮದ ಸ್ವ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಗೌಡವಾಡದ ಮೋನಿಕ ಸಮುದಾಯ ಭವನದಲ್ಲಿ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ, …

Read More »

ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದ ಬಗ್ಗೆ ನಾನು ಕೂಡ ತೀವ್ರವಾಗಿ ಖಂಡಿಸುತ್ತೇನೆ.: ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದಿರುವುದನ್ನು ಒಪ್ಪಲಾಗದು.ಅದೇ ರೀತಿ ಸಿದ್ದರಾಮಯ್ಯ ಅವರು ಸಾರ್ವಕರ್ ಅವರ ಬಗ್ಗೆ ನೀಡಿದ ಹೇಳಿಕೆಯೂ ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಖಂಡಿಸಿದ್ದಾರೆ. ನಾನು ಕೂಡ ತೀವ್ರವಾಗಿ ಖಂಡಿಸುತ್ತೇನೆ. ವೈಚಾರಿಕ ಭಿನ್ನಾಭಿಪ್ರಾಯ ಏನೇ …

Read More »

ಅಬಕಾರಿ ನೀತಿ ಪ್ರಕರಣ: ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ದಾಳಿ

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ಸಿಬಿಐ ಶುಕ್ರವಾರ (ಆಗಸ್ಟ್ 19) ಬೆಳಗ್ಗೆ ದಾಳಿ ನಡೆಸಿದೆ.   ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿರುವುದಾಗಿ ಟ್ವೀಟ್ ಮಾಡಿರುವ ಡಿಸಿಎಂ ಸಿಸೋಡಿಯಾ, ತನಿಖೆಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡುವ ಮೂಲಕ ಶೀಘ್ರವೇ ಸತ್ಯ ಹೊರಬರಲಿದೆ ಎಂದು ತಿಳಿಸಿದ್ದಾರೆ. “ನಾವು ಸಿಬಿಐ ಅನ್ನು ಸ್ವಾಗತಿಸುತ್ತೇವೆ. ಶೀಘ್ರವಾಗಿ ಸತ್ಯ ಹೊರಬರಲು ನಾವು ಎಲ್ಲಾ ರೀತಿಯಿಂದಲೂ …

Read More »

ಕಾರ್ ಹೊಂದಿದವರ 12584 ಸೇರಿ 3.30 ಲಕ್ಷ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ರದ್ದು

ಬೆಂಗಳೂರು: ಐಷಾರಾಮಿ ಕಾರ್ ಹೊಂದಿದವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದ್ದು 12,584 ಕಾರ್ ಮಾಲೀಕರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. 21,679 ಅಂತ್ಯೋದಯ, 3,08,345 ಬಿಪಿಎಲ್ ಪಡಿತರ ಚೀಟಿ ಸೇರಿದಂತೆ ಸುಮಾರು 3.30 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು, ಕೆಲವು ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಿ ಕೊಡಲಾಗಿದೆ. ರಾಜ್ಯದಲ್ಲಿ ಕಾರ್ ಹೊಂದಿದವರು ಕೂಡ ಪಡಿತರ ಚೀಟಿ ಪಡೆದುಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸಾರಿಗೆ ಇಲಾಖೆಯ ಸಹಕಾರ …

Read More »

ಮುಸ್ಲಿಂ ಮನೆಯಲ್ಲಿ ಸ್ವರೂಪನಂದ ಭಾರತಿ ಸ್ವಾಮೀಜಿಗೆ ಪಾದಪೂಜೆ: ಎಲ್ಲರಿಂದಲೂ ಮೆಚ್ಚುಗೆ

ಗದಗ: ಜಿಲ್ಲೆಯಲ್ಲಿ ಹುಡ್ಕೋ ಕಾಲೋನಿಯ ಸಿಕಂದರ್‌ ಬಡೆಖಾನ್‌ ಕುಟುಂಬಸ್ಥರಿಂದ ಸ್ವರೂಪನಂದ ಭಾರತಿ ಸ್ವಾಮೀಜಿ ಪೂಜೆ ನೆರೆವೇರಿಸಿದೆ. ಈ ವೇಳೆ ಸ್ವರೂಪಾನಂದ ಭಾರತಿ ಸ್ವಾಮೀಜಿಗೆ ಪಾದಪೂಜೆ ಮಾಡಿದ್ದಾರೆ.   ಧಾರವಾಡ ಜಿಲ್ಲೆಯ ಕ್ಯಾರಕೊಪ್ಪದ ಓಂಕಾರ ಆಶ್ರಮದ ಸ್ವರೂಪನಂದ ಸ್ವಾಮೀಜಿಯವರ ಪಾದಪೂಜೆ ಮಾಡಿ ಎಲ್ಲರ ಗಮನ ಸೆಳೆದಿದೆ. ನಿವೃತ್ತ ಪ್ರಾಧ್ಯಾಪಕರಾದ ಸಿಕಂದರ್‌ ಅವರು ಸ್ವರೂಪನಂದ ಶ್ರೀಗಳ ಭಕ್ತರಾಗಿದ್ದಾರೆ. ಪಾದಪೂಜೆಯ ಮೂಲಕ ಸ್ವಾಮೀಜಿಯವರು ಬಡೆಖಾನ್‌ ಮನೆಯಲ್ಲಿಯೇ ಪ್ರಸಾದ ಸ್ವೀಕರಿಸಿದ್ದಾರೆ.ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಪ್ರೇರಕವಾದ ಈ …

Read More »

ರೈಲ್ವೆ ಪೊಲೀಸರಿಗೆ ಶೋಲ್ಡರ್ ಲೈಟ್: ರಾಜ್ಯದಲ್ಲಿ ಪ್ರಥಮ ಬಾರಿಗೆ ಜಾರಿ

ಬೆಂಗಳೂರು: ರಾತ್ರಿ ವೇಳೆ ರೈಲು ಗಸ್ತು, ರೈಲು ಹಳಿ ಗಸ್ತು ಹಾಗೂ ಅಪರಾಧಗಳ ಘಟನಾ ಸ್ಥಳಗಳಲ್ಲಿ ರೈಲ್ವೆ ಪೊಲೀಸರ ಇರುವಿಕೆ ಗುರುತಿಸಲು ಅನುವಾಗುವಂತೆ ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲ್ವೆ ಪೊಲೀಸರಿಗೆ ‘ಶೋಲ್ಡರ್ ಲೈಟ್’ ಪರಿಚಯಿಸಲಾಗಿದೆ.   ರಾತ್ರಿ ವೇಳೆ ರೈಲ್ವೆ ಪೊಲೀಸರು ರೈಲು ಗಸ್ತು, ರೈಲು ಹಳಿಗಳ ಗಸ್ತು ಮಾಡುತ್ತಾರೆ. ನಿಗದಿತ ಮಾರ್ಗದಲ್ಲಿ ರೈಲು ಹಳಿಗಳ ಮೇಲೆ ನಡೆದು ಹೋಗುವ ಸಂದರ್ಭದಲ್ಲಿ ಕತ್ತಲೆ ಇರುತ್ತದೆ. ಕೆಲವು ಬಾರಿ ರೈಲ್ವೆ ಹಳಿಗಳ ಮೇಲೆ …

Read More »

ಪುನೀತ್ ರಾಜ್‍ಕುಮಾರ್ ಗಣಪನ ಮೂಲಕ ನಟನಿಗೆ ಗೌರವ ಶ್ರದ್ಧಾಂಜಲಿ

ವರನಟ, ಅಪ್ಪಾಜಿ‌ ಹಾಗೂ ಕನ್ನಡದ ಕಣ್ಮನಿ ಎಂದು ಕರುನಾಡ ಇತಿಹಾಸ ಪ್ರಸಿದ್ಧವಾಗಿರುವ ಮೂರನೇ ಪುತ್ರ ಪವರ್ ಸ್ಟಾರ್ ಎಂದು ಜನಮನ್ನಣೆ ಪಡೆದಿದ್ದ ಪುನೀತ್ ರಾಜ್‍ಕುಮಾರ್. ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ 10 ತಿಂಗಳು ಕಳೆಯುತ್ತ ಬಂದರು ಅವರ ನೆನಪುಗಳು ಮಾತ್ರ ಕನ್ನಡಿಗರಿಂದ ಹಾಗೂ ಅಭಿಮಾನಿಗಳಿಂದ ಮಾಸುತ್ತಿಲ್ಲ. ಹೌದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನೆನಪು ಸದಾ ಒಂದಿಲ್ಲೊಂದು ಕಾರಣದಿಂದ ಮತ್ತೆ ಮತ್ತೆ ನೆನಪುಸುತ್ತಿದೆ. ಅವರ ಮನೋಜ್ಞ ಅಭಿನಯದಿಂದ ಕರುನಾಡ …

Read More »

ತಮ್ಮ ಪುಟ್ಟ ಮಗುವಿಗೆ ಶ್ರೀ ಕೃಷ್ಣನ ವೇಶ ಹಾಕಿ ಭಾವೈಕ್ಯತೆ ಮೆರೆದ ಮುಸ್ಲಿಂ ಕುಟುಂಬ..!!

ದೇವನೊಬ್ಬ ನಾಮ ಹಲವು ಎಂದು ಸಾರುತ್ತ ಮುಸ್ಲಿಂ ಕುಟುಂಬವೊಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮನೆಯ ಮಗುವಿಗೆ ಶ್ರೀಕೃಷ್ಣನ ವೇಶವನ್ನು ಹಾಕಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶವನ್ನು ಸಾರಿದ ಅರ್ಥಪೂರ್ಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಭಾರತದಂಥ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿ ಕಂಡುಬಂದ ಅದ್ಭು ದೃಶ್ಯವಿದು. ದೇವನೊಬ್ಬ ನಾಮ ಹಲವು ಎಂದು ಸಾರುತ್ತ ಮುಸ್ಲಿಂ ಕುಟುಂಬವೊಂದು ತಮ್ಮ ಮನೆಯ ಚಿಕ್ಕ ಮಗುವಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ …

Read More »