ದಾವಣಗೆರೆ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪಿಸಿ ತನಿಖೆ ನಡೆಸಲು ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆದೇಶಿಸಿದು ಒಳ್ಳೆಯ ವಿಚಾರ. ಹೊಸ ವಿಚಾರಣೆ ನಡೆಯಬೇಕು, ಸತ್ಯಾಂಶ ಹೊರ ಬರಬೇಕು. ಎಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂತಹ ಸಂದರ್ಭ ಬರುವುದಿಲ್ಲ. ತಪ್ಪು …
Read More »ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ: ವರದಿ
Gautam Adani ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ (Gautam Adani) ಈಗ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ, …
Read More »ಆರ್ಥಿಕವಾಗಿ ಸಬಲರಾದ ದಲಿತ ಸಮುದಾಯದವರಿಗೆ ಮೀಸಲಾತಿ ನೀಡಬಾರದು: ಕೆ.ಎಸ್.ಈಶ್ವರಪ್ಪ
ಮೈಸೂರು, ಸೆ.16: ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಕಡುಬಡವರಿಗೆ ಸಿಗಬೇಕಿದ್ದ ಮೀಸಲಾತಿ ಉಳ್ಳವರ ಪಾಲಾಗುತ್ತಿದ್ದು ಕೇಂದ್ರ ಸರಕಾರ ಕೂಡಲೇ ಶ್ರೀಮಂತರ ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ನಗರದ ಹೋಟೆಲ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದಲ್ಲಿ ಪ್ರಬಲರೇ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಂತರ ಅವರ ಮಗ ಪ್ರಿಯಾಂಕ್ ಖರ್ಗೆ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಾಗಿ ಇಂಥವರಿಗೆ ಮೀಸಲಾತಿಯನ್ನು ನಿಲ್ಲಿಸಬೇಕು ಎಂದು …
Read More »ಅಕ್ರಮ- ಸಕ್ರಮ ಅವಧಿ ಒಂದು ವರ್ಷ ವಿಸ್ತರಣೆ ಮಾಡಿದ ಸರ್ಕಾರ
ಬೆಂಗಳೂರು: ಸರಕಾರಿ ಭೂಮಿ ಸಾಗುವಳಿಯ ಅಕ್ರಮ- ಸಕ್ರಮ ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ಒಂದು ವರ್ಷಗಳ ಕಾಲ ವಿಸ್ತರಣೆ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ತಿದ್ದುಪಡಿ ವಿಧೇಯಕವನ್ನು ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. 94 ಎ ತಿದ್ದುಪಡಿ ಮೂಲಕ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಸರಕಾರಿ ಭೂಮಿಯಲ್ಲಿ ನಡೆಸುತ್ತಿದ್ದ ಅಕ್ರಮ ಸಾಗುವಾಳಿಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ಅವಕಾಶವಿತ್ತು. ಆದರೆ ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ …
Read More »ಗಡಿ ವಿವಾದ ಕೆದಕಿದ ಮರಾಠಿ ಚಿತ್ರ “ಬಾಯ್ಸ್ 03” ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್..
ಗಡಿ ವಿವಾದ ಕೆದಕಿದ ಮರಾಠಿ ಚಿತ್ರ ಬಾಯ್ಸ್ 03 ಬಿಡುಗಡೆಗೆ ಕನ್ನಡ ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಮರಾಠಿ ಚಲನಚಿತ್ರ ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್ ಹಾಕಲಾಗಿದೆ. ಹೌದು ಮಹಾರಾಷ್ಟ್ರದಲ್ಲಿ ಮರಾಠಿ ಚಲನಚಿತ್ರ “ಬಾಯ್ಸ್ 03” ಚಿತ್ರ ಇವತ್ತು ಬಿಡುಗಡೆಯಾಗಿದೆ. ಈ ಚಿತ್ರವನ್ನು ಬೆಳಗಾವಿ ಮತ್ತು ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತ್ತು. ಅಲ್ಲದೇ ನಗರ ಪೆÇಲೀಸ್ ಆಯುಕ್ತರಿಗೆ ಮನವಿ …
Read More »ಸಿದ್ಧರಾಮಯ್ಯ ಪ್ರಶ್ನೆಗೆ ತಬ್ಬಿಬ್ಬಾಗಿ ಮುಜುಗರಕ್ಕೊಳಗಾದ ಸಚಿವ ಬಿ.ಸಿ. ಪಾಟೀಲ್
ವಿಧಾನಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮುಜುಗರಕ್ಕೆ ಒಳಗಾಗಿದ್ದಾರೆ. ಬೆಳೆ ಹಾನಿ ಪರಿಹಾರದ ಬಗ್ಗೆ ಮಾಹಿತಿ ನೀಡಲು ಹೋದ ಅವರು ಮುಜುಗರಕ್ಕೆ ಒಳಗಾಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರಾದ ವಿಪಕ್ಷನಾಯಕ ಸಿದ್ದರಾಮಯ್ಯ ಮಾಹಿತಿ ಕೇಳಿದ್ದಾರೆ. ಮಾಹಿತಿ ಕೊಡಲು ಹೋಗಿ ಕೃಷಿ ಸಚಿವರು ಮುಜುಗರ ಎದುರಿಸಿದ್ದಾರೆ. ಮೊದಲು ನಾಳೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ ಬಿ.ಸಿ. ಪಾಟೀಲ್ ಅವರು, ಸ್ವಲ್ಪ ಹೊತ್ತಿನ ನಂತರ ಮಾಹಿತಿ ತಂದು …
Read More »ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನ್ಮದಿನ ಸರ್ಕಾರದಿಂದಲೇ ‘ಸ್ಪೂರ್ತಿ ದಿನ’ವಾಗಿ ಆಚರಣೆ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ಆಚರಿಸಲಾಗುವುದು. ಈ ಕುರಿತಾಗಿ ಇಂಧನ ಸಚಿವ ಸುನಿಲ್ ಕುಮಾರ್ ಅವರು ಮಾಡಿದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಪ್ಪು ಜನ್ಮದಿನವಾದ ಮಾರ್ಚ್ 17 ಇನ್ನು ಮುಂದೆ ಸ್ಪೂರ್ತಿ ದಿನವೆಂದು ಆಚರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಅಪ್ಪು ಜನ್ಮದಿನ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ.
Read More »ಪ್ರಧಾನಿ ಮೋದಿ ಜನ್ಮದಿನಕ್ಕೆಂದೇ ಸಿದ್ಧವಾಯ್ತು ’56 ಇಂಚಿನ ಮೋದಿ ಜಿ’ ಥಾಲಿ.
ದೆಹಲಿ : ಸೆಪ್ಟೆಂಬರ್ 17 ರಂದು(ನಾಳೆ) ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ದೆಹಲಿ ಮೂಲದ ರೆಸ್ಟೋರೆಂಟ್ನಲ್ಲಿ ವಿಶೇಷ ಥಾಲಿ(ವಿವಿಧ ಬಗೆರ ಆಹಾರಗಳನ್ನು ಒಳಗೊಂಡಿರುವ ಊಟ)ನ್ನು ನೀಡಲಿದೆ. ಅದರ ಹೆಸರು ʻ56 ಇಂಚಿನ ಮೋದಿಜಿʼ. ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿರುವ ARDOR 2.1 ರೆಸ್ಟೊರೆಂಟ್ ಸುಮಾರು 56 ಬಗೆಯ ಆಹಾರಗಳನ್ನು ಹೊಂದಿರುವ ದೊಡ್ಡ ಗಾತ್ರದ ಥಾಲಿಯನ್ನು ನೀಡಲು ನಿರ್ಧರಿಸಿದೆ. ರೆಸ್ಟೋರೆಂಟ್ ಮಾಲೀಕ ಸುಮಿತ್ ಕಲ್ರಾ ಮಾತನಾಡಿ, …
Read More »ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಗ್ರಾ.ಪಂ.ಗಳಲ್ಲಿ ಖಾಲಿ ಇರುವ 326 ಪಿಡಿಒ, 625 SDA, 487 ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಾತಿ
ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಗ್ರಾಮಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಗ್ರಾಮಪಂಚಾಯಿತಿಗಳಿಗೆ ಸರ್ಕಾರದ 30 ಕ್ಕೂ ಹೆಚ್ಚು ಇಲಾಖೆಗಳ ಕಾರ್ಯಕ್ರಮ, ಯೋಜನೆಗಳನ್ನು ಜಾರಿ ಮಾಡುವ ಜವಾಬ್ದಾರಿಗಳನ್ನು ನೀಡಲಾಗಿದೆ. ಹೀಗಾಗಿ ಕೆಲಸದ ಒತ್ತಡ ಕಡಿಮೆ ಮಾಡಲು 3-4 ತಿಂಗಳಲ್ಲಿ ಪಿಡಿಒ ಸೇರಿದಂತೆ …
Read More »ಕರೆಂಟ್ ಹೋದಾಗ ಮಶೀನ್ಗಳೆಲ್ಲ ಬಂದ್ ಆದವು ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ”: ಬಳ್ಳಾರಿ: ವಿಮ್ಸ್ ತೀವ್ರ ನಿಗಾ ಘಟಕದಲ್ಲಿದ್ದ 8 ವರ್ಷದ ಬಾಲಕ ಸಾವು
ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ಬಾಲಕ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಯ ಪುತ್ರ ನಿಖಿಲ್ (8) ಮೃತ ಬಾಲಕ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಈತನನ್ನು ಸೆ.11ರಂದು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಸರಣಿ ಸಾವು ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಈ ವಿಚಾರ ಗುರುವಾರ ಸಂಜೆಯ ವೇಳೆಗೆ ಬಹಿರಂಗವಾಗಿದೆ. …
Read More »
Laxmi News 24×7