ವಿಜಯಪುರ: ದೇಶದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಕುರಿತು ಲೇವಡಿ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಧಾನಿ ಮೋದಿ ಅವರು ಹೇಳಿದಂತೆ ಸೋನಿಯಾ, ರಾಹುಲ್ ಕಾಂಗ್ರೆಸ್ ಮುಖಂಡರನ್ನು ಬೀದಿಗೆ ತಂದಿದ್ದಾರೆ ಎಂದರು. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಬಿಜೆಪಿಯ ಮೇಲೆ ಯಾವ ಪರಿಣಾಮ ಸಹ ಬೀರುವುದಿಲ್ಲ. ಇದರಿಂದ ಇನ್ನೂ ಒಳ್ಳೆಯದ್ದೇ ಆಗಿದೆ. ಅವರ ಬಣ್ಣ ಬಯಲು ಮಾಡಿದೆ …
Read More »ಉದ್ಘಾಟನೆಯಾಗದ ಸ್ಮಾರ್ಟ್ ಸಿಟಿ ಮೀನು ಮಾರುಕಟ್ಟೆ
ಯಾವುದೇ ಕಾಮಗಾರಿಗಳಿಗಾಗಲಿ.. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಆರಂಭದಲ್ಲಿ ಇರುವ ಉತ್ಸಾಹ ಕಾಮಗಾರಿ ಮುಗಿದ ಮೇಲೆ ಇರುವುದೇ ಇಲ್ಲ. ಇದಕ್ಕೆ ಧಾರವಾಡವೇನೂ ಹೊರತಾಗಿಲ್ಲ. ಕಾಮಗಾರಿಗೆ ಅನುಮೋದನೆ ದೊರೆತು, ಅದು ಮುಕ್ತಾಯವಾಗುವವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರಂತರವಾಗಿ ಅಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಯಾವಾಗ ಕಾಮಗಾರಿ ಮುಗಿಯುತ್ತದೋ, ಅವರು ಕೂಡ ಅಲ್ಲಿಗೆ ಬರುವುದನ್ನು ನಿಲ್ಲಿಸಿ ಬಿಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆ. ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ …
Read More »ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: B.S.Y.
ಬೆಂಗಳೂರು: ಇಂದಿನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಡೆಯುವ ವಿಜಯದ ಯಾತ್ರೆಯಾಗಿದೆ. ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟು ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ: ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ …
Read More »ಧಗಧಗನೆ ಉರಿದ ಖಾಸಗಿ ಬಸ್.. ಮಕ್ಕಳು ಸೇರಿ 14 ಮಂದಿ ಸಜೀವ ದಹನ
ನಾಸಿಕ್(ಮಹಾರಾಷ್ಟ್ರ): ನಾಸಿಕ್ಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡು ಮಕ್ಕಳು ಸೇರಿದಂತೆ 14 ಜನರು ಸಜೀವ ದಹನವಾದ ದಾರುಣ ಘಟನೆ ಇಂದು ಬೆಳಗಿನ ಜಾವ 4.30 ರ ಸುಮಾರಿಗೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರ್ಘಟನೆಗೀಡಾದ ಖಾಸಗಿ ಬಸ್ ನಾಸಿಕ್ಗೆ ಪಯಣಿಸುತ್ತಿತ್ತು. ಈ ವೇಳೆ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರು ನಿದ್ರೆಯಯಲ್ಲಿದ್ದ ಕಾರಣ ಬಸ್ಗೆ ಬೆಂಕಿ ಹೊತ್ತಿಕೊಂಡಿದ್ದು, ಯಾರೂ ಗಮನಿಸಿಲ್ಲ. ಬೆಂಕಿ ಇಡೀ ಬಸ್ಗೆ ಹೊತ್ತಿಕೊಂಡಿದ್ದು, ಜನರು ಹೊರಬರಲಾಗದೇ ಜ್ವಾಲೆಗೆ ಸಿಲುಕಿ …
Read More »10 ಲಕ್ಷದ ಸೂಟು ಬೂಟು ಧರಿಸುವ ಮೋದಿ ಬಡವರಾ, ಪ್ಯಾಂಟ್ ಟೀಶರ್ಟ್ ಧರಿಸುವ ರಾಹುಲ್ ಗಾಂಧಿ ಬಡವರಾ?’
ಗಂಗಾವತಿ(ಕೊಪ್ಪಳ): ಮೋದಿ ಯಾವ ಊರಲ್ಲಿ, ಯಾವ ಹೋಟೆಲ್, ಯಾವ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿದ್ದರು ಎಂಬುದನ್ನು ಬಿಜೆಪಿಗರು ಬಹಿರಂಗ ಪಡಿಸುತ್ತಿಲ್ಲ. ಸುಳ್ಳಿನ ಕಂತೆ ಹೆಣೆಯುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಸುಳ್ಳಿನಿಂದಲೇ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು. ನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 10 ಲಕ್ಷ ರೂ. ಮೌಲ್ಯದ ಸೂಟು-ಬೂಟು ಧರಿಸುವವರು ಬಡವರೋ ಅಥವಾ ಅಗರ್ಭ ಶ್ರೀಮಂತರಾಗಿದ್ದರೂ …
Read More »ಗೃಹ ಇಲಾಖೆ ಏನು ಮಾಡುತ್ತಿತ್ತು? ಪೇ ಸಿಎಂ ವಿಚಾರಕ್ಕೆ ಅರುಣ್ ಸಿಂಗ್ ಫುಲ್ ಗರಂ
ಬೆಂಗಳೂರು: ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ, ಇತ್ತೀಚೆಗೆ ‘ಪೇ ಸಿಎಂ’ ಎಂಬ ಅಭಿಯಾನ ಮಾಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೋ ಹಾಗೂ ಕ್ಯೂಆರ್ ಕೋಡ್ ಪ್ರಕಟಿಸಿ ನಗರದ ವಿವಿಧ ಭಾಗಗಳಲ್ಲಿ ಪೋಸ್ಟರ್ ಅಂಟಿಸಿತ್ತು. ಕಾಂಗ್ರೆಸ್ ಮಾಡಿದ ಪೇ ಸಿಎಂ ಅಭಿಯಾನ ರಾಜ್ಯದಲ್ಲಿ ಸಂಚಲನವನ್ನೇ ಎಬ್ಬಿಸಿತ್ತು. ಬೆಂಗಳೂರಿನಲ್ಲಿ ಆರಂಭವಾದ ಕ್ಯಾಂಪೇನ್, ರಾಜ್ಯದ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೇ ಸಿಎಂ ಅಭಿಯಾನ ಮಾಡಿ, ಬಿಜೆಪಿ …
Read More »‘ಏರ್ಟೆಲ್’ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್; ಗುರುವಾರದಿಂದಲೇ 5G ಸೇವೆಗೆ ಚಾಲನೆ
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು 5ಜಿ ಸೇವೆಗೆ ಚಾಲನೆ ನೀಡಿದ್ದು, ಇದರಿಂದ ಗ್ರಾಹಕರಿಗೆ ಅತಿ ವೇಗದ ಇಂಟರ್ನೆಟ್ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿ ಅವರ ಟೆಲಿಕಾಂ ಕಂಪನಿ 5 ಜಿ ತರಂಗಾಂತರಗಳನ್ನು ತಮ್ಮದಾಗಿಸಿಕೊಂಡಿವೆ. ಇದರ ಮಧ್ಯೆ ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಗುರುವಾರದಿಂದಲೇ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದ್ದು, ಪ್ರಸ್ತುತ ಇರುವ …
Read More »ಚುನಾವಣಾ ಆಖಾಡಕ್ಕೆ ಪ್ರಮೋದ್ ಮುತಾಲಿಕ್, ಗುರು ಶಿಷ್ಯರ ಕದನಕ್ಕೆ ವೇದಿಕೆ ಸಿದ್ದ?
ಮಂಗಳೂರು : ಕರಾವಳಿಯಲ್ಲಿ ಪ್ರಮೋದ್ ಮುತಾಲಿಕ್ 2023 ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರಿಂದ ಬೇಡಿಕೆ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರೀ ಚರ್ಚೆಗೆ ಗ್ರಾಸವಾಗಿದೆ. BIGG NEWS: ಆರನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ಡಿಕೆ ಬ್ರದರ್ಸ್ ಗೆ ಭಾಗವಹಿಸಲಾಗದ ಸಂಕಷ್ಟ ಪ್ರಮೋದ್ ಮುತಾಲಿಕ್ 2023 ಚುನಾವಣೆಗೆ ಸ್ಪರ್ಧೆ ಬಗ್ಗೆ ಈಗಾಗಲೇ ಭಾರೀ ಚರ್ಚೆಯಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 15 ವಿಧಾನಸಭಾ ಕ್ಷೇತ್ರವಿದೆ. ಇದರಲ್ಲಿ 12 …
Read More »ರೈತರಿಗೆ ಗುಡ್ ನ್ಯೂಸ್: ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ನ. 1 ರಿಂದ ‘ಯಶಸ್ವಿನಿ ಯೋಜನೆ’ ಪುನಾರಂಭ
ಬೆಂಗಳೂರು: ರೈತರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಯಶಸ್ವಿನಿ ಯೋಜನೆ ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಪುನರಾರಂಭವಾಗಲಿದೆ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ಉಪ ಕೇಂದ್ರ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಕ್ಕಳ ಐಸಿಯು ಉಪ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಹಕಾರಿ ಸಂಸ್ಥೆಗಳ ಸದಸ್ಯ ರೈತರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಕಲ್ಪಿಸಲು ಯಶಸ್ವಿನಿ ಯೋಜನೆಯಿಂದ ಅನುಕೂಲವಾಗಿತ್ತು. ರೈತರ ಹಿತ ದೃಷ್ಟಿಯಿಂದ ನವೆಂಬರ್ …
Read More »ನಮ್ಮ ಕನ್ನಡ ಸಿನಿಮಾ ಮಂದಿಗೆ ನಾಚಿಕೆ ಆಗ್ಬೇಕು: ಕಲಾವಿದರ ವಿರುದ್ಧ ಗುಡುಗಿದ ನಟ ಜಗ್ಗೇಶ್
ಬೆಂಗಳೂರು: ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಆಗಾಗ ಅಸಮಾಧಾನ ಹೊರಹಾಕುವ ನವರಸನಾಯಕ ಜಗ್ಗೇಶ್, ಮತ್ತೊಮ್ಮೆ ಕನ್ನಡ ಕಲಾವಿದರ ವಿರುದ್ಧ ಗರಂ ಆಗಿದ್ದಾರೆ. ಕಳೆದ ವಾರ ಬಿಡುಗಡೆಯಾದ ಜಗ್ಗೇಶ್ ಅವರ ತೋತಾಪುರಿ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಭಾಗಿಯಾಗಿ ಮಾತನಾಡಿದ ಜಗ್ಗೇಶ್, ನಮ್ಮ ಕನ್ನಡ ಸಿನಿಮಾ ಮಂದಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದರು. ಯಾವುದೋ ತಮಿಳು ಚಿತ್ರ ಅದ್ಭುತವಾಗಿ ಕಲೆಕ್ಷನ್ ಮಾಡುತ್ತಿದೆ. ರಜನಿಕಾಂತ್ರಂತಹ ಹಿರಿಯ ನಟರು ಅದ್ಭುತವಾಗಿ ಪ್ರಮೋಷನ್ ಮಾಡಿಕೊಟ್ಟಿದ್ದಾರೆ. ಆದರೆ …
Read More »
Laxmi News 24×7