Breaking News

ರಾಜಕೀಯ

ಅದಾನಿ ಮ್ಯಾನೇಜರ್‌ ಮಾತ್ರ, ದುಡ್ಡೆಲ್ಲಾ ಪ್ರಧಾನಿ ನರೇಂದ್ರ ಮೋದಿಯದ್ದು: ಕೇಜ್ರಿವಾಲ್

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ʼಅದಾನಿ ಕೇವಲ ಮ್ಯಾನೇಜರ್‌ ಮಾತ್ರ, ಕಂಪನಿಯಲ್ಲಿನ ಎಲ್ಲಾ ಹಣವನ್ನು ಪ್ರಧಾನಿ ಮೋದಿಯೇ ಹೂಡಿಕೆ ಮಾಡಿದ್ದಾರೆʼ ಎಂದು ಹೇಳಿದ್ದಾರೆ.   ದಿಲ್ಲಿ ಅಸೆಂಬ್ಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಜೆಪಿಸಿ, ಸಿಬಿಐ ಅಥವಾ ಇಡಿ ತನಿಖೆಯು ಅದಾನಿ ಪತನಕ್ಕೆ ಕಾರಣವಾಗುವುದಲ್ಲ ಬದಲಾಗಿ ಪ್ರಧಾನಿ ಮೋದಿಯವರ ಪತನಕ್ಕೆ ಕಾರಣವಾಗುತ್ತದೆ. ಹಾಗಾಗಿ, ಪ್ರಧಾನಿ ಮೋದಿ ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು …

Read More »

2023: ಕಾಂಗ್ರೆಸ್‌ ಸೇಪರ್ಡೆಯಾದ ಕೂಡ್ಲಿಗಿ ಬಿಜೆಪಿ ಶಾಸಕ

ಕೂಡ್ಲಿಗಿ, ಮಾರ್ಚ್‌, 28: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಬೆಳವಣಿಗೆಗಳು ಆಗುತ್ತಲೇ ಇವೆ. ರಾಜಕೀಯ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದು, ಎಲ್ಲಾ ಪಕ್ಷಗಳಲ್ಲಿ ಇದೀಗ ಬಂಡಾಯದ್ದೇ ಚಿಂತೆ ಆಗಿದೆ. ಇದೇ ರೀತಿ ಇಂದು ಕೂಡ್ಲಿಗಿ ಬಿಜೆಪಿ ಶಾಸಕ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಶಾಸಕ ಗೋಪಾಲಕೃಷ್ಣ ಅವರು ನಿನ್ನೆ ಕಾಂಗ್ರೆಸ್ ಮುಖಂಡರನ್ನು ಭೇಟಿ ಆಗಿದ್ದು, ಇಂದು ಕೊನೆಗೂ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಕೂಡ್ಲಿಗಿ ವಿಧಾಸಭಾ ಕ್ಷೇತ್ರದಲ್ಲಿ …

Read More »

ವಿಜಯನಗರ ಜಿಲ್ಲೆಯ ಹಲವೆಡೆ ಭೂಕಂಪನ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಭೂಕಂಪನವಾಗಿದೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, 15ರಿಂದ 20 ಕಿಲೋ ಮೀಟರ್ ರೇಡಿಯಲ್ ವ್ಯಾಪ್ತಿಯಲ್ಲಿ ಭೂಕಂಪನ ದಾಖಲಾಗಿದೆ. ಕಂಪನದ ತೀವ್ರತೆ ಕಡಿಮೆಯಾಗಿದ್ದು, ಸ್ಥಳೀಯರಿಗೆ ಯಾವುದೇ ತೊಂದರೆಯಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಯಾವುದೇ ಆತಂಕಕ್ಕೆ ಒಳಗಾಗದಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ

Read More »

15 ಹಳ್ಳಿಗಳ ರೈತರ ಬದುಕು ಹಸನಾಗಲಿದೆ: ಗೋವಿಂದ ಕಾರಜೋಳ

ನಾಗರಮುನ್ನೋಳಿ (ಚಿಕ್ಕೋಡಿ ತಾ.): ‘ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆ ಕರಗಾಂವ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಇದರಿಂದ 15 ಹಳ್ಳಿಗಳ ರೈತರ ಬದುಕು ಹಸನಾಗಲಿದೆ. ಒಂದು ವರ್ಷದ ಅವಧಿಯಲ್ಲಿ ನೀರು ಹರಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.   ರಾಯಬಾಗ ವಿಧಾನಸಭೆ ಕ್ಣೇತ್ರಕ್ಕೆ ಬರುವ, ಚಿಕ್ಕೋಡಿ ತಾಲ್ಲೂಕಿನ 14 ಗ್ರಾಮಗಳ ಸುಮಾರು 8,390 ಹೆಕ್ಟೇರ್‌ ಜಮೀಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ₹567 ಕೋಟಿ …

Read More »

ಯಲ್ಲಮ್ಮನ ಗುಡ್ಡದಲ್ಲಿ ₹21 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪರಶುರಾಮ ವಸತಿ ನಿಲಯ ಉದ್ಘಾಟನೆ

ಉಗರಗೋಳ: ಯಲ್ಲಮ್ಮನ ಗುಡ್ಡದಲ್ಲಿ ₹21 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪರಶುರಾಮ ವಸತಿ ನಿಲಯ ಉದ್ಘಾಟನೆಗೆ ಸಜ್ಜಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್‌ 28ರಂದು ಮಧ್ಯಾಹ್ನ 12ಕ್ಕೆ ಇದನ್ನು ಭಕ್ತರಿಗೆ ಸಮರ್ಪಣೆ ಮಾಡಲಿದ್ದಾರೆ.   ಸದ್ಯ ಜನರ ವಸತಿಗಾಗಿ 100 ಕೊಠಡಿಗಳಿವೆ. ಹೆಚ್ಚಿನ ಭಕ್ತರು ಗುಡ್ಡದ ವಿಶಾಲವಾದ ಪರಿಸರದಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಭಕ್ತರಿಗೆ ವಸತಿ ಸಮಸ್ಯೆಯಾಗುತ್ತಿದೆ. ಇದನ್ನು ಮನಗಂಡ ಸರ್ಕಾರ 2013ರಲ್ಲಿ 246 ಕೊಠಡಿಗಳುಳ್ಳ ವಸತಿ ನಿಲಯ ನಿರ್ಮಾಣ …

Read More »

ಕಳ್ಳರನ್ನು ಸಮಾಜ ಸುಧಾರಕರು ಎನ್ನಬೇಕೇ?’ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ‘ಕಳ್ಳರನ್ನು ಕಳ್ಳ ಎಂದು ಕರೆಯದೇ ಸಾಧುಗಳು, ಸಂತರು, ಸಮಾಜ ಸುಧಾರಕರೆಂದು ಕರೆಯಬೇಕೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ರಾಹುಲ್‌ ಗಾಂಧಿ ಅವರ ಸಂಸತ್‌ ಸ್ಥಾನದ ಅನರ್ಹತೆಯ ಕ್ರಮ ಖಂಡಿಸಿ, ಬೆಂಗಳೂರು ಕೇಂದ್ರ, ದಕ್ಷಿಣ ಹಾಗೂ ಉತ್ತರ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.   ‘ಭಾರತ್‌ ಜೋಡೊ ಯಾತ್ರೆಯ ಬಳಿಕ ರಾಹುಲ್‌ ಗಾಂಧಿ ಅವರ ವರ್ಚಸ್ಸು ವೃದ್ಧಿಯಾಗಿದೆ. ಇದು …

Read More »

ಲಿಂಗಾಯತ, ವೀರಶೈವರೆಲ್ಲ ಒಂದೇ: 3 ಬಿಅಡಿ 22 ಉಪಜಾತಿ ಸೇರಿಸಲು ಸರ್ಕಾರಕ್ಕೆ ಸಲಹೆ

ಬೆಂಗಳೂರು: ಮೀಸಲಾತಿಯಿಂದ ವಂಚಿತರಾಗುತ್ತಿದ್ದ 22 ಲಿಂಗಾಯತ/ವೀರಶೈವ ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ‘ಪ್ರವರ್ಗ 3ಬಿ’ ಅಡಿ ಸೇರಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲಹೆ ನೀಡಿದೆ. ಆದರೆ, ಈ ಪೈಕಿ ಮೂರು (ಕುಡುಒಕ್ಕಲಿಗ/ಕುಡು ಒಕ್ಕಲ, ನೊಳಂಬ ಮತ್ತು ಲಾಳಗೊಂಡ) ಉಪಜಾತಿಗಳನ್ನು ಮಾತ್ರ ಹೊಸದಾಗಿ ಸೃಜಿಸಿರುವ ‘2ಡಿ’ಗೆ ಸೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.   ‘ಪ್ರವರ್ಗ 3ಬಿ’ಗೆ ನೀಡಿದ್ದ ಶೇ 5ರ ಮೀಸಲಾತಿ ಪ್ರಮಾಣವನ್ನು ಶುಕ್ರವಾರ (ಮಾರ್ಚ್‌ 24) ನಡೆದಿದ್ದ …

Read More »

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಪ್ರಾಥಮಿಕ ಹಂತದ ಕಸರತ್ತು ಆರಂಭ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಪ್ರಾಥಮಿಕ ಹಂತದ ಕಸರತ್ತು ಆರಂಭಿಸಿದೆ. ಕ್ಷೇತ್ರವಾರು ಜಿಲ್ಲಾ ಮಟ್ಟದಲ್ಲಿ ಹೆಸರುಗಳನ್ನು ಸೂಚಿಸಲು ಸೋಮವಾರ ರಾತ್ರಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಬೇಕಾದ ಮಾನದಂಡ ಏನಿರಬೇಕು ಎಂದು ಸೂಚಿಸಲಾಗಿದೆ. ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಮತ್ತು ಪದಾಧಿಕಾರಿ ಹಾಗೂ ಕೇಂದ್ರ ನಾಯಕರು ಈ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಿದರು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪ್ರಮುಖರ ಸಮಿತಿ ಸಭೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಿ 2-3 …

Read More »

ಜವಳಿ ಪಾರ್ಕ್ ನಿಂದ 2 ಲಕ್ಷ ಉದ್ಯೋಗ: C.M ಬೊಮ್ಮಾಯಿ

ಕಲಬುರಗಿ : ಪಿಎಂ ಮಿತ್ರ ಜವಳಿ ಪಾರ್ಕ್ 371 ಜೆ ಆದ ನಂತರ ಆಗಿರುವ ಮೆಗಾ ಯೋಜನೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿ 10 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಹೂಡಿಕೆಯಾಗಲಿದ್ದು. ಒಂದು ಲಕ್ಷ ನೇರ ಹಾಗೂ ಒಂದು ಲಕ್ಷ ಪರೋಕ್ಷ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಜವಳಿ ಪಾರ್ಕ್ ಈ ಭಾಗದ ಆರ್ಥಿಕ ಪ್ರಗತಿಗೆ ದೊಡ್ಡ ಶಕ್ತಿಯನ್ನು ತುಂಬಿದೆ. …

Read More »

ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆಸಿದ್ದರಾಮಯ್ಯ ಹೊಸ ಬಾಂಬ್

ಮೈಸೂರು: ವಿಧಾನಸಭಾ ಚುನಾವಣೆ ಹೊತ್ತಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದ್ದಾರೆ. ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವರುಣಾದಲ್ಲಿ ನನ್ನನ್ನು ಸೋಲಿಸುವ ನಿಟ್ಟಿನಲ್ಲಿ ಹಾಗು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವುದು ನಿಜ ಎಂದು ಹೇಳಿದ್ದಾರೆ. 2018ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಈ ಎರಡೂ ಪಕ್ಷಗಳು ಒಳ ಒಪ್ಪಂದ …

Read More »