ಬೆಂಗಳೂರು, ಏಪ್ರಿಲ್ 18; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ. ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಚುನಾವಣಾ ಕಾವು ಏರುತ್ತಿದ್ದಂತೆಯೇ ಹೊರ ಬಂದಿರುವ ಸಮೀಕ್ಷೆಯೊಂದು ಆಡಳಿತ ಪಕ್ಷ ಬಿಜೆಪಿಗೆ ದೊಡ್ಡ ಆಘಾತ ತಂದಿದೆ. ಕಾಂಗ್ರೆಸ್ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. LokPoll ಮಾರ್ಚ್ ತಿಂಗಳಿನಲ್ಲಿ ರಾಜ್ಯದಲ್ಲಿ ನಡೆಸಿದ …
Read More »ಬಿಜೆಪಿಯ ಕೆಲ ನಾಯಕರಿಂದ ನಾನು ನೋವನುಭವಿಸಿದ್ದೇನೆ ನನಗೆ ಟಿಕೆಟ್ ಕೈತಪ್ಪಲು ಕೆಲ ನಾಯಕರು ಕಾರಣ::ಶೆಟ್ಟರ್
ಹುಬ್ಬಳ್ಳಿ: ಬಿಜೆಪಿಯಲ್ಲಿ ನನಗೆ ಅವಕಾಶ ಸಿಕ್ಕಾಗ ಒಳ್ಲೆಯ ಕೆಲಸ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಬಿಜೆಪಿಯ ಕೆಲ ನಾಯಕರಿಂದ ನಾನು ನೋವನುಭವಿಸಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗುವವರೆಗೆ ಸುಮ್ಮನಿದ್ದೆ. ನನಗೆ ಟಿಕೆಟ್ ಕೈತಪ್ಪಲು ಕೆಲ ನಾಯಕರು ಕಾರಣ. ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಪಕ್ಷದಿಂದ ಹೊರ ಬರುವಂತೆ ಮಾಡಿದರು. ಅವರು ಯಾರು …
Read More »ಅಥಣಿಯಲ್ಲಿ ಯುವಕನ ಬರ್ಬರವಾಗಿ ಹತ್ಯ
ಅಥಣಿ: ಅಥಣಿಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯ ಮಾಡಲಾಗಿದೆ. ಕೊಕಟನೂರು ರಸ್ತೆಯ ಶಾಂತಿನಾಥ ಬಡಾವಣೆಯಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಮಾಡಲಾಗಿದೆ. ನಂದಗಾಂವ್ ನಿವಾಸಿಯಾಗಿದ್ದ ಜ್ಯೋತಿಬಾ ಗಾಯಕವಾಡ (35) ಕೊಲೆಯಾದಾತ. ಅಥಮಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.
Read More »ರಾಜಕೀಯ ವ್ಯವಸಾಯ ಇದ್ದಂತೆ, ಉತ್ತಮ ಬೆಳೆಗೆ ಕಾಯಬೇಕು ಅಷ್ಟೇ: ಡಿ.ಕೆ.ಶಿವಕುಮಾರ್
ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಕನಕಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಕೇರಮ್ಮ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಮುಖಂಡರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ನಂತರ ಬೃಹತ್ ಬೈಕ್ ರ್‍ಯಾಲಿ ಹಾಗೂ ರೋಡ್ಶೋ ನಡೆಸಿದರು. ಈ ವೇಳೆ ಅಪಾರ ಜನಸ್ತೋಮದ ನಡುವೆ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಡಿಕೆಶಿ ರಾಜಕಾರಣ ಅನ್ನೋದು ವ್ಯವಸಾಯ ಇದ್ದಂತೆ ವ್ಯವಸಾಯದಲ್ಲಿ ಹೇಗೆ ಬಿತ್ತನೆ ಹಾಕಿ, …
Read More »ಶೆಟ್ಟರ್ ಬಳಿಕ ಬಿಜೆಪಿ ತೊರೆದ ಮತ್ತೊಬ್ಬ ಧಾರವಾಡದ ನಾಯಕ!
ಧಾರವಾಡ, ಏಪ್ರಿಲ್ 17; ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಧಾರವಾಡ ಜಿಲ್ಲೆಯ ಮತ್ತೊಬ್ಬ ನಾಯಕ ಶೆಟ್ಟರ್ ಹಾದಿ ತುಳಿದಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಧಾರವಾಡಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಎಸ್. ಐ. ಚಿಕ್ಕನಗೌಡ್ರ ಸೋಮವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ …
Read More »ಕೈ ನಾಲ್ಕನೇ ಪಟ್ಟಿಗೆ ಇಂದು ಮುಕ್ತಿ?
ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮುಗಿದ ಬೆನ್ನಲ್ಲೇ ಬಾಕಿ ಇರುವ 15 ಕ್ಷೇತ್ರಗಳಿಗೆ “ಕೈ’ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದ್ದು, ಸೋಮವಾರ ಬಹುತೇಕ ನಾಲ್ಕನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಹಾಲಿ-ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರಗಳು ಸೇರಿ ಹಲವು ಪ್ರತಿಷ್ಠಿತ ಕಣಗಳಲ್ಲಿ ಆ ಪಕ್ಷದ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆಬೀಳಲಿದೆ. ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತಹ ಕ್ಷೇತ್ರಗಳಲ್ಲಿ ಕಾದುನೋಡುವ ತಂತ್ರ ಅನುಸರಿಸುತ್ತಿತ್ತು. ಅಂತಹ …
Read More »ಪಕ್ಷ ಬೇರೆ, ವೈಯಕ್ತಿಕ ಸಂಬಂಧ ಬೇರೆ: ಜಗದೀಶ ಶೆಟ್ಟರ್ ಸಹೋದರ ಪ್ರದೀಪ
ಹುಬ್ಬಳ್ಳಿ: ‘ಪಕ್ಷಕ್ಕೆ ಸಂಬಂಧಿಸಿದ ನಿಲುವು ಬೇರೆ, ವೈಯಕ್ತಿಕ ಸಂಬಂಧ ಬೇರೆ…’ – ಬಿಜೆಪಿಯ ಹಿರಿಯ ನಾಯಕ ಜಗದೀಶ ಶೆಟ್ಟರ್ ಅವರು ಪಕ್ಷ ತೊರೆಯುವುದರ ಕುರಿತು, ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರ ಅಭಿಪ್ರಾಯವಿದು. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಣ್ಣನ ಮನೆಗೆ ನಾನು ದಿನಾ ಹೋಗುತ್ತೇನೆ. ಊಟ ಮಾಡುತ್ತೇನೆ. ವೈಯಕ್ತಿಕ ಸಂಬಂಧ ಬೇರೆ, ಪಕ್ಷ ಬೇರೆ. ಇಷ್ಟಕ್ಕೂ ಅವರಿನ್ನೂ ಬಿಜೆಪಿಯಲ್ಲೇ ಇದ್ದಾರೆ. …
Read More »ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಹೊಂದಿದ ದೇಗುಲಗಳಲ್ಲಿ ನಂ. 1 ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 123 ಕೋಟಿ ರೂ. ಸಂಗ್ರಹ
ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮತ್ತು ರಾಜ್ಯದಲ್ಲೇ ಅತಿ ಹೆಚ್ಚಿನ ಆದಾಯ ಹೊಂದಿದ ಮುಜರಾಯಿ ದೇಗುಲಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 2022 -23ನೇ ಸಾಲಿನಲ್ಲಿ 123.64 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಕಾರಣದಿಂದ ಕಡಿಮೆ ಆದಾಯ ಬಂದಿತ್ತು. 2019-20 ನೇ ಸಾಲಿನಲ್ಲಿ 98.92 ಕೋಟಿ ರೂ., 2020 -2021 ರಲ್ಲಿ 68.94 ಕೋಟಿ ರೂ., 2021 -22 …
Read More »ಸೇತುವೆಗೆ ಡಿಕ್ಕಿ ಹೊಡೆದ ಬೊಲೆರೊ ವಾಹನ; ಒಂದೇ ಕುಟುಂಬದ ಮೂವರ ಸಾವು
ಬಾಗಲಕೋಟೆ: ಬೊಲೆರೊ ವಾಹನವೊಂದು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ೊಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ತಾವರಗೇರಿಯ ಶಾಮಿದ್ ಸಾಬ್ ಕಿಡ್ದೂರನಾಯಕ, ಮೌಲಾಸಾಬ್ ಕಿಡ್ದೂರನಾಯಕ ಹಾಗೂ ಇಮಾಂಬಿ ಕಿಡ್ದೂರನಾಯಕ ಮೃತಪಟ್ಟವರು. ಈ ಪೈಕಿ ಒಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಉಸಿರು ಚೆಲ್ಲಿದ್ದಾರೆ. ಇವರೆಲ್ಲ ಬೊಲೆರೊ ವಾಹನದಲ್ಲಿ ವಿಜಯಪುರದಿಂದ ತಾವರಗೇರಿಯ ಪ್ರಾರ್ಥನಾ ಮಂದಿರವೊಂದಕ್ಕೆ ಭೇಟಿ ನೀಡಿ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಕುರಿತು ಇಳಕಲ್ …
Read More »ಪಕ್ಷ ಬದಲಾವಣೆ ಚರ್ಚೆ: ಎಸ್.ಆರ್. ಪಾಟೀಲಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್
ಬಾಗಲಕೋಟೆ: ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಎಸ್.ಆರ್ ಪಾಟೀಲ ಅವರನ್ನು ಬೆಂಗಳೂರಿಗೆ ಬರುವಂತೆ ಹೈಕಮಾಂಡ್ ಸೂಚಿಸಿದೆ. ಕಾಂಗ್ರೆಸ್ ಮುಖಂಡ ವೇಣುಗೋಪಾಲ್ ಅವರು ಭೇಟಿಯಾಗುವಂತೆ ಕರೆ ಮಾಡಿ ಆಹ್ವಾನಿಸಿದ್ದಾರೆ. ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದರು. ಪಕ್ಷ ಬದಲಾವಣೆ ಮಾಡಬಹುದು ಎಂಬ ಚರ್ಚೆಯ ಹಿನ್ನಲೆಯಲ್ಲಿ ಮಾತುಕತೆಗೆ ಕರೆಯಲಾಗಿದೆ.
Read More »
Laxmi News 24×7