Breaking News

ರಾಜಕೀಯ

ಸುಲಿಬೆಲೆಗೆ ಸಚಿವ ಎಂ ಬಿ ಪಾಟೀಲ್ ವಾರ್ನಿಂಗ್

ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಆಡಳಿತಕ್ಕೆ ಬಂದಿದೆ ಎಂಬ ಚಕ್ರವರ್ತಿ ಸುಲಿಬೆಲೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಲಿಬೆಲೆಗೆ ಸಚಿವ ಎಂ ಬಿ ಪಾಟೀಲ್ ವಾರ್ನಿಂಗ್ ನೀಡಿದ್ದಾರೆ‌. ಕಾಂಗ್ರೆಸ್ ಸರ್ಕಾರವನ್ನ ಹಿಟ್ಲರ್ ಸರ್ಕಾರಕ್ಕೆ ಹೋಲಿಸಿದ ಸುಲಿಬೆಲೆಗೆ ಕ್ಲಾಸ್ ತೆಗೆದುಕೊಂಡ ಎಂ ಬಿ ಪಾಟೀಲ್ ಹಿಂದೆ ನಾಲ್ಕು ವರ್ಷ ಸುಲಿಬೆಲೆ ಏನ್ ಮಾಡಿದ್ದಾರೆ ಕೇಳಿ, ನಾಲ್ಕು ವರ್ಷ ಸುಲಿಬೆಲೆ ಅನಾಹುತ ಮಾಡಿದ್ದಾರೆ‌. ಸುಲಿಬೆಲೆ ಮಾಡಿದ ಅನಾಹುತಗಳನ್ನ ನಾವು ಸರಿಪಡೆಸುತ್ತಿದ್ದೇವೆ ಎಂದರು. ಪಠ್ಯಪುಸ್ತಕ, ಹಿಜಾಬ್, ಹಲಾಲ್, …

Read More »

ಸಮಾಜಕ್ಕೆ ಕೈಗನ್ನಡಿಯಾಗಿರುವ ದಲಿತರು ಬಾಬಾಸಾಹೇಬರ ಅಭಿಯಾನವನ್ನು ಮುಂದುವರಿಸಬೇಕು:ರಾಜ ರತ್ನ ಅಂಬೇಡ್ಕರ್

ಶತಮಾನಗಳಿಂದ ಶೋಷಣೆಯಿಂದ ನರಳುತ್ತಿರುವ ದಲಿತ ಮತ್ತು ಹಿಂದುಳಿದ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಿರಂತರ ಹೋರಾಟ ಮಾಡಿದರು. ಇಂದು ಸಮಾಜಕ್ಕೆ ಕೈಗನ್ನಡಿಯಾಗಿರುವ ದಲಿತರು ಈ ಅಭಿಯಾನವನ್ನು ಮುಂದುವರಿಸಬೇಕು ಎಂದು ಬಾಬಾಸಾಹೇಬರ ಮರಿಮೊಮ್ಮಗ ರಾಜ ರತ್ನ ಅಂಬೇಡ್ಕರ್ ಅವರು ಮನವಿ ಮಾಡಿದರು. ಇಂದು ಬೆಳಗಾವಿಯ ಸದಾಶಿವನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಬೌದ್ಧ ಸಮಾಜದ ವತಿಯಿಂದ “ಆರ್ಥಿಕ ಉನ್ನತಿಯತ್ತ ಒಂದು ಹೆಜ್ಜೆ” ಯುವ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು. ರಾಜರತ್ನ ಅಂಬೇಡ್ಕರ್ …

Read More »

12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಗಮನ ಸೆಳೆದ ಕನ್ನಡದ ಶಕ್ತಿ ಕೇಂದ್ರವಾಗಿತ್ತು

12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಗಮನ ಸೆಳೆದ ಕನ್ನಡದ ಶಕ್ತಿ ಕೇಂದ್ರವಾಗಿತ್ತು. ಹೀಗಾಗಿ ಅಫ್ಘಾನಿಸ್ತಾನದಿಂದ ಮರುಳಶಂಕರ ದೇವರು, ಕಾಶ್ಮೀರದಿಂದ ಮೋಳಿಗೆಯ ಮಾರಯ್ಯ ಮೊದಲಾದವರು ಕನ್ನಡ ನಾಡಿನ ಕಲ್ಯಾಣ ನಗರಕ್ಕೆ ಬಂದರು. ಹೀಗೆ ಬಂದ ಮರುಳಶಂಕರ ದೇವರ ಕುರಿತು ಡಾ.ದಯಾನಂದ ನೂಲಿ ಅವರು ಬೃಹತ್ ಕಾದಂಬರಿ ಬರೆದಿರುವುದು ಗಮನಾರ್ಹ ಎಂದು ಡಾ. ಗುರುಪಾದ ಮರಿಗುದ್ದಿ ಅಭಿಪ್ರಾಯ ಪಟ್ಟರು. ಬೆಳಗಾವಿ ನಾಗನೂರು ಮಠದ ಎಸ್.ಜಿ.ಬಿ.ಐ.ಟಿ ಸಭಾಂಗಣದಲ್ಲಿ ದಿನಾಂಕ 4ರಂದು …

Read More »

ಅಪರೂಪದ ಕಾಯಿಲೆಗೆ ತುತ್ತಾಗಿರುವ ಶೌರ್ಯ ಹುಲಿಗೆ ಸೂಕ್ತ ಚಿಕಿತ್ಸೆ

ಬೆಳಗಾವಿ : ಜಿಲ್ಲೆಯ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯದಲ್ಲಿರುವ ಶೌರ್ಯ ಎಂಬ ಹುಲಿಯು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದನ್ನು ವನ್ಯಜೀವಿ ವೈದ್ಯ ಡಾ. ಮದನ್ ಪತ್ತೆ ಹಚ್ಚಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿಗೆ ಸದ್ಯ ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯರು ಹುಲಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ವನ್ಯಜೀವಿ ವೈದ್ಯರಿಗೆ ಸುಲಭವಾಗಿ ಗುರುತಿಸಲಾಗದ cytauxzoon felis ಮತ್ತು mycoplasma ಎಂಬ ಅಪರೂಪದ …

Read More »

ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಣ್ಣ ಲೋಪವನ್ನೂ ಸಹಿಸಲಾಗದು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಮಹತ್ವದ ಇಲಾಖೆ. ಇಲ್ಲಿ ಸಣ್ಣ ಲೋಪವನ್ನೂ ಸಹಿಸಲು ಸಾಧ್ಯವಿಲ್ಲ. ನಮ್ಮ ನಿರೀಕ್ಷೆ ಮತ್ತು ವೇಗಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು. ಸಚಿವರಾದ ನಂತರ ಮೊದಲ ಬಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ರಾಜ್ಯಕ್ಕೆ ಹಾಗೂ ಸರ್ಕಾರಕ್ಕೆ ಉತ್ತಮ ಹೆಸರು ತರುವ ದಿಸೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಜನರು ಬಹಳ ನಿರೀಕ್ಷೆ ಇಟ್ಟು …

Read More »

ಒಡಿಶಾ ರೈಲು ಅಪಘಾತ ಸಂತ್ರಸ್ತರಿಗೆ ನಿಯಮ ಸರಳೀಕರಿಸಿದ LIC

ಮುಂಬೈ: ಒಡಿಶಾದ ಬಾಲಸೋರ್ ರೈಲು ದುರಂತದ ಸಂತ್ರಸ್ತರಿಗೆ ಕ್ಲೈಮ್ ಪಾವತಿ ಪ್ರಕ್ರಿಯೆಗೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶನಿವಾರ ಹಲವು ನಿಯಮಗಳ ಸಡಿಲಿಕೆಗಳನ್ನು ಪ್ರಕಟಿಸಿದೆ. ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ, ಸಂತ್ರಸ್ತರ ಸಂಬಂಧಿಕರಿಗೆ ಕ್ಲೈಮ್ ಪಾವತಿ ಪ್ರಕ್ರಿಯೆಗೆ ಸಡಿಲಿಕೆಗಳನ್ನು ಘೋಷಿಸಿದರು. “ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್‌ಐಸಿ ಸಂತ್ರಸ್ತರಿಗೆ ಬೆಂಬಲ ನೀಡಲು ಬದ್ಧವಾಗಿದೆ ಮತ್ತು ಹಣಕಾಸಿನ ಪರಿಹಾರವನ್ನು ಒದಗಿಸಲು ಕ್ಲೈಮ್ ಪಾವತಿಯನ್ನು …

Read More »

ಹಳೆಯ ದ್ವೇಷಕ್ಕೆ 200 ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು!

ದಾವಣಗೆರೆ: ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಹಳೆಯ ದ್ವೇಷಕ್ಕೆ ತೋಟದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ನಾಶವಾಗಿವೆ. ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಳೆಯ ದ್ವೇಷವನ್ನೇ ಗುರಿಯಾಗಿಸಿಕೊಂಡ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ನಾಶಗೊಂಡ ಅಡಿಕೆ ತೋಟವು ರೈತ ಹಾಲೇಶಪ್ಪ ಎಂಬವರಿಗೆ ಸೇರಿದ್ದಾಗಿದ್ದು, ಸುಮಾರು 200 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಎರಡು ಎಕರೆ ಅಡಿಕೆ ತೋಟ ಮಾಡಿದ್ದ ಹಾಲೇಶಪ್ಪ ಬೆಳೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಮೂರು …

Read More »

ಹಿಂದಿನ ಸರ್ಕಾರದ ಹಗರಣಗಳ ತನಿಖೆ‌ ಮಾಡಿಸುತ್ತೇವೆ: ಎಂ ಬಿ ಪಾಟೀಲ್

ಕೊಪ್ಪಳ: ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಾಡಿರುವ ಪಿಎಸ್‌ಐ ಹಗರಣ, 40 ಪರ್ಸೆಂಟ್​​ ಹಗರಣ ಹಾಗೂ ಕೊರೊನಾ ಹಗರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​ ಹೇಳಿದರು.   ಇಂದು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ, ಇನ್ನು …

Read More »

ಯುವನಿಧಿ ಯೋಜನೆ ಜಾರಿಗೊಳಿಸಿ ಸರ್ಕಾರ ಆದೇಶ : ಷರತ್ತು ಮತ್ತು ನಿಬಂಧನೆಗಳು ಹೀಗಿವೆ..

ಬೆಂಗಳೂರು : ರಾಜ್ಯದ ಪದವೀಧರರು, ಡಿಪ್ಲೋಮಾ ಪಡೆದವರಿಗೆ ನಿರುದ್ಯೋಗ ಭತ್ಯೆ ನೀಡುವ ಕರ್ನಾಟಕ ಯುವ ನಿಧಿ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಯೋಜನೆ ಜಾರಿಗೆ ಅನುಮೋದನೆ ಸಿಕ್ಕಿರುವ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸಿ ಆದೇಶ ಹೊರಡಿಸಿದೆ.‌ ಅದರಂತೆ ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರ ಪ್ರತಿ ತಿಂಗಳು ರೂ.3,000, ಡಿಪ್ಲೋಮಾ ಶಿಕ್ಷಣ ಪಡೆದಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1,500 ರಂತೆ ನಿರುದ್ಯೋಗ ಭತ್ಯೆ …

Read More »

ನೀವೇ ಈ ಚುನಾವಣೆ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ: ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ

ರಾಮನಗರ: ನಾನು ಇಲ್ಲಿಗೆ ಅಭಿನಂದನೆ ಮಾಡಿಸಿಕೊಳ್ಳುವುದಕ್ಕಿಂತ, ನಿಮಗೆ ಅಭಿನಂದನೆ ತಿಳಿಸಲು ಬಂದಿದ್ದೇನೆ. ನೀವು ಶಕ್ತಿ ತುಂಬಿದ್ದಕ್ಕೆ ಉಪಕಾರ ಸ್ಮರಿಸಿ ನಿಮ್ಮ ಸೇವೆಗೆ ಸಿದ್ಧ ಎಂದು ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು. ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದ ಕಬ್ಬಾಳು, ಸಾತನೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ 1,23,000 ಮತಗಳ ಅಂತರದ ದಾಖಲೆಯ ಗೆಲುವನ್ನು ನೀವು ನನಗೆ ಕೊಟ್ಟಿದ್ದೀರಿ. ನನ್ನ ಕಟ್ಟಿಹಾಕಲು …

Read More »