ಬಾಗಲಕೋಟೆ: ತೋಟಗಾರಿಕೆ ವಿವಿಯಲ್ಲಿ ಶನಿವಾರ ನಡೆದ 12ನೇ ಘಟಿಕೋತ್ಸವದಲ್ಲಿ ಕಿರಾಣಿ ವ್ಯಾಪಾರಸ್ಥನ ಮಗಳು ಧರಣಿಗೆ 16 ಚಿನ್ನದ ಪದಕಗಳು ಲಭಿಸಿವೆ. ರಾಜ್ಯದ ರಾಜ್ಯಪಾಲರು ಹಾಗೂ ತೋಟಗಾರಿಕಾ ವಿವಿಯ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು. ಕೋಲಾರ ಜಿಲ್ಲೆಯ ಸುಗಟೂರ ಗ್ರಾಮದ ಧರಣಿ ಶೆಟ್ಟಿ ಅವರು, ಕಿರಾಣಿ ವ್ಯಾಪಾರಸ್ಥ ನಾಗೇಂದ್ರ ಮತ್ತು ಸವಿತಾ ದಂಪತಿಯ ಮೊದಲ ಮಗಳು. ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 10ನೇ ತರಗತಿಯ ವರೆಗೆ, ಸಹ್ಯಾದ್ರಿ ಕಾಲೇಜಿನಲ್ಲಿ …
Read More »ಈಜಲು ಹೋದ ಇಬ್ಬರು ಬಾಲಕರು ಭೀಮಾ ನದಿಯಲ್ಲಿ ಮುಳುಗಿ ಸಾವು
ಕಲಬುರಗಿ: ಈಜಲು ಹೋದ ಬಾಲಕರಿಬ್ಬರು ಭೀಮಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಜೇವರ್ಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಹೊರವಲಯದಲ್ಲಿರುವ ಭೀಮಾ ನದಿಗೆ ಈಜಲು ಬಾಲಕರಿಬ್ಬರು ತೆರಳಿದ್ದರು. ಆದರೆ ಕಾಲು ಜಾರಿ ಓರ್ವ ನೀರು ಪಾಲಾಗುವಾಗ ಇನ್ನೋರ್ವನನ್ನು ರಕ್ಷಣೆಗೆ ಇಳಿದಿದ್ದ. ಆತನೂ ಕೂಡ ಮೃತಪಟ್ಟಿದ್ದಾನೆ. ದೇವಿಂದ್ರ ಹೊಸಮನಿ (17) ಹಾಗೂ ರಾಮು ದೊಡ್ಡಮನಿ(13) ಮೃತ ದುರ್ದೈವಿಗಳು. ನೀರಲ್ಲಿ ಮುಳುಗಿ ಸಾವನ್ನಪ್ಪಿದ ವಿಷಯವನ್ನು ಗ್ರಾಮಸ್ಥರು, ಪೊಲೀಸರಿಗೆ …
Read More »ಬಿಎಸ್ವೈಗೆ ಹೈಕಮಾಂಡ್ ಬುಲಾವ್
ಬೆಂಗಳೂರು: ನಾಳೆ ಬಿಜೆಪಿ ಶಾಸಕಾಂಗ ಸಭೆ ಇಲ್ಲ. ಯಡಿಯೂರಪ್ಪ ನಾಳೆ ಬೆಳಗ್ಗೆ ದೆಹಲಿಗೆ ಹೋಗಲಿದ್ದು, ಅಲ್ಲೇ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ವಿಪಕ್ಷ ನಾಯಕ ಹೆಸರು ನಾಳೆ ದೆಹಲಿಯಲ್ಲೇ ಘೋಷಣೆಯಾಗಲಿದೆ. ಆ ಮೂಲಕ ದೆಹಲಿಯಲ್ಲೇ ರಾಜ್ಯ ವಿಧಾನಸಭೆ ವಿಪಕ್ಷ ನಾಯಕರ ಗೊಂದಲಕ್ಕೆ ತೆರೆ ಬೀಳಲಿದೆ. ಹೈಕಮಾಂಡ್ ಬುಲಾವ್ ಹಿನ್ನಲೆ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಅಲ್ಲೇ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ನಾಳೆಯೇ ವಿಪಕ್ಷ ನಾಯಕನ ಹೆಸರು ಘೋಷಣೆಯಾಗಲಿದೆ. ವಿಪ್ ಆಯ್ಕೆಯೂ ಕೂಡ ನಾಳೆ ಆಗಲಿದೆ. …
Read More »ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಮೂರು ಈಡೇರಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ನಾವು ನೀಡಿದ್ದ ಎಲ್ಲಾ ಗ್ಯಾರಂಟಿಗಳನ್ನೂ ಆರಂಭಿಸುತ್ತಿದ್ದೇವೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ನಮ್ಮ ಯೋಜನೆ ಜಾರಿಯಾಗಲ್ಲ ಎಂಬ ಸಂಭ್ರಮದಲ್ಲಿದ್ದವು. ಅವರಿಗೆ ನಿರಾಸೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಂದಿನಿಂದ ಆರಂಭವಾಗಲಿದೆ. ಗೃಹಜ್ಯೋತಿ ಯೋಜನೆಯಡಿ ಈ ತಿಂಗಳಿನಿಂದ ನಮ್ಮ ಸರ್ಕಾರ 200 ಯೂನಿಟ್ವರೆಗೆ ವಿದ್ಯುತ್ ಉಚಿತವಾಗಿ …
Read More »ಬಿಪಿಎಲ್ ಕಾರ್ಡುದಾರರಿಗೆ ಈ ತಿಂಗಳು ಹಣ ಸಿಗೋದಿಲ್ಲ: ಸಚಿವ ಜಾರಕಿಹೊಳಿ
ಚಿಕ್ಕೋಡಿ (ಬೆಳಗಾವಿ): ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಪ್ರತಿ ಯೂನಿಟ್ಗೆ 170 ರೂಪಾಯಿ ಸರ್ಕಾರ ವರ್ಗಾವಣೆ ಮಾಡುತ್ತದೆ ಎಂದು ಘೋಷಣೆ ಮಾಡಲಾಗಿದೆ. ಆದರೆ, ಈ ತಿಂಗಳು ಯಾರಿಗೂ ಹಣ ಸಿಗೋದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ …
Read More »ಬಜೆಟ್ ಅಧಿವೇಶನ ಜುಲೈ 3 ರಿಂದ 14ರ ವರೆಗೆ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ
ಬೆಂಗಳೂರು: ಬಜೆಟ್ ಅಧಿವೇಶನ ನಡೆಯುವ ಹಿನ್ನೆೆಲೆಯಲ್ಲಿ ಜುಲೈ 3 ರಿಂದ 14ರ ವರೆಗೆ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಜು.3 ರಿಂದ 14ರ ವರೆಗೆ ವಿಧಾನಸೌಧದ ಸುತ್ತಲೂ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅನುಮತಿ ಪಡೆದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ನಿಷೇಧಾಜ್ಞೆ ಜಾರಿಯಿರುವ ಸ್ಥಳದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದು, ಮೆರವಣಿಗೆ …
Read More »ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ,ಉಪ್ಪಿಟು ಸೇವಿಸಿ 70 ಮಕ್ಕಳು ಅಸ್ವಸ್ಥರಾದ
ರಾಯಚೂರು: ಜಿಲ್ಲೆಯ ಅಪ್ಪನದೊಡ್ಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಉಪ್ಪಿಟು ಸೇವಿಸಿ 70 ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ. ಮಕ್ಕಳಿಗೆ ನೀಡಲು ತಯಾರಾದ ಬಿಸಿಯೂಟದ ಉಪ್ಪಿಟ್ಟಿಗೆ ಹಲ್ಲಿಯೊಂದು ಬಿದ್ದಿದ್ದು, ಮಕ್ಕಳು ಈ ಉಪ್ಪಿಟ್ಟನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ. ಈ ಘಟನೆಗೆ ಅಡುಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಇನ್ನು ಘಟನೆ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿದ್ದಾರೆ. ಅಸ್ವಸ್ಥಗೊಂಡ ಮಕ್ಕಳಿಗೆ ಶಾಲೆ ಬಳಿಯೇ ಆರೋಗ್ಯ ತಪಾಸಣೆ ಮಾಡಿಸಿ 30 ಮಕ್ಕಳನ್ನು ಯಪಲದಿನ್ನಿ …
Read More »ವರ್ಲ್ಡ್ ಡ್ವಾರ್ಫ್ ಗೇಮ್ಸ್ 2023 ಗೆ ಗೋಕಾಕದ ಮಂಜುಳಾ ಗೊರಗುದ್ದಿ ಆಯ್ಕೆ; ಯುವ ನಾಯಕ ರಾಹುಲ್ ಜಾರಕಿಹೊಳಿ ಪ್ರೋತ್ಸಾಹ ಧನ ವಿತರಣೆ!
ವರ್ಲ್ಡ್ ಡ್ವಾರ್ಫ್ ಗೇಮ್ಸ್ 2023 ಗೆ ಗೋಕಾಕದ ಮಂಜುಳಾ ಗೊರಗುದ್ದಿ ಆಯ್ಕೆ; ಯುವ ನಾಯಕ ರಾಹುಲ್ ಜಾರಕಿಹೊಳಿ ಪ್ರೋತ್ಸಾಹ ಧನ ವಿತರಣೆ! ಗೋಕಾಕ : ಜರ್ಮನಿ ದೇಶದ ಜರ್ಮನ್ ಸ್ಪೋರ್ಟ್ ಕಲೋನ್ ವತಿಯಿಂದ ಆಯೋಜಿಸಿರುವ 8 ವರ್ಲ್ಡ್ ಡ್ವಾರ್ಫ್ ಗೇಮ್ಸ್ 2023 ಗೆ ಮಂಜುಳಾ ಗೊರಗುದ್ದಿ ಆಯ್ಕೆಯಾಗಿದ್ದು ಅವರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ನೀಡಿದ್ದಾರೆ. ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಯುವ ನಾಯಕ ರಾಹುಲ್ …
Read More »ಗೃಹಜ್ಯೋತಿ ಯೋಜನೆ ಆರಂಭ ಘೋಷಿಸಿದ ಸಿಎಂ: ಮಹಾರಾಷ್ಟ್ರ ದುರಂತಕ್ಕೆ ತೀವ್ರ ಆತಂಕ
ಬೆಂಗಳೂರು: ಗೃಹಜ್ಯೋತಿ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಈ ತಿಂಗಳು ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಮಾಧ್ಯಮದದವರೊಂದಿಗೆ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಯ ಬಿಲ್ ಆಗಸ್ಟ್ ತಿಂಗಳಲ್ಲಿ ನೀಡಲಾಗುವುದು. ಅನ್ನಭಾಗ್ಯದ ಹಣವನ್ನು ಈ ತಿಂಗಳು 10 ರ ನಂತರ ಪ್ರಾರಂಭ ಮಾಡುತ್ತೇವೆ. ಜುಲೈ ತಿಂಗಳಲ್ಲಿ ಅಕ್ಕಿ ಬದಲಿಗೆ ದುಡ್ಡನ್ನು ಒಂದನೇ ತಾರೀಖು ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು ಎಂದರು. ಬೆಂಗಳೂರಿನಲ್ಲಿ ವಿರೋಧ …
Read More »ಬಿಎಸ್ವೈ ಭೇಟಿಯಾದ ರೇಣುಕಾಚಾರ್ಯ; ಟೀಕಾಪ್ರಹಾರ ಮುಂದುವರಿಸಿದ ಮಾಜಿ ಶಾಸಕ
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಬಳಿಕವೂ ಬಿಜೆಪಿ ನಾಯಕರ ವಿರುದ್ದ ತಮ್ಮ ಟೀಕಾಪ್ರಹಾರ ಮುಂದುರಿಸಿರುವ ಎಂ.ಪಿ. ರೇಣುಕಾಚಾರ್ಯ, ಯಡಿಯೂರಪ್ಪರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಅಧಿಕಾರದಿಂದ ಇಳಿಸಿದರು ಎಂದು ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾತನಾಡಿದ ಅವರು, ಬಿಎಸ್ ವೈ ಪಾದಯಾತ್ರೆ ಪ್ರತಿಫಲವಾಗಿ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ. ಅವರು ಬಿಜೆಪಿಯ ಅಗ್ರಮಾನ್ಯ ನಾಯಕ. ಅಂತಹವರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಇಳಿಸಿದ್ರು. ಕಾಂಗ್ರೆಸ್ – …
Read More »
Laxmi News 24×7