Breaking News

ರಾಜಕೀಯ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ​ ಅನರ್ಹತೆ ಪ್ರಶ್ನಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ

ಬೆಳಗಾವಿ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ​ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ವಿಚಾರದ ಹಿನ್ನೆಲೆ ಮೌನ ಪ್ರತಿಭಟನೆಗೆ ಅಖಿಲ ಭಾರತೀಯ ಕಾಂಗ್ರೆಸ್ ಕರೆ ನೀಡಿತ್ತು. ಇಂದು ಬುಧವಾರ ಬೆಳಗಾವಿಯ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಜಿಲ್ಲೆಯ ಕೈ ಕಾರ್ಯಕರ್ತರು ಧರಣಿ ನಡೆಸಿದರು. ಈ ವೇಳೆ ಎಂಎಲ್​ಸಿ ಬಿ.ಕೆ. ಹರಿಪ್ರಸಾದ್ ಸಾಥ್ ನೀಡಿದರು. ರಾಹುಲ್ ಗಾಂಧಿಯವರ ಸತ್ಯದ ನಡಿಗೆಯಲ್ಲಿ ನಮ್ಮ ಹೆಜ್ಜೆ, ಸರ್ವಾಧಿಕಾರಿ ಧೋರಣೆಯ ಮೋದಿಯವರಿಗೆ ಧಿಕ್ಕಾರ, ನಮ್ಮ ಹೆಜ್ಜೆ ಜನತಾ ನ್ಯಾಯಾಲಯದತ್ತ …

Read More »

ಸಂಬಳ ಬೇಕು, ಪಾಠ ಮಾತ್ರ ಮಾಡಲ್ಲ’

ಶಿಕ್ಷಕರು ಮಕ್ಕಳಿಗೆ ದೇವರ ಸಮಾನ. ತಾಯಿ ನಂತರ ಮಕ್ಕಳಿಗೆ ಶಿಕ್ಷಕರೇ ಎಲ್ಲವೂ ಎಂದರೆ ತಪ್ಪಾಗಲಾರದು. ಇಂಥಾ ಗುರುಗಳು ಯಾವಾಗಲೂ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಬೇಕು. ಅದರಲ್ಲೂ ಮಕ್ಕಳಿಗಾಗಿಯೇ ಶಾಲೆ ಇರುವುದು. ಮಕ್ಕಳಿಗೆ ಪಾಠ ಮಾಡಲು ಎಂದೇ ಶಿಕ್ಷಕರ ನೇಮಕ ಮಾಡಿ ಸಂಬಳ ನೀಡುವುದು. ಇಲ್ಲೋರ್ವ ಕಿಡಿಗೇಡಿ ಶಿಕ್ಷಕನೋರ್ವ ಸಂಬಳ ತೆಗೆದುಕೊಂಡು ಸರಿಯಾಗಿ ಪಾಠ ಮಾಡದ ಘಟನೆ ಸಂಭವಿಸಿದೆ. ಅಲ್ಲದೇ ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ತನ್ನ ಬದಲಿಗೆ …

Read More »

ಜೈನಮುನಿಹತ್ಯೆ ಮಾಡಿದ ಆರೋಪಿಗಳಿಗೆ ವರ್ಷದೊಳಗೆ ಮರಣ ದಂಡನೆ ವಿಧಿಸಬೇಕು:ಅಬ್ದುಲ್ ಅಜೀಮ್

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ಆಗಬೇಕು. ಹತ್ಯೆ ಮಾಡಿದವರ ಜತೆಗೆ ಹತ್ಯೆಗೆ ಪ್ರಚೋದನೆ, ಸಾಧನ, ಸಲಕರಣೆ ಒದಗಿಸಿದವರನ್ನೂ ಶಿಕ್ಷೆಗೆ ಒಳಪಡಿಸಬೇಕು. ಅಪರಾಧಿಗಳಿಗೆ ಅತ್ಯಂತ ಕಠಿಣ ಮರಣದಂಡನೆ ಶಿಕ್ಷೆ ವಿಧಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ತಿಳಿಸಿದ್ದಾರೆ. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ …

Read More »

ಬೆಂಗಳೂರಿನಲ್ಲಿ ಸಿಇಒ, ಎಂಡಿ ಜೋಡಿ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಬೆಂಗಳೂರು : ಖಾಸಗಿ ಕಂಪನಿಗೆ ನುಗ್ಗಿ ಎಂ.ಡಿ ಹಾಗೂ ಸಿಇಒ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ‌ ಕೊಲೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಡರಾತ್ರಿ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡ ಆರೋಪಿಗಳಾದ ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಶಿವು ಎಂಬವರನ್ನು ಕುಣಿಗಲ್ ಸಮೀಪ ಬಂಧಿಸಿದೆ. ಪ್ರಕರಣದ ವಿವರ: ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಫೆಲಿಕ್ಸ್​ನನ್ನು ಸದಾ ನಿಂದಿಸುತ್ತಿದ್ದ ಫಣೀಂದ್ರ ಇತ್ತೀಚೆಗೆ ಆತನನ್ನು ಕೆಲಸದಿಂದಲೂ ತೆಗೆದು ಹಾಕಿದ್ದರು. ಅದೇ ದ್ವೇಷಕ್ಕೆ ಫೆಲಿಕ್ಸ್, …

Read More »

ರಾಜ್ಯ ಸರ್ಕಾರದ ಹಣಕಾಸು ವ್ಯವಹಾರಗಳಲ್ಲಿ ಲೋಪದೋಷ? (ಸಿಎಜಿ) ವರದಿ

ಬೆಂಗಳೂರು: 2021-22ರ ಅಂತ್ಯಕ್ಕೆ 37.37 ಕೋಟಿ ರೂಪಾಯಿ ಮೊತ್ತದ ಹಣ ದುರುಪಯೋಗ, ನಷ್ಟ ಸಂಭವಿಸಿದ್ದು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ. ಮಂಗಳವಾರ ವಿಧಾನಮಂಡಲದ ಉಭಯಸದನದಲ್ಲಿ ಮಾರ್ಚ್ 2022ಕ್ಕೆ ಕೊನೆಗೊಂಡ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಯಿತು. ವರದಿಯಲ್ಲಿ ಹಣಕಾಸುಗಳ ವ್ಯವಹಾರದ ವಿಶ್ಲೇಷಣಾತ್ಮಕ ವಿಮರ್ಶೆ ಮಾಡಲಾಗಿದ್ದು, ಐದು ಆಧ್ಯಾಯಗಳಲ್ಲಿ ರಚಿಸಲಾಗಿದೆ. ಅವಲೋಕನ, ರಾಜ್ಯದ ಹಣಕಾಸು ವ್ಯವಹಾರಗಳು, ಆಯವ್ಯಯ ನಿರ್ವಹಣೆ, ಲೆಕ್ಕಗಳ ಗುಣಮಟ್ಟ …

Read More »

ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಟಿ.ನರಸೀಪುರ ಪೊಲೀಸರು ಬಂಧಿಸಿದ್ದಾರೆ.

ಮೈಸೂರು: ಟಿ.ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಟಿ.ನರಸೀಪುರ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ಟಿ.ನರಸೀಪುರ ಹೊರವಲಯದಲ್ಲಿ ಯುವ ಬ್ರಿಗೇಡ್​ನ ಸಕ್ರಿಯ ಸದಸ್ಯ ವೇಣುಗೋಪಾಲ್ ನಾಯಕ್ ಎಂಬುವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ಸೋಮವಾರ ಬೆಳಗ್ಗೆ ಪ್ರಮುಖ ಆರೋಪಿಗಳಾದ ಮಣಿಕಂಠ ಹಾಗೂ ಸಂದೇಶ್ …

Read More »

 ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ:C.M.

ಬೆಂಗಳೂರು: ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ. ನಮ್ಮ ರಾಜ್ಯದ ಪೊಲೀಸರ ಕೈಯಿಂದಲೇ ಗಂಭೀರವಾಗಿ ತನಿಖೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.‌ ಶೂನ್ಯ ವೇಳೆಯಲ್ಲಿ ಜೈನ ಮುನಿ ಕೊಲೆ ಹಾಗೂ ಟಿ ನರಸೀಪುರ ಯುವ ಬ್ರಿಗೇಡ್ ಕಾರ್ಯಕರ್ತ ಕೊಲೆ ಪ್ರಕರಣ ಸಂಬಂಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಜೈನ ಮುನಿ ಕೊಲೆ ಅಮಾನುಷವಾದದ್ದು. ಯಾರೇ ಕೊಲೆ ಮಾಡಿದರೂ ಶಿಕ್ಷೆ ಆಗಬೇಕು. …

Read More »

ಗೋ ಹತ್ಯೆ ನಿಷೇಧ ಕಾಯ್ದೆ ತರಬೇಕಾ ಬೇಡವಾ ಎಂಬ ವಿಷಯವನ್ನ ರೈತರಿಗೆ ಬಿಟ್ಟುಬಿಡಿ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

ಹಾವೇರಿ: ಗೋ ಹತ್ಯೆ ನಿಷೇಧ ಕಾಯ್ದೆ ತರಬೇಕಾ ಬೇಡವಾ ಎಂಬ ವಿಷಯವನ್ನ ರೈತರಿಗೆ ಬಿಟ್ಟುಬಿಡಿ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರೈತರನ್ನ ಮನೆಹಾಳರನ್ನಾಗಿ ಮಾಡುವ ಕಾನೂನು ಇದ್ದರೇನು? ಬಿಟ್ಟರೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ಗೋ ಹತ್ಯೆ ನಿಷೇಧ ಕಾನೂನು ಮಾಡುವ ಸರ್ಕಾರಗಳಿಗೆ, ವ್ಯಕ್ತಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು. ಯಾವ ಹಸು ಗೋಶಾಲೆಗೆ ಹೋಗಬೇಕು, ಯಾವ ಹಸು ಕಸಾಯಿಖಾನೆಗೆ ಹೋಗಬೇಕು ಎನ್ನುವ …

Read More »

ಅಮೂಲ್ ಜೊತೆ ನಂದಿನಿ ವಿಲೀನ ಇಲ್ಲ:ಸಚಿವ ವೆಂಕಟೇಶ್

ಬೆಂಗಳೂರು: ಯಾವುದೇ ಕಾರಣಕ್ಕೂ ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ‌. ಆದರೆ, ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಉಳಿಸುವ ಕಾರಣಕ್ಕೆ ಅನಿವಾರ್ಯವಾಗಿ ಹಾಲಿನ ದರ ಪರಿಷ್ಕರಣೆ ಮಾಡಲೇಬೇಕಿದೆ, ಸಿಎಂ ಜೊತೆ ಚರ್ಚಿಸಿ ಎಷ್ಟು ಹೆಚ್ಚಳ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.   ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಅಮೂಲ್ ನಂದಿನಿ ವಿಲೀನ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ …

Read More »

ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆ, ಗೂಂಡಾಗಿರಿ, ದರೋಡೆ :ನಳಿನ್​ ಕುಮಾರ್ ಕಟೀಲ್

  ಬೆಳಗಾವಿ: ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಿರಂತರ ಹತ್ಯೆಗಳು, ಗೂಂಡಾಗಿರಿ ರಾಜಕಾರಣ, ದರೋಡೆ ನಡೆಯುತ್ತಿತ್ತು. ಹಿಂದಿನ ಅವರ ಸರ್ಕಾರದ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೊ ಆಗ ಇಂತಹ ಪ್ರಕರಣ ವೈಭವಿಕರೀಸುತ್ತವೆ ಮತ್ತು ರಾರಾಜಿಸುತ್ತವೆ.‌ ಇಂತಹ ಕೊಲೆಗಡುಕರು, ದಂಗೆಕೋರರನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, …

Read More »