Breaking News

ರಾಜಕೀಯ

ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ: ಸಣ್ಣಪುಟ್ಟ ಗಾಯಗಳಿಂದ ಇಬ್ಬರು ಪಾರು.. ಎಂಪಿ ರೇಣುಕಾಚಾರ್ಯರ ಭೇಟಿ

ದಾವಣಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿದ್ದು, ಸಣ್ಣಪುಟ್ಟ ಗಾಯಗಳಿಂದ ಇಬ್ಬರು ಪಾರಾಗಿರುವ ಘಟನೆ ಜಿಲ್ಲೆಯ ನ್ಯಾಮತಿಯಲ್ಲಿ ಕಳೆದ ದಿನ ರಾತ್ರಿ ನಡೆದಿದೆ. ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಚಿರತೆ ದಾಳಿ ಮಿತಿಮೀರಿದೆ. ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೂ ಎರಗುತ್ತಿವೆ. ಚಿರತೆಯ ದಾಳಿಯಿಂದ ನ್ಯಾಮತಿ ತಾಲೂಕಿನ ಜನರು ಜೀವ ಅಂಗೈಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾಮತಿ ತಾಲೂಕಿನ ಹಳೇಮಳಲಿ ಗ್ರಾಮದ ಮಂಜುನಾಥ್, …

Read More »

ಶಿವರಾಮ್ ಹೆಬ್ಬಾರ್ ನಮ್ಮವರು, ಕಾಂಗ್ರೆಸ್ ಬಾಗಿಲು ಅವರಿಗೆ ಸದಾ ತೆರೆದಿಟ್ಟಿದ್ದೇವೆ: ಸಚಿವ ಮಂಕಾಳು ವೈದ್ಯ

ಶಿರಸಿ (ಉತ್ತರ ಕನ್ನಡ): ಶಾಸಕ ಶಿವರಾಮ್​ ಹೆಬ್ಬಾರ್ ನಮ್ಮವರು, ನಮ್ಮ ಜೊತೆ ಇದ್ದವರು. ಕಾಂಗ್ರೆಸ್​ಗೆ ಬರಲು ಬಾಗಿಲು ತೆರೆದಿಟ್ಟಿದ್ದೇವೆ. ಯಾವಾಗ ಬೇಕಾದರೂ ಅವರು ಕಾಂಗ್ರೆಸ್​ ಪಕ್ಷಕ್ಕೆ ಬರಲಿ ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು. ಶಿರಸಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಮ್ ಹೆಬ್ಬಾರ್ ನಮ್ಮ ಜೊತೆಯಲ್ಲೇ ಇದ್ದಾರೆ. ನಾವೆಲ್ಲಾ ಫ್ರೆಂಡ್ಸ್, ಅವರು​​​​ ಕಾಂಗ್ರೆಸ್​​ಗೆ ಬರುವುದು ಮಾತ್ರ ಬಾಕಿ ಇದೆ. ಯಾವಾಗ …

Read More »

ಕೇಂದ್ರ ಸರ್ಕಾರದ ಬರ ನಿರ್ವಹಣೆ ಮಾನದಂಡದಿಂದ ಬರಗಾಲ ಘೋಷಣೆ ವಿಳಂಬವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಿಜೆಪಿ ಆರೋಪಕ್ಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ …

Read More »

ತಮಿಳುನಾಡಿನ ಪ್ರಭಾವ ರಾಜ್ಯ ಸರ್ಕಾರದ ಮೇಲೆ ವಿಪರೀತ ಇದ್ದ ಹಾಗೆ ಇದೆ: ಬೊಮ್ಮಾಯಿ

ಬೆಂಗಳೂರು: ತಮಿಳುನಾಡಿನ ಪ್ರಭಾವ ರಾಜ್ಯ ಸರ್ಕಾರದ ಮೇಲೆ ವಿಪರೀತ ಇದ್ದ ಹಾಗೆ ಇದೆ. ಸುಪ್ರೀಂ ಕೊರ್ಟ್ ಆದೇಶ ಆಗಿಲ್ಲ. ಸಿಡಬ್ಲ್ಯೂಎಂಎ ಸಭೆ ಆಗಿಲ್ಲ. ಆದರೂ ಕಾಂಗ್ರೆಸ್ ಸರ್ಕಾರ ನೀರು ಬಿಡುವ ನಿರ್ಧಾರ ಮಾಡಿ ರಾಜ್ಯದ ಜನತೆಗೆ ದೋಖಾ ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರ ವಿರುದ್ಧ ನಮ್ಮ ಪಕ್ಷ ತೀವ್ರ ವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಹೇಳಿದರು. ಮೊದಲು …

Read More »

ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರುವ ಖಾಸಗಿ ಲಾಡ್ಜ್ ವೊಂದರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಯುವತಿಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.   ಕುಡಚಿ ಪಟ್ಟಣದ ಲಾಡ್ಜ್​ದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸಿಇಎನ್ ಇನ್ಸ್‌ಪೆಕ್ಟರ್ ಬಿ ಆರ್ ಗಡ್ಡೇಕರ್ ನೇತೃತ್ವದಲ್ಲಿ ದಾಳಿ ನಡೆಸಿ ಗುಜರಾತ್, ಪಶ್ಚಿಮ ಬಂಗಾಳ ಮೂಲದ ತಲಾ ಇಬ್ಬರು ಯುವತಿಯರನ್ನು …

Read More »

ಬಿಜೆಪಿಯಿಂದ ಟಿಕೆಟ್​ ಕೊಡಿಸುವುದಾಗಿ 25 ಲಕ್ಷ ಹಣ ಪಡೆದು ಮೋಸ ಮಾಡಿರುವ ಆರೋಪದಡಿ ಪ್ರಕರಣವೊಂದು ಅಶೋಕನಗರ ಪೊಲೀಸ್​ ಠಾಣೆಯಲ್ಲಿ ದಾಖಲ

ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚಿಸಿರುವ ಮಾದರಿಯಲ್ಲಿ‌ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.‌ ಕೊಪ್ಪಳದ‌ ಕಾರಾಟಗಿಯ ತಿಮ್ಮಪ್ಪ ರೆಡ್ಡಿ ಎಂಬುವವರು ವಂಚನೆಗೊಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಶಾಲ್ ನಾಗ್, ಗೌರವ್ ಹಾಗೂ ಜೀತು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.   ದೂರಿನಲ್ಲಿ ಇರುವುದೇನು?: ಕನಕಗಿರಿ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಸ್ಫರ್ಧಿಸಲು ತಿಮ್ಮಪ್ಪ ರೆಡ್ಡಿ ಪತ್ನಿ ಗಾಯತ್ರಿ ತಿಮ್ಮರೆಡ್ಡಿ ಆಕ್ಷಾಂಕಿಯಾಗಿದ್ದರು. ಟಿಕೆಟ್ …

Read More »

ರಾಜ್ಯದ ಎಲ್ಲ ವಾಹನಗಳು ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್​ ಪ್ಲೇಟ್‌ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ

ಸುಳ್ಯ (ದಕ್ಷಿಣಕನ್ನಡ) : ಕರ್ನಾಟಕ ಸಾರಿಗೆ ಇಲಾಖೆಯು ಸಾರ್ವಜನಿಕವಾಗಿ ಸೂಚನೆಯೊಂದನ್ನು ಹೊರಡಿಸಿದ್ದು, ಕೂಡಲೇ ಸಾರ್ವಜನಿಕರು ಪಾಲಿಸುವಂತೆ ಮನವಿ ಮಾಡಿದೆ. ಎಲ್ಲ ವಾಹನಗಳ ಮಾಲೀಕರು, ಕರ್ನಾಟಕ ಸರ್ಕಾರ ದಿನಾಂಕ 17-08-2023 ರಂದು ರಾಜ್ಯ ರಸ್ತೆ ಸುರಕ್ಷತಾ ಮತ್ತು ಸಾರಿಗೆ ಆಯುಕ್ತರ ಮೂಲಕ ಹೊರಡಿಸಿದ ಅಧಿಸೂಚನೆಯಂತೇ ಆದೇಶ ಸಂಖ್ಯೆ.TD 193 TDO 2021, ಮತ್ತು ಸುತ್ತೋಲೆ ಸಂಖ್ಯೆ.CT/RGN-1/PR-434/ 2022-23, ಪ್ರಕಾರ ರಾಜ್ಯದ ಎಲ್ಲ ವಾಹನಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, …

Read More »

ಆರು ದಶಕಗಳಿಂದ ಗಣೇಶ ಮೂರ್ತಿ ತಯಾರಿಕೆಯೇ ಈ ಕುಟುಂಬದ ಕುಲ ಕಸಬು: ಈ ಬಾರಿ 3 ಲಕ್ಷಕ್ಕೂ‌ ಅಧಿಕ ಮೂರ್ತಿಗಳು ರೆಡಿ

ಬೆಳಗಾವಿ: ಆ ಕುಂಬಾರ ಕುಟುಂಬ ತಮ್ಮ ಅಜ್ಜನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆರು ದಶಕಗಳಿಂದ ಗಣೇಶ ಮೂರ್ತಿ ತಯಾರಿಸುವುದನ್ನೇ ಕುಲ‌ ಕಸುಬನ್ನಾಗಿ ಮಾಡಿಕೊಂಡಿದೆ. ವರ್ಷಪೂರ್ತಿ ಅದೇ ಕಾಯಕದಲ್ಲಿ ತೊಡಗುವ ಇವರು, ಈ ಬಾರಿ ಬರೊಬ್ಬರಿ 3 ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ತಯಾರಿಸಿ ದಾಖಲೆ ಮೆರೆದಿದ್ದಾರೆ. ಅದು ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳೇ ಎನ್ನುವುದು ಮತ್ತೊಂದು ವಿಶೇಷತೆ. ರಾಶಿ ರಾಶಿ ಸುಂದರ ಗಣಪತಿಗಳು, ಬೃಹದಾಕಾರದ ಗೋದಾಮುಗಳು, ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು. ಹೌದು …

Read More »

ಹಿನ್ನೋಟ: ಇಂದಿಗೆ ಸರಿಯಾಗಿ 64 ವರ್ಷದ ಹಿಂದೆ ತನ್ನ ಉದಯಿಸಿತ್ತು ದೂರದರ್ಶನ​

ನವದೆಹಲಿ: ದೂರದರ್ಶನ ವಾಹಿನಿಯಲ್ಲಿ 1987-88ರ ಸಂದರ್ಭದಲ್ಲಿ ಮೂಡಿಬಂದ ರಮಾನಂದ್ ಸಾಗರ್​ ಅವರ ನಿರ್ದೇಶನದ ರಾಮಾಯಣ ಮತ್ತು 1988-90ರಲ್ಲಿ ಬಿ.ಆರ್.ಚೋಪ್ರಾ ನಿರ್ದೇಶನದ ಮಹಾಭಾರತ ಕಥಾ ಪ್ರಸಂಗವನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ?. ಈ ಧಾರವಾಹಿಗಳೊಂದಿಗೆ ದೂರದರ್ಶನ ವಾಹಿನಿ ಕೂಡ ಭಾರತೀಯರೊಂದಿಗೆ ವಿಶೇಷ ಬಂಧ ಹೊಂದಿದೆ. 1987ರಲ್ಲಿ ಆರ್.ಕೆ.ನಾರಾಯಣ್​ ಅವರ ಮಾಲ್ಗುಡಿ ಡೇಸ್​​, 1994ರಲ್ಲಿ ಚಂದ್ರಕಾಂತ್​​, 1997ರಲ್ಲಿ ಶಕ್ತಿ ಮಾನ್​ ಧಾರಾವಾಹಿಗಳು ಅತಿ ಹೆಚ್ಚು ವೀಕ್ಷಣೆ ಪಡೆಯುವುದರೊಂದಿಗೆ ಸರ್ಕಾರಕ್ಕೆ ಹೆಚ್ಚು ಆದಾಯವನ್ನೂ ತಂದುಕೊಟ್ಟಿವೆ. …

Read More »

ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯೋ, ತಮಿಳುನಾಡಿನ ಮುಖ್ಯಮಂತ್ರಿಯೋ: B.S.Y.

ಬೆಂಗಳೂರು: ಇಂಡಿಯಾ ಒಕ್ಕೂಟವನ್ನು ಬಲಪಡಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗಿದೆ. ಈ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ಬೆಂಬಲ ಕೊಡುವ ಮೂಲಕ ಸರ್ಕಾರವು ರಾಜ್ಯದ ಹಿತ ಕಡೆಗಣಿಸಿದೆ. ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯೋ ತಮಿಳುನಾಡಿನ ಮುಖ್ಯಮಂತ್ರಿಯೋ ಎನ್ನುವ ಪ್ರಶ್ನೆಯನ್ನು ಅವರೇ ಹಾಕಿಕೊಳ್ಳಲಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟವನ್ನು ಬಲಪಡಿಸುವ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ನಿತ್ಯ …

Read More »