ಬಳ್ಳಾರಿ: ಅಕ್ರಮವಾಗಿ ಯೂರಿಯಾ ಗೊಬ್ಬರ ಸ್ಟಾಕ್ ಇಟ್ಟಿದ್ದ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಬಳ್ಳಾರಿ ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಸರ್ಕಾರದಿಂದ ಬಂದಿದ್ದ ಯೂರಿಯಾ ಗೊಬ್ಬರ ಸ್ಟಾಕ್ ಮಾಡಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಹುನ್ನಾರ ನಡೆಸಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಇಂಡಸ್ಟ್ರಿಯಲ್ ಏರಿಯಾದ ಎಡ್ವಿನ್ ಎನ್ನುವ ವ್ಯಕ್ತಿಗೆ ಸೇರಿದ್ದ ಗೋಡೌನ್‌ನಲ್ಲಿ ಸುಮಾರು …
Read More »ಹಂಪಿ ಪ್ರವಾಸಕ್ಕೆ ಬಂದಿದ್ದ ಕೇರಳದ ಬಸ್ ಪಲ್ಟಿ- ಮೂವರು ವಿದ್ಯಾರ್ಥಿಗಳು, ಓರ್ವ ಶಿಕ್ಷಕಿಗೆ ಗಾಯ
ಬಳ್ಳಾರಿ: ಕೇರಳದಿಂದ ಹಂಪಿಗೆ ಬರುತ್ತಿದ್ದ ವಿದ್ಯಾರ್ಥಿಗಳಿದ್ದ ಟೂರಿಸ್ಟ್ ಮಿನಿ ಬಸ್ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ನಡೆದಿದೆ. ತ್ರಿಶೂರ್ ಜಿಲ್ಲೆಯ ಶ್ರೀಕೃಷ್ಣ ಕಾಲೇಜು ವಿದ್ಯಾರ್ಥಿಗಳಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿ, 7 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾಗಿದ್ದರೆ ಶಿಕ್ಷಕಿ ಡಾ.ರಶ್ಮಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ …
Read More »5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪಿ ಮೇಲೆ ಫೈರಿಂಗ್
ಬಳ್ಳಾರಿ, ಜನವರಿ 16: ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮಂಜುನಾಥ್ (26) ಮೇಲೆ ಗುರುವಾರ ಬೆಳಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ತಪ್ಪಿಸಲು ಯತ್ನಿಸಿದ್ದರಿಂದ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಯಿತು ಎನ್ನಲಾಗಿದೆ. ಸೋಮವಾರ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆಗೆ ಪೊಲೀಸರು ಮೂರು ತಂಡ ರಚಿಸಿದ್ದರು. ಕೊಪ್ಪಳದ ಹುಲಗಿಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಪಂಚಾನಾಮೆಗೆ ಹೋದಾಗ ಆತ, ಹೆಡ್ …
Read More »ರೊಟ್ಟಿ ತರಲು ಹೋಗಿದ್ದಾಗ ರೊಟ್ಟಿ ಮಾರುತ್ತಿದ್ದ ಆಂಟಿ ಮೇಲೆಯೇ ಲವ್
ಬಳ್ಳಾರಿ, : ಪ್ರೀತಿಗೆ ಹೊತ್ತು ಗೊತ್ತಿಲ್ಲ ಪ್ರೀತಿಗೆ ಕಾರಣ ಬೇಕಿಲ್ಲ ಎನ್ನುವ ಸಿನಿಮಾ ಹಾಡು ಕೇಳಿದ್ದೇವೆ. ಆದ್ರೆ, ಇಲ್ಲೋರ್ವ ಅಂಕಲ್ಗೆ ರೊಟ್ಟಿ ತರಲು ಹೋಗಿದ್ದಾಗ ರೊಟ್ಟಿ ಮಾರುತ್ತಿದ್ದ ಆಂಟಿ ಮೇಲೆಯೇ ಲವ್ ಆಗಿದೆ. ಮಹಿಳೆ ಹೆಸರು ಸುಜಾತಾ. ಈಗಾಗಲೇ ಮದುವೆಯಾಗಿ ಒಂದು ಮಗು ಇದೆ. ಪ್ರಿಯಕರನ ಹೆಸರು ಸಿದ್ದಗೊಂಡ ಸೌದತ್ತಿ. ಲಾರಿ ಚಾಲಕನಾಗಿದ್ದ. ಈತನಿಗೂ ಮದುವೆಯಾಗಿ ಎರಡೂ ಮಕ್ಕಳಿವೆ. ಆದರೂ ಇವರಿಬ್ಬರ ನಡುವೆ ಪ್ರೇಮಾಕುರವಾಗಿದೆ. ಸಿದ್ದಗೊಂಡ ಸೌದತ್ತಿ ಲಾರಿ ಚಾಲಕನಾಗಿದ್ದರೂ ಸಹ …
Read More »‘ವಿಕಲತೆ ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿರುವ ನಿಮಗೆ ನಾವು ಚಿರಋಣಿ”: ಅಶ್ವಿನಿ ಪುನೀತ್ ರಾಜಕುಮಾರ್
ತಮ್ಮ ಜಮೀನಿನಲ್ಲಿ ಅಪ್ಪು ಭಾವಚಿತ್ರ ಮೂಡಿಸಿದ ರಾಯಚೂರು ರೈತ ಸತ್ಯನಾರಾಯಣ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಹಲವು ದಿನಗಳು ಉರುಳುತ್ತಿದ್ದು, ಅವರ ನೆನಪು ಮಾತ್ರ ಸದಾ ಜೀವಂತ. ಅಪ್ಪು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಚಿತ್ರರಂಗ, ಅಭಿಮಾನಿಗಳು, ಜನಸಾಮಾನ್ಯರು ಒಂದಲ್ಲ ಒಂದು ರೀತಿಯಲ್ಲಿ ಅಪ್ಪು ಸ್ಮರಣೆ ಮಾಡುತ್ತಿದ್ದಾರೆ. …
Read More »ಎಲೆ ಮರೆಯಲ್ಲಿ ಬೆತ್ತಲಾದ ನಟಿ
ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾ ಮೂಲಕ ಕಿಯಾರಾ ಅಡ್ವಾಣಿ ಅಭಿಮಾನಿಗಳ ಮನಗೆದ್ದಿದ್ದಾರೆ. ಕಿಯಾರಾ ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟಿವ್ ಆಗಿದ್ದಾರೆ. ಅನೇಕ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ಅವರ ನ್ಯೂಡ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಖ್ಯಾತ ಬಾಲಿವುಡ್ ಛಾಯಾಗ್ರಾಹಕ ದಾಬೂ ರತ್ನಾನಿ ಈ ನಗ್ನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮೊದಲು, ಕಿಯಾರಾ ದಬೂ ರತ್ನಾನಿಯ ಕ್ಯಾಲೆಂಡರ್ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ.ಕಿಯಾರಾ ಎಲೆಯಿಂದ ಮೈ ಮುಚ್ಚಿಕೊಂಡಿದ್ದು, …
Read More »ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವುದಿಲ್ಲ: R..ಅಶೋಕ್
ಬಳ್ಳಾರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯನವರಿಗೆ ಕೋಲಾರದಿಂದ ಸ್ಪರ್ಧಿಸದಂತೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ. ಕೋಲಾರ, ವರುಣಾ ಮಾತ್ರವಲ್ಲ ಯಾವ ಕ್ಷೇತ್ರದಿಂದಲೂ ಸಿದ್ದರಾಮಯ್ಯ ಈ ಬಾರಿ ಗೆಲ್ಲಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಜನ ಅವರನ್ನು ಸೋಲಿಸಿದರು. ಬಾದಮಿಯಿಂದ ಜನ ಓಡಿಸಿದ್ದಾರೆ. ಹೀಗಾಗಿ ರಾಜ್ಯದ ಯಾವ ಭಾಗದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೂ …
Read More »ಮನೆಮನೆಗೂ ತೆರಳಿ ಕಮಲ ಮತ್ತು ಮೋದಿ ಹೆಸರಲ್ಲಿ ಪ್ರಚಾರ ಮಾಡಬೇಕು’ ಎಂದು ಗೃಹ ಸಚಿವ ಅಮಿತ್ ಶಾ
ಬಳ್ಳಾರಿ): ‘ಮನೆಮನೆಗೂ ತೆರಳಿ ಕಮಲ ಮತ್ತು ಮೋದಿ ಹೆಸರಲ್ಲಿ ಪ್ರಚಾರ ಮಾಡಬೇಕು’ ಎಂದು ಗೃಹ ಸಚಿವ ಅಮಿತ್ ಶಾ ಸಂಡೂರಿನಲ್ಲಿ ಗುರುವಾರ ಬಳ್ಳಾರಿ ವಿಭಾಗದ ನಾಲ್ಕು ಜಿಲ್ಲೆಗಳ ಪ್ರಮುಖರಿಗೆ ತಾಕೀತು ಮಾಡಿದ್ದಾರೆ. ಸಂಡೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ನಡೆದ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗುವಂತೆ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೂ ಸೂಚಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು …
Read More »ಇಷ್ಟೊಂದು ಸುಳ್ಳು ಹೇಳೋ ಪ್ರಧಾನಿಯನ್ನ ಹಿಂದೆಂದೂ ನೋಡಿಲ್ಲ.. ಸಿದ್ದರಾಮಯ್ಯ
ಬಳ್ಳಾರಿ: ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ. ಮೋದಿ ಪ್ರಧಾನಿಯಾದ ನಂತರ ಧರ್ಮ ಆಧಾರಿತ ಜಾತಿ ರಾಜಕಾರಣ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದರು. ಬಳ್ಳಾರಿಯ ಗುರು ಫಂಕ್ಷನ್ ಹಾಲ್ನಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯನ್ನು ವಿರೋಧಿಸಿದರೆ, ಪ್ರಶ್ನಿಸಿದರೆ ಕ್ರಿಮಿನಲ್ …
Read More »ಬಳ್ಳಾರಿ: ಮಟ್ಕಾ ಬುಕ್ಕಿ, ಅಕ್ಕಿ ವ್ಯಾಪಾರಿಯನ್ನು ಅಟ್ಟಾಡಿಸಿಕೊಂಡು ಹತ್ಯೆಗೈದ ದುಷ್ಕರ್ಮಿಗಳು
ಬಳ್ಳಾರಿ : ನಗರದ ರೇಡಿಯೋ ಪಾರ್ಕ್ ವೃತ್ತದಲ್ಲಿ ಅಕ್ಕಿ ವ್ಯಾಪಾರಿ ಮಟ್ಕಾ ಬುಕ್ಕಿ ಕುಂಟ ಮಂಜುನಾಥ ಎನ್ನುವವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ನಗರದ ಕೊಲಿಮಿ ಬಜಾರ್ ನಿವಾಸಿಯಾದ ಕುಂಟ ಮಂಜುನಾಥ್ ನನ್ನು ರೇಡಿಯೋ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಬುಧವಾರ ಬೆಳಗಿನ ಜಾವ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಓಡಿ ಹೋಗಲು …
Read More »
Laxmi News 24×7