Breaking News

ಜಿಲ್ಲೆ

ಬೆಳಗಾವಿಯ ನಿವಾಸಿ ಈಗ ಅಮೇರಿಕಾದ ಸಂಸದ

  ಅಜ್ಜನ ಕಡೆ ಮಾಸ್ಕ್ ಯಾವ ತರಾ ಇದೆ ಈ ವಿಡಿಯೋ ಕೊನೇವರಿಗೆ ನೀವು ನೋಡ್ಲೆ ಬೇಕು…….           ಬೆಳಗಾವಿ- ಬೆಳಗಾವಿಯ ನಿವಾಸಿಯೊಬ್ಬ ಅಮೇರಿಕಾದ ಸಂಸದನಾಗಿ ಆಯ್ಕೆಯಾಗಿದ್ದಾನೆ. ಬೆಳಗಾವಿ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ನಿವಾಸಿ ಶ್ರೀನಿವಾಸ ಥಾಣೆದಾರ ಈಗ ಅಮೆರಿಕಾ ದೇಶದ ಸೆನೆಟ್ ಮೆಂಬರ್ ಆಗಿ ಆಯ್ಕೆಯಾಗಿದ್ದಾರೆ. ಚಿಂತಾಮಣರಾವ ಶಾಲೆಯಲ್ಲಿ ಹೈಸ್ಕೂಲ ಕಲೆತಿರುವ ಶ್ರೀನಿವಾಸ ಥಾಣೆದಾರ್ ಅಮೇರಿಕಾದಲ್ಲಿ ಕೆಮಿಕಲ್ ಉದ್ಯಮಿಯಾಗಿದ್ದಾರೆ.

Read More »

ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸ್ಥಾನಗಳಿಗೆಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆ ಚುನಾವಣೆ

ಬೆಳಗಾವಿ : ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದ್ದು , ಜಿಲ್ಲೆಯ ಬಿಜೆಪಿ, ಕಾಂಗ್ರೆಸ್ ನಾಯಕರು ನಡೆಸಿದ ತಂತ್ರಗಾರಿಕೆ ಫಲಿತಾಂಶ ತಿಳಿಯಲಿದೆ ನಗರದ ಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆ ಚುನಾವಣೆ ನಡೆಯಲಿದೆ. ಈಗಾಗಲೇ ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳು ಅವಿರೋಧ ಆಯ್ಕೆಯಾಗಿದೆ.  ಎಲ್ಲ ಸ್ಥಾನಗಳನ್ನು ಅವಿರೋಧ ಆಯ್ಕೆ ಗೊಳಿಸಬೇಕೆಂದು ಬಿಜೆಪಿ ನಾಯಕರು ಕಸರತ್ತು ನಡೆಸಿದರು,  ಆದರೆ ಅದು ಸಾಧ್ಯವಾಗಲಿಲ್ಲ. …

Read More »

ಮಸೀದಿಗಳಲ್ಲಿ ಹಾಕಿರುವ ಧ್ವನಿವರ್ಧಕ ತೆರವಿಗೆ ಸೂಚನೆ ನೀಡಿಲ್ಲ – ಕರ್ನಾಟಕ ಪೊಲೀಸ್ ಸ್ಪಷ್ಟನೆ

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ ಎನ್ನಲಾದ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಇದು ಫೇಕ್ ನ್ಯೂಸ್ ಆಗಿದ್ದು, ಪ್ರವೀಣ್ ಸೂದ್ ಅವರು ಆದೇಶ ಹೊರಡಿಸಿದ್ದಾರೆ ಎಂಬಂತೆ ಲೆಟರ್ ಹೆಡ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಸಂಬಂಧ ಕರ್ನಾಟಕ ಸ್ಟೇಟ್ ಪೊಲೀಸ್ ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸಿದೆ. ರಾಜ್ಯ ಪೊಲೀಸ್ …

Read More »

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾಗಳತ್ತ ಮುಖ

ಬೆಂಗಳೂರು: ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ಬಳಿಕ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇಂದು ಹೊಸ ಸಿನಿಮಾವೊಂದಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ಹೌದು. ಧ್ರುವ ನಟನೆಯ ಹೊಸ ಸಿನಿಮಾ ‘ದುಬಾರಿ’ಯ ಚಿತ್ರೀಕರಣ ಆರಂಭವಾಗಲಿದೆ. ಇಂದು ಬೆಳಗ್ಗೆ ಬೆಂಗಳೂರಿನ ನವರಂಗ್ ಬಳಿ ಇರುವ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ಪೂಜೆ ನೆರವೇರಿಸಿದ್ದಾರೆ. ಮುಹೂರ್ತ ಪೂಜೆಯಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್, ನಟಿ ತಾರಾ, ದೊಡ್ಡಣ್ಣ ಹಾಗೂ …

Read More »

ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ – ಎಸಿಬಿ ಬಲೆಗೆ ಬಿದ್ದ ಲೇಡಿ ಆಫೀಸರ್

ಬೀದರ್: ವರ್ಗಾವಣೆ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ ಪಡೆಯುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ತಾಲೂಕಾಧಿಕಾರಿ ಎಸಿಬಿ ಬಲೆಗೆ ಬಿದಿದ್ದಾರೆ. ವರ್ಗಾವಣೆ ಮಾಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶೋಭಾ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮುಂಗಡವಾಗಿ 30 ಸಾವಿರ ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ತಾಲೂಕಾಧಿಕಾರಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಹುಮ್ನಬಾದ್ ತಾಲೂಕು …

Read More »

ಹಿಂಡಲಗಾ ಜೈಲಿನಲ್ಲಿ ಸೊಳ್ಳೆ ಕಾಟ ತಾಳಲಾರದೆ ವಿನಯ್, ಸೊಳ್ಳೆ ಬತ್ತಿಯಾದ್ರೂ ಕೊಡಿ:ವಿನಯ್ ಕುಲಕರ್ಣಿ

ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಲ್ಲಿ ರಾತ್ರಿ ಕಳೆದಿದ್ದಾರೆ. ಗುರುವಾರ ಬೆಳಗ್ಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದು ಬಂಧಿಸಿತ್ತು. 1 ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು. ಸದ್ಯ ಹಿಂಡಲಗಾ ಜೈಲಿನ ರೆಡ್ ಝೋನ್ ಸೆಲ್‍ನಲ್ಲಿ ಇರುವ ವಿನಯ್ ಕುಲಕರ್ಣಿ, ಕೋವಿಡ್ ಹಿನ್ನೆಲೆ ಜೈಲು …

Read More »

ಸರ್ಕಾರಿ ನೌಕರರಿಗೆ ಐಡಿ ಕಾರ್ಡ್ ಮತ್ತು ನಾಮಫಲಕ ಕಡ್ಡಾಯ

ಬೆಂಗಳೂರು,ನ.5- ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಯನ್ನು ಧರಿಸಲು ಹಾಗೂ ಮೇಜಿನ ಮೇಲೆ ನಾಮಫಲಕ ಪ್ರದರ್ಶಿಸಲು ಸರ್ಕಾರ ಆದೇಶಿಸಿದೆ. ಕರ್ತವ್ಯದ ಅವಧಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ತಮ್ಮ ತಮ್ಮ ಇಲಾಖೆಯಿಂದ ಪಡೆದ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸಿ ಪ್ರದರ್ಶಿಸಬೇಕು.ಹಾಗೆಯೇ ಕಚೇರಿಯಲ್ಲಿ ಕುಳಿತುಕೊಳ್ಳುವ ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಸಿಬ್ಬಂದಿ ಮತ್ತು ಅಧಿಕಾರಿಗಳ ಹೆಸರು, ಹುದ್ದೆ ಸೂಚಿಸುವ ನಾಮಫಲಕವನ್ನು …

Read More »

ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

ಚಿತ್ರದುರ್ಗ: ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಜೊತೆ ನಾನೂ ಮಾತನಾಡಿದ್ದೇನೆ. ನಾನು ಏನೂ ತಪ್ಪು ಮಾಡಿಲ್ಲ ಎಂದು ನನ್ನ ಬಳಿ ಹೇಳಿದ್ದಾನೆ. ಹೀಗಾಗಿ ವಿಚಾರಣೆ ಹಂತದಲ್ಲಿರುವಾಗ ನಾನು ಏನೂ ಹೇಳುವುದಿಲ್ಲ ಎಂದರು. ಕೊರೊನಾಗೆ ವ್ಯಾಕ್ಸಿನ್ ಬರುವ ತನಕ ಗ್ರಾ.ಪಂ. ಚುನಾವಣೆ …

Read More »

ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳ ತೆರವು

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಮಾಡಿದ್ದಾರೆ. ಕಳೆದ ತಿಂಗಳು ವಕೀಲರದ ಹರ್ಷ ಮುತಾಲಿಕ್, ಮಸೀದಿಯಲ್ಲಿನ ಧ್ವನಿ ವರ್ಧಕಗಳಿಂದ ಇತರೇ ಧರ್ಮದರಿಗೆ ತೊಂದರೆ ಆಗುತ್ತಿದೆ. ದಿನಕ್ಕೆ ಐದಾರು ಬಾರಿ ಪ್ರಾರ್ಥನೆ ಮಾಡಲಾಗತ್ತೆ. ಇದ್ದರಿಂದ ಮಕ್ಕಳಿಗೆ, ವಯಸ್ಸಾದವರಿಗೆ, ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಬೇಕು ಎಂದು ದೂರು ನೀಡಿದ್ದರು.ಈಗ ಈ …

Read More »

ಬಿಗ್‍ಬಾಸ್ ಸೀಸನ್-7ರ ವಿನ್ನರ್ ನಟ ಶೈನ್ ಶೆಟ್ಟಿ ಅವರಿಗೆ ಬಿಗ್‍ಬಾಸ್ ಕಾರ್ಯಕ್ರಮದ ಪ್ರಶಸ್ತಿಯ ಕಾರು 10 ತಿಂಗಳ ಬಳಿಕ ದೊರಕಿದೆ.

ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ವಿನ್ನರ್ ನಟ ಶೈನ್ ಶೆಟ್ಟಿ ಅವರಿಗೆ ಬಿಗ್‍ಬಾಸ್ ಕಾರ್ಯಕ್ರಮದ ಪ್ರಶಸ್ತಿಯ ಕಾರು 10 ತಿಂಗಳ ಬಳಿಕ ದೊರಕಿದೆ. ಬಿಗ್‍ಬಾಸ್ ಸೀಸನ್-7ರ ವಿನ್ನರ್ ಶೈನ್‍ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧಾರಾವಾಹಿ ಮೂಲಕ ಜನರಿಗೆ ಹತ್ತಿರವಾಗಿದ್ದ ಅವರು, ನಂತರ ತೆರೆ ಮರೆಗೆ ಜಾರಿದ್ದರು. ಆದರೆ ಬಿಗ್‍ಬಾಸ್ ಸೀಸನ್-7ರಲ್ಲಿ ಕಾಣಿಸಿಕೊಂಡು ಕರುನಾಡ ಜನರ ಮನಸ್ಸುನ್ನು ಕದ್ದಿದ್ದರು. ಈಗ ಅವರ ಗೆಲುವಿಗೆ ಪ್ರಶಸ್ತಿಯಾಗಿ ಬಂದ ಕಾರನ್ನು ಟಾಟಾ ಮೋಟರ್ಸ್ ಅವರಿಗೆ …

Read More »