ಚಿತ್ರದುರ್ಗ: ನೀರಾವರಿ ಪಂಪ್‍ಸೆಟ್‍ಗೆ ಅಕ್ರಮವಾಗಿ ಹಾಕಿಕೊಂಡಿದ್ದ ನಿರಂತರ ಜ್ಯೋತಿ ವಿದ್ಯುತ್ ಲೈನ್ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಸಿಬ್ಬಂದಿಯ ಮೇಲೆ ಮಾರಕಾಸ್ತ್ರ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬೆಸ್ಕಾಂ ಕಚೇರಿ ಬಳಿ ನಡೆದಿದೆ ಹಲವು ದಿನಗಳಿಂದ ಶಿವರಾಜ್ ಎನ್ನುವವರು ನಿಯಮಬಾಹಿರವಾಗಿ ವಿದ್ಯುತ್ ಸಂಪರ್ಕ ಹಾಕಿಕೊಂಡಿದ್ದರು. ಈ ಬಗ್ಗೆ ಲೈನ್‍ಮ್ಯಾನ್ ಕೇಶವ ಅವರು ಒಂದು ಬಾರಿ ಶಿವರಾಜ್‍ಗೆ ಎಚ್ಚರಿಕೆ ನೀಡಿದ್ದರು. ಆದರೆ ನಿನ್ನೆ …
Read More »ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿ ಬಂಸಿಧಿ 2 ಲಕ್ಷ ರೂ. ಬೆಲೆ ಬಾಳುವ 5 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ
ಬೆಂಗಳೂರು,- ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಸಿಧಿ 2 ಲಕ್ಷ ರೂ. ಬೆಲೆ ಬಾಳುವ 5 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಕುಮಾರ್ ಅಯ್ಯರ್(35) ಬಂತ ಆರೋಪಿ. ಈತನ ಬಂಧನದಿಂದ ಸುಬ್ರಹ್ಮಣ್ಯನಗರ, ಕೋಣನಕುಂಟೆ ಸೇರಿದಂತೆ ಐದು ದ್ವಿಚಕ್ರವಾಹನ ಪ್ರಕರಣಗಳಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ಮೂರು ವಾಹನಗಳ ವಾರಸುದಾರರ ಪತ್ತೆಕಾರ್ಯ ಮುಂದುವರೆದಿದೆ. ನ.19ರಂದು ಸಂಜೆ 6 ಗಂಟೆಯಲ್ಲಿ ಗಾಯತ್ರಿನಗರದ ಅನಿಲ್‍ಕುಮಾರ್(23) ಎಂಬುವರು ತಮ್ಮ …
Read More »ರಾಜ್ಯ ಸಚಿವ ಸಂಪುಟ ವಿಸ್ತರಣೆ ಪಕ್ಕಾ ಆಗುತ್ತಿದ್ದಂತೆ, ಮೂಲ ಬಿಜೆಪಿಗರು ತಕರಾರು
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪಕ್ಕಾ ಆಗುತ್ತಿದ್ದಂತೆ, ಮೂಲ ಬಿಜೆಪಿಗರು ತಕರಾರು ಎತ್ತಿದ್ದಂತೆ ಕಾಣುತ್ತಿದೆ. ನಿನ್ನೆಯಷ್ಟೆ 17 ಮಂದಿಯಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. 105 ಶಾಸಕರಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಗುಂಪು ರಾಜಕೀಯ ಶುರುವಾಗಿದೆ. ಶಾಸಕರಾದ ಮುನಿರತ್ನ, ಉಮೇಶ್ ಕತ್ತಿ, ಮೇಲ್ಮನೆ ಸದಸ್ಯರಾದ ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಎಂಟಿಬಿ ನಾಗರಾಜ್ ಸಚಿವರಾಗುವುದು ಪಕ್ಕಾ ಆಗುತ್ತಿದ್ದಂತೆ, ದೆಹಲಿಯಲ್ಲಿ …
Read More »ನಿವಾರ್ ಅಬ್ಬರ- ಕೋಲಾರದಲ್ಲಿ ಭಾರೀ ಮಳೆ,
ಕೋಲಾರ: ಚೆನ್ನೈ ನಿವಾರ್ ಚಂಡ ಮಾರುತದ ಅಬ್ಬರ ಮುಂದುವರೆದಿದ್ದು, ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಪರಿಣಾಮ ಮನೆಯ ಗೋಡೆ ಕುಸಿದಿದ್ದು, ವ್ಯಕ್ತಿಯ ಕಾಲು ಮುರಿದಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಮನೆ ಗೋಡೆ ಕುಸಿತವಾಗಿವೆ. ಪೆದ್ದೂರು ಗ್ರಾಮದ ಸೂರ್ಯ ನಾರಾಯಣ ಅವರ ಕಾಲು ಮುರಿದಿದೆ. ಮಲಗಿದ್ದಾಗ ಗೋಡೆ ಕುಸಿದ್ದರಿಂದ ಕಾಲು ಮುರಿದಿದೆ. ಮುಷ್ಟೂರಲ್ಲಿ ನಾಗಮಣಿ, ವಿಜಿಯಮ್ಮ ಅವರ 2 ಮನೆಯ ಗೋಡೆ ಕುಸಿತವಾಗಿದೆ. ಅಬ್ಬೆಹಳ್ಳಿಯ ಭಾಗ್ಯಮ್ಮ ಅವರ …
Read More »ಸಾರಿಗೆ ಬಸ್ಸಿನಲ್ಲಿ ಕೊವಿಡ್ ನಿಯಮಪಾಲನೆ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರ ಆಕ್ರೋಶ
ರಾಯಚೂರು: ಸಾರಿಗೆ ಬಸ್ಸಿನಲ್ಲಿ ಕೊವಿಡ್ ನಿಯಮಪಾಲನೆ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಂತ್ರಾಲಯ ಬಸ್ ನಿಲ್ದಾಣದಲ್ಲಿ ನಡೆದಿದೆ. ತುಂಗಭದ್ರಾ ಪುಷ್ಕರ ಹಿನ್ನೆಲೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಬಂದಿದ್ದರು. ಆದರೆ ಇವರು ರಾಯಚೂರು- ಬೆಂಗಳೂರು ಮಾರ್ಗದ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸಲು ನಿರಾಕರಿಸಿದ್ದಾರೆ. ಅಲ್ಲದೆ ಸಾರಿಗೆ ಸಿಬ್ಬಂದಿಯೊಂದಿಗೆ ಪ್ರಯಾಣಿಕರ ಮಾತಿನ ಚಕಮಕಿ ನಡೆಸಿದ್ದಾರೆ. ಬಸ್ಸಿನಲ್ಲಿ ಸ್ವಚ್ಛತೆಯಿಲ್ಲ, ಸೀಟುಗಳು ಹಾಳಾಗಿರುವುದರಿಂದ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
Read More »ನಮಗೆ ನೀರು ಕೊಡದಿದ್ರೆ ಪೈಪ್‍ಲೈನ್ ಒಡೆದು ಹಾಕ್ತೀನಿ: ಶಿವಲಿಂಗೇಗೌಡ
ಹಾಸನ: ನಮಗೆ ನೀರು ಕೊಡದೆ ಪೈಪ್ ಲೈನ್ ತೆಗೆದುಕೊಂಡು ಹೋದರೆ ಅದನ್ನು ಒಡೆದು ಹಾಕಿಸ್ತೀನಿ. ಏನಾಗುತ್ತೋ ಆಗಲಿ ಎಂದು ಶಾಸಕ ಶಿವಲಿಂಗೇಗೌಡ ಕೆಡಿಪಿ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಹಾಸನದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯುತ್ತಿತ್ತು. ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ ಕೃಷ್ಣಾ ಬೇಸಿನ್ ನಲ್ಲಿ ನಮಗೂ ಹಕ್ಕಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಎರಡು ಹೋಬಳಿಗಳು ಕೃಷ್ಣಾ ಬೇಸಿನ್‍ಗೆ ಸೇರಿದೆ. ನಮಗೆ ನೀರು ಕೊಡ್ತೀವಿ …
Read More »ಬೆಳಗಾವಿ ಜಿಲ್ಲೆ ವಿಭಜನೆ ಬೇಕಾ..? ಕಮೆಂಟ್ ಮಾಡಿ ತಿಳಿಸಿ
ಬೆಳಗಾವಿ – ಬಳ್ಳಾರಿ ಜಿಲ್ಲೆ ವಿಭಜನೆ ಘೋಷಣೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಸದ್ದು ಕೇಳಿಬಂದಿದೆ. ರಾಜ್ಯದಲ್ಲೇ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ 3 ಜಿಲ್ಲೆಯನ್ನಾಗಿಸಬೇಕೆನ್ನುವ ಪ್ರಸ್ತಾವನೆಗೆ 2 ದಶಕಗಳ ಇತಿಹಾಸವಿದೆ. ಯಾವ ದೃಷ್ಟಿಯಿಂದ ನೋಡಿದರೂ ಜಿಲ್ಲೆಯ ವಿಭಜನೆ ಅಗತ್ಯ, ಅನಿವಾರ್ಯ. ಕೇವಲ ಭಾಷೆ ಮತ್ತು ಗಡಿ ವಿವಾದದ ಕಾರಣದಿಂದ ಜಿಲ್ಲಾ ವಿಭಜನೆಯನ್ನು ಮುಂದೂಡಲಾಗುತ್ತಿದೆ. ಬೆಳಗಾವಿಯನ್ನು ಎರಡು ವಿಭಾಗ ಮಾಡಬೇಕೋ, ಮೂರು ವಿಭಾಗ ಮಾಡಬೇಕೋ? ವಿಭಜಿಸುವುದಾದರೆ ಯಾವ್ಯಾವುದು ಜಿಲ್ಲಾ ಕೇಂದ್ರವಾಗಬೇಕು? ವಿಭಜಿತವಾಗಲಿರುವ …
Read More »ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ:ಇವಿಎಂ ವಿರುದ್ಧ ವಕೀಲ ಸಿ.ಆರ್. ಜಯ ಸುಕಿನ್
ನವದೆಹಲಿ: ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಇವಿಎಂ ವಿರುದ್ಧ ವಕೀಲ ಸಿ.ಆರ್. ಜಯ ಸುಕಿನ್ ಎಂಬವವರು ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯು ಉಪ ಚುನಾವಣೆ ಸೇರಿದಂತೆ ಬಿಹಾರ ವಿಧಾನಸಭಾ ಚುನಾವಣೆ ಎಲ್ಲೆಡೆಯೂ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಇದೀಗ ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ) ಸರಿಯಾಗಿಲ್ಲ ಎಂಬ ಗಲಾಟೆ ಶುರುವಾಗಿದೆ. ಇದು ಪ್ರತಿ ಚುನಾವಣೆಯಲ್ಲಿ ನಡೆಯುತ್ತಿರುವ ವಿಷಯವೇ. ಆದರೆ …
Read More »ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಶುಭಾಶಯ
ಬೆಂಗಳೂರು : ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಪ್ರತಿಯೊಬ್ಬ ಭಾರತೀಯನ ಹಕ್ಕು, ಘನತೆಯನ್ನು ನಮ್ಮ ಸಂವಿಧಾನ ರಕ್ಷಿಸುತ್ತಿದೆ. ನಮ್ಮ ಶ್ರೇಷ್ಠ ಸಂವಿಧಾನದ ಸದಾಶಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಡಾ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನೆಗೆ ಕೊಡುಗೆ ನೀಡಿದ ಎಲ್ಲ ಮಹನೀಯರಿಗೆ ವಂದಿಸುತ್ತಾ, ಎಲ್ಲರಿಗೂ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು ಎಂದು …
Read More »ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ 62 ವರ್ಷದ ವೃದ್ಧ
ಬೆಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ 62 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನವೆಂಬರ್ 24ರಂದು ಬೆಂಗಳೂರಿನ ದೇವನಹಳ್ಳಿ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿ ತನ್ನ ಮಗಳ ಮನೆಯಲ್ಲಿ ಬಾಲಕಿಯ ಮೇಲೆ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ವೆಂಕಟರಮಣಪ್ಪ ಎಂದು ಗುರುತಿಸಲಾಗಿದೆ. ದೇವಾಲಯವೊಂದರ ಅರ್ಚಕನಾಗಿರುವ ಈತ ದೇವನಹಳ್ಳಿಯ ಚೌಡೇಶ್ವರಿ ದೇವಸ್ಥಾನದ ಪಕ್ಕ ಗಂಡನ ಜೊತೆ ವಾಸವಾಗಿರುವ ತನ್ನ ಮಗಳ ಮನೆಗೆ ತೆರಳಿದ್ದನು. ಮಗಳ ಪತಿಯೂ ಚೌಡೇಶ್ವರಿ ದೇಗುಲದ ಅರ್ಚಕನಾಗಿದ್ದಾನೆ. ಹೀಗಾಗಿ …
Read More »
Laxmi News 24×7