ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ 7 ಸಚಿವರ ಸೇರ್ಪಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸಚಿವಾಕಾಂಕ್ಷಿಗಳು ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಸಮಾಧಾನಗೊಂಡಿರುವ ಶಾಸಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆ ಬಗ್ಗೆ ಶಾಸಕರಿಗೆ ಅಸಮಾಧಾನ, ವಿರೋಧವಿದ್ದರೆ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ನೀಡಿ. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದಿದ್ದಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಯಾರೂ ಹಗುರವಾಗಿ …
Read More »ವಿವಾಹೇತರ ಸಂಬಂಧ ಬಯಲಿಗೆ ಬರುತ್ತಿದ್ದಂತೆ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಆತ್ಮಹತ್ಯೆ
ಕಾಚಿಗುಡ: ವಿವಾಹೇತರ ಸಂಬಂಧ ಬಯಲಿಗೆ ಬರುತ್ತಿದ್ದಂತೆ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ಕಾಚಿಗುಡದಲ್ಲಿ ನಡೆದಿದೆ. ಕಾಚಿಗುಡದ ಚಪ್ಪಲ್ ಬಜಾರ್ನಲ್ಲಿ ವಾಸವಿದ್ದ ಕರ್ನಾಟಕ ಮೂಲದ ಆಟೋ ಚಾಲಕ ಹನಮಂತು (23) ಮತ್ತು ಅದೇ ಏರಿಯಾದಲ್ಲಿ ವಾಸವಿದ್ದ ಮಹಾರಾಷ್ಟ್ರದ ಲಾತುರ್ ಮೂಲದ 23 ವರ್ಷದ ಮಹಿಳೆ ಮೃತ ದುರ್ದೈವಿಗಳು.ಕೆಲವು ದಿನಗಳಿಂದ ಹನುಮಂತು ಜತೆ ಮಹಿಳೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಮಹಿಳೆಯ ಪತಿಗೆ ತಿಳಿದು ಇಬ್ಬರ ನಡುವೆ …
Read More »ಚಿನ್ನದ ಅಂಗಡಿಯ ಮಾಲೀಕನ ಪುತ್ರನನ್ನು ಅವರ ಮನೆಯಲ್ಲಿಯೇ ಕೊಲೆ
ಹುಣಸಗಿ: ಪಟ್ಟಣದಲ್ಲಿ ಮಧ್ಯಾಹ್ನ ಚಿನ್ನದ ಅಂಗಡಿಯ ಮಾಲೀಕನ ಪುತ್ರನನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ. ಕೊಲೆಯಾದ ಯುವಕನನ್ನು ನರೇಂದ್ರ ಶಿರೂರಿ (22) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಮನೆಗೆ ಊಟಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಜನ ಭಯಭೀತರಾಗಿದ್ದು, ಜನ ತಂಡೋಪತಂಡವಾಗಿ ಕೊಲೆಯಾದ ಸ್ಥಳದತ್ತ ಆಗಮಿಸುತ್ತಿದ್ದರು. ‘ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಿಶೋರ ಕಣ್ಮರೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಮೃತ …
Read More »ಅಸಮಾಧಾನ ಇರೋರು ವರಿಷ್ಠರ ಜೊತೆ ಮಾತಾಡಲಿ : ಸಿಎಂ
ಬೆಂಗಳೂರು : ಅಸಮಾಧಾನ ಇರೋರು ಬೇಕಾದ್ರೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತನಾಡಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸಂಪುಟ ವಿಸ್ತರಣೆ ಬೆನ್ನಲ್ಲೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಿಜೆಪಿಯ ಕೆಲ ಶಾಸಕರು ಬಹಿರಂಗವಾಗಿಯೇ ಪಕ್ಷದ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ.ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ನಮ್ಮ ಯಾವುದೇ ಶಾಸಕರು ವಿರೋಧ ಇದ್ರೆ ದೆಹಲಿಗೆ ಹೋಗಲಿ. ವರಿಷ್ಠರಿಗೆ ದೆಹಲಿಗೆ ಹೋಗಿ ದೂರು ಕೊಡಲಿ. ಇಲ್ಲಿ ಬಹಿರಂಗವಾಗಿ ಮಾತನಾಡಿ ಪಕ್ಷದ …
Read More »ಸಚಿವ ಸ್ಥಾನ ಆಕಾಂಕ್ಷಿಗಳ ಆಕ್ರೋಶ ಭುಗಿಲೆದ್ದಿದೆ
ಬೆಂಗಳೂರು : ಬಹುದಿನಗಳಿಂದ ಕಗ್ಗಂಟಾಗಿದ್ದ ಸಚಿವ ಸಂಪುಟ ವಿಸ್ತರಣೆ ಮುಕ್ತಾಯವಾಗಿದ್ದು, 7 ಜನರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಮತ್ತೊಂದೆಡೆ ಸಚಿವ ಸ್ಥಾನ ಆಕಾಂಕ್ಷಿಗಳ ಆಕ್ರೋಶ ಭುಗಿಲೆದ್ದಿದ್ದು, ಮತ್ತೊಂದಷ್ಟು ಅಸಮಾಧಾನಗಳು ಸೃಷ್ಟಿಯಾಗಿವೆ. ಅವುಗಳನ್ನ ಸಮಾಧಾನಪಡಿಸುವ ಕಾರ್ಯವು ಸಹ ನಡೆದಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಐದಾರು ಗಂಟೆಯಲ್ಲೇ ನಾಗೇಶ್‌ಗೆ ಮಹತ್ವದ ಹುದ್ದೆ ಹೌದು…ಸಚಿವ ಸ್ಥಾನವನ್ನು ವಾಪಸ್ ಪಡೆದಿರುವುದಕ್ಕೆ ನಾಗೇಶ್ ಅಸಮಾಧಾನಗೊಂಡಿದ್ದಾರೆ. ಇನ್ನು ಹೇಳಿದಂತೆ ಸಚಿವ ಸ್ಥಾನ ಕೊಟ್ಟಿಲ್ಲವೆಂದು ಮುನಿರತ್ನ …
Read More »ಪುಣೆಯಿಂದ ಹಳ್ಳಿಯಲ್ಲಿರುವ ಆರೋಗ್ಯ ಕೇಂದ್ರದವರೆಗೆ ಕೊವಿಶೀಲ್ಡ್ ಲಸಿಕೆ ತಲುಪಿದ್ದು ಹೇಗೆ
ಬೆಂಗಳೂರು : ದೇಶಾದ್ಯಂತ ಕೊವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್.12ರಂದೇ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಿಂದ ದೇಶದ 13 ರಾಜ್ಯಗಳಿಗೆ ಕೊವಿಶೀಲ್ಡ್ ಲಸಿಕೆಯನ್ನು ರವಾನಿಸಲಾಗಿದೆ. ಭಾರತದಲ್ಲಿ ಜನವರಿ.16ರಿಂದ ಕೊರೊನಾವೈರಸ್ ಲಸಿಕೆ ವಿತರಣೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ, 50 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಲಸಿಕೆ ನೀಡುವಲ್ಲಿ ಆದ್ಯತೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ದೇಶದ 13 ಕಡೆಗಳಿಗೆ …
Read More »ಬೆಳಗಾವಿ: ₹14.74 ಕೋಟಿ ತೆರಿಗೆ ವಂಚನೆ ಬಯಲಿಗೆ
ಬೆಳಗಾವಿ: ಜಿಎಸ್‌ಟಿ ಪಾವತಿ ವಿಷಯದಲ್ಲಿ ₹ 14.74 ಕೋಟಿ ತೆರಿಗೆ ವಂಚಿಸಿದ ಆರೋಪದ ಮೇಲೆ ಸುವರ್ಣ ಬಿಲ್ಡ್‌ಕಾನ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮನೋಜಕುಮಾರ್ ಪ್ರನ್ನಾಥ್ ಅಬ್ರೋಲ್ ಎನ್ನುವವರನ್ನು ಜಿಎಸ್‌ಟಿ ನಿರ್ದೇಶನಾಲಯದ ಜಾಗೃತ ದಳವು ಬೆಳಗಾವಿಯಲ್ಲಿ ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ‘ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಆರೋಪಿಯನ್ನು ಜ. 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಂಗಳೂರಿನ ಆ ಕಂಪನಿಯು ಪುಣೆಯಲ್ಲಿ ಕಾರ್ಪೊರೇಟ್ ಕಚೇರಿ ಹೊಂದಿದೆ. ಕರ್ನಾಟಕ ಹಾಗೂ …
Read More »ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಶಾಸಕ ಸಿದ್ದು ಸವದಿ ಅಸಮಾಧಾನ ಸ್ಪೋಟ
ಬೆಂಗಳೂರು : ರಾಜ್ಯ ಸಚಿವ ಸಂಪುಟದ ಬೆನ್ನಲ್ಲೇ ಹಲವು ಶಾಸಕರು ಅಸಮಾಧಾನ ಹೊರಹಾಕಿದ್ದು, ಇದೀಗ ಶಾಸಕ ಸಿದ್ದು ಸವದಿ ಕೂಡ ಇದೀಗ ಸಿಡಿದೆದ್ದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿರುವ ಸಿದ್ದು ಸವದಿ, ಹಿರಿತನ, ಪಕ್ಷನಿಷ್ಠೆ, ಸಿದ್ಧಾಂತಕ್ಕೆ ಬದ್ಧರಾಗಿ ಪ್ರಾಣಹೋದರು ಪಕ್ಷಕ್ಕೆ ದ್ರೋಹ ಮಾಡದೇ ಪಕ್ಷಕ್ಕಾಗಿ ಮತ್ತು ಪಕ್ಷದ ಬಲವರ್ಧನೆಗಾಗಿ ಹಗಲು ರಾತ್ರಿ ದುಡಿದು ಯಾವುದೇ ಗಾಡ್ ಫಾದರ್ ಬೆಂಬಲವಿಲ್ಲದೆ ಪಕ್ಷವನ್ನು ಎಲ್ಲಾ ಹಂತದಲ್ಲಿ ಅಧಿಕಾರಕ್ಕೆ ತರುವ ಪಕ್ಷದ …
Read More »ಪಂಚಮಸಾಲಿ ಲಿಂಗಾಯಿತರ ʼಪಾದಯಾತ್ರೆ ರದ್ಧಾಗಿಲ್ಲʼ: ʼ2 ಲಕ್ಷʼ ಜನ ಬೆಂಗಳೂರಿಗೆ ಬರೋದು ನಿಶ್ಚಿತ
ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಾಳೆ (ಜನವರಿ 14) ನಡೆಯಲಿರುವ ಪಾದಯಾತ್ರೆ ರದ್ದಾಗಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಮುರಿಗೇಶ್ ನಿರಾಣಿಯವ್ರಿಗೆ ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ, ಪಂಚಮಸಾಲಿ ಪೀಠದಿಂದ ನಡೆಯುವ ಪಾದಯಾತ್ರೆ ರದ್ಧಾಗಿದೆ ಎನ್ನಲಾಯ್ತು. ಅದ್ರಂತೆ, ಮುರುಗೇಶ್ ನಿರಾಣಿಯವ್ರು ಕೂಡ ಶ್ರೀಗಳು ತನ್ನ ಪಾದಯಾತ್ರೆ ನಿರ್ಣಯವನ್ನ ಹಿಂಪಡೆದಿದ್ದಾರೆ ಎಂದು ಹೇಳಿದ್ರು. ಆದ್ರೆ, ಈ ಹೇಳಿಕೆಗೆ ಕೂಡಲಸಂಗಮದಿಂದ ಬೆಂಗಳೂರಿಗೆ …
Read More »ಗಣರಾಜ್ಯೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗುವುದು: ಎಂ.ಜಿ.ಹಿರೇಮಠ
ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಜನವರಿ 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಜ.13) ನಡೆದ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ರಾಷ್ಟ್ರೀಯ ಹಬ್ಬವಾಗಿರುವುದರಿಂದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ಪರೇಡ್ ಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು …
Read More »
Laxmi News 24×7