ಇದೇ ಜನವರಿ 16 ಮತ್ತು 17ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆ ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್‍ರನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ಹೆಚ್ಚುವರಿ ಅಧಿಕಾರಿಯಾಗಿ ನೇಮಕ ಮಾಡಿ ಡಿಜಿಪಿ ಅವರು ಆದೇಶ ಹೊರಡಿಸಿದ್ದಾರೆ. ಹೌದು ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್‍ರನ್ನು ಹೆಚ್ಚುವರಿ ಬಂದೋಬಸ್ತ್ ಕರ್ತವ್ಯ ಅಧಿಕಾರಿಯಾಗಿ ಡಿಜಿಪಿ ಪ್ರವೀಣ ಸೂದ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಡಿಸಿಪಿಯಾಗಿ …
Read More »ಧಾರವಾಡದ ಬಳಿ ಭೀಕರ ರಸ್ತೆ ಅಪಘಾತ ಐವರ ದುರ್ಮರಣ: ಹಲವರಿಗೆ ಗಾಯ
ಧಾರವಾಡ: ತಾಲೂಕಿನ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಐವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಟೆಂಪೋ ಹಾಗೂ ಲಾರಿಯ ನಡುವೆ ಅಪಘಾತ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವವರನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ವಾಹನದಲ್ಲಿ ಇನ್ನೂ ಶವಗಳು ಸಿಲುಕಿಕೊಂಡಿದ್ದು, ಅವುಗಳನ್ನ ತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ದಾವಣಗೆರೆಯಿಂದ ಹೊರಟಿದ್ದ ಟೆಂಪೋ ಧಾರವಾಡದ ಸಮೀಪ ಬಂದಾಗ ಈ …
Read More »ಮೋಜಿಗಾಗಿ ವಾಹನಗಳನ್ನು ಕದಿಯುತ್ತಿದ್ದ ಆರೋಪಿ ಅರೆಸ್ಟ್, 3.50 ಲಕ್ಷ ಮೌಲ್ಯದ ಬೈಕ್ ವಶ
ಬೆಂಗಳೂರು, ಜ.14- ಮೋಜಿನ ಜೀವನ ನಡೆಸಲು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು 3.50 ಲಕ್ಷ ಬೆಲೆಯ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಸಂಪತ್ (26) ಬಂಧಿತ ಆರೋಪಿ. ಈತ ಡಿಪ್ಲೊಮಾ ಮೆಕ್ಯಾನಿ ಕಲ್ ವ್ಯಾಸಂಗ ಮಾಡಿದ್ದು, ಮೋಜಿ ಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದನೆಂದು ಆಪೊಲೀಸರು ತಿಳಿಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್ ದ್ವಿಚಕ್ರ ವಾಹನವನ್ನು ಯಾರೋ …
Read More »53 ವರ್ಷಗಳ ಅನುಭವದಲ್ಲಿ ಇದೇ ಮೊದಲು; ಮೋಡ ಅಡ್ಡ ಬಂದಿದ್ದರಿಂದ ಯುದ್ಧಕಾಂಡ ನಡೆಯಬಹುದು’
ಬೆಂಗಳೂರು: ಗವಿಗಂಗಾಧರೇಶ್ವರನ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿದೆ. ಭಾಸ್ಕರನು ಅಗೋಚರವಾಗಿ ಲಿಂಗ ಸ್ಪರ್ಶಿಸಿ ಹಾದುಹೋಗಿದ್ದಾನೆ. ಈ ಬಗ್ಗೆ, ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ. ದೈವ ನಿರ್ಣಯ ದೇವರಿಗೆ ಮಾತ್ರ ಗೊತ್ತಿರುತ್ತದೆ. ನನ್ನ 53 ವರ್ಷಗಳ ಅನುಭವದಲ್ಲಿ ಇದೇ ಮೊದಲ ಬಾರಿ ಹೀಗಾಗುತ್ತಿದೆ. ಕಳೆದ ವರ್ಷ ಈಶ್ವರನ ಮೇಲೆ 2.36 ನಿಮಿಷ ಸೂರ್ಯ ಕಿರಣವಿತ್ತು. ಹಾಗಾಗಿ, ಕಳೆದ ವರ್ಷ ಕೊರೊನಾ ಇಡೀ ವಿಶ್ವವನ್ನು ಕಾಡಿತ್ತು. …
Read More »ಡ್ರಗ್ಸ್ ಪ್ರಕರಣ ಕೌಶಲಾಭಿವೃದ್ಧಿ ಸಚಿವ ಸೋದರಳಿಯ ನನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಕೌಶಲಾಭಿವೃದ್ಧಿ ಸಚಿವ ನವಾಬ್ ಮಲ್ಲಿಕ್ ಸೋದರಳಿಯ ಸಮೀರ್ ಖಾನ್ ನನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸಮೀರ್ ಖಾನ್ ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ಎಂಬಾತನ ಜೊತೆ ಡ್ರಗ್ಸ್ ಗೆ ಸಂಬಂಧಿಸಿದಂತೆ ವ್ಯವಹಾರ ನಡೆಸಿರುವ ಬಗ್ಗೆ ಎನ್ ಸಿಬಿ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಸಮೀರ್ ಬಂಧನವಾಗಿದೆ. ಕಳೆದ ವಾರವಷ್ಟೇ ಕರಣ್ ಹಾಗೂ ಇಬ್ಬರು ಮಹಿಳೆಯರನ್ನು ಎನ್ ಸಿಬಿ ವಶಕ್ಕೆ ಪಡೆದುಕೊಂಡಿತ್ತು. …
Read More »ನೋಡಲು ಆಗದಂತಹ ಸಿಡಿಗಳೂ ಇವೆ : ಯತ್ನಾಳ್
ಬಾಗಲಕೋಟೆ: ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕರ ಅಸಮಾಧಾನ ಭುಗಿಲೆದ್ದಿದ್ದು, ಸಿಡಿ ವಿಚಾರನ್ನಿಟ್ಟುಕೊಂಡು ಸಿಎಂ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಸ್ವಪಕ್ಷೀಯ ಶಾಸಕರೇ ಒಂದರ ಮೇಲೊಂದರಂತೆ ಆರೋಪಗಳನ್ನು ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪನವರ ಭ್ರಷ್ಟಾಚಾರ ಸಿಡಿ ಮಾತ್ರವಲ್ಲ, ನೋಡಲು ಆಗದಂತಹ ಸಿಡಿಗಳೂ ಇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಬಳಿ ಬಂದಿದ್ದ 3 ಶಾಸಕರ ಬಳಿ ಆ ಸಿಡಿಗಳಿವೆ. ಆದರೆ ನಾನು ಅಂಥಹ …
Read More »ಸಿಡಿ ವಿವಾದವು ಬಿಜೆಪಿ ಮುಕ್ತ ರಾಜ್ಯಕ್ಕೆ ಮುನ್ನುಡಿ ಬರೆದಿದೆ | ಭವಿಷ್ಯ ನುಡಿದ ಪ್ರಿಯಾಂಕ್ ಖರ್ಗೆ
ಕಲಬುರಗಿ: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಿಡಿ ವಿವಾದ ಸೃಷ್ಟಿಯಾಗಿದ್ದು, ಇದು ಬಿಜೆಪಿ ಮುಕ್ತ ಕರ್ನಾಟಕಕ್ಕೆ ನಾಂದಿ ಹಾಡಲಿದೆ ಎಂದು ಚಿತ್ತಾಪುರ ಕ್ಷೇತ್ರದ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಎದ್ದಿರುವ ಸಿಎಂ ಯಡಿಯೂರಪ್ಪನವರ ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕೇವಲ ಬಿಎಸ್ ವೈ ಮುಕ್ತ ಬಿಜೆಪಿ ಮಾತ್ರವಲ್ಲ, ಬಿಜೆಪಿ ಮುಕ್ತ ರಾಜ್ಯ ಆಗುವ ಮುನ್ನುಡಿ …
Read More »ದಡ್ಡಿ, ಮಜತಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸತೀಶ
ಬೆಳಗಾವಿ: ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯ ದಡ್ಡಿ, ಮಜತಿ ಹಾಗೂ ಚಿಕ್ಕಲದಿನ್ನಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸತೀಶ ಜಾರಕಿಹೊಳಿ ಗುರುವಾರ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆಯ ಸುಮಾರು 45 ಲಕ್ಷ ರೂ. ಅನುದಾನದಲ್ಲಿ ದಡ್ಡಿ, ಮಜತಿ, ಮಾವನೂರು, ಕುರ್ಣಿ, ಚಿಕ್ಕಲದಿನ್ನಿ ಗ್ರಾಮದಲ್ಲಿನ ಎಸ್, ಸಿ ಕಾಲೋನಿಗಳಲ್ಲಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ರಮೇಶ ಪಾಟೀಲ್, ಸುರೇಶ ಬೆನ್ನಿ, ಮಾಲಿಂಗ ಶಿರಗುಪ್ಪಿ, …
Read More »ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎತ್ತುಗಳಿಗೆ ಪೂಜೆ ಮಾಡಿರೋದು ಸಾಕಷ್ಟು ಕುತೂಹಲ ಮೂಡಿಸಿರೋದು ಸುಳ್ಳಲ್ಲ
ಬೆಂಗಳೂರು: ಮಕರ ಸಂಕ್ರಾಂತಿಯ ಪ್ರಯುಕ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಧರ್ಮಪತ್ನಿ ಉಷಾ ಶಿವಕುಮಾರ್ ಜೊತೆಗೂಡಿ ಇಂದು ತಮ್ಮ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು. ವಿಶೇಷ ಅಂದ್ರೆ ಒಂದೆಡೆ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಗೋಮಾಂಸದ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಾ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ನನಗೆ ಯಾರೂ ಬೆಂಬಲ ನೀಡುತ್ತಿಲ್ಲ.. ಜನರೇ ನನ್ನನ್ನು ಕಾಪಾಡಬೇಕು ಅಂತಾ ಅಲವತ್ತುಕೊಳ್ಳುತ್ತಿದ್ದಾರೆ. ಈನಡುವೆ ಇನ್ನೊಂದೆಡೆ ಕೆಪಿಸಿಸಿ …
Read More »ಮೊದಲ ಹಂತದಲ್ಲಿ 2,934 ಸ್ಥಳಗಳಲ್ಲಿ ಸುಮಾರು 3 ಲಕ್ಷ ಫ್ರಂಟ್ ಲೈನ್ ವರ್ಕರ್ಸ್ ಕೊರೋನಾ ಲಸಿಕೆ
ಬೆಂಗಳೂರು : ಜನವರಿ 16ರ ಮೊದಲ ದಿನ ದೇಶಾದ್ಯಂತ 2,934 ಸ್ಥಳಗಳಲ್ಲಿ ಸುಮಾರು 3 ಲಕ್ಷ ಫ್ರಂಟ್ ಲೈನ್ ಹೆಲ್ತ್ ಕೇರ್ ಕಾರ್ಮಿಕರಿಗೆ ಲಸಿಕೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರತಿ ಸೈಟ್ ಗೆ ದಿನಕ್ಕೆ ಅಸಮಂಜಸ ಸಂಖ್ಯೆಯ ಲಸಿಕೆಗಳನ್ನು ಆಯೋಜಿಸದಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಪ್ರತಿ ಲಸಿಕೆ ಯ ಅಧಿವೇಶನವು ಗರಿಷ್ಠ 100 ಫಲಾನುಭವಿಗಳಿಗೆ ಸೇವೆ ನೀಡಲಿದೆ ಎಂದು ಹೇಳಿದೆ. ಪ್ರತಿ ಅಧಿವೇಶನದಲ್ಲಿ ಪ್ರತಿ …
Read More »
Laxmi News 24×7