Breaking News

ಜಿಲ್ಲೆ

ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ.

ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ. ಈ ರೀತಿ ಸುಳ್ಳು ಹೇಳಿ ಜನರೆದುರು ಬೆತ್ತಲೆ ಆಗೋದನ್ನು ತಪ್ಪಿಸಲು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಉಸ್ತುವಾರಿಗಳಿಗೆ ಸಾರ್ವಜನಿಕ ಹಣಕಾಸು ನಿರ್ವಹಣೆಯ ಬಗ್ಗೆ ತರಬೇತಿ ಕೊಡುವುದು ಒಳ್ಳೆಯದು. ನಮ್ಮ ಸರ್ಕಾರದ ಕೊನೆ ವರ್ಷ(2017-18) ಪಡೆದಿದ್ದ ಸಾಲ ಕೇವಲ ರೂ.35,000 ಕೋಟಿ. 2020-21ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಲ ರೂ.90,000 ಕೋಟಿ, …

Read More »

ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ.. ಪುತ್ರಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಸತೀಶ್ ಜಾರಕಿಹೊಳಿ?

ದಾವಣಗೆರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಮಗಳಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ ಜಾರಕಿಹೊಳಿ.. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯುತ್ತಿರುವ 3ನೇ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕ ಅವರು ಆಗಮಿಸಿ, ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಕೆಲವು ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಹ ಹೆಚ್ಚು …

Read More »

ಹುಕ್ಕೇರಿ ನೂತನ ತಹಶೀಲ್ದಾರ್ ಡಿ.ಎಚ್. ಹೂಗಾರ ಅಧಿಕಾರ ಸ್ವೀಕಾರ

ಹುಕ್ಕೇರಿ: ತಾಲೂಕಿನ ನೂತನ ತಹಶೀಲ್ದಾರ ಆಗಿ ಡಿ.ಎಚ್. ಹೂಗಾರ ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ನೂತನ ತಹಶೀಲ್ದಾರರನ್ನು ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹೂಗಾರ ಅವರು ಶಾಸಕ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು.

Read More »

ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಗಡಿಪಾರಿಗೆ ಆಗ್ರಹ

  ರಾಮನಗರ : ಹಿರಿಯ ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಹಾಗೂ ದಲಿತ ಸಮಾನ ಮನಸ್ಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ವಕೀಲೆ ಮೀರಾ ರಾಘವೇಂದ್ರ ಅವರ ಗಡಿಪಾರಿಗೆ ಆಗ್ರಹಿಸಿದರು. ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.ಪ್ರೊ. ಕೆ. ಎಸ್. ಭಗವಾನ್ ಮುಖಕ್ಕೆ ಮಸಿ‌ ಬಳಿದ ವಕೀಲೆ ವೀರಾ ರಾಘುವೇಂದ್ರ‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೇಶದ ಸಂವಿಧಾನದ …

Read More »

ಪೊಲೀಸ್ ದಾಳಿಗೆ ಹೆದರಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ನೀರು ಪಾಲು

ರಾಮದುರ್ಗ: ಯುವಕರ ಗುಂಪು ಜೂಜಾಟದಲ್ಲಿ ತೊಡಗಿದ್ದು, ಪೊಲೀಸ್ ದಾಳಿ ನಡೆಸಿದ್ದರಿಂದ ಇಬ್ಬರು ಮಲಪ್ರಭಾ ನದಿಗೆ ಹಾರಿದ ಘಟನೆ ನಡೆದಿದೆ. ನದಿಯ ಪಕ್ಕದ ಪೊದೆಯ ಬಳಿ ಗುಂಪು ಪೊಲೀಸರು ಬಂದಿದ್ದರಿಂದ ಹೆದರಿ ಓಡಿಹೋಗಿದ್ದಾರೆ. ಈ ವೇಳೆ ಇಬ್ಬರು ನದಿ ನೀರಿಗೆ ಹಾರಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಈಜು ತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಂಜುನಾಥ ಲಕ್ಷ್ಮಣ ಬಂಡಿವಡ್ಡರ (28) ಹಾಗೂ ಸಮೀರ ಮಹಮದಸಾಬ ಬಟಕುರ್ಕಿ (23) ನದಿಗೆ …

Read More »

ಬೆಳಗಾವಿ ಲೋಕಸಭೆ ಉಪಚುನಾವಣೆ: ಮತಗಟ್ಟೆಗಳ ತಯಾರಿ ನಡೆಸಿರುವ ಅಧಿಕಾರಿಗಳು

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಮತಗಟ್ಟೆಗಳನ್ನು ತಯಾರಿಸುವ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ. ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ ಎನ್ನಲಾಗುತ್ತಿದ್ದು, ಚುನಾವಣಾ ಆಯೋಗದ ಸೂಚನೆಯಂತೆ ಅಧಿಕಾರಿಗಳು, ವಿವಿಧ ಸರ್ಕಾರಿ ಶಾಲೆಗಳಿಗೆ ಭಾನುವಾರ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯಗಳು ಮತ್ತು ಮತಗಟ್ಟೆಯಾಗಿ ಪರಿವರ್ತಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಸೆ. 23ರಂದು ಕೋವಿಡ್‌ನಿಂದಾಗಿ …

Read More »

ವಾಲ್ಮೀಕಿ ಜಾತ್ರೆಯಲ್ಲಿ ಮೀಸಲಾತಿ ಹೆಚ್ಚಳ ಕುರಿತು ಚರ್ಚೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಗೋಕಾಕ : ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದಲೂ ಇದೆ. ಆ ವಿಷಯವಾಗಿ ವಾಲ್ಮೀಕಿ ಜಾತ್ರೆಯಲ್ಲಿ ಚರ್ಚೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಸಹ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9 ರಂದು ಮಹರ್ಷಿ ವಾಲ್ಮೀಕಿ …

Read More »

ತಮಿಳು, ತೆಲುಗಿನಿಂದಾಗಿ ಕನ್ನಡ ಚಿತ್ರರಂಗ ಉದ್ದಾರ ಆಗಿಲ್ಲ: ಸುದೀಪ್ ಖಡಕ್ ಮಾತು

ಬೆಂಗಳೂರು: ಬೇರೆ ಭಾಷೆಯಿಂದಾಗಿ ನಮ್ಮ ಚಿತ್ರರಂಗ ಇತ್ತೀಚೆಗಿನ ದಿನಗಳಲ್ಲಿ ಬೇರೆ ಲೆವೆಲ್ ಗೆ ಹೋಗಿಲ್ಲ. ಕನ್ನಡಕ್ಕೆ ಕನ್ನಡದ್ದೇ ಆದ ನೆಲೆ, ಸ್ಥಾನ-ಮಾನವಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ. ತಮ್ಮ ಚಿತ್ರಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಮಾಧ‍್ಯಮಗಳೊಂದಿಗೆ ಮಾತನಾಡಿದ ಸುದೀಪ್, ಕನ್ನಡ ಸಿನಿಮಾ ಈಗ ಬೇರೆ ಭಾಷೆಗಳಲ್ಲೂ ಮಿಂಚುತ್ತಿದೆ. ಇದರಿಂದಾಗಿ ನಮ್ಮ ಸಿನಿಮಾದ ಲೆವೆಲ್ ಬೇರೆಯಾಗಿದೆ ಎಂದು ನಿಮಗನಿಸುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ‘ತಮಿಳು, ತೆಲುಗು, …

Read More »

ಲಕ್ಷ್ಮೀನ ಶಿಕ್ಷಣ ಸಂಸ್ಥೆಯಿಂದ ಕ್ರೀಡೋ ಸಂಸ್ಥೆಯ ಮಾರ್ಗದರ್ಶನದಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪ್ರೀ-ಪ್ರಾಯಮರಿ ಶಾಲೆಯ ಉದ್ಘಾಟನೆಯನ್ನು ಸುವರ್ಣಾ ಭೀಮಶಿ ಜಾರಕಿಹೊಳಿ ನೆರವೇರಿಸಿದರು.

  ಗೋಕಾಕ: ಮಕ್ಕಳಿಗೆ ಉಪಕರಣಗಳೊಂದಿಗೆ ಪ್ರಾಯೋಗಿಕವಾಗಿ ಕಲಿಸುವ ಕಲಿಕಾ ಕ್ರಮವು ಅತ್ಯಂತ ಪರಿಣಾಮಕಾರಿ ಆಗಿರುತ್ತದೆ ಎಂದು ಬೆಂಗಳೂಇನ ಕ್ರೀಡೋ ಸಂಸ್ಥೆಯ ಆಯೇಷಾ ಶೇಖ ಹೇಳಿದರು. ಶನಿವಾರ ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟಿನಿಂದ ಕ್ರೀಡೋ ಸಂಸ್ಥೆಯ ಮಾರ್ಗದರ್ಶನದಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪ್ರೀ-ಪ್ರಾಯಮರಿ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಅಧುನಿಕ ಕಲಿಕಾ ಕ್ರಮಗಳನ್ನು …

Read More »

ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ನಟಿ ಅಮೂಲ್ಯ ದಂಪತಿ

ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಸದ್ಯ ಸಿನಿಮಾರಂಗದಿಂದ ದೂರ ಉಳಿದ್ದರೂ ಸಹ ಆಗಾಗ ಸುದ್ದಿಯಲ್ಲಿರುತ್ತಾರೆ. ತನ್ನ ಮಾವನ ಜೊತೆ ರಾಜಕೀಯ ಕೆಲಸಗಳಲ್ಲಿ ಗುರುತಿಸಿಕೊಳ್ಳುವ ಅಮೂಲ್ಯ ಆಗಾಗ ರಾಜಕೀಯ ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಮದುವೆ ಬಳಿಕ ಅಮೂಲ್ಯ ಮತ್ತೆ ಬಣ್ಣ ಹಚ್ಚಿಲ್ಲ. ಅಮೂಲ್ಯ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿಬಂದರೂ ಸಹ ಇದುವರೆಗೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಪತಿ, ಸಂಸಾರ ಅಂತ ಸಂತೋಷದ ಜೀವನ …

Read More »