Breaking News

ಜಿಲ್ಲೆ

ಕುಡಿದ ಮತ್ತಿನಲ್ಲಿ ನಡೆದೇ ಹೋಯ್ತು ಕೊಲೆ

ವಿಜಯಪುರ: ನಿನ್ನೆ ರಾತ್ರಿಯಷ್ಟೇ ಪತ್ನಿಯನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಚ್ಚಿ ಕೊಂದಿದ್ದು, ಅಂಥದ್ದೇ ಮತ್ತೊಂದು ಘಟನೆ ಇಂದೂ ವರದಿಯಾಗಿದೆ. ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಪತ್ನಿಯನ್ನು ಪತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಗುಡ್ನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಸಮ್ಮ ಕುಂಬಾರ (50) ಕೊಲೆಗೀಡಾದ ಮಹಿಳೆ. ಪತಿ ಕಲ್ಲಪ್ಪ ಕುಂಬಾರ ಕೊಲೆ ಆರೋಪಿ. ಪಾನಮತ್ತನಾಗಿ ಮನೆಗೆ ಬಂದ ಪತಿ, ಮತ್ತು ಮನೆಯಲ್ಲಿದ್ದ …

Read More »

ಮಹದಾಯಿ ವಿವಾದ: ಸುಪ್ರೀಂ ಸೂಚನೆಯಂತೆ ಜಂಟಿ ಪರಿಶೀಲನಾ ಸಮಿತಿಗೆ ಕರ್ನಾಟಕ, ಗೋವಾ ಪ್ರತಿನಿಧಿಗಳ ನೇಮಕ

ಬೆಳಗಾವಿ: ಕಳಸಾ, ಬಂಡೂರಿ ನಾಲೆ ನೀರನ್ನು ಮಲಪ್ರಭೆಗೆ ಹರಿಸಬೇಕು ಎಂಬುದು ಉತ್ತರ ಕರ್ನಾಟಕ ಜನರ ಅನೇಕ ವರ್ಷಗಳ ನಿರಂತರ ಪ್ರಯತ್ನವಾಗಿದೆ. ಇದಕ್ಕಾಗಿ ಅನೇಕ ಹೋರಾಟ, ಚಳುವಳಿಗಳು ನಡೆದಿದ್ದು, ನ್ಯಾಯಾಧೀಕರಣದಲ್ಲಿ ಸಹ ನೀರಿನ ಹಂಚಿಕೆಯಾಗಿದೆ. ಆದರೆ ಮೂರು ವರ್ಷ ಕಳೆದರೂ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಗೋವಾ ಸರ್ಕಾರ ಪದೇ ಪದೇ ಆಕ್ಷೇಪ ತೆಗೆಯುತ್ತಿರುವುದು. ಕಳಸಾ ನಾಲೆ ನೀರನ್ನು ಕರ್ನಾಟಕ ಸರ್ಕಾರ ಯಾವುದೇ ಅನುಮತಿ ಇಲ್ಲದೇ ತಿರುವು …

Read More »

ಮುಖ್ಯಮಂತ್ರಿಗಳೇ ನೀವು ತಡೆಯಾಜ್ಞೆ ತರುವುದಿಲ್ಲವೇ..? : ಯತ್ನಾಳ್ ಲೇವಡಿ

ಬೆಂಗಳೂರು,ಮಾ.6- ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿರುವಂತೆ ಕಣ್ಣಿನಲ್ಲಿ ನೋಡಲಾಗದ ಸಿಡಿ ಇವೆಯಂತೆ. ಅದರ ವಿರುದ್ಧ ನೀವು ತಡೆಯಾಜ್ಞೆ ತರುವುದಿಲ್ಲವೇ ಎಂದು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದೆ. ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವಿಟರ್‍ನಲ್ಲಿ ಕಾಂಗ್ರೆಸ್ ಬಿಜೆಪಿಯ ವಿರುದ್ಧ ಹರಿಹಾಯ್ದಿದ್ದು, ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದೆ. ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯ ಸಚಿವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಸಿಡಿ ಶಬ್ಧ ಕೇಳಿದರೆ ಇಡೀ ಸಂಪುಟವೇ ಏಕೆ …

Read More »

ಸಂಸದರ ಮಾನ ಹರಾಜು ಹಾಕಿದ ವಾಟಾಳ್..

ಬೆಂಗಳೂರು,ಮಾ.6- ಮಹದಾಯಿ, ಮೇಕೆದಾಟು ಯೋಜನೆ ಆರಂಭಕ್ಕೆ ಒತ್ತಾಯಿಸಿ ಹಾಗೂ ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಕಾಮಗಾರಿ ಕೈಗೆತ್ತಿಕೊಂಡರೂ ಮೌನ ವಹಿಸಿರುವ ಸರ್ಕಾರದ ಕ್ರಮ ವಿರೋಸಿ ಕನ್ನಡ ಒಕ್ಕೂಟ ಸಂಸದರನ್ನು ಹರಾಜು ಹಾಕುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಅನ್ಯಾಯದ ವಿರುದ್ದ ಲೋಕಸಭಾ ಸದಸ್ಯರು ಧ್ವನಿ ಎತ್ತದಿರುವುದು ತೀವ್ರ ಖಂಡನೀಯ ಎಂದರು. ತಮಿಳುನಾಡಿನಲ್ಲಿ ಕಾವೇರಿ ನದಿಜೋಡಣೆಗೆ ಸಂಬಂಸಿದಂತೆ 118 ಕಿ.ಮೀ ಉದ್ದದ …

Read More »

ಗೋಕಾಕ: ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಮೆಳವಂಕಿ ಗ್ರಾಮದ ಗೌಡನ ಕ್ರಾಸ್‍ದಲ್ಲಿ ಪ್ರತಿಭಟನೆ ನಡೆಸುತ್ತಿರುವುದು.

ಗೋಕಾಕ: ರಮೇಶ ಜಾರಕಿಹೊಳಿ ಅವರ ಮೆಳವಂಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಿಬಟ್ಟಿ, ಚಿಗಡೊಳ್ಳಿ ಮತ್ತು ಮೆಳವಂಕಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಶನಿವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಹಿರೇಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಮೆಳವಂಕಿ ಗ್ರಾಮದ ಗೌಡನ ಕ್ರಾಸದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ …

Read More »

ಜೈಲು ಪಾಲಾದ ಸಿಡಿಪಿಓಗಳು!

ವಿಜಯಪುರ : ಇಬ್ಬರು ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು ಮೂವರು ಸಿಡಿಪಿಓ ಗಳನ್ನು ಪೊಲೀಸರು ಜೈಲಿಗಟ್ಟಿರುವ ಘಟನೆ ನಡೆದಿದೆ. ಜಮಖಂಡಿಯ ಗೋಪಾಲ್ ತೇಲಿ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಗಿರೀಶ್ ತೇಲಿ, ಮಹಾದೇವ ತೇಲಿ ಎಂಬ ಅಧಿಕಾರಿಗಳು ಅಂಗನವಾಡಿ ಮಕ್ಕಳಿಗೆ ಸೇರಬೇಕಿದ್ದ ಕೆಎಂಎಫ್ ಹಾಲಿನ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಜಮಖಂಡಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಹಾಲಿನ ಪ್ಯಾಕೆಟ್ ಗಳನ್ನು ವಶಕ್ಕೆ ಪಡೆದಿದ್ದರು. …

Read More »

‘ರಾಜಕಾರಣಿಗಳು ಅಂದರೆ ಲಫಂಗರು ಅನ್ನುವ ರೀತಿ ಆಗುತ್ತಿದೆ’ ಸುಧಾಕರ್ ಅವರದೂ ಸಿಡಿ ಇದೆಯಾ? ಎಂದ ಸಿದ್ದರಾಮಯ್ಯ

ಬೆಂಗಳೂರು: ‘ರಾಜಕಾರಣಿಗಳು ಅಂದರೆ ಲಫಂಗರು ಅನ್ನುವ ರೀತಿ ಆಗುತ್ತಿದೆ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಯಾವುದೇ ಮಾಧ್ಯಮಗಳು ಯಾವುದೇ ರೀತಿಯ ಸುದ್ದಿ ಪ್ರಸಾರ ಮಾಡದಂತೆ ಕೆಲ ಸಚಿವರುಗಳು ಮುಂಜಾಗ್ರತೆಯಾಗಿ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಿಡಿ ಇದೆ ಎಂದು ಗೊತ್ತಿದ್ದರೆ ಮಾತ್ರ ಅದನ್ನು ರಾಜಕೀಯ ಷಡ್ಯಂತ್ರ ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಸಚಿವ ಸುಧಾಕರ್ ಅವರದು …

Read More »

“ಕುಂಬಳಕಾಯಿ ಕಳ್ಳ ಎಂದರೆ 6 ಸಚಿವರಿಗೇಕೆ ಭಯ?”: ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು, ಮಾರ್ಚ್.06: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಹೊರ ಬರುತ್ತಿದ್ದಂತೆ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಾಂಬೆ ಫ್ರೆಂಡ್ಸ್ ಎಂತಲೇ ಕರೆಸಿಕೊಳ್ಳುವ ಸಚಿವರ ನಡೆಯನ್ನು ಕಾಂಗ್ರೆಸ್ ಟೀಕಿಸಿದೆ. “ಕುಂಬಳಕಾಯಿ ಕಳ್ಳ ಅಂದರೆ ಕರ್ನಾಟಕದ ಬಿಜೆಪಿ ಸಚಿವರೇಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ?. ಸಿಡಿ ಶಬ್ದ ಕೇಳಿದರೆ ಸರ್ಕಾರದ ಇಡೀ ಸಂಪುಟವೇ ಏಕೆ ಬೆಚ್ಚಿ ಬೀಳುತ್ತಿದೆ?.” ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ …

Read More »

ಸಂಪುಟದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದೇಕೆ?: ಬಿ ಸಿ ಪಾಟೀಲ್ ಸ್ಪಷ್ಟನೆ

ಹಾವೇರಿ, ಮಾರ್ಚ್.06: ತಮ್ಮ ವಿರುದ್ಧ ಯಾವುದೇ ರೀತಿ ಅವಹೇಳನಕಾರಿ ಮತ್ತು ಮಾನಹಾನಿಗೆ ಸಂಬಂಧಿಸಿದಂತೆ ಯಾವುದೇ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. “ಒಬ್ಬ ರೈತನ ಮಗನಾಗಿ ಯಾವುದೇ ಗಾಡ್ ಫಾದರ್ ಇಲ್ಲದೇ ಇಷ್ಟರ ಮಟ್ಟಕ್ಕೆ ಬೆಳೆದು ಬಂದಿದ್ದು ಬಹಳಷ್ಟು ಜನರಿಗೆ ಸಹಿಸಲು ಆಗುವುದಿಲ್ಲ. ಆದರೆ ಯಾವುದೋ ಕುತಂತ್ರಿಗಳ ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹೆಸರನ್ನು ವಿನಾಕಾರಣ ಸತ್ಯಾಸತ್ಯತೆ ಅರಿಯದೆ ನಮ್ಮ …

Read More »

ಮತ್ತೆ ಶುರು ‘ಕನ್ನಡದ ಕೋಟ್ಯಧಿಪತಿ’ ಹವಾ.!

ಬೆಂಗಳೂರು: ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ಕನ್ನಡ ಕೋಟ್ಯಧಿಪತಿ ರಿಯಾಲಿಟಿ ಶೋ ಪ್ರಸಾರವಾಗಲಿದೆ. ಜೂನ್ 22ರಂದು ಮೊದಲ ಸಂಚಿಕೆ ಪ್ರಸಾರವಾಗಲಿದ್ದು, ಪ್ರತಿ ಶನಿವಾರ ಭಾನುವಾರ ಕಾರ್ಯಕ್ರಮ ಪ್ರಸಾರವಾಗಲಿದೆ. ರಾತ್ರಿ 8 ಗಂಟೆಗೆ ನಿಗದಿಯಾಗಿರೋ ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ನಿರೂಪಣೆ ಮಾಡಲಿದ್ದಾರೆ. ಇನ್ನು ಈ ಸೀಸನ್ ನ ಕನ್ನಡದ ಕೋಟ್ಯಧಿಪತಿ ಯಾರಾಗಲಿದ್ದಾರೆ …

Read More »