ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಶಾಂತಿಯುತವಾಗಿ ಆರಂಭವಾಗಿದ್ದು ಬೆಳಿಗ್ಗೆ 9 ಗಂಟೆಯವರೆಗೆ ಶೇ 5.47 ರಷ್ಟು ಮತದಾನವಾಗಿದೆ. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ಬಂದು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಶಾಂತಿಯುತ ಮತದಾನವಾಗುತ್ತಿರುವ ಮಧ್ಯೆ ತಮ್ಮ ಹಳ್ಳಿಯ ಸ್ಥಳಾಂತರಕ್ಕೆ ಒತ್ತಾಯಿಸಿ ರಾಮದುರ್ಗ ತಾಲೂಕಿನ ಪ್ರವಾಹ ಪೀಡಿತ ಚಿಕ್ಕತಡಸಿ ಹಾಗೂ ಹಿರೇತಡಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಗ್ರಾಮದ ಸ್ಥಳಾಂತರ ವಿಷಯದಲ್ಲಿ ಅಧಿಕಾರಿಗಳ …
Read More »ರಾಯಚೂರು: ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಕಿಡಿ
ರಾಯಚೂರು: ಮಸ್ಕಿ ಕ್ಷೇತ್ರದ ಕುರುಕುಂದಾ ಗ್ರಾಮದಲ್ಲಿ ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ ಪ್ರಸಂಗ ನಡೆಯಿತು. ಮತಗಟ್ಟೆಯ ನೂರು ಮೀಟರ್ ಒಳಗೆ ಇರಬಾರದು ಎಂಬ ನೀತಿ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಅನುಸರಿಲಾಗುತ್ತಿದೆ. ಬಿಜೆಪಿಯವರು ನಿಂತಿದ್ದರು ಕ್ಯಾರೆ ಎನ್ನದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಕಾಲರ್ ಹಿಡಿದು ಆಚೆ ಕಳುಹಿಸುತ್ತಿದ್ದಾರೆ. ಪೊಲೀಸರ ಬಿಜೆಪಿಯವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತೆ ಪದ್ಮಾವತಿ ದೂರಿದರು. ಪೊಲೀಸರು ಹಾಗೂ …
Read More »ದಾರಿ ತಪ್ಪಿ ದೆಹಲಿ ತಲುಪಿದ ವೃದ್ಧೆ;ಕರಳು ಬಳ್ಳಿಗೆ ಸೇರಿಸಿದ ಯೋಧ
ಬಾಗಲಕೋಟೆ: ಮೊಮ್ಮಗನ ಜತೆಗೆ ತಿರುಪತಿ ದರ್ಶನಕ್ಕೆ ಹೋಗಿದ್ದ ಜಿಲ್ಲೆಯ ವೃದ್ಧೆಯೊಬ್ಬರು ರೈಲು ಹತ್ತುವಾಗ ತಪ್ಪಿ ಬೇರೊಂದು ರೈಲು ಏರಿದ್ದರಿಂದ ದೆಹಲಿ ತಲುಪಿದ್ದು, ಆ ವೃದ್ಧೆಯನ್ನು ಸೈನಿಕರೊಬ್ಬರು ಕರಳು ಬಳ್ಳಿಗೆ ಕೂಡಿಸಲು ನೆರವಾಗಿದ್ದಾರೆ. ಹುನಗುಂದ ತಾಲೂಕಿನ ದಾಸಬಾಳ ಗ್ರಾಮದ ಶಿವಮ್ಮ ಪಾಟೀಲ ಎಂಬ ವೃದ್ಧೆ, ಕಳೆದ ಶನಿವಾರ ತಿರುಪತಿಗೆ ಹೋಗಿದ್ದರು. ತಿರುಪತಿ ದರ್ಶನ ಮುಗಿದ ಬಳಿಕ ರೈಲ್ವೆ ನಿಲ್ದಾಣದಲ್ಲಿ ಮೊಮ್ಮಗನೊಂದಿಗೆ ಇದ್ದ ವೃದ್ಧೆ ಗದ್ದಲದಲ್ಲಿ ಪ್ರತ್ಯೇಕಗೊಂಡಿದ್ದರು. ಮೊಮ್ಮಗ ರೈಲು ನಿಲ್ದಾಣದಲ್ಲಿ ವೃದ್ಧೆಗಾಗಿ …
Read More »ಗೋಕಾಕ ನಲ್ಲಿ ಮತ ಚಲಾವಣೆ ಮಾಡಿದ ಸಂತೋಷ್ ಜಾರಕಿಹೊಳಿ ದಂಪತಿ…
ಗೋಕಾಕ: ಬೆಳಗಾವಿ ಸೇರಿದಂತೆ ಎಲ್ಲಾಕಡೆ ಮತದಾನ ಮಂದಗತಿಯಿಂದ ಪ್ರಾರಂಭ ವಾಗಿದ್ದು ಸಮಯ್ ಕಳೆದಂತೆ ಜೋರಾಗಿಯೇ ನಡಿತಿದೆ ಸುಮಾರು 20ರಿಂದ 30 ಶೇಕಡಾ ಮತದಾನ ಗೋಕಾಕ ಹಾಗೂ ಅರಭಾವಿ ಕ್ಷೇತ್ರದಲ್ಲಿ ಆಗಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯ ವಾಗುತ್ತಿದೆ. ಇಂದು ಮಾಜಿ ಸಚಿವ ಹಾಗೂ ಗೋಕಾಕ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಅವರ್ ಸುಪುತ್ರ ಶ್ರೀ ಸಂತೋಷ್ ಜಾರಕಿಹೊಳಿ ಹಾಗೂ ಅವರ್ ಸೊಸೆ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಎಲ್ಲರಂತೆ ಸರಳ …
Read More »ಆನ್‍ಲೈನ್ ಮೂಲಕ ಮಾವು ಮಾರಾಟ
ಬೆಂಗಳೂರು, – ಮಾವು ಬೆಳೆಗಾರರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಗ್ರಾಹಕರಿಗೆ ಬೆಳೆಗಾರರಿಂದ ನೇರವಾಗಿ ತಾಜ ಮತ್ತು ಸ್ವಾದಿಷ್ಟ ಮಾವಿನ ಹಣ್ಣುಗಳನ್ನು ಆನ್‍ಲೈನ್‍ನಲ್ಲಿ ಖರೀದಿಸುವ ವ್ಯವಸ್ಥೆ ಕಲ್ಪಿಸಿದೆ ಎಂದು ಮಾವು ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19ರ 2ನೆ ಅಲೆ ಹೆಚ್ಚುತ್ತಿರುವುದರಿಂದ ಹಿಂದಿನಂತೆ ಕಾರ್ಸಿರಿ ಮ್ಯಾಂಗೋಸ್ ಎಂಬ ಆನ್‍ಲೈನ್ ಪೋರ್ಟಲ್ (https://karsirimangoes.karnataka.gov.in) …
Read More »ಉಪಚುನಾವಣೆ: ಬೆಳಗಾವಿ ಮತ್ತು ಮಸ್ಕಿ, ಬಸವಕಲ್ಯಾಣದಲ್ಲಿ ಮತದಾನ ಆರಂಭ
ಬೆಳಗಾವಿ/ರಾಯಚೂರು: ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಜಿದ್ದಾಜಿದ್ದಿನ ಕಣಗಳಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಆರಂಭವಾಗಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೋಂಕು ಹರಡದಂತೆ ಎಚ್ಚರ ವಹಿಸಲು ಮತಗಟ್ಟೆಗಳಲ್ಲಿ ಅಂತರ ಕಾಯ್ದುಕೊಂಡು ಮತದಾನ ಮಾಡಬೇಕಿದೆ. ಹೀಗಾಗಿ, ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದ್ದು, ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಸಚಿವರಾಗಿದ್ದ ಸುರೇಶ ಅಂಗಡಿ …
Read More »ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮ
ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಏ.17ರಂದು ನಡೆಯಲಿದೆ. ಕೋವಿಡ್-19 ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ, ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್ ತಿಳಿಸಿದರು. ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮತಯಂತ್ರವನ್ನು ಎಲ್ಲರೂ ಬಳಸುತ್ತಾರೆ ಎಂಬ ಆತಂಕ ಮತದಾರರಿಗೆ ಇದೆ. ರಾಜಕೀಯ ಪಕ್ಷದವರೂ ಈ ಬಗ್ಗೆ ಗಮನಸೆಳೆದಿದ್ದರು. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣಾ ಆಯೋಗ ಹಾಗೂ ಆರೋಗ್ಯ …
Read More »ಮತದಾನ ಮಾಡಿ ಗೆಲ್ಲುವ ವಿಶ್ವಾಸ ನನ್ನಲಿದೆ ಎಂದ ಮಂಗಲ್ ಅಂಗಡಿ
ಬೆಳಗಾವಿ, ಏಪ್ರಿಲ್ 17: ಬೆಳಗಾವಿ ಲೋಕಸಭೆ ಉಪಚುನಾವಣೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಮತದಾನ ಮಾಡಿದ ಪ್ರಮುಖರಲ್ಲಿ ಮೊದಲಿಗರಾಗಿದ್ದು ವಿಶೇಷ. ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ ಎರಡರಲ್ಲಿ ಬೆಳಗ್ಗೆ 7 ಗಂಟೆಗೆ ಆಗಮಿಸಿದ ಮಂಗಲ ಅವರು ಮತದಾನ ಮಾಡಿದರು. ಮತಗಟ್ಟೆ ಆಗಮಿಸುತ್ತಿದ್ದಂತೆ ಮೊದಲಿಗೆ ಮತದಾರರ ಕಾಲು ಮುಗಿದು ಆಶೀರ್ವಾದ ಪಡೆದ ಮಂಗಲ ಅವರು ನಂತರ ಸರತಿ ಸಾಲಿನಲ್ಲಿ ನಿಂತರು. …
Read More »ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚ
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಂತೆ ರಾಜ್ಯದಲ್ಲಿ ನಡೆಸುವ ಸಾರ್ವಜನಿಕ ಸಮಾರಂಭಗಳು, ಆಚರಣೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಮಿತಿಯನ್ನು ಹೇರಲಾಗಿದೆ. ಈ ಹೊಸ ಮಾರ್ಗಸೂಚಿಯು ಏಪ್ರಿಲ್ 30 ರ ವರೆಗೆ ಜಾರಿಯಲ್ಲಿರಲಿದೆ. ಮಾರ್ಗಸೂಚಿಗಳು : – ತೆರೆದ ಪ್ರದೇಶದಲ್ಲಿ ನಡೆಸುವ ಮದುವೆ ಕಾರ್ಯಕ್ರಮಗಳಲ್ಲಿ 200 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಹಾಗೂ ಕಲ್ಯಾಣ …
Read More »ಏಪ್ರಿಲ್ 18 ರಂದು ಸಿಎಂ ಜೊತೆ ನಡೆಯಬೇಕಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ!
ಬೆಂಗಳೂರು : ಏಪ್ರಿಲ್ 18 ರಂದು ಸಿಎಂ ಯಡಿಯೂರಪ್ಪ ಕರೆದಿದ್ದ ಸರ್ವ ಪಕ್ಷ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ವಿಧಾನಸೌಧದಲ್ಲಿ ಏಪ್ರಿಲ್ 18 ಸಂಜೆ 4 ಗಂಟೆಗೆ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಕೋವಿಡ್ ನಿಯಂತ್ರಣ ಸಂಬಂಧ ಎಲ್ಲಾ ಪಕ್ಷದ ಮುಖಂಡರ ಜೊತೆ ಸಲಹೆ ಪಡೆಯುವ ಉದ್ದೇಶದಿಂದ ಸಿಎಂ ಸಭೆ ಕರೆದಿದ್ದರು. ಸಭೆಯಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಸಭೆಯನ್ನು ದಿಢೀರ್ ಮುಂದೂಡಿಕೆ …
Read More »
Laxmi News 24×7