ಬೆಂಗಳೂರು, ಏ.21- ನಿರ್ಮಾಣ ಹಂತದ ಕಟ್ಟಡ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಹುಬ್ಬಳ್ಳಿ ನಿವಾಸಿ ಪ್ರಕಾಶ್ (25) ಕೊಲೆಯಾದ ಕಾರ್ಮಿಕ. ತಿಂಡ್ಲು ಸಮೀಪದ ಸಪ್ತಗಿರಿ ಲೇಔಟ್‍ನಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಪ್ರಕಾಶ್ ಗಾರೆ ಕೆಲಸ ಮಾಡಿಕೊಂಡು ಈ ಜಾಗದಲ್ಲೇ ನಿರ್ಮಿಸಲಾಗಿದ್ದ ಲೇಬರ್ ಶೆಡ್‍ನಲ್ಲಿ ನೆಲೆಸುತ್ತಿದ್ದನು. ರಾತ್ರಿ ಪ್ರಕಾಶ್ ಹೊರಗೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ ಶೆಡ್‍ನಿಂದ …
Read More »ಶ್ರೀರಾಮನವಮಿ ಅಂಗವಾಗಿ ರಮೇಶ್ ಜಾರಕಿಹೊಳಿ ಅವರ ಟ್ವಿಟರ್ ಖಾತೆಯಲ್ಲಿ ಶುಭಾಶಯ
ಬೆಂಗಳೂರು, ಏ.21- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಶ್ರೀರಾಮನವಮಿ ಅಂಗವಾಗಿ ರಮೇಶ್ ಜಾರಕಿಹೊಳಿ ಅವರ ಟ್ವಿಟರ್ ಖಾತೆಯಲ್ಲಿ ಶುಭಾಶಯ ತಿಳಿಸಲಾಗಿದೆ. ಫೆ.18ರಿಂದ ನಿಷ್ಕ್ರಿಯವಾಗಿದ್ದ ಟ್ವಿಟರ್ ಖಾತೆ ಇಂದು ಬೆಳಗ್ಗೆ ಸಕ್ರಿಯವಾಗಿದೆ. ಸಿಡಿ ಪ್ರಕರಣದಲ್ಲಿ ಸಿಲುಕಿದ ರಮೇಶ್ ಜಾರಕಿಹೊಳಿ ಅವರು ಇದ್ದಕ್ಕಿದ್ದಂತೆ ಅಜ್ಞಾತವಾಸಕ್ಕೆ ತೆರಳಿದ್ದರು. ನ್ಯಾಯಾೀಶರ ಮುಂದೆ ಯುವತಿ ಹೇಳಿಕೆ ನೀಡಿದ ಬಳಿಕ ರಮೇಶ್ ಜಾರಿಕಿಹೊಳಿ ಬೆಳಗಾವಿ ಸೇರಿಕೊಂಡಿದ್ದು, ಕೊರೊನಾ ಸೋಂಕು ತಗುಲಿದೆ ಎಂದು ಚಿಕಿತ್ಸೆ …
Read More »ರಾಜ್ಯದಲ್ಲಿ ‘ಸಾರಿಗೆ ಬಸ್ ಸಂಚಾರ’ ಯಥಾಸ್ಥಿತಿಗೆ : ಇಂದು 1ಗಂಟೆ ವೇಳೆಗೆ ‘10,084 ಸಾರಿಗೆ ಬಸ್ ಸಂಚಾರ’ ಆರಂಭ
ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ಬಸ್ ಸಂಚಾರ ಕೂಡಲೇ ಆರಂಭಿಸುವಂತೆ ಹೈಕೋರ್ಟ್ ಮುಷ್ಕರ ನಿರತ ಸಾರಿಗೆ ನೌಕರರ ಕೂಟಕ್ಕೆ ನಿನ್ನೆ ನೋಟಿಸ್ ನೀಡಿದ ಪರಿಣಾಮ, ಇಂದು ಮಧ್ಯಾಹ್ನದ ವೇಳೆಗೆ ಸಾರಿಗೆ ಬಸ್ ಸಂಚಾರ ರಾಜ್ಯಾಧ್ಯಂತ ಯಥಾಸ್ಥಿತಿಯತ್ತೆ ದಾಪುಗಾಲಿಟ್ಟಿದೆ. ಮಧ್ಯಾಹ್ನ 1 ಗಂಟೆಯ ವೇಳೆ 10,084 ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿವೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ರಾಜ್ಯಾಧ್ಯಂತ 1 …
Read More »ಬೆಳಗಾವಿಯ ಕಾಡಂಚಿನ ಗ್ರಾಮದಲ್ಲಿ ಅರ್ಧಕ್ಕರ್ಧ ಜನರಿಗೆ ಕೊರೊನಾ ಪಾಸಿಟಿವ್: ಇಡೀ ಊರನ್ನೇ ಸೀಲ್ಡೌನ್ ಮಾಡಿದ ಅಧಿಕಾರಿಗಳು
ಬೆಳಗಾವಿ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿದ್ದು, ಇಂದಿನಿಂದ ಮೇ.4ರ ತನಕ ಕೆಲ ಕಠಿಣ ನಿಯಮಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಡುವೆ ಕೆಲವೆಡೆ ಕಾರ್ಮಿಕರ ವಲಸೆ ಆರಂಭವಾಗಿದ್ದು, ಬೆಳಗಾವಿ ಜಿಲ್ಲೆಗೆ ಇದು ಮಾರಕವಾಗಿ ಪರಿಣಮಿಸುತ್ತಿದೆ. ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಡಂಚಿನಲ್ಲಿರುವ ಪುಟ್ಟ ಗ್ರಾಮವಾದ ಅಬನಾಳಿ ಎಂಬಲ್ಲಿ ಬರೋಬ್ಬರಿ 146 ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಿದ್ದಾರೆ. …
Read More »ನೀವು ವಿಶೇಷ ಆರ್ಥಿಕ ನೆರವು ಕೊಡುವುದು ಬೇಡ, ನಮ್ಮ ನ್ಯಾಯಬದ್ಧ ಪಾಲನ್ನಷ್ಟಾದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ.
ಬೆಂಗಳೂರು: ಕೊರೊನಾ ಸೋಂಕು ಏರಿಕೆ ಹಿನ್ನೆಲೆ ಇಂದು ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ ಭಾಷಣದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ.. ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ ಕೈ’ ಎಂಬ ಸಂದೇಶ ನೀಡಿದೆ ಎಂದು ವ್ಯಂಗ್ಯವಾಡಿದ್ದಾರೆ. ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದಕ್ಕೆ ನ್ಯಾಯಬದ್ಧವಾಗಿ ತೆರಿಗೆ ಪಾಲನ್ನು ನೀಡದಿರುವ ಕೇಂದ್ರ ಬಿಜೆಪಿ ಸರ್ಕಾರವೂ ಕಾರಣ …
Read More »ಕುಟುಂಬಸ್ಥರೇ ಕೈಬಿಟ್ಟ ಸೋಂಕಿತನ ಮೃತದೇಹಕ್ಕೆ ಮುಸ್ಲಿಂ ಸಹೋದರರಿಂದ ಅಂತಿಮ ವಿಧಿ ವಿಧಾನ..!
ಕೊರೊನಾ ವೈರಸ್ನಿಂದ ಸಾವನ್ನಪ್ಪಿದರೆ ಮುಗೀತು. ಯಾವುದೇ ಧಾರ್ಮಿಕ ವಿಧಿ ವಿಧಾನ ಮಾಡೋದು ಹಾಗಿರಲಿ. ಮೃತ ವ್ಯಕ್ತಿಯ ಮುಖ ನೋಡೋಕೂ ಕೆಲವೊಮ್ಮೆ ಕುಟುಂಬಸ್ಥರಿಗೆ ಅವಕಾಶ ಸಿಗೋದಿಲ್ಲ. ಆದರೆ ತೆಲಂಗಾಣದಲ್ಲಿ ಇಬ್ಬರು ಮುಸ್ಲಿಂ ಸಹೋದರರು ಹಿಂದೂ ವ್ಯಕ್ತಿಯ ಮೃತದೇಹಕ್ಕೆ ಅಂತ್ಯಕ್ರಿಯೆ ನಡೆಸಿದ ಮಾನವೀಯ ಘಟನೆ ವರದಿಯಾಗಿದೆ. ಕಟಪಲ್ಲಿ ಎಂಬ ಗ್ರಾಮದಲ್ಲಿ ಕೊರೊನಾ ವೈರಸ್ನಿಂದ ಬಲಿಯಾದ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನ ಮುಸ್ಲಿಂ ಸಹೋದರರು ಮಾಡಿ ಮುಗಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗದೇ ಇರೋದ್ರಿಂದ …
Read More »35 ಮಂದಿ ರೈತರ ಮೇಲೆ ಎಫ್‍ಐಆರ್ ದಾಖಲು
ಹಾವೇರಿ: ಕೊರೊನಾ ನಿಯಮ ಉಲ್ಲಂಘಿಸಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಇಂಡಿಯನ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದ 30 ರಿಂದ 35 ರೈತರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. 2019ರಲ್ಲಿ ಸಾಲಮನ್ನಾ ಯೋಜನೆಯಡಿ ಹಣ ಬಿಡುಗಡೆಯಾದ್ರೂ ರೈತರ ಖಾತೆಗೆ ಹಣ ಜಮಾ ಆಗಿಲ್ಲವೆಂದು ರೈತರು ಪ್ರತಿಭಟನೆ ಮಾಡಿದ್ದರು. ಕೊರೊನಾ ಎರಡನೇ ಅಲೆಯ ಅಬ್ಬರವಿದ್ದರೂ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರತಿಭಟನೆ ನಡೆಸಿದ್ದಕ್ಕೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಣೆಬೆನ್ನೂರು ನಗರಠಾಣೆ …
Read More »ಇಂದು/ನಾಳೆಯಿಂದ ರಾಜ್ಯದ ಚಿತ್ರಮಂದಿರಗಳು ಬಂದ್ -ಚಲನಚಿತ್ರ ಪ್ರದರ್ಶಕರ ಸಂಘ
ಬೆಂಗಳೂರು: ಇಂದು ಅಥವಾ ನಾಳೆಯಿಂದ ರಾಜ್ಯದ ಎಲ್ಲಾ ಚಿತ್ರಮಂದಿರಗಳನ್ನ ಬಂದ್ ಮಾಡ್ತೇವೆ ಅಂತಾ ಕರ್ನಾಟಕ ಚಲನಚಿತ್ರ ಪ್ರದರ್ಶಕ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ತಿಳಿಸಿದ್ದಾರೆ. ಸರ್ಕಾರದ ಹೊಸ ನಿಯಮದ ಅದೇಶಕ್ಕೂ ಮೊದಲೇ ಚಿತ್ರಮಂದಿರಗಳು ಬಂದ್ ಮಾಡಲು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ನಿರ್ಧರಿಸಿದೆ. ಈ ಬಗ್ಗೆ ನ್ಯೂಸ್ಫಸ್ಟ್ ಜೊತೆ ಮಾತನಾಡಿರುವ ಕೆ.ವಿ ಚಂದ್ರಶೇಖರ್.. ಇಂದು ಅಥವಾ ನಾಳೆಯಿಂದ ರಾಜ್ಯದ ಎಲ್ಲಾ ಚಿತ್ರಮಂದಿರಗಳನ್ನ ಬಂದ್ ಮಾಡ್ತೇವೆ. ಮೇ ಅಂತ್ಯದವರೆಗೂ ಚಿತ್ರಮಂದಿರಗಳನ್ನು ಮುಚ್ಚಲು …
Read More »ಐಪಿಎಲ್ 2021 : ಲೆಕ್ಕ ಸರಿ ಮಾಡುತ್ತಾ ಯಂಗ್ ಡೆಲ್ಲಿ..?
ಬೆಂಗಳೂರು : ಐಪಿಎಲ್ ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಕಳೆದ ಬಾರಿಯ ಫೈನಲ್ ನಲ್ಲಿ ಡೆಲ್ಲಿಗೆ ಮುಂಬೈ ಸೋಲುಣಿಸಿತ್ತು. ಇವತ್ತಿನ ಪಂದ್ಯದಲ್ಲಿ ಗೆದ್ದು ಡೆಲ್ಲಿ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ. ಹೆಡ್ ಟು ಹೆಡ್ ಐಪಿಎಲ್ ಇತಿಹಾಸದಲ್ಲಿ 28 ಬಾರಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಮುಂಬೈ 16 ಬಾರಿ ಗೆದ್ದಿದ್ದೇ ಡೆಲ್ಲಿ 12 ಬಾರಿ ಜಯ ಸಾಧಿಸಿದೆ. ಕಳೆದ ನಾಲ್ಕು …
Read More »ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ವಿದ್ಯುತ್, ಫ್ಯಾನ್ ಒದಗಿಸಿ: ಹೈಕೋರ್ಟ್
ಬೆಂಗಳೂರು: ರಾಜ್ಯದ ಎಲ್ಲಾ 65,911 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್‌ಗಳನ್ನು ಒದಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. 33,164 ಅಂಗನವಾಡಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, 26,560 ಅಂಗನವಾಡಿಗಳಿಗೆ ಫ್ಯಾನ್‌ಗಳನ್ನು ಪೂರೈಸಲಾಗಿದೆ. 44,225 ಕೇಂದ್ರಗಳಲ್ಲಿ ಶೌಚಾಲಯ ಇದೆ ಎಂದು ಸರ್ಕಾರ ಮೆಮೊ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈ ಅಂಕಿ-ಅಂಶಗಳು ಆಘಾತಕಾರಿ ಸ್ಥಿತಿಯನ್ನು ಚಿತ್ರಿಸುತ್ತವೆ’ ಎಂದು …
Read More »
Laxmi News 24×7