Breaking News

ಜಿಲ್ಲೆ

ನಾಳೆ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಲಾಕ್ ಡೌನ್ : 10 ಗಂಟೆ ಬಳಿಕ ಹೊರಗೆ ಬಂದ್ರೆ ದಂಡ ಫಿಕ್ಸ್!

ಬೆಂಗಳೂರು : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಮೇ.10 ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಪರಿಷ್ಕೃತ ಮಾರ್ಗಸೂಚಿಯಂತೆ ಮೇ.10ರ ಬೆಳಿಗ್ಗೆ 6 ಗಂಟೆಯಿಂದ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಮೊದಲು ನೈಟ್ ಕರ್ಪ್ಯೂ, ಆನಂತ್ರದ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಬಳಿಕ, ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಆದ್ರೇ.. ಕೊರೋನಾ ಮಾತ್ರ …

Read More »

ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಸೋಂಕಿತರ ನಾಪತ್ತೆ- ಮತ್ತೆ 6,029 ಮಂದಿ ಎಸ್ಕೇಪ್

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಉದ್ಯಾನ ನಗರಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಆಕ್ಸಿಜನ್, ಬೆಡ್ ಕೊರತೆಯಿಂದ ನಿತ್ಯ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಬಹಿರಂಗವಾಗಿದ್ದು, ಇಂದು ಸಹ 6,029 ಜನ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಜನರಲ್ಲಿ ಮತ್ತೆ ಆತಂಕ ಹೆಚ್ಚಿದೆ. ಕೊರೊನಾ ಕರ್ಫ್ಯೂ ಇದೀಗ ಮತ್ತೆ ಲಾಕ್‍ಡೌನ್ ಮಡಿರುವ ಮಧ್ಯೆ ನಗರದಲ್ಲಿ ಸೋಂಕಿತರು ನಾಪತ್ತೆಯಾಗಿದ್ದಾರೆ. ಈ ಹಿಂದೆ 10,835 ಜನ …

Read More »

ವಿಜಯಪುರ: ‘ಬಿಎಲ್ ಡಿಇ’ ಆಸ್ಪತ್ರೆಗೆ ರೆಮಿಡಿಸಿವರ್ ಪೂರೈಸದ ರಾಜ್ಯ ಸರ್ಕಾರದ ವಿರುದ್ಧ ಎಂ.ಬಿ ಪಾಟೀಲ್ ವಾಗ್ದಾಳಿ

ವಿಜಯಪುರ: ತನ್ನ ಮಾಲಿಕತ್ವದ 500 ಕೋವಿಡ್ ಬೆಡ್ ಗಳ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಶೇಕಡ 70% ಕಡಿತಗೊಳಿಸಿ ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಿ ಮಾನವೀಯತೆ ಮೆರೆದ ಮಾಜಿ ಗೃಹಸಚಿವ ಎಂ.ಬಿ ಪಾಟೀಲ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಮನವಿ ಸಲ್ಲಿಸಿದರೂ ಸರಿಯಾದ ಪ್ರಮಾಣದಲ್ಲಿ ರೆಮಿಡಿಸಿವರ್ ಔಷಧವನ್ನು ನೀಡದೇ, ಬೇಡಿಕೆಗೆ ಸರಿಯಾಗಿ ಸ್ಪಂದಿಸದೇ ಅಸಡ್ಡೆ ತೋರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, …

Read More »

ಕರೊನಾ ಕರಾಳತೆ: ಹೆಣದ ರಾಶಿಯಲ್ಲಿ ವೈದ್ಯರ ಹಣದ ಹುಡುಕಾಟ- 9 ಲಕ್ಷ ರೂ ಕೊಟ್ಟರೂ ಮತ್ತಷ್ಟು ಆಸೆ!

ವಿಜಯಪುರ: ಕರೊನಾ ಎರಡನೆಯ ಅಲೆ ತನ್ನ ರೌದ್ರಾವತಾರ ತೋರುತ್ತಿರುವ ನಡುವೆಯೇ, ಇಂದಿನ ಕೆಲವು ಆಸ್ಪತ್ರೆಗಳ ಸ್ಥಿತಿ ನೋಡಿದರೆ, ಸೋಂಕಿತರು ಅದರ ಒಳ ಹೋದವರು ಹೊರಕ್ಕೆ ಬರುತ್ತಾರೆ ಎಂಬ ಯಾವ ಆಸೆಯನ್ನೂ ಇಟ್ಟುಕೊಳ್ಳದ ಪರಿಸ್ಥಿತಿ ಇದೆ. ಇವುಗಳ ನಡುವೆಯೇ ಕೆಲವರು ಆಸ್ಪತ್ರೆಗಳು ಹಣ ಮಾಡುವ ದಂಧೆಗೆ ಇಳಿದಿವೆ. ದಿನನಿತ್ಯ ಹೆಣದ ರಾಶಿ ನೋಡುತ್ತಿದ್ದರೂ, ಮನುಷ್ಯನ ಜೀವನದ ಅಸಾಯಕತೆ ಕಣ್ಣಮುಂದೆ ಇದ್ದರೂ, ಕೆಲ ವೈದ್ಯರು ಹಣಕ್ಕಾಗಿ ಬಾಯಿ ಬಿಡುವುದು ಮಾತ್ರ ನಿಲ್ಲದ ಸ್ಥಿತಿ …

Read More »

ಬೆಳಗಾವಿ: ಜನರಿಗೆ ಸ್ಪಂದಿಸಲು ಸಂಸದೆ ಮಂಗಲಾ ಅಂಗಡಿ ತಾಕೀತು

ಬೆಳಗಾವಿ: ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ‘ಜಿಲ್ಲಾ ಕೋವಿಡ್ 19 ವಾರ್ ರೂಂ’ಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದರು. ‘ಇಲ್ಲಿ ನೀಡಲಾಗಿರುವ ಹಲವು ಸಹಾಯವಾಣಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜಿಲ್ಲೆಯ ಜನರು ಮಾಹಿತಿ ಹಾಗೂ ಸಹಾಯಕ್ಕಾಗಿ ಪರದಾಡುವಂತಾಗಿದೆ. ಇದು ಸರಿಯಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸೂಚಿಸಿದರು. ‘ಕೋವಿಡ್ ಸಹಾಯವಾಣಿ ಸಂಖ್ಯೆಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ತಕ್ಷಣ ಹಾಗೂ …

Read More »

ಖಾನಾಪುರ ಪಟ್ಟಣದಲ್ಲಿ ಮಂಗಳವಾರದಿಂದ ಸಂಪೂರ್ಣ ಲಾಕ್ ಡೌನ್: ಕಿರಾಣಿ, ದಿನಸಿ ಸೇರಿದಂತೆ ಎಲ್ಲ ವ್ಯಾಪಾರ-ವ್ಯವಹಾರಗಳಿಗೂ ನಿರ್ಬಂಧ

ಖಾನಾಪುರ:  ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕೋವಿಡ್ ಸೊಂಕನ್ನು ಹತ್ತಿಕ್ಕಲು ಪಟ್ಟಣದಲ್ಲಿ ಮಂಗಳವಾರ ಮೇ.೧೧ರಿಂದ ಶನಿವಾರದವರೆಗೆ ಐದು ದಿನಗಳ ಕಾಲ ಎಲ್ಲ ರೀತಿಯ ವ್ಯಾಪಾರ -ವಹಿವಾಟನ್ನು ನಿಷೇಧಿಸಿ ಖಡಕ್ ಲಾಕ್ ಡೌನ್ ಘೋಷಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸ್ಥಳೀಯ ಆಡಳಿತ ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಉಪವಿಭಾಗಾಧಿಕಾರಿ ಅಶೋಕ ತೇಲಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪಟ್ಟಣದ ವಿವಿಧ ಜಾತಿ, …

Read More »

‘ಸಿಟಿ ಸ್ಕ್ಯಾನ್’ ಮಾಡಿಸುವ ರೋಗಿಗಳಿಗೆ ಬಿಗ್ ಶಾಕ್ : ‘ಸಿಟಿ ಸ್ಕ್ಯಾನಿಂಗ್’ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನಿಂಗ್ ಗೆ ರೂ.1,500 ದರ ನಿಗದಿ ಪಡಿಸಿದ್ದ ರಾಜ್ಯ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ. ಹೌದು, ಸಿಟಿ ಸ್ಕ್ಯಾನ್ ಮಾಡಿಸುವ ರೋಗಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಹೆಚ್ ಆರ್ ಸಿ ಸ್ಕ್ಯಾನ್ ರೇಟ್ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ನಿನ್ನೆ ಎಲ್ಲರಿಗೂ ಸಿಟಿ ಸ್ಕ್ಯಾನ್ ಗೆ 1,500 ರೂಪಾಯಿ ದರ ನಿಗದಿ ಮಾಡಿದ್ದ ಸರ್ಕಾರ ಇದೀಗ ಮತ್ತೊಂದು ಆದೇಶದಲ್ಲಿ ಬಿಪಿಎಲ್ ಕಾರ್ಡ್ …

Read More »

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಬೇಗುದಿ : ಹೈಕಮಾಂಡ್ ಕಡೆ ಬೊಮ್ಮಾಯಿ ನಡೆ

ಬೆಂಗಳೂರು: ಕೊರೊನಾ ವೈರಸ್‌ ಎರಡನೇ ಅಲೆಯಿಂದಾಗಿ ರಾಜ್ಯದ ಜನರು ಆತಂಕಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಬೇಗುದಿಯೂ ಹೆಚ್ಚಾಗುತ್ತಿದ್ದು, ಎಲ್ಲ ಬೆಳವಣಿಗೆಗಳ ವಿವರಣೆ ನೀಡಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಬಿ.ವೈ ವಿಜಯೇಂದ್ರ ಅವರು ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆಕ್ಸಿಜನ್ ವಿಚಾರದಲ್ಲಿ ಸುಪ್ರೀಂಕೋರ್ಟ್ ನಲ್ಲಿ ಮುಖಭಂಗ, ಉಪ ಚುನಾವಣೆ ಫ‌ಲಿತಾಂಶ, ಚಾಮರಾಜನಗರ ದುರಂತ ಹಾಗೂ ಬೆಂಗಳೂರಿನಲ್ಲಿ ಬೆಡ್‌ ಬ್ಲಾಕಿಂಗ್ ಪ್ರಕರಣದ ಬಗ್ಗೆ …

Read More »

ಪ್ರಾಣವಾಯು ರಥಕ್ಕೆ ಸಾರಥಿಗಳಿವರು.

ಬೆಂಗಳೂರು: ಇವರು ಕೊರೊನಾ 2ನೇ ಅಲೆಯ ನಡುವೆ ನೈಜ ಹೀರೋಗಳು. ನಿತ್ಯ ನೂರಾರು ಕಿ.ಮೀ. ದೂರದಿಂದ ಆಮ್ಲಜನಕವನ್ನು ಹೊತ್ತು ತರುತ್ತಾರೆ, ಆಸ್ಪತ್ರೆಗಳಿಗೆ ಹಂಚುತ್ತಾರೆ, ರೋಗಿಗಳ ಪಾಲಿಗೆ ಪ್ರಾಣವಾಯುವೇ ಆಗಿದ್ದಾರೆ. – ಕೋವಿಡ್ ಮುಂಚೂಣಿ ಸೇನಾನಿಗಳಾಗಿದ್ದರೂ ಎಲೆಮರೆಯ ಕಾಯಿಗಳಂತಿರುವ ಆಮ್ಲಜನಕ ಟ್ಯಾಂಕರ್‌ಗಳ ಚಾಲಕರ ಸುದ್ದಿ ಇದು. ಟ್ಯಾಂಕರ್‌ ಚಾಲನೆ ಸುಲಭವಲ್ಲ : ಆಮ್ಲಜನಕ ಟ್ಯಾಂಕರ್‌ಗಳನ್ನು ಇತರ ವಾಹನ ಗಳಂತೆ ಚಲಾಯಿಸುವಂತಿಲ್ಲ. ಆಮ್ಲಜನಕವು ದಹನ ಪೂರಕವಾಗಿರುವುದರಿಂದ ಅಪಾಯ. ಹಾಗಾಗಿ ಎಂಜಿನ್‌ ಬಿಸಿಯಾಗದಂತೆ ತಾಸಿಗೆ 50 …

Read More »

ಕೊರೊನಾ ನೆಗೆಟಿವ್ ವರದಿ ಇಲ್ಲ :ರಾಯ್ಪುರದಿಂದ ಬೆಂಗಳೂರಿಗರು ವಾಪಸ್

ಬೆಂಗಳೂರು, ಮೇ 08: ಕೋವಿಡ್ ನೆಗೆಟಿವ್ ವರದಿಯಿಲ್ಲದೆ ಬೆಂಗಳೂರಿನಿಂದ ರಾಯ್ಪುರಕ್ಕೆ ಬಂದಿಳಿಸಿದ್ದ 13 ಮಂದಿ ಪ್ರಯಾಣಿಕರನ್ನು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ. ಪ್ರಯಾಣಿಕರು ಬೆಂಗಳೂರು, ಹೈದರಾಬಾದ್ ಮತ್ತು ನವದೆಹಲಿಯಿಂದ ಅವರು ರಾಯ್ಪುರಕ್ಕೆ ಆಗಮಿಸಿದ್ದರು. ಈ ಘಟನೆ ಬುಧವಾರ ಸಂಭವಿಸಿದ್ದು ಬೆಳಿಗ್ಗೆ 10.25 ಕ್ಕೆ ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಹತ್ತಿದ್ದರು ಅದರೆ ಕೋವಿಡ್ -19 ಪ್ರಕರಣಗಳ ಇತ್ತೀಚಿನ ಏರಿಕೆಯಿಂದಾಗಿ, ಛತ್ತೀಸ್‌ಗಢದ ಎಲ್ಲಾ ವಿಮಾನ ಪ್ರಯಾಣಿಕರಿಗೆ ಮೇ 4ರಿಂದ ಕೋವಿಡ್ …

Read More »