Breaking News

ಜಿಲ್ಲೆ

ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ

ಗೋಕಾಕ:ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ ಸಾಬಾ ಗೋಕಾಕ ಡಿ.ವೈ.ಎಸ್.ಪಿ ಯಾಗಿ ಬಂದಿದ್ದ ವಿಜಯಪುರ ಜಿಲ್ಲೆಯ ಶೆಗುಣಶಿ ಗ್ರಾಮದ ಜಾವೇದ ಇನಾಂದಾರ ತಮ್ಮ ಸ್ವ- ಗ್ರಾಮ ದಲ್ಲಿ ತನಗಾದ ಅವಮಾನಗಳನ್ನು ಗೆದ್ದು ಡಿ.ವೈ.ಎಸ್‌.ಪಿ ಹುದ್ದೆಗೆ ಏರಿ ಗ್ರಾಮದ ಜನರ ಹುಬ್ಬೇರಿಸಿದರು ಇವರ ಈ ಡಿಟ್ಟ ಕ್ರಮದಿಂದ ಅವರಿಗೆ ಅವಮಾನ ಮಾಡಿದ ಗ್ರಾಮದ ಜನರಿಂದಲೇ ಸತ್ಕಾರ ಮಾಡಿಸಿಕೊಂಡು …

Read More »

18+ ಲಸಿಕೆ ನಾಳೆ ಮತ್ತೆ ಆರಂಭ

ಬೆಂಗಳೂರು: ರಾಜ್ಯದಲ್ಲಿ 18-44 ವರ್ಷ ವಯೋಮಾನದವರಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳನ್ನು ಗುರುತಿಸಿ ಮೇ 22ರಿಂದ ಕೋವಿಡ್ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಲಸಿಕೆ ಕೊರತೆಯಿಂದ 18-44 ವರ್ಷ ದವರ ಲಸಿಕೆ ಅಭಿಯಾನ ತಾತ್ಕಾಲಿಕ ಸ್ಥಗಿತವಾಗಿತ್ತು. ಸದ್ಯ ಮೇ 15ರಂದು ನಡೆದ ತಜ್ಞರ ಸಮಿತಿ ಸಭೆಯ ತೀರ್ಮಾನದಂತೆ ಕೊರೊನಾ ಮುಂಚೂಣಿ ಕಾರ್ಯಕರ್ತರು ಆದ್ಯತಾ ವಲಯದ 18ರಿಂದ 44 ವರ್ಷ ದವರಿಗೆ ಲಸಿಕೆ ನೀಡಬಹುದು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ …

Read More »

ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಗರಂ

ಬೆಂಗಳೂರು: ಕೋವಿಡ್ ನಿಯಂತ್ರಣ ಸಂಬಂಧ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ವೀಡಿಯೋ ಸಂವಾದ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಡುವೆ “ಸಂಘರ್ಷ’ ಏರ್ಪಟ್ಟಿದೆ. ವೀಡಿಯೋ ಸಂವಾದ ನಡೆಸುವ ಸಂಬಂಧ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅದಕ್ಕೆ, “ಮಾಹಿತಿ ಪಡೆಯಬಹುದು. ಆದರೆ ವೀಡಿಯೋ ಸಂವಾದ ನಡೆಸಲು ಅವಕಾಶ ಇಲ್ಲ ಎಂದು ಮುಖ್ಯ ಮಂತ್ರಿಯವರಿಂದ ನಿರ್ದೇಶಿತನಾಗಿ ದ್ದೇನೆ’ ಎಂಬ ಉತ್ತರ ಸಿಕ್ಕಿದೆ. ಇದರಿಂದ …

Read More »

ಬೆಳಗಾವಿಯಲ್ಲಿ ಮಕ್ಕಳ ಲಸಿಕೆ ಪ್ರಯೋಗ

ಬೆಳಗಾವಿ: ಕೋವಿಡ್ ಮೂರನೇ ಅಲೆ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಹದಿನೆಂಟಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೂ ಲಸಿಕೆ ನೀಡುವ ಸಂಬಂಧ ಪ್ರಯೋಗಗಳಿಗೆ ವೇಗ ದೊರೆತಿದೆ. ಝೈಡಸ್‌ ಕ್ಯಾಡಿಲಾ ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಝೈಕೋವ್‌-ಡಿ ಮೂರು ಹಂತದ ವೈದ್ಯ ಕೀಯ ಪ್ರಯೋಗ (ಕ್ಲಿನಿಕಲ್‌ ಟ್ರಯಲ್ಸ್‌) ನಲ್ಲಿ ರಾಜ್ಯದ 1,500ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದಾರೆ. ವಿಶೇಷವೆಂದರೆ ವಯಸ್ಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಕೊವ್ಯಾಕ್ಸಿನ್‌ ಹಾಗೂ ಕೊವಿಶೀಲ್ಡ್‌ 2 ಡೋಸ್‌ಗಳಿದ್ದರೆ, ಮಕ್ಕಳಿಗೆ ಪ್ರಯೋಗ ಮಾಡುತ್ತಿರುವ ಈ ಲಸಿಕೆ ಮೂರು …

Read More »

ವೈದ್ಯೆಯಿಂದ ವ್ಯಾಕ್ಸಿನ್ ಕಳ್ಳ ದಂಧೆ – ಪೊಲೀಸರ ಬಲೆಗೆ ಗ್ಯಾಂಗ್

ಬೆಂಗಳೂರು: ಹಲವರು ವ್ಯಾಕ್ಸಿನ್‍ಗಾಗಿ ದಿನಗಟ್ಟಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇನ್ನೂ ಹಲವರು ಮೂರ್ನಾಲ್ಕು ದಿನ ಆಸ್ಪತ್ರೆಗೆ ಅಲೆದರೂ ವ್ಯಾಕ್ಸಿನ್ ಖಾಲಿ ಆಗಿದೆ 3 ದಿನ ಬಿಟ್ಟು ಬನ್ನಿ ಎಂದೇ ಹೇಳುತ್ತಿದ್ದಾರೆ. ಆದರೆ ಬೆಂಗಳೂರಿನ ವೈದ್ಯೆಯೊಬ್ಬಳು ಕಳ್ಳ ಮಾರ್ಗದಲ್ಲಿ ವ್ಯಾಕ್ಸಿನ್ ನೀಡಿದ್ದಾರೆ. ಈ ಕುರಿತು ಭಯಾನಕ ಸತ್ಯ ಇದೀಗ ಹೊರ ಬಿದ್ದಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ವೈದ್ಯೆ ಡಾ.ಪುಷ್ಪಿತಾ(25) ಮತ್ತು ಸಿಬ್ಬಂದಿ ಪ್ರೇಮಾ (34) ಅವರನ್ನು ಬಂಧಿಸಿದ್ದಾರೆ. ಡಾ. ಪುಷ್ಪಿತಾ ಮಂಜುನಾಥನಗರದ ಪ್ರಾಥಮಿಕ …

Read More »

ರಾಯಚೂರು ವಿದ್ಯುದಾಗಾರದಲ್ಲಿ ಕೊರೊನಾಘಾತ: 5 ಮಂದಿ ಕೊರೊನಾಗೆ ಬಲಿ; ಆಡಳಿತ ಮಂಡಳಿ ನಿರ್ಲಕ್ಷ್ಯ, ಆತಂಕ ಇನ್ನೂ ಅಧಿಕ

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೇಲೆ ‌ಕೊರೊನಾ ಕರಿ ನೆರಳು ಬೀರಿದೆ. ಕೊರೊನಾ ಆತಂಕದಲ್ಲೇ ಕೆಲಸ ಮಾಡುತ್ತಿರುವ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ನೌಕರರು ಕೊರೊನಾ 2ನೇ ಅಲೆಯಿಂದಾಗಿ ಬೆಚ್ಚಿಬಿದ್ದಿದ್ದಾರೆ. ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆಯಿಂದಾಗಿ ನೌಕರರಲ್ಲಿ ಕೊರೊನಾ ಆತಂಕ ಇನ್ನೂ ಅಧಿಕವಾಗಿದೆ. ಕೊರೊನಾ ಪಾಸಿಟಿವ್ ಆದ ಆರ್‌ಟಿಪಿಎಸ್‌ನ ನಾಲ್ವರು ಉದ್ಯೋಗಿಗಳು ಕೊವಿಡ್ ಗೆ ಬಲಿಯಾಗಿದ್ದಾರೆ. ಒಟ್ಟು ಒಂದು ತಿಂಗಳ ಅಂತರದಲ್ಲಿ ಐದು ಮಂದಿ ನೌಕರರು ಕೊವಿಡ್ ಗೆ ಬಲಿಯಾಗಿದ್ದಾರೆ. …

Read More »

ಮೂರು ತಿಂಗಳ ಕಾಲ ಸಾಲ ಮರುಪಾವತಿಗೆ ವಿನಾಯಿತಿ :B.S.Y.

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾಗಿರುವ ನಿರ್ಬಂಧಗಳ ಬೆನ್ನಲ್ಲೇ ರಾಜ್ಯ ಸರಕಾರ ಭರ್ಜರಿ ಪ್ಯಾಕೇಜ್ ಘೋಷಣೆ ಮಾಡಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಸಾಲ ಮರುಪಾವತಿದಾರರಿಗೆ ಬಿಗ್ ರಿಲೀಪ್ ಕೊಟ್ಟಿದ್ದು, ಮೂರು ತಿಂಗಳ ಕಾಲ ಸಾಲ ಮರುಪಾವತಿಗೆ ವಿನಾಯಿತಿ ನೀಡಿದೆ. ರೈತರು ಹಾಗೂ ಸ್ವಸಹಾಯ ಸಂಘಗಳಿಂದ ಸಾಲ ಪಡೆದಿರುವವರಿಗೆ ಸಾಲದ ಕಂತುಗಳ ಮರು ಪಾವತಿಗೆ ಮೂರು ತಿಂಗಳ ಕಾಲ ಅವಕಾಶವನ್ನು ಕಲ್ಪಿಸಿದೆ. ಜುಲೈ ಅಂತ್ಯದ ವರೆಗೆ ಸಾಲದ …

Read More »

ಸಕಾಲಕ್ಕೆ ಆಕ್ಸಿಜನ್ ಒದಗಿಸಿ 50 ರೋಗಿಗಳ ಜೀವ ಉಳಿಸಿದ ಕಾಂಗ್ರೆಸ್ ಯುವ ನಾಯಕ

ರಾಯಚೂರು: ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಏಕಾಏಕಿ ಆಕ್ಸಿಜನ್ ಕೊರತೆ ಎದುರಾದ ಘಟನೆ ನಡೆದಿದ್ದು ಸಕಾಲಕ್ಕೆ ಕಾಂಗ್ರೆಸ್ ಯುವ ನಾಯಕ ಬಸನಗೌಡ ಬಾದರ್ಲಿ ಆಕ್ಸಿಜನ್ ಪೂರೈಸುವ ಮೂಲಕ 50 ಜನರ ಪ್ರಾಣ ಉಳಿಸಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿದ್ದಂತೆಯೇ ಸ್ವತಃ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಬಸನಗೌಡ ಬಾದರ್ಲಿ ಅವರಿಗೆ ಕರೆ ಮಾಡಿ ಆಕ್ಸಿಜನ್ ಒದಗಿಸುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಕೆಲವೇ ಹೊತ್ತಿನಲ್ಲಿ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ 15 ಜಂಬೋ …

Read More »

ಯಡಿಯೂರಪ್ಪ ಸರಕಾರಕ್ಕೆ ಕಾಂಗ್ರೆಸ್ ಕೇಳಿದ 10 ಪ್ರಶ್ನೆಗಳು: ಉತ್ತರಿಸುವಿರಾ?

ಬೆಂಗಳೂರು, ಮೇ 20: ಕೋವಿಡ್ ನಿರ್ವಹಣೆ, ರಾಜ್ಯದ ಸಂಸದರ ಅಸಾಮರ್ಥ್ಯ ಸೇರಿದಂತೆ ಕರ್ನಾಟಕ ಕಾಂಗ್ರೆಸ್ ಘಟಕ ಯಡಿಯೂರಪ್ಪ ಸರಕಾರಕ್ಕೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಅದು ಹೀಗಿದೆ: 1. ಕೊರೊನಾ ಬಂದು ವರ್ಷ ಕಳೆದಿದೆ, ತಜ್ಞರ ಎಚ್ಚರಿಕೆಗೂ ಹಲವು ತಿಂಗಳುಗಳು ಕಳೆದಿವೆ, ಎಲ್ಲಾ ಸಿದ್ಧತೆಗಳಿಗೂ ಅವಕಾಶಗಳಿದ್ದವು, ಸಮಯವೂ ಇತ್ತು. ಇಷ್ಟಿದ್ದರೂ ಬೇಜವಾಬ್ದಾರಿತನದಿಂದ ನಡೆದುಕೊಂಡು ರಾಜ್ಯದ ಜನತೆಯ ಜೀವಕ್ಕೆ ಮುಳುವಾಗಿದೆ ಸರ್ಕಾರ. @BJP4Karnataka ಸರ್ಕಾರ, @BSYBJP ಅವರು ಈ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿದೆಯೇ? …

Read More »

ಅಪರಿಪೂರ್ಣ ಪ್ಯಾಕೇಜ್: ಸಂಗಮೇಶ ಬಬಲೇಶ್ವರ

ವಿಜಯಪುರ: ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಅವೈಜ್ಞಾನಿಕ, ಅಪರಿಪೂರ್ಣ ಹಾಗೂ ನಿಜವಾಗಿ ತೊಂದರೆಗೊಳಗಾದ ಎಲ್ಲರನ್ನೂ ಪರಿಗಣಿಸುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ. ಕೋವಿಡ್‌ನಿಂದ ತಂದೆ, ತಾಯಿಯನ್ನು ಕಳೆದುಕೊಂಡಿರುವ ಮಕ್ಕಳಿಗಾಗಿ ಪ್ಯಾಕೇಜ್‌ನಲ್ಲಿ ನೇರವು ಘೋಷಿಸದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ದೆಹಲಿ ರಾಜ್ಯ ಸರ್ಕಾರದ ಮಾದರಿಯಲ್ಲಿ ಅನಾಥ ಮಕ್ಕಳ ಬಾಳಿಗೆ ಬೆಳಕು ನೀಡುವ ಪ್ರಯತ್ನ ಮಾಡಬೇಕು ಎಂದು ಅವರು …

Read More »