Breaking News

ಜಿಲ್ಲೆ

B.I.M.S.ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸುತ್ತಿದ್ದಾರೆ.

ಬೆಳಗಾವಿ– ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಭೇಟಿ ದಿನಾಂಕ ನಿಗದಿಯಾಗಿದ್ದು, ಬೆಳಗಾವಿಯಲ್ಲಿ ಅಧಿಕಾರಿಗಳ ಸರಣಿ ಸಭೆ ಆರಂಭವಾಗಿದೆ. ಕೊರೋನಾ ನಿಯಂತ್ರಣದಲ್ಲಿ ಆಗುತ್ತಿರುವ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಯಾರ ನಿಯಂತ್ರಣವೂ ಇಲ್ಲದೆ ಕೊರೋನಾ ಅವ್ಯವಸ್ಥೆ ತೀವ್ರವಾಗಿದೆ. ಯಾರಿಗೆ ಬೆಡ್ ಸಿಗುತ್ತದೆ, ಎಷ್ಟು ಜನ ಸಾಯುತ್ತಿದ್ದಾರೆ, ಯಾರಿಗೆ ಚಿಕಿತ್ಸೆ ಸಿಗುತ್ತಿದೆ ಯಾವುದೂ ಜನಸಾಮಾನ್ಯರಿಗಿರಲಿ, ಮಂತ್ರಿಗಳಿಗೂ ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಮಂತ್ರಿಗಳು, ಶಾಸಕರು ನಿರಂತರ …

Read More »

ಬೆಳೆದ ಬಾಳೆಗೆ ಸಿಗದ ಬೆಲೆ: ಉಚಿತವಾಗಿ ಹಂಚಿದ ಎಂ.ಬಿ.ಪಾಟೀಲ ಅಭಿಮಾನಿ ರೈತ

ವಿಜಯಪುರ: ಕೋವಿಡ್ ಸಂಕಷ್ಟದ ಕಾರಣಕ್ಕೆ ತಾವು ಬೆಳೆದ ಬಾಳೆಗೆ ಮಾರುಕಟ್ಟೆ ಸಿಗದಿದ್ದಾಗ ತಿಪ್ಪೆಗೆ ಸುರಿಯದೇ, ಹಣ್ಣನ್ನು ಹಳ್ಳಿಗಳಲ್ಲಿ ಹಂಚುವ ಮೂಲಕ ತಮ್ಮ ಕ್ಷೇತ್ರದ ಶಾಸಕರ ಸೇವೆಗೆ ಕೃತಜ್ಞತೆ ಸಲ್ಲಿಸಿ ರೈತರೊಬ್ಬರು ಮಾದರಿ ಆಗಿದ್ದಾರೆ. ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್ ಗ್ರಾಮದ ರೈತ ಬಸವರಾಜ ಕಾತ್ರಾಳ ಕ್ಷೇತ್ರದ ಶಾಸಕರಾದ ಎಂ.ಬಿ.ಪಾಟೀಲ ಅವರ ಅಪ್ಪಟ ಅಭಿಮಾನಿ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತಾವು ಲಕ್ಷಾಂತರ ರೂ. ಬಂಡವಾಳ ಹಾಕಿ, ಶ್ರಮ ವಹಿಸಿ 3 ಎಕರೆ …

Read More »

ವರ್ಷದ ಹಿಂದೆ ಮಗು ಕದ್ದಿದ್ದ ಮನೋವೈದ್ಯೆಯ ಬಂಧನ

ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನಿರಂತರ ಒಂದು ವರ್ಷದ ಕಾರ್ಯಾಚರಣೆ ಬಳಿಕ ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬರೋಬ್ಬರಿ 1 ವರ್ಷಕ್ಕೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಆರೋಪಿಯ ರೇಖಾ ಚಿತ್ರ ರಚಿಸಿ ತಲಘಟ್ಟಪುರ ಪಿಎಸ್‌ಐ ಶ್ರೀನಿವಾಸ್ ಮತ್ತು ತಂಡ ಕಾರ್ಯಾಚರಣೆಗೆ ಇಳಿದಿದ್ರು. ಸದ್ಯ ಒಂದು ವರ್ಷದ ಬಳಿಕ ಆರೋಪಿ ಸಿಕ್ಕಿದ್ದು ಮಗುವನ್ನು ಕಳ್ಳತನ ಮಾಡಿದ್ದು ಓರ್ವ ಮನೋವೈದ್ಯೆ ಎಂಬುವುದು ತಿಳಿದು ಬಂದಿದೆ. ಉತ್ತರ …

Read More »

ಬೆಡ್​ಗೆ ಒಬ್ಬ ಮಂತ್ರಿ, ಆಕ್ಸಿಜನ್‌ಗೆ ಒಬ್ಬ ಮಂತ್ರಿ, ಸ್ಮಶಾನಕ್ಕೆ ಒಬ್ಬ ಮಂತ್ರಿ ಮಾಡಿದರೂ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ‌ ಮತ್ತು ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ

ಬೆಳಗಾವಿ : ಬೆಡ್​ಗೆ ಒಬ್ಬ ಮಂತ್ರಿ, ಆಕ್ಸಿಜನ್‌ಗೆ ಒಬ್ಬ ಮಂತ್ರಿ, ಸ್ಮಶಾನಕ್ಕೆ ಒಬ್ಬ ಮಂತ್ರಿ ಮಾಡಿದರೂ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ‌ ಮತ್ತು ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ ಎಂದು‌ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನಿತ್ಯ 7 ಸಾವಿರ ಟೆಸ್ಟಿಂಗ್ ಮಾಡಿಸಿ ಅಂತಾ ಸರ್ಕಾರ ಹೇಳಿದೆ. ಆದರೆ ಬೆಳಗಾವಿಯಲ್ಲಿ ವೈದ್ಯರೇ ಇಲ್ಲ. ಪ್ರಾಥಮಿಕ ಆಸ್ಪತ್ರೆಗಳು ಸೋರುತ್ತಿವೆ. ಪ್ರಾಣ ಉಳಿಸಿಕೊಳ್ಳಲು …

Read More »

ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ,66 ಲೀಟರ್ ಸಾರಾಯಿ ಹಾಗೂ 3,440ರೂಪಾಯಿ ಪೊಲಿಸರ ವಶಕ್ಕೆ

ಬೆಳಗಾವಿ: ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಬೆಳಗಾವಿಯ ಕಪಿಲೇಶ್ವರ್ ಮಂದಿರದ ಓವರ್ ಬ್ರಿಡ್ಜ್ ಕೆಳಗೆ ನಡೆದಿದೆ. ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಸುಮಾರು 26,136 ರೂಪಾಯಿ ಮೌಲ್ಯದ 66 ಲೀಟರ್ ಸಾರಾಯಿ ಹಾಗೂ 3,440ರೂಪಾಯಿಯನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬೆಳಗಾವಿ ನಗರ ಡಿಸಿಪಿ ಡಾ.ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.

Read More »

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಇಂದು ಕ್ಲೀನ್ ಚಿಟ್ ಸಿಗುವ ಸಾಧ್ಯತೆಗಳಿವೆ.

ಬೆಂಗಳೂರು: ಅತ್ಯಾಚಾರ ಕೇಸಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಇಂದು ಕ್ಲೀನ್ ಚಿಟ್ ಸಿಗುವ ಸಾಧ್ಯತೆಗಳಿವೆ. ಹೌದು. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಗೆ ಇಂದು ಬಿಗ್ ಡೇ ಆಗಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನಿಖಾ ಪ್ರಗತಿ ವರದಿ ಕೇಳಿದೆ. ಹೀಗಾಗಿ ಎಸ್‍ಐಟಿ ಇಂದು ತನಿಖಾ ಪ್ರಗತಿ ವರದಿ ಸಲ್ಲಿಸಲಿದೆ. ಈ ವರದಿ ನೋಡಿ ಹೈಕೋರ್ಟ್ ಎಸ್ ಐಟಿಯೇ ತನಿಖಾ ಮುಂದುವರಿಸಬೇಕಾ..? ಅಥವಾ ಬೇರೆ ತನಿಖಾ ಸಂಸ್ಥೆಗೆ ವರ್ಗಾವಣೆ …

Read More »

ನಂದಿನಿ ಹಾಲು ಗ್ರಾಹಕರಿಗೆ ಬಂಪರ್ ಕೊಡುಗೆ: ಅದೇ ಬೆಲೆಗೆ ಹೆಚ್ಚುವರಿ ಹಾಲು

ಬೆಂಗಳೂರು: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕೆಎಂಎಫ್ ನಂದಿನಿ ಹಾಲು ಗ್ರಾಹಕರಿಗೆ ಒಂದು ತಿಂಗಳು ಹೆಚ್ಚುವರಿ ಹಾಲು ನೀಡಲಾಗುತ್ತದೆ. ಒಂದು ಲೀಟರ್ಗೆ 40 ಮಿ.ಲೀ. ಮತ್ತು ಅರ್ಧ ಲೀಟರಿಗೆ 20 ಎಂ.ಲೀ. ಹಾಲನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಎಲ್ಲ ಶ್ರೇಣಿಯ ನಂದಿನಿ ಹಾಲಿನ ಗ್ರಾಹಕರಿಗೆ ಹೆಚ್ಚುವರಿ ಹಾಲು ಒಂದು ತಿಂಗಳ ಕಾಲ ಪೂರೈಕೆಯಾಗಲಿದೆ. ಕೊರೋನಾ ಲಾಕ್ ಡೌನ್ ಕಾರಣದಿಂದ ಹೆಚ್ಚುವರಿ ಹಾಲು ಸಂಗ್ರಹವಾಗುತ್ತಿದೆ. ಇದರಿಂದಾಗಿ ಕೆಎಂಎಫ್ ವ್ಯಾಪ್ತಿಯ 14 ಹಾಲು ಒಕ್ಕೂಟ …

Read More »

ಬೆಳಗಾವಿಯಲ್ಲಿ ಬರೋಬ್ಬರಿ 46 ಮಕ್ಕಳಲ್ಲಿ ಕೊರೊನಾ ಸೋಂಕು

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಮಕ್ಕಳಲ್ಲಿಯೂ ಮಹಾಮಾರಿ ಕಾಡುತ್ತಿದೆ. ಬೆಳಗಾವಿಯಲ್ಲಿ ಬರೋಬ್ಬರಿ 46 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 18 ವರ್ಷದೊಳಗಿನ 46 ಮಕ್ಕಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಮೇ 18ರಂದು 20 ಮಕ್ಕಳಲ್ಲಿ ಪಾಸಿಟಿವ್ ಬಂದಿದ್ದು, ಇದೀಗ ಎರಡೇ ದಿನದಲ್ಲಿ 46 ಮಕ್ಕಳಿಗೆ ಸೋಂಕು ಹರಡಿರುವುದು ಆತಂಕಕ್ಕೀಡುಮಾಡಿದೆ. ರಾಜ್ಯದಲ್ಲಿ ಚಿಕ್ಕ ಮಕ್ಕಳು ಕೂಡ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಕೊರೊನಾ 3ನೇ ಅಲೆ ಅಬ್ಬರ …

Read More »

ಸೋಂಕಿತ ಮಕ್ಕಳಿಗೂ ಕೊರೋನಾ ಲಸಿಕೆ : ಸಚಿವ ಸುಧಾಕರ್

ಬೆಂಗಳೂರು : ಒಂದು ವೇಳೆ ಮಕ್ಕಳಿಗೆ ಸೋಂಕು ಬಂದರೆ ಅವರಿಗೂ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು.ಈಗ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ.ಅನೇಕ ಲಸಿಕಾ ಕಂಪನಿಗಳು ಕೆಲವೆಡೆ ಟ್ರಯಲ್ ರನ್ ಮಾಡುತ್ತಿವೆ ಎಂದು ತಿಳಿಸಿದರು. ಎಲ್ಲವನ್ನೂ ನೋಡುಕೊಂಡು ನಮ್ಮ ಮಕ್ಕಳಿಗೂ ಲಸಿಕೆ ಹಾಕಿಸಲಾಗುವುದು.ಹಿರಿಯರಿಗೆ ಮೊದಲು, ನಂತರ ಜನರನ್ನ ಸಂಪರ್ಕಿಸುವ ವೃತ್ತಿಯವರಿಗೆ.ಜೊತೆ ಜೊತೆಯಲ್ಲಿ ಎಲ್ಲರಿಗೂ ಎಲ್ಲಿಯವರೆಗೂ ತಲುಪಲು ಸಾಧ್ಯವೋ …

Read More »

ಬೆಂಗಳೂರು; ಬಾಕಿ ಹಣಕ್ಕಾಗಿ ಸಂಬಂಧಿಕರನ್ನು ಕೂಡಿಹಾಕಿದ ಆಸ್ಪತ್ರೆ!

ಬೆಂಗಳೂರು, ಮೇ 30; ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳ ಧನ ದಾಹಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಕೋವಿಡ್‌ನಿಂದ ವ್ಯಕ್ತಿ ಮೃತಪಟ್ಟರೂ ಶವವನ್ನು ಕೊಡದೇ ಜೊತೆಗಿದ್ದ ಸಂಬಂಧಿಕರನ್ನು ಕೂಡಿಹಾಕಿದ ಘಟನೆ ನಡೆದಿದೆ. 42 ವರ್ಷದ ಲಕ್ಷ್ಮೀ ನಾರಾಯಣ ಚನ್ನಸಂದ್ರದ ಖಾಸಗಿ ಆಸ್ಪತ್ರೆಗೆ ಮೇ 17ರಂದು ದಾಖಲಾಗಿದ್ದರು. ಕೋವಿಡ್ ಸೋಂಕು ತಗುಲಿದ್ದ ಅವರು ಮೇ 27ರಂದು ಮೃತಪಟ್ಟಿದ್ದರು. ಒಟ್ಟು 8.17 ಲಕ್ಷ ರೂ. ಬಿಲ್ ಆಗಿತ್ತು. ಕುಟುಂಬದವರು 4.5 ಲಕ್ಷ ರೂ. ಪಾವತಿ …

Read More »