ಬೆಂಗಳೂರು: ಅಂತರರಾಜ್ಯ ಜಲ ವಿವಾದಗಳ ಬಗ್ಗೆ ನವದೆಹಲಿಯಲ್ಲಿ ಕಾನೂನು ತಜ್ಞರ ಜತೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಬೆಂಗಳೂರಿನ ತಮ್ಮ ನಿವಾಸದ ಬಳಿ ಅವರು ಮಾದ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್, ರಾಜ್ಯದ ಹಿರಿಯ ವಕೀಲರು, ಕಾನೂನು ತಜ್ಞರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ನೀರಾವರಿ ವಿವಾದದ ಬಗ್ಗೆ ರಾಜ್ಯದ ಮುಂದಿನ ನಡೆಯ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಲಾಗುವುದು. …
Read More »‘ಮಾದಕ’ ನಟಿಯರಿಗೆ ಮತ್ತೆ ಸಂಕಷ್ಟ , ಡ್ರಗ್ಸ್ ಸೇವನೆ ದೃಢ
ಬೆಂಗಳೂರು, ಆ.24- ಸ್ಯಾಂಡಲ್‍ವುಡ್ ನಟಿಯರಾದ ಸಂಜನಾ ಮತ್ತು ರಾಗಿಣಿ ಅವರುಗಳು ಡ್ರಗ್ಸ್ ಸೇವನೆ ಮಾಡಿರುವುದು ಎಫ್‍ಎಸ್‍ಎಲ್ ವರದಿಯಿಂದ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಇಬ್ಬರು ನಟಿಯರು ಡ್ರಗ್ಸ್ ಸೇವಿಸಿದ್ದಾರೆಯೇ ಎಂಬ ಬಗ್ಗೆ ತಿಳಿಯಲು ಇವರಿಬ್ಬರ ತಲೆ ಕೂದಲನ್ನು ಹೈದರಾಬಾದ್‍ನ ಎಫ್‍ಎಸ್‍ಎಲ್‍ಗೆ ಸಿಸಿಬಿ ಪೊಲೀಸರು ಕಳುಹಿಸಿದ್ದರು. ಇದೀಗ ಅದರ ವರದಿ ಸಿಸಿಬಿ ಕೈ ಸೇರಿದ್ದು, ವರದಿಯಲ್ಲಿ ಈ ಇಬ್ಬರು ನಟಿಯರಲ್ಲದೆ ಇನ್ನೂ ಹಲವರು ಡ್ರಗ್ಸ್ ಸೇವನೆ ಮಾಡಿರುವುದು ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ. …
Read More »ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು : ಓರ್ವನ ಶವಪತ್ತೆ, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ
ಗೋಕಾಕ : ಘಟಪ್ರಭಾ ಎಡದಂಡೆ ಕಾಲುವೆಗೆ ಕಾಲು ಜಾರಿ ಬಿದ್ದ ಇಬ್ಬರು ವ್ಯಕ್ತಿಗಳು ಸಾವಿಗೀಡಾದ ಘಟನೆ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದ ವಾಹನ ಚಾಲಕ ಅಶೋಕ ಶ್ರೀಶೈಲ ಡಬ್ಬನ್ನವರ (26), ಪಾಮಲದಿನ್ನಿ ಗ್ರಾಮದ ಕ್ಲೀನರ್ ನಾಗಪ್ಪ ಕಾಡಪ್ಪ ಅಂಗಡಿ (38) ಮೃತರು. ಕಾಲುವೆಯ ಪಕ್ಕದಲ್ಲಿ ಖಾಸಗಿ ಹಾಲಿನ ಡೈರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು. ಹಾಲಿನ ವಾಹನ ಚಾಲಕ ನೀರು ತರಲು …
Read More »ಸರ್ಕಾರೀ ನೌಕರಿಗಾಗಿ ಐಐಟಿ ನಕಲಿ ಅಂಕಪಟ್ಟಿ ; ಎಂಜಿನಿಯರ್ ಬಂಧನ
ಬೆಂಗಳೂರು: ಅಸ್ಸಾಂನ ಗೌಹಾಟಿ ಐಐಟಿಯ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಕೇಂದ್ರ ವಿದ್ಯುತ್ ಸಂಶೋಧನ ಸಂಸ್ಥೆ(ಸಿಪಿಆರ್‌ಐ)ಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ ಇಂಜಿನಿಯರ್ ಒಬ್ಬರು ಸಿಂಧುತ್ವ ಪರೀಕ್ಷೆ ವೇಳೆ ಸಿಕ್ಕುಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂ ಬಿಇಎಲ್ ರಸ್ತೆಯ ನಿವಾಸಿಯಾದ ಮನೀಶ್ ಸಿಂಗ್ (26) ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. 2018ನೇ ಸಾಲಿನಲ್ಲಿ ಸಿಪಿಆರ್‌ಐ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ಕರೆದಿದ್ದ ಇಂಜಿನೀಯರಿಂಗ್ ಅಧಿಕಾರಿ ಹುದ್ದೆಗೆ ಮನೀಶ್ ಸಿಂಗ್ ನೇಮಕಗೊಂಡಿದ್ದರು. ನೇಮಕಾತಿ ವೇಳೆ ಮನೀಶ್ ಸಲ್ಲಿಸಿದ್ದ …
Read More »ಪ್ರಥಮ ವರ್ಷ ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.!
ಬೆಂಗಳೂರು: ಪ್ರಥಮ ವರ್ಷಕ್ಕೆ ಪ್ರವೇಶ ಪಡೆದವರಿಗೆ ಉಚಿತವಾಗಿ ಟ್ಯಾಬ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆಗಸ್ಟ್ 1 ರಿಂದ ಪ್ರಥಮ ವರ್ಷದ ಪದವಿ ತರಗತಿಗಳು ಶುರುವಾಗಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಟ್ಯಾಬ್ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉಚಿತವಾಗಿ ಟ್ಯಾಬ್ ವಿತರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. 2021 -22 ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿ ಕೋರ್ಸ್ ಗೆ …
Read More »ಸೈಲೆಂಟಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾದಿ ಹಿಡಿದ್ರಾ ಆನಂದ್ ಸಿಂಗ್?
ಖಾತೆ ಹಂಚಿಕೆಯಾಗಿ 20 ದಿನಗಳೇ ಕಳೆದ್ರೂ, ಸಚಿವ ಆನಂದ ಸಿಂಗ್ ಮಾತ್ರ ಅಧಿಕೃತವಾಗಿ ಇಲಾಖೆಯ ಚಾರ್ಚ್ ತೆಗೆದುಕೊಳ್ಳದೆ ಹೊಸಪೇಟೆಯಲ್ಲಿ ಬೀಡು ಬಿಟ್ಟು ವೈಲೆಂಟ್ ಸಚಿವ ಸೈಲೆಂಟ್ ಆಗಿದ್ದಾರೆ. ಆರಂಭದಲ್ಲಿ ಖಾತೆ ಕ್ಯಾತೆ ತೆಗೆದು ಗದ್ದಲ ಎಬ್ಬಿಸಿದ್ದ ಸಚಿವರು ಸದ್ಯ ಸೈಲೆಂಟ್ ಆಗಿದ್ದು, ಶಾಸಕ ರಮೇಶ್ ಜಾರಕಿಹೊಳಿ ಹಿಡಿದ ಹಾದಿ ತುಳಿತ್ತಿದ್ದಾರಾ? ಎಂಬ ಅನುಮಾನಗಳು ಶುರುವಾಗಿವೆ. ಸರ್ಕಾರಿ ಕಾರು ಬಳಸದೆ ತಮ್ಮ ಖಾಸಗಿ ಕಾರಿನಲ್ಲಿ ಓಡಾಟ ಮಾಡ್ತಿರೋ ಸಚಿವ ಆನಂದ ಸಿಂಗ್, …
Read More »ಡಿ.ಕೆ. ಶಿವಕುಮಾರ್ ಭೇಟಿಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ
ಬೆಂಗಳೂರು: ಜಿಲ್ಲಾ ಪಂಚಾಯತಿ ಸದಸ್ಯನ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಶನಿವಾರ ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಬೆಂಗಳೂರಿಗೆ ಆಗಮಿಸಿದ್ದ ವಿನಯ್ ಕುಲಕರ್ಣಿ, ಇಂದು ಸದಾಶಿವ ನಗರದ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು.
Read More »ಭಯ, ಆತಂಕವಿಲ್ಲದೇ ಶಾಲೆಗೆ ಬನ್ನಿ: ಉಮೇಶ್ ಕತ್ತಿ
ಚಿಕ್ಕೋಡಿ: ಭಯ, ಆತಂಕವಿಲ್ಲದೇ ಶಾಲೆಗೆ ಬನ್ನಿ ಎಂದು ವಿದ್ಯಾರ್ಥಿಗಳಲ್ಲಿ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ ಕತ್ತಿ ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳಿಂದ ಇಂದಿನಿಂದ ಶಾಲಾ ಕಾಲೇಜುಗಳನ್ನ ಆರಂಭಿಸಲಾಗಿದ್ದು, ಯಾವುದೇ ಭಯ, ಆತಂಕವಿಲ್ಲದೇ ವಿದ್ಯಾರ್ಥಿಗಳು ಶಾಲೆಗೆ ಬರಬೇಕು. ಇಂದಿನಿಂದ ಶಾಲಾ ಕಾಲೇಜುಗಳು ಆರಂಭವಾದ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಗುಡಸ್ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬುವ ಕಾರ್ಯ ಮಾಡಿದರು. ಕೊರೊನಾ ಕುರಿತು ಸಕಲ ಮುನ್ನೆಚ್ಚರಿಕೆ …
Read More »ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 26 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶ್ರೀಲಂಕಾದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮದಿಂದ ಆಗಸ್ಟ್ 26ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 23ರಿಂದ 26ರವರೆಗೆ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ ಎಂದು …
Read More »ಗೋವಾದಲ್ಲಿ ಆಲ್ಕೋಹಾಲ್ ಮ್ಯೂಸಿಯಂ!
ಪಣಜಿ: ಪ್ರವಾಸಿ ರಾಜ್ಯ ಗೋವಾದಲ್ಲಿ ಮೊದಲ ಆಲ್ಕೋಹಾಲ್ ಮ್ಯೂಸಿಯಂ ತೆರೆಯಲಾಗಿದೆ. ಸ್ಥಳೀಯ ವಿಶೇಷ ಮದ್ಯವೆನಿಸಿಕೊಂಡಿರುವ ಫೆನ್ನಿಯ ಪ್ರಸಿದ್ಧತೆಯನ್ನು ದೇಶ ವಿದೇಶಕ್ಕೆ ಹರಡಿಸುವ ಉದ್ದೇಶದೊಂದಿಗೆ ಈ ಮ್ಯೂಸಿಯಂ ತೆರೆಯಲಾಗಿದೆ. ಉದ್ಯಮಿ ನಂದನ್ ಕುಡcಡ್ಕರ್ “ಆಲ್ ಎಬೌಟ್ ಆಲ್ಕೋಹಾಲ್’ ಹೆಸರಿನ ಮ್ಯೂಸಿಯಂ ತೆರೆದಿದ್ದಾರೆ. ಕಾಂಡೋಲಿಮ್ ಬೀಚ್ ಗ್ರಾಮದ ಬಳಿ ಈ ಮ್ಯೂಸಿಯಂ ಇದೆ. ಇದರಲ್ಲಿ ವಿಶೇಷವಾಗಿ ಪೆನ್ನಿಗೆ ಸಂಬಂಧಪಟ್ಟ ಸಾಮಗ್ರಿಗಳನ್ನು ಪ್ರದರ್ಶಿಸಲಾಗುವುದು. ಹಿಂದಿನ ಕಾಲದಲ್ಲಿ ಪೆನ್ನಿಯನ್ನು ಸಂಗ್ರಹಿಸುಡುತ್ತಿದ್ದ ಬೃಹದಾಕಾರದ ಹೂಜಿಗಳು, ಪೆನ್ನಿಗೆ ಸಂಬಂಧಿಸಿದ …
Read More »
Laxmi News 24×7