Breaking News

ಜಿಲ್ಲೆ

ಸಬ್ ಇನ್ಸ್​ಪೆಕ್ಟರ್​ ನೇಮಕಾತಿ ಲಿಖಿತ ಪರೀಕ್ಷೆ ಮುಂದೂಡಿಕೆ: ಸೆ.26ರ ಬದಲಿಗೆ ಅ.3ಕ್ಕೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಸಬ್‌ ಇನ್ಸ್​ಪೆಕ್ಟರ್​ ಹುದ್ದೆಗಳ ನೇಮಕಾತಿಗೆ ನಿಗದಿಯಾಗಿದ್ದ ಲಿಖಿತ ಪರೀಕ್ಷೆ ದಿನಾಂಕವನ್ನು ತಾಂತ್ರಿಕ ಸಮಸ್ಯೆಯಿಂದ ಇಲಾಖೆ ಮುಂದೂಡಿದೆ. 545 ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 26ಕ್ಕೆ ಲಿಖಿತ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಅಂದು ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಅಕ್ಟೋಬರ್ 3ರ ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 1.30ರಿಂದ 3 ಗಂಟೆ ವರೆಗೆ …

Read More »

ದೇಶದ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ ‘ಡಬಲ್ ಇಂಜಿನ್’ ಸರ್ಕಾರದ ದೊಡ್ಡ ಸಾಧನೆ: ದಿನೇಶ್ ಗುಂಡೂರಾವ್

ಬೆಂಗಳೂರು : ದೇಶದ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ ‘ಡಬಲ್ ಇಂಜಿನ್’ ಸರ್ಕಾರದ ದೊಡ್ಡ ಸಾಧನೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ತೆರಿಗೆ ವಿಚಾರವಾಗಿ ಸರಕಾರದ ವಿರುದ್ಧ ಟ್ವೀಟ್ ಮಾಡಿದ ದಿನೇಶ್, ಜನರನ್ನು ತೆರಿಗೆ ವಿಷವರ್ತುಲಕ್ಕೆ ತಳ್ಳಿರುವ ಡಬಲ್ ಇಂಜಿನ್ ಸರ್ಕಾರ, ರಕ್ತ ಹೀರುವ ತಿಗಣೆಯಂತೆ ತೆರಿಗೆ ಹೀರುತ್ತಿದೆ. ದೇಶದ ಜನರಿಗೆ ದರಿದ್ರಭಾಗ್ಯ ಕಲ್ಪಿಸಿದ ಈ ಡಬಲ್ ಇಂಜಿನ್ ಸರ್ಕಾರ ಒಂದು ರೀತಿ ಸ್ಮಶಾನದ ಹೆಣವಿದ್ದಂತೆ ಎಂದು …

Read More »

ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಿದ ಎಂ.ಬಿ.ಪಾಟೀಲ್‌

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮತ್ತೆ ಪ್ರಸ್ತಾಪಿಸಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್‌, ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಪಂಚಪೀಠದವರು ಎಲ್ಲರೂ ಸೇರಿ ಬಸವ ಧರ್ಮ ಆಗಬೇಕು. ಪ್ರತ್ಯೇಕ ಲಿಂಗಾಯತ ಧರ್ಮ ಆದರೆ ನಮಗೆ ಸೌಲಭ್ಯ ಸಿಗುತ್ತದೆ. ಮುಸ್ಲಿಂ, ಜೈನರ ಮಾದರಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ದೊರೆಯುತ್ತದೆ ಎಂದು ಹೇಳಿದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಕಾರಣವಲ್ಲ ಎಂದ ಅವರು, …

Read More »

ಗೋಕಾಕ ನಗರದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳ ಕುರಿತು ಲಕ್ಷ್ಮೀ ನ್ಯೂಸ್ ಗೆ ಗೋಕಾಕ ಸಿಪಿಐ ಗೋಪಾಲ್ ರಾಥೋಡ್ ಪ್ರತಿಕ್ರಿಯೆ.

ಗೋಕಾಕನಗರದಲ್ಲಿ ನಡೆಯುತ್ತಿರುವುಕಳ್ಳತನ ಪ್ರಕರಣಗಳ   ಕುರಿತು ಲಕ್ಷ್ಮೀ ನ್ಯೂಸ್ ಗೆ ಗೋಕಾಕ ಸಿಪಿಐ ಗೋಪಾಲ್ ರಾಥೋಡ ಪ್ರತಿಕ್ರಿಯಿಸಿದ್ದು ಈಗಾಗಲೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲು ತಂಡಗಳನ್ನರಚನೆ ಮಾಡಲಾಗಿದೆ.   ಇಂತಹಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಗುಂಪೊಂದನ್ನು ಇತ್ತಿಚಿಗಷ್ಟೆರಾಮದುರ್ಗದಲ್ಲಿ ಬಂಧಿಸಲಾಗಿದೆ. ಗೋಕಾಕ ನಗರದ ಜನ ಹೆದರುವ ಅವಶ್ಯಕತೆ ಇಲ್ಲ. ಅನಾಮಿಕರು ರಾತ್ರಿ ವೇಳೆಯಲ್ಲಿ ಓಡಾಡುವುದು ಗೊತ್ತಾದರೆ ಸ್ಥಳೀಯರು 112ಗೆ ಕರೆಮಾಡಲು ಸೂಚಿಸಿದ್ದಾರೆ.

Read More »

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಮದುವೆಯಾಗುವುದಾಗಿ ವಂಚನೆ ;30ರ ಮೇಲ್ಪಟ್ಟ ಯುವತಿಯರೇ ಟಾರ್ಗೆಟ್

ಬೆಂಗಳೂರು(ಸೆ. 01) ಮ್ಯಾಟ್ರಿಮೋನಿ ಸೈಟ್ ಮೂಲಕ ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಮಕ್ಕಳಿಂದ ಹಣ ಒಡವೆ ಪಡೆದು ಮದುವೆಯಾಗದೇ ನಂಬರ್ ಬ್ಲಾಕ್ ಮಾಡ್ತಿದ್ದ. ರಮೇಶ್, ವಿಜಯ್ ಹೀಗೆ ಬೇರೆ ಬೇರೆ ಹೆಸರಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಜಗನ್ನಾಥ್ (34) ಬಂಧನವಾಗಿದೆ. 30 ವರ್ಷ ಮೇಲ್ಪಟ್ಟ ವಿಚ್ಛೇದನ ಆಗಿರುವ ಯುವತಿಯರನ್ನ ಟಾರ್ಗೆಟ್ ಮಾಡಿ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದ. ಆಕ್ಸಿಡೆಂಟ್ ಆಗಿದೆ, ಕ್ರೆಡಿಟ್ ಕಾರ್ಡ್ ಬ್ಲಾಕ್ …

Read More »

ವಾರ್ಡ ನಂ.4 ರಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚು…!!

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ದಿನ ದಿನ ರಂಗೆರುತ್ತಿದೆ.ರಾಜಕೀಯ ಪಕ್ಷಗಳು ಸಿಂಬಾಲ್ ಮೇಲೆ ಚುನಾವಣೆ ಎದುರಿಸುತ್ತಿದ್ದರೆ ಎಮ್ ಇ ಎಸ್ ತೀವ್ರ ಪೈಪೋಟಿ ನೀಡಲು ತಯಾರಿ ಮಾಡಿಕೊಳ್ಳುತ್ತಿದೆ. ಕೆಲವು ವಾರ್ಡಗಳಲ್ಲಿ ಬಿಜೆಪಿ ಮುಂದೆ ಇದ್ದರೆ ಕೆಲವು ವಾರ್ಡಗಳಲ್ಲಿ ಕಾಂಗ್ರೆಸ್ ಮುಂದೆ ಇದೆ.ಇನ್ನು ಕೆಲವು ವಾರ್ಡಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ.ಈ ತರಹ ತ್ರಿಕೋನ ಸ್ಪರ್ಧೆಯು ವಾರ್ಡ್ ನಂ 4 ರಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.ಇಲ್ಲಿ ಇವತ್ತಿನ ಮಟ್ಟಿಗೆ ಎಮ್ ಈ ಎಸ್ …

Read More »

ಮೈಸೂರಿನಲ್ಲಿ ಮತ್ತೆ ‘ಅಂಬಾರಿ’ ಸಂಚಾರ ಆರಂಭ

ಮೈಸೂರು, ಸೆ.1- ಪ್ರವಾಸಿಗರಿಗೆ ಸಂತಸದ ಸುದ್ದಿ. ಪ್ರವಾಸೋದ್ಯಮ ಇಲಾಖೆಯ ಡಬಲ್ ಡೆಕ್ಕರ್ `ಅಂಬಾರಿ’ ಬಸ್‍ನಲ್ಲಿ ಕುಳಿತು ಮೈಸೂರು ನಗರದ ಪ್ರವಾಸಿ ತಾಣಗಳಿಗೊಂದು ಸುತ್ತು ಹೊಡೆಯುವ ಕಾಲ ಮತ್ತೆ ಕೂಡಿ ಬಂದಿದೆ. ಸೆ.4ರಂದು ಬಸ್ ಸಂಚಾರ ಆರಂಭಿಸಲಿದ್ದು, ಮತ್ತೆ ಪ್ರವಾಸೋದ್ಯಮ ಚಿಗುರೊಡೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಬಸ್ ಧೂಳು ಹಿಡಿದು ನಿಲ್ಲುವಂತಾಗಿತ್ತು. ಇದೀಗ ಧೂಳು ಕೊಡವಿ ಸಂಚಾರಕ್ಕೆ ಎದ್ದು ನಿಂತಿದೆ. ಆಗಸ್ಟ್ ತಿಂಗಳಿನಲ್ಲಿಯೇ ಅಂಬಾರಿ ಬಸ್ ಸಂಚಾರ ಆರಂಭಿಸುವ ಕುರಿತ ಮಾತುಗಳು ಕೇಳಿ ಬಂದಿತ್ತಾದರೂ …

Read More »

ತೂಕದ ಅಡ್ಜೆಸ್ಟ್​​ಮೆಂಟ್ ನಲ್ಲಿ ವಂಚನೆ : 7 ಅಂಗಡಿಗಳಿಗೆ ನೋಟಿಸ್, ಮೂವರು ಅರೆಸ್ಟ್ !

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ವಂಚನೆ ಎಂಟ್ರಿ ಕೊಟ್ಟಿದ್ದು ಕಣ್ಣಿಗೆ ಕಾಣುವಂತೆ ನಡೆದರೂ ಜನರು ಇದರಿಂದ ಮೋಸ ಹೋಗುತ್ತಿದ್ದಾರೆ. ತೂಕದ ಯಂತ್ರಕ್ಕೆ ಟೆಕ್ನಾಲಜಿ ಬಳಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡಲು ಹೊರಟಿದ್ದ ಹಲವು ಅಂಗಡಿಗಳ ಮಾಲೀಕರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. ಹಾಗೂ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಗೋಪಾಲನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಜನರನ್ನು ಮೋಸ ಮಾಡುವ ಅಂಗಡಿಗಳ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಮಾಂಸ, ತರಾಕಾರಿ ಸೇರಿದಂತೆ ಹಲವು ಅಂಗಡಿಗಳಲ್ಲಿ …

Read More »

JDS ಜೊತೆಗೆ ಚುನಾವಣಾ ಮೈತ್ರಿ; ನಿಲುವು ಪ್ರಕಟಿಸಿದ BJP ಹೈಕಮಾಂಡ್!

ಬೆಂಗಳೂರು, ಸೆ. 01: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಉದ್ದೇಶಿತ ರಾಜ್ಯ ಪ್ರವಾಸ ಬಿಜೆಪಿಯಲ್ಲಿ ಚರ್ಚೆ ಹುಟ್ಟುಹಾಕಿದೆ. ಅವರು ಮಾಡುವ ಪ್ರವಾಸದಿಂದ ಪಕ್ಷದ ಮೇಲೆ ಯಾವ ರೀತಿ ಪ್ರಭಾವ ಆಗಬಹುದು ಎಂಬುದನ್ನು ಹೈಕಮಾಂಡ್ ಗಮನಿಸುತ್ತಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೈಸೂರಿನಲ್ಲಿ ಮಹತ್ವದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾಲ್ಕು ದಿನಗಳ ರಾಜ್ಯ ಪ್ರವಚಾಸದಲ್ಲಿರುವ ಅರುಣ್ ಸಿಂಗ್ ಇನ್ನೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ …

Read More »

ಮಹಿಳೆಗೆ ಚುಡಾಯಿಸಿದ ಆರೋಪ.. ಸ್ಥಳೀಯರಿಂದ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ

ಚಿಕ್ಕಮಗಳೂರು: ಮಹಿಳೆಗೆ ಚುಡಾಯಿಸಿದರೆಂದು ಆರೋಪಿಸಿ ಪರಿಸರವಾದಿ ವೈಲ್ಡ್ ಕ್ಯಾಟ್ – ಸಿ ಸಂಸ್ಥೆಯ ಡಿ.ವಿ.ಗಿರೀಶ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಕಂಬಿಹಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಚುಡಾಯಿಸಿದ್ದಾರೆ ಎಂದು ಆರೋಪಿಸಿ ಕೆಲ ಸ್ಥಳೀಯರು ಡಿ.ವಿ.ಗಿರೀಶ್ ಹಾಗೂ ಅವರ ಸ್ನೇಹಿತರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವರ ಜೊತೆಯಲ್ಲಿದ್ದವರಿಗೂ ಥಳಿಸಿದ್ದಾರೆ ಎಂದು ಕೆಲ ಸ್ಥಳೀಯರು ಹೇಳುತ್ತಿದ್ದಾರೆ. ಇನ್ನೂ ಕೆಲ …

Read More »