ಬೆಂಗಳೂರು: ಇದೇ ಸೋಮವಾರ, ಸೆ. 6ರಿಂದ ರಾಜ್ಯಾದ್ಯಂತ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಶನಿವಾರ, ರವಿವಾರ ಸೋಂಕು ಪ್ರಕರಣ ಕಡಿಮೆಯಾಗಿ, ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆಯಾದರೆ ಇಲ್ಲೂ ಶಾಲಾರಂಭ ಖಚಿತ. ಶನಿವಾರ ಐದು ಗಡಿ ಜಿಲ್ಲೆಗಳ ಕೋವಿಡ್ 19 ಸ್ಥಿತಿಗತಿ ಕುರಿತು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದ ಬಳಿಕ …
Read More »ಪ್ರತಿ ಮನೆಗೂ ಶುದ್ಧ ನೀರು ಪ್ರಧಾನಿ ಆಶಯ :,ದುರ್ಯೋಧನ ಐಹೊಳೆ
ಚಿಕ್ಕೋಡಿ: ‘ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಯಬಾಗ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗಿದೆ. ಪ್ರತಿ ಮನೆಗೂ ಶುದ್ಧ ನೀರು ದೊರೆಯಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ’ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ ಬಂಬಲವಾಡ, ಕುಂಗಟೋಳ್ಳಿ, ಕರೋಶಿ ಗ್ರಾಮದಲ್ಲಿ ಜಲಜೀವನ ಅಭಿಯಾನದಲ್ಲಿ ₹ 4 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಗೆ ಶನಿವಾರ ಚಾಲನೆ …
Read More »ಜಿಪಂ, ತಾಪಂ ಚುನಾವಣೆ; ಸರ್ಕಾರದ ಮಹತ್ವದ ನಿರ್ಧಾರ
ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವರ್ಗೀಕರಣಕ್ಕೆ ಪ್ರತ್ಯೇಕ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ. ಚುನಾವಣೆ ಆಯೋಗದ ವಿಂಗಡಣೆಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಹೊಸ ಹೆಜ್ಜೆ ಇಟ್ಟಿದ್ದು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವಿಂಗಡಣೆಗೆ ಪ್ರತ್ಯೇಕ ಆಯೋಗ ರಚನೆ ಮಾಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಚುನಾವಣಾ ಆಯೋಗದಿಂದ ಹಿಂದೆಯೇ ಜಿಲ್ಲಾ …
Read More »ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನ: ಡಿ.ಕೆ.ಶಿವಕುಮಾರ್
ಬೆಂಗಳೂರು: ‘ವಿಧಾನ ಪರಿಷತ್ ಸೇರಿದಂತೆ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದು, 10 ದಿನ ಕಾಲಾವಕಾಶ ನೀಡಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಚುನಾವಣೆಗೆ ಪೂರ್ವತಯಾರಿ ಮತ್ತು ಪಕ್ಷ ಸಂಘಟನೆ ಕುರಿತು ಪಕ್ಷದ ಜಿಲ್ಲಾ ಘಟಕಗಳ ನಾಯಕರ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಈಗಾಗಲೇ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಅರ್ಜಿ ಕರೆಯಲಾಗಿದೆ. ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆಗೆ ಶೀಘ್ರದಲ್ಲೇ …
Read More »ಮೈಸೂರು ಅರಮನೆಯಲ್ಲಿ ಫೋಟೋ ತೆಗೆಯಲು ಅವಕಾಶ: ಮಾಧುಸ್ವಾಮಿ
ಬೆಂಗಳೂರು: ಮೈಸೂರು ಅರಮನೆ ವ್ಯಾಪ್ತಿಯಲ್ಲಿ ಫ್ಲ್ಯಾಶ್ ಬಳಸದೆ ಫೋಟೊ ತೆಗೆಯಲು ಅವಕಾಶ ಇದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಸಚಿವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ ಭಾರೀ ಸುದ್ದಿಯಾಗಿದ್ದ ಮೈಸೂರು ಅರಮನೆ ಒಳಾಂಗಣ ಮತ್ತು ಹೊರಾಂಗಣದಲ್ಲಿ ಚಿತ್ರೀಕರಣ ಪ್ರಕರಣವನ್ನು ಸಂಪುಟ ಸಭೆ ಕೈಬಿಟ್ಟಿದೆ. ಚಿತ್ರೀಕರಣಕ್ಕೆ ಅನುಮತಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ವಿರುದ್ಧ ಉಪ …
Read More »O.Y.C.ರ್ಯಾಲಿ ಸುಮಾರು 300 ಜನರ ವಿರುದ್ಧ ಪ್ರಕರಣ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ: ಲತೀಫ್ ಖಾನ್ ಪಠಾಣ್
ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರಕ್ಕಾಗಿ ಎಂಐಎಂಐಎಂ ಪಕ್ಷದ ಅಧ್ಯಕ್ಷ ಅಸಾವುದ್ದೀನ್ ಒವೈಸಿ ಪ್ರಚಾರದ ಸಂದರ್ಭದಲ್ಲಿ ಕೊರೋನಾ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಕಾರಣದಿಂದ ಸುಮಾರು 300 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಲತೀಫ್ ಖಾನ್ ಪಠಾಣ್, ಝೋಯಾ ಡೋಣಿ, ಮುಸ್ತಾಕ್ ಅಹ್ಮದ್ ಶಫಿ ತಹಸಿಲ್ದಾರ್ ಸೇರಿದಂತೆ 300 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಕೊರೋನಾ ನಿಯಮ ಉಲ್ಲಂಘಿಸಲಾಗಿದೆ ಮತ್ತು ಚುನಾವಣೆ ಆಯೋಗ ವಿಧಿಸಿದ ಷರತ್ತುಗಳನ್ನು ಪಾಲಿಸಲಾಗಿಲ್ಲ ಎನ್ನುವ …
Read More »KMFನ್ನು ನಂ.1 ಸಂಸ್ಥೆಯನ್ನಾಗಿ ಪರಿವರ್ತಿಸುವುದೇ ನನ್ನ ಗುರಿ : ಬಾಲಚಂದ್ರ ಜಾರಕಿಹೊಳಿ: ಬಾಲಚಂದ್ರ ಜಾರಕಿಹೊಳಿ
ಹೊರ ದೇಶಗಳಿಗೆ ನಂದಿನಿ ಉತ್ಪನ್ನಗಳ ಮಾರಾಟ ಮಾಡಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉತ್ಸುಕತೆ ಹೊಸದಾಗಿ 5 ಸಾವಿರ ನಂದಿನಿ ಮಳಿಗೆಗಳು, 100 ನಂದಿನಿ ಕೆಫೆ ಮೂ ಮಳಿಗೆಗಳ ಆರಂಭಕ್ಕೆ ಕೆಎಂಎಫ್ ಚಿಂತನೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಎಂಎಫ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಕೆಎಂಎಫ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ತೃಪ್ತಿ ತಮಗಿದೆ. ನಂದಿನಿ …
Read More »ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಕುರಿತು ಚರ್ಚೆಗೆ ಎಡೆಮಾಡಿಕೊಟ್ಟ ಬಿಬಿಎಂಪಿ ಸೆರೋಸರ್ವೆ!
ಬೆಂಗಳೂರು: 1,800 ನಾಗರೀಕರ ಮೇಲೆ ಆರೋಗ್ಯ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇತ್ತೀಚೆಗಷ್ಟೇ ನಡೆಸಿದ ಸೆರೋಸರ್ವೇಯೊಂದು ತಜ್ಞರಲ್ಲಿ ಚರ್ಚೆಗಳನ್ನು ಹುಟ್ಟುಹಾಕುವಂತೆ ಮಾಡಿದೆ. ವೈರಸ್ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎರಡು ಡೋಸ್ ಲಸಿಕೆ ಪಡೆದುಕೊಂಡ ಬಳಿಕ ಬೂಸ್ಟರ್ ಡೋಸ್ ನೀಡಬೇಕೆಂದು ಕೆಲ ತಜ್ಞರು ಹೇಳುತ್ತಿದ್ದಾರೆ. ಆದರೆ, ಇನ್ನೂ ಕೆಲವರು, ಬೂಸ್ಟರ್ ಡೋಸ್ ಗಳ ಕುರಿತು ಸೂಕ್ತ ರೀತಿಯ ಅಧ್ಯಯನ ನಡೆಸದ ಹೊರತು ಅದನ್ನು ನೀಡಬಾರದು ಎಂದು …
Read More »ಮಾತೃವಂದನಾ: ಗರ್ಭಿಣಿ, ಬಾಣಂತಿಯರಿಗೆ ವರದಾನ
ವಿಜಯಪುರ: ಗರ್ಭಿಣಿ, ಬಾಣಂತಿಯರ ಆರೋಗ್ಯ ಕಾಪಾಡಲು ಹಾಗೂ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿ ಮರಣ ನಿಯಂತ್ರಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಮಹಿಳೆಯರಿಗೆ ವರದಾನವಾಗಿದೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಹೇಳಿದರು. ನಗರದ ಜಿಲ್ಲಾ ಸ್ತ್ರೀಶಕ್ತಿ ಭವನದಲ್ಲಿ ಏರ್ಪಡಿಸಿದ್ದ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮಾತೃವಂದನ ಸಪ್ತಾಹ ಹಾಗೂ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಮಾತೃ …
Read More »ಮದ್ಯ ಕುಡಿಸಿ ಮಹಿಳಾ ಟೆಕ್ಕಿ ಮೇಲೆ ನೈಜೀರಿಯಾ ಪ್ರಜೆಗಳಿಂದ ಅತ್ಯಾಚಾರ – ಇಬ್ಬರ ಬಂಧನ
ಬೆಂಗಳೂರು, ಸೆ 04 : ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯಾ ಪ್ರಜೆಗಳಿಬ್ಬರು ಬಂಧಿಸಲಾಗಿದೆ. ಮಹಿಳಾ ಟೆಕ್ಕಿ ಈ ಬಗ್ಗೆ ಬಾಣಸವಾಡಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ನೈಜೀರಿಯಾ ಪ್ರಜೆಗಳಾದ ಬಾಣಸವಾಡಿ ನಿವಾಸಿ ಟೋನಿ (35) ಹಾಗೂ ಉಬಾಕಾ (36) ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಮಾಹಿತಿ ನೀಡಿದ್ದಾರೆ. ಸಂತ್ರಸ್ತ ಯುವತಿ ಮೂಲತಃ ಕಲ್ಬುರ್ಗಿ ಜಿಲ್ಲೆಯವಳಾಗಿದ್ದು, ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ …
Read More »
Laxmi News 24×7