Breaking News

ಜಿಲ್ಲೆ

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಶ್ರೀ ಗಣೇಶೋತ್ಸವ ಮೆರವಣಿಗೆ ವೇಳೆ ಗಣಪತಿ ವಿಸರ್ಜನೆ ಮಾಡಲು ಗಣೇಶ ಮಂಡಳಿಯವರು ವಿಳಂಬ ಮಾಡಿದ್ದಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಘಟನೆ ರವಿವಾರ ರಾತ್ರಿ ಕಪಿಲೇಶ್ವರ ಬ್ರಿಡ್ಜ್ ಬಳಿ ನಡೆದಿದೆ. ರಾತ್ರಿ 9 ಗಂಟೆ ನಂತರ ಕರ್ಫ್ಯೂ ಆದೇಶಿಸಿದ್ದರೂ ಸಾರ್ವಜನಿಕ ಗಣೇಶ ಮಂಡಳಿಯವರು ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ನಡೆಸಿದರು. ರಾತ್ರಿ 12 ಗಂಟೆವರೆಗೂ ಕಪಿಲೇಶ್ವರ್ …

Read More »

ಮಾಜಿ ಕೇಂದ್ರ ಸಚಿವರಿಗೆ ‘ವಿಡಿಯೋ’ ಸಂಕಷ್ಟ : ಪೊಲೀಸ್ ಆಯುಕ್ತರಿಗೆ ದೂರು ನೀಡಿದ ‘ಡಿ.ವಿ ಸದಾನಂದಗೌಡ’

ಬೆಂಗಳೂರು : ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡರ ವಿರುದ್ಧ ವಿಡಿಯೋವೊಂದನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಡಿ ವಿ ಸದಾನಂದಗೌಡರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಪ್ ಪಂತ್ ಗೆ ದೂರು ನೀಡಿದ ಸದಾನಂದಗೌಡರು ‘ನನ್ನ ವಿರುದ್ಧ ಫ್ಯಾಬ್ರಿಕೇಟಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ, …

Read More »

ಅಪಘಾತದಿಂದ ಜೀವ ಉಳಿಸಲು ಅಂಗಲಾಚಿದ ಯುವಕ, ಯುವತಿ

ವಿಜಯಪುರ: ನಗರದಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ನಡೆದಿದೆ. ಯಾರೋ ಬೈಕ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಪರಿಣಾಮ ಬೈಕ್ ಮೇಲಿಂದ ಬಿದ್ದು, ಗಾಯಗೊಂಡು ಯುವಕ, ಯುವತಿ ಒದ್ದಾಡಿದ್ದಾರೆ. ಅಲ್ಲದೆ ಸಹಾಯಕ್ಕಾಗಿ ಅಂಗಲಾಚಿದ ಹೃದಯವಿದ್ರಾವಕ ಘಟನೆ ನಡೆದಿದೆ.   ನಗರದ ಜುಮನಾಳ ರಸ್ತೆಯ ದದಾಮಟ್ಟಿ ಕ್ರಾಸ್ ಬಳಿ ಘಟನೆ ನಡೆದಿದೆ. ಕಾಪಾಡುವಂತೆ ಯುವಕ, ಯುವತಿ ಅಂಗಲಾಚುತ್ತಿದ್ದ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಒದ್ದಾಡುತ್ತ, ಕಾಪಾಡಿ ಎಂದು ಬೈಕ್ ಸವಾರರಾದ ಸಚಿನ್, ಸುಜಾತಾ …

Read More »

ನನ್ನ ಪ್ರವಾಸ ಆರಂಭವಾಗಿದೆ : ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ : ಬಿಎಸ್ ವೈ

ದಾವಣಗೆರೆ : ರಾಜ್ಯದಲ್ಲಿ ನನ್ನ ಪ್ರವಾಸ ಆರಂಭವಾಗಿದ್ದು ರಾಜ್ಯದಲ್ಲಿ ಎಲ್ಲಾ ಕಡೆ ಸಂಚರಿಸಿ 130 ರಿಂದ 140 ಸೀಟ್ ಗೆದ್ದು ಅಧಿಕಾರಕ್ಕೆ ಮತ್ತೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಠಿಯಿಂದ ರಾಜ್ಯ ಕಾರ್ಯಕಾರಣಿ ಸಭೆ ನಡೆಸಲು ದಾವಣಗೆರೆಗೆ ಬಂದಿದ್ದ ಬಿಎಸ್ ವೈ ನನ್ನ ಪ್ರವಾಸ ಈಗಾಗಲೇ ಪ್ರಾರಂಭವಾಗಿದೆ, ರಾಜ್ಯದಲ್ಲಿ ಎಲ್ಲಾ ಕಡೆ ಸಂಚರಿಸಿ 130 -140 ಸೀಟ್ …

Read More »

ಸೈಟ್ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ವಂಚನೆ

ಬೆಂಗಳೂರು: ಸೈಟ್ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಒಂದರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೃತ್ತ ಎಸಿಪಿ ಲವಕುಮಾರ್ ಎಂಬುವರು ಜಿಗಣಿಯ ನವ್ಯ ಲೇಔಟ್‍ನಲ್ಲಿ 90 ಲಕ್ಷ ಮೌಲ್ಯದ ಮೂರು ನಿವೇಶನ ಹೊಂದಿದ್ದರು. ಕೆಲದಿನಗಳ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನಿರ್ಮಾಣ್ ಶೆಲ್ಟರ್ಸ್ ಕಂಪೆನಿ ಸಂಪರ್ಕಿಸಿ ತಮ್ಮ ಬಳಿಯಿರುವ ನಿವೇಶನಗಳನ್ನು ಮಾರಾಟ ಮಾಡಿಕೊಡಿಕೊಡುವುದಾಗಿ ಹೇಳಿದ್ದು, …

Read More »

ಕುಡಿದು ವಾಹನ ಚಾಲನೆ ಮಾಡಿದ್ರೆ ಹುಷಾರ್‌. ಪೊಲೀಸರಿಂದ ಸ್ಟ್ರಿಕ್ಟ್‌ ತಪಾಸಣೆ!

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸಾಲು ಸಾಲು ಅಪಘಾತಗಳು ಸಂಭವಿಸಿದ್ದು, ಸಾವು-ನೋವುಗಳಾಗಿವೆ. ಇದರಿಂದ ಎಚ್ಚೆತ್ತ ಟ್ರಾಫಿಕ್‌ ಪೊಲೀಸರು ಟಫ್‌ ರೂಲ್ಸ್‌ಗೆ ಮುಂದಾಗಿದ್ದು, ಸ್ಟ್ರಿಕ್ಟ್‌ ಆಗಿ ತಪಾಸಣೆ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಬಳಿಕ ಮತ್ತೆ ಪೊಲೀಸರು, ಕುಡಿದು ವಾಹನ ಚಲಾಯಿಸುವವರ ಪರೀಕ್ಷೆ ಆರಂಭಿಸಿದ್ದಾರೆ. ವಾರದಲ್ಲಿ ಮೂರು ದಿನ ಡ್ರಂಕ್‌ ಅಂಡ್ ಡ್ರೈವ್ ಚೆಕ್ ಮಾಡುವಂತೆ ಆದೇಶಿಸಲಾಗಿದೆ. ವೀಕೆಂಡ್‌ನಲ್ಲಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಖಡಕ್‌ ಎಚ್ಚರಿಕೆ ನೀಡಲಾಗಿದೆ. ಕುಡಿದು ಕಾರಲ್ಲಿ ಮೋಜು-ಮಸ್ತಿ ಮಾಡಿಕೊಂಡು …

Read More »

ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ವಂಚನೆ: ಖದೀಮರ ಬಂಧನ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆದು, ವಂಚಿಸುತ್ತಿದ್ದ ಮೂವರನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಮುಜಾಹಿದ್, ಇಕ್ಬಾಲ್ ಮತ್ತು ಆಸಿಫ್ ಬಂಧಿತರಾಗಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜಾಲತಾಣಗಳಲ್ಲಿ ಪುರುಷರನ್ನು ಪರಿಚಯ ಮಾಡಿಕೊಂಡು ಅವರ ಜತೆ ಸಲುಗೆಯಿಂದ ಮಾತಾಡಿ, ಅವರ ಬೆತ್ತಲೆ ವಿಡಿಯೋವನ್ನು ಸೆರೆಹಿಡಿದು ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಸೈಬರ್ ಖದೀಮರು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಸೋಗಿನಲ್ಲಿ …

Read More »

ದೇಶದಲ್ಲಿ ಅತೀ ಹೆಚ್ಚು ಲಸಿಕೆ ನೀಡುವುದರಲ್ಲಿ ದ್ವಿತೀಯ ಸ್ಥಾನ‌ ಗಳಿಸಿದ ಹೆಮ್ಮೆ ಬೆಳಗಾವಿ ಜಿಲ್ಲೆಗೆ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ:  ಸೆಪ್ಟೆಂಬರ್​ 17 ರಂದು ನಡೆದ ಮೆಗಾ‌ ಲಸಿಕಾ ಮೇಳದಲ್ಲಿ ಇಡೀ ದೇಶದಲ್ಲಿಯೇ ಬೆಳಗಾವಿ ಜಿಲ್ಲೆಯು ಎರಡನೇ ಸ್ಥಾನ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 4,09,977 ಲಸಿಕೆ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೆಪ್ಟೆಂಬರ್​ 17 ರಂದು‌‌ ಒಂದೇ ದಿನದಲ್ಲಿ 2,57,604 ಲಸಿಕೆ ನೀಡುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಬೆಳಗಾವಿ ಜಿಲ್ಲೆಯು …

Read More »

ನಾವು ಸತ್ರೂ ಲಸಿಕೆ ಹಾಕಿಸಿಕೊಳ್ಳಲ್ಲ; ವಿಡಿಯೋ ಫುಲ್ ವೈರಲ್

ಕೊಪ್ಪಳ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಇರುವ ಅಸ್ತ್ರವೆಂದರೆ ಅದು ಕೊರೊನಾ ಲಸಿಕೆ. ಆದರೆ ಕೊರೊನಾ ಲಸಿಕೆ ಪಡೆಯಲು ವ್ಯಕ್ತಿಯೊಬ್ಬರು ಹಿಂದೇಟು ಹಾಕಿರುವ ಘಟನೆ ಕೊಪ್ಪಳ ತಾಲೂಕಿನ ಇರಕಲ್ ಗಡ ಗ್ರಾಮದಲ್ಲಿ ನಡೆದಿದೆ. ಲಸಿಕೆ ಪಡೆಯುವುದರಿಂದ ಏನು ಪ್ರಯೋಜನ ಅಂತ ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಲಸಿಕೆ ಪಡೆಯಲು ವ್ಯಕ್ತಿ ನಿರಾಕರಣೆ ಮಾಡಿದ್ದು, ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ನಾವು ಹೀಗೆ ಸಾಯಲಿ, ಲಸಿಕೆ ಹಾಕಿಸಿಕೊಳ್ಳುವುದಿಲ್ಲ …

Read More »

ಇಲ್ಲಿನ ಎಲ್ಲ ವಿದ್ಯಾರ್ಥಿಗಳು ದಿನನಿತ್ಯ ಎಲ್ಲಾ ವಿದ್ಯಾರ್ಥಿಗಳು 18 ಕಿ.ಮೀ. ದೂರ ಪ್ರಯಾಣ ಮಾಡಿದರಷ್ಟೇ ಶಾಲಾ ಕಾಲೇಜು ಗಳಿಗೆ ತಲುಪಲು ಸಾಧ್ಯ.

ಬಸ್ ಸೌಲಭ್ಯ ವಂಚಿತ ವಿದ್ಯಾರ್ಥಿಗಳು *ಇಲ್ಲಿನ ಎಲ್ಲ ವಿದ್ಯಾರ್ಥಿಗಳು ದ ಮೂಡಲಗಿ ತಾಲೂಕಿನ ಪಿಜಿ ಹುಣಶಾಳ ಗ್ರಾಮದಲ್ಲಿ: ಸಾರಿಗೆ ಸಂಸ್ಥೆ ಬಸ್‌ ಸಕಾಲಕ್ಕೆ ಆಗಮಿಸದೇ ಇರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೋವಿಡ್‌ ಮಾರ್ಗಸೂಚಿ ತೆರವಾದ ನಂತರ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೇವೆ ಅಪರೂಪವಾಗಿದೆ. ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಕಡೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್‌ ಸೇವೆ ಆರಂಭಗೊಂಡಿಲ್ಲ. ಇದರಿಂದ …

Read More »