Breaking News

ಜಿಲ್ಲೆ

ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ

ಬಾಗಲಕೋಟೆ: ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಿಎಸ್ಎಪ್ ಯೋಧ ಮೃತಪಟ್ಟಿದ್ದಾರೆ. ಹುನಗುಂದ ತಾಲೂಕಿನ ಕೂಡಲಸಂಗಮದ ಮಹಾಂತೇಶ್ ಚೌಧರಿ ಮೃತ ಯೋಧ. ಮಹಾಂತೇಶ್ ಚೌಧರಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇಂದು (ಅ.13) ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿದೆ.   ಸದ್ಯ ಯೋಧ ಮಹಾಂತೇಶ್ ಚೌಧರಿ ರಾಜಸ್ಥಾನದ ಚಾರ್ಲಿ ಬಟಾಲಿಯನ್ 161ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ …

Read More »

ಮೂರು ಕೈಗಾರಿಕಾ ಟೌನ್​ಶಿಪ್​ಗಳಿಂದ ಅಂದಾಜು 10 ಸಾವಿರ ಕೋಟಿ ಖಾಸಗಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಟೌನ್​ಶಿಪ್​ಗಳ ನಿರ್ಮಾಣದಿಂದ ಐದು ಲಕ್ಷ ಉದ್ಯೋಗಾಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಬೆಂಗಳೂರು: ಬೆಂಗಳೂರು-ಮುಂಬೈ, ಬೆಂಗಳೂರು-ಚೆನ್ನೈ ಕಾರಿಡಾರ್‌ಗಳಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕೈಗಾರಿಕಾ ಕಾರಿಡಾರ್‌ಗಳು ಈಮುನ್ನ ಬಜೆಟ್‌ನಲ್ಲಿ ಘೋಷಿಸಲ್ಪಟ್ಟಿದ್ದವು. ತಲಾ ಕನಿಷ್ಠ 500 ಎಕರೆ ಜಾಗದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣಗೊಳ್ಳಲಿವೆ. ಅಂದಾಜು 10 ಸಾವಿರ ಕೋಟಿ ಖಾಸಗಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಟೌನ್​ಶಿಪ್​ಗಳ ನಿರ್ಮಾಣದಿಂದ ಐದು ಲಕ್ಷ ಉದ್ಯೋಗಾಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ. ಕೈಗಾರಿಕಾ ಪ್ರದೇಶದಲ್ಲಿ ರೆಸಿಡೆನ್ಷಿಯಲ್ ಟೌನ್​ಶಿಪ್ ನಿರ್ಮಾಣ; ಸಚಿವ …

Read More »

ಮ್ಯಾನೇಜ್ಮೆಂಟ್ ಕೋಟಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಮ್ಯಾನೇಜ್ಮೆಂಟ್ ಕೋಟಾ ಅಡಿ 13 ಸಾವಿರ ಜನ ವಿದ್ಯಾರ್ಥಿಗಳು ಇದ್ದಾರೆ. ಮಾನವೀಯ ಆಧಾರದ ಮೇಲೆ ಅವರಿಗೂ ವಿದ್ಯಾರ್ಥಿ ವೇತನದ ಹಣ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ. ಇದಕ್ಕಾಗಿ 8-9 ಕೋಟಿ ಹಣ ವೆಚ್ಚವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ವಿದ್ಯಾರ್ಥಿ ವೇತನ ಬಂದಿಲ್ಲ ಅಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ ಇಂದು (ಅ.12) ಸಮಾಜ ಕಲ್ಯಾಣ ಇಲಾಖೆ, ಹಾಗೂ ಹಿಂದುಳಿದ ವರ್ಗಗಳ …

Read More »

ರವಿಚಂದ್ರನ್ ನನ್ನ ಪಾಲಿಗೆ ಲಕ್ಕಿ..; ಮಿಸ್ ನಂದಿನಿ ಮುಹೂರ್ತದಲ್ಲಿ ಪ್ರಿಯಾಂಕಾ

ಬೆಂಗಳೂರು: ‘ರವಿಚಂದ್ರನ್ ಯಾವತ್ತಿದ್ದರೂ ನನಗೆ ಲಕ್ಕಿ. ನನ್ನ ಸಿನಿಮಾದ ಯಾವುದಾದರೂ ಕಾರ್ಯಕ್ರಮಕ್ಕೆ ಅವರನ್ನು ಕರೆಸಬೇಕೆಂಬ ಆಸೆ ತುಂಬ ದಿನಗಳಿಂದ ಇತ್ತು. ಇದೀಗ ಆ ಕನಸು ನನಸಾಗಿದೆ …’ ಹೀಗೆ ಖುಷಿಯಾಗಿ ಹೇಳಿಕೊಂಡರು ಪ್ರಿಯಾಂಕಾ ಉಪೇಂದ್ರ. ಅವರು ‘ಮಿಸ್ ನಂದಿನಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಅಧಿಕೃತವಾಗಿತ್ತು. ಇದೀಗ ಸದ್ದಿಲ್ಲದೆ ಮುಹೂರ್ತ ಮುಗಿಸಿ, ಶೂಟಿಂಗ್ ಸಹ ಶುರುಮಾಡಿದೆ ತಂಡ. ಈ ಮುಹೂರ್ತ ಕಾರ್ಯಕ್ರಮಕ್ಕೆ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡಿ ಶುಭಾಶಯ …

Read More »

ಬೆಳಗಾವಿ ಬೂಡಾದಲ್ಲಿ ಇನ್ನೂ ಇದೆ ಕೆಜೆಪಿ v/s ಬಿಜೆಪಿ ಸಮರ;

ಬೆಳಗಾವಿ (ಅಕ್ಟೋಬರ್. 11)- ಬೆಳಗಾವಿ ‌ಜಿಲ್ಲೆಯ ರಾಜಕೀಯ ಪೈಪೋಟಿ, ಪರಸ್ಪರ ಹೋರಾಟಕ್ಕೆ ಹೆಸರಾಗಿದೆ. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಥಾಪನೆ ಮಾಡಿದ ಕೆಜೆಪಿ ಪಕ್ಷದಲ್ಲಿ ‌ವಿಲೀನಗೊಂಡು ವರ್ಷಗಳೇ ಉರುಳಿದೆ. ಆದರೆ ಇನ್ನೂ ಕೆಜೆಪಿ, ಬಿಜೆಪಿ ನಡುವೆ ಮಾತ್ರ ಇನ್ನೂ ಮುಸುಕಿನ ಗುದ್ದಾಟ ಇದೆ. ಇದಕ್ಕೆ ಸಾಕ್ಷಿ ಎಂಬತೆ ಇದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಿರಿ ಹುದ್ದೆ. ಹಾಲಿ ಅಧ್ಯಕ್ಷ ಘೂಳಪ್ಪ ಹೊಸಮನಿ‌ ವಿರುದ್ಧ ಬಿಜೆಪಿ ಶಾಸಕರು ಅಸಹಕಾರ ಆರಂಭಿಸಿದ್ದಾರೆ. …

Read More »

ಬಾಲಕಿಯ ಮೇಲೆ ಅತ್ಯಾಚಾರ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಬಂಸಿ ಕರೆ ತಂದಿದ್ದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ

ಚಿಕ್ಕಮಗಳೂರು, ಅ.11- ಬಾಲಕಿಯ ಮೇಲೆ ಅತ್ಯಾಚಾರ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಬಂಸಿ ಕರೆ ತಂದಿದ್ದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಕ್ಷಯ್.ಎಂ.ಕೆ. ಆರೋಪಿ ಯನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗು ವುದು ಎಂದು ತಿಳಿಸಿದ್ದಾರೆ. 12 ವರ್ಷದ ಬಾಲಕಿಯು ಅಂಗಡಿಯಿಂದ ಸಾಮಗ್ರಿ ಖರೀದಿಸಿ ಮನೆಗೆ ತೆರಳುತ್ತಿದ್ದಾಗ ಮೀನು ವ್ಯಾಪಾರಿಯೊಬ್ಬ ಪ್ರೀತಿಸುವಂತೆ ಒತ್ತಾಯಿಸಿ ಬಲವಂತವಾಗಿ ತನ್ನ ಗೂq್ಸï ವಾಹನದಲ್ಲಿ ಕೂರಿಸಿಕೊಂಡು ಹೋಗಿ …

Read More »

ವಿದ್ಯುತ್ ಉತ್ಪಾದನಾ ಘಟಕಗಳ ಖಾಸಗೀಕರಣಕ್ಕೆ ಹುನ್ನಾರ : ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು : ರಾಜ್ಯ ಸರಕಾರ ವಿದ್ಯುತ್ ಉತ್ಪಾದನೆ ಘಟಕಗಳ ಖಾಸಗೀಕರಣಕ್ಕೆ ಹುನ್ನಾರ ಮಾಡಿದೆ, ಹೀಗಾಗಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮೊದಲಿನಿಂದಲೂ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿತ್ತು.ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯೋ, ಕೃತಕ ಅಭಾವವೋ ಮೊದಲು ಗೊತ್ತಾಗಬೇಕು ಎಂದು ಆಗ್ರಹಿಸಿದರು. ಇನ್ನೊಂದೆಡೆ, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದು ಮತ್ತು ವಿದ್ಯುತ್ ಅಭಾವ ಸೃಷ್ಟಿಯಾಗದು ಎಂದು ಇಂಧನ …

Read More »

ವೀಕ್‌ಎಂಡ್‌ ಹುಮಸ್ಸಿನಲ್ಲಿದ್ದ ಜನರಿಗೆ ಕಿರಿಕಿರಿ ಉಂಟು ಮಾಡಿದ ಮಳೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಬೆಳಗ್ಗೆಯಿಂದಲೇ ಮಳೆ ಸುರಿದ ಕಾರಣ ವೀಕ್‌ಎಂಡ್‌ ಹುಮಸ್ಸಿನಲ್ಲಿದ್ದವರಿಗೆ ಕಿರಿಕಿರಿ ಉಂಟು ಮಾಡಿತು. ಮಳೆಯಿಂದಗಾಗಿ ರಾಜಧಾನಿಯ ರಸ್ತೆಗಳು ಜಲಾವೃತಗೊಂಡಿದ್ದವು. ಜತೆಗೆ ಮ್ಯಾನ್‌ ಹೋಲ್‌ಗ‌ಳು ಕೂಡ ಉಕ್ಕಿಹರಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಗಾಳಿಸಹಿತ ಮಳೆ ಸುರಿದ ಹಿನ್ನೆಲೆಯಲ್ಲಿ ತಿಪ್ಪಸಂದ್ರ, ಪುಷ್ಪಾಂಜಲಿ ಚಿತ್ರಮಂದಿರ, ಕರಿರೇನಹಳ್ಳಿ, ಮತ್ತು ವೆಸ್ಟ್‌ ಆಫ್ ಕಾರ್ಡ್‌ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದಿದ್ದು ಬಿಬಿಎಂಪಿ ಅಧಿಕಾರಿಗಳು ಮರಗಳ ತೆರವು …

Read More »

ಶ್ರೀ ಸಿದ್ಧೇಶ್ವರ ಮಂದಿರ ಪುನರೊದ್ಧಾರ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಡಿಸಲು ಮನವಿ

ಬೆಳಗಾವಿ: ಬೆಳಗಾವಿಗೆ ಭೇಟಿ ನೀಡಿದ ಪ್ರವಾಸೋದ್ಯಮ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯ್ಕರವರನ್ನು ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ರವರು ಭೇಟಿ ಮಾಡಿ ಕಣಬರ್ಗಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಂದಿರದ ಪುನರೊದ್ಧಾರ ಹಾಗೂ ಮಂದಿರದ ಪರಿಸರವನ್ನು ಪ್ರವಾಸಿ ಸ್ಥಾನವಾಗಿ ಮಾರ್ಪಡಿಸುವಂತೆ ಮನವಿ ಪತ್ರ ಸಲ್ಲಿಸಿದರು. ಚೋಳ ಸಾಮ್ರಾಜ್ಯದ ವಾಸ್ತು ಶೀಲ್ಪದ ಉದಹಾರಣೆಯಾಗಿರುವ ಈ ಭವ್ಯ ಹಾಗೂ ಶ್ರದ್ಧೆ ಪ್ರತೀಕವಾಗಿರುವ ಈ ಐತಿಹಾಸಿಕ ದೇವಸ್ಥಾನದ ಪುನರೊದ್ಧಾರದಿಂದ ಉತ್ತರಕರ್ನಾಟಕ, …

Read More »

ಪ್ರಧಾನಿ ಮೋದಿ ಬಡವರನ್ನ ಮರೆಯೊಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು: 70 ವರ್ಷದಲ್ಲಿ ಯಾರಾದರು ಪ್ರಧಾನಿಗಳು ಬಡವರ ಔಷಧಿ ಬಗ್ಗೆ ಯೋಚನೆ ಮಾಡಿದ್ದರಾ ? ಎಂದು ಪ್ರಶ್ನಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು.ಜನೌಷಧ ಅನುಷ್ಠಾನ ಮಾಡೋದು ಸುಲಭವಲ್ಲ. ಆದರೆ, ಮೋದಿಯವರು ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದರು. ಭಾನುವಾರ ಬಸವನಗುಡಿಯ ಜನೌಷಧಿ ಕೇಂದ್ರಕ್ಕೆ ಭೇಟಿ‌ ನೀಡಿ ಮಾತನಾಡಿದ ಬೊಮ್ಮಾಯಿ, ಪ್ರಧಾನಿ ಮೋದಿಯವರು ಇಂಜಿನ್ ಹಾಗೆ ದೇಶವನ್ನು ಮುಂದೆ ನಿಂತು ನಡೆಸುತ್ತಾರೆ. ನಮ್ಮ ಪ್ರಧಾನಿ ಬಡವರಲ್ಲಿ ಬಡವರನ್ನ ಮರೆಯೊಲ್ಲ. ಅದಕ್ಕೆ ಉದಾಹರಣೆ ಜನೌಷಧಿ. …

Read More »