Breaking News

ಜಿಲ್ಲೆ

ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

ಚಿತ್ರದುರ್ಗ: 17 ವರ್ಷದ ಬಾಲಕಿಯೊಬ್ಬಳು ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದು ಇಡೀ ಕುಟುಂಬಕ್ಕೆ ಮುದ್ದೆಯಲ್ಲಿ ವಿಷ ಬೆರೆಸಿ ಹತ್ಯೆಗೈದಿರುವ ಆಘಾತಕಾರಿ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಮೂಲಕ ಮುದ್ದೆಯಲ್ಲಿ ವಿಷ ಬೆರಸಿರುವ ಸತ್ಯ ಬಯಲಾಗಿದೆ.   ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದ ಬಾಲಕಿ, ಹೆತ್ತವರು, …

Read More »

ಬೇಣಚಿನ ಮರಡಿ ಗ್ರಾಮಕ್ಕೆ ಸಂತೋಷ್ ಜಾರಕಿಹೊಳಿ ಅವರ ಸೌಹಾರ್ದತೆಯ ಭೇಟಿ…

ಗೋಕಾಕ: ಜಿಲ್ಲೆಯಾದ್ಯಂತ ಎಲ್ಲ ಎಲ್ಲಾಕಡೆ ಕಬ್ಬಿನ ನುರಿಸುವ ಕಾರ್ಯಕ್ರಮ ಶುರುವಾಗಿದೆ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಇಂದು ಬೇಣಚಿನ ಮರಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತಿ ಸದಸ್ಯರನ್ನ ಭೇಟಿ ಮಾಡಿದ್ದಾರೆ ಇದೊಂದು ಸೌಹಾರ್ದತೆಯ ಭೇಟಿ ಯಾಗಿತ್ತು ಇನ್ನು ಗ್ರಾಮಕ್ಕೆ ಆಗಮಿಸಿದ ಸಾಹು ಕಾರರಿಗೇ ಗ್ರಾಮದಲ್ಲಿ ಅತ್ಯಂತ ಸರಳ ರೀತಿಯಲ್ಲಿ ಬರಮಾಡಿ ಕೊಂಡ ಗ್ರಾಮಸ್ಥರು ಸನ್ಮಾನ ಕಾರ್ಯಕ್ರಮ ಕೂಡ ಮಾಡಿದ್ದಾರೆ.   ಇನ್ನೇನು ಕಬ್ಬಿನ ಸೀಸನ್ ಪ್ರಾರಂಭ ವಾಗಿದೆ …

Read More »

ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವರಿಗೆ ಮತ ಹಾಕ್ತೀರಾ: ಸಿದ್ದರಾಮಯ್ಯ

ಬೆಂಗಳೂರು: ನಗರದ ಬಿನ್ನಿಪೇಟೆಯಲ್ಲಿ ನಿರ್ಮಿಸಲಾದ ಏಳು ಅಂತಸ್ತಿನ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ಶನಿವಾರ ಬಿರುಕಿನಿಂದಾಗಿ 1.5 ಅಡಿಗಳಷ್ಟು ಅಪಾಯಕಾರಿಯಾಗಿ ವಾಲಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕಟ್ಟಡಗಳ ಕುಸಿತ ಹೆಚ್ಚಾಗುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ, ಕುಸಿದ ಮನೆಗಳಿಂದ ಕುಟುಂಬಗಳನ್ನು ಸ್ಥಳಾಂತರಿಸುವಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರೇ ಈಗ ಸ್ಥಳಾಂತರಗೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ. ವಾಲಿದ ‘ಬಿ’ ಬ್ಲಾಕ್ ಕಟ್ಟಡದಲ್ಲಿ ವಾಸಿಸುತ್ತಿರುವ 38 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಲ್ಲಿ ಪಕ್ಕದಲ್ಲಿರುವ ‘ಸಿ’ ಬ್ಲಾಕ್ ಕಟ್ಟಡದಿಂದಲೂ ಸ್ಥಳಾಂತರಿಸಲು ಚಿಂತನೆ …

Read More »

ರಾಜ್ಯದಲ್ಲಿ ನಿಲ್ಲುತ್ತಿಲ್ಲ ಮಳೆರಾಯನ ಕಾಟ.. ಕರಾವಳಿ ಭಾಗಗಳಿಗೆ ಮತ್ತೆ ಎಚ್ಚರಿಕೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ರಾಜ್ಯದಲ್ಲಿ ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿ ಭಾಗದಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದೂ ಹೇಳಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ‌ಯಾಗಿದೆ. ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಲ್ಲಿ ಭಾರೀ ಮಳೆ‌ಯ ಮುನ್ಸೂಚನೆಯೂ ನೀಡಲಾಗಿದೆ. ಇನ್ನು ಕೇರಳದಲ್ಲಿ ಭಯಾನಕ ಮಳೆಯಾಗುತ್ತಿದ್ದು, ಅಪಾರ …

Read More »

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಎರಡನೇ ಡೋಸ್‌ ಪಡೆದವರ ಸಂಖ್ಯೆ ಎರಡು ಕೋಟಿ ಗಡಿದಾಟಿದೆ. ಈ ಮೂಲಕ ರಾಜ್ಯದ ಲಸಿಕೆ ಅರ್ಹ ಜನಸಂಖ್ಯೆಯಲ್ಲಿ ಶೇ.42 ರಷ್ಟು ಮಂದಿ ಲಸಿಕೆ ಪೂರ್ಣಗೊಳಿಸಿದಂತಾಗಿದೆ. 18 ವರ್ಷ ಮೇಲ್ಪಟ್ಟವರ ಸಂಖ್ಯೆ 4.8 ಕೋಟಿ ಇದೆ. ಕೋವಿನ್‌ ಪೋರ್ಟಲ್‌ ಮಾಹಿತಿಯಂತೆ ಶನಿವಾರದ ಅಂತ್ಯಕ್ಕೆ 4,07,80,939 ಮಂದಿ ಮೊದಲ ಡೋಸ್‌, 2,00,51,427 ಮಂದಿ ಎರಡನೇ ಡೋಸ್‌ ಪೂರ್ಣಗೊಳಿಸಿದ್ದಾರೆ. ಮೊದಲ ಡೋಸ್‌ ಶೇ.85 ರಷ್ಟು ಮಂದಿ ಮೊದಲ ಡೋಸ್‌, …

Read More »

ಚಿರು ಹುಟ್ಟುಹಬ್ಬಕ್ಕೆ ಸರ್ಪ್ರೈಸ್​​; ಲಾಂಚ್​ ಆಯ್ತು ಮೇಘನಾ ರಾಜ್ ಹೊಸ​​ ಸಿನಿಮಾ

ರಾಜ್ಯ ಪ್ರಶಸ್ತಿ ವಿಜೇತ ನಟಿ ಮೇಘನಾ ರಾಜ್ ಸರ್ಜಾ ಬಾಳಿಗೆ ಹೊಸ ಬೆಳಕು ಮೂಡಿದೆ.. ತನ್ನ ಮಗನ ನಗುವಿನಲ್ಲಿ ಜೀವನ ಸ್ಫೂರ್ತಿ ಕಾಣುತ್ತಿರೋ ಮೇಘನಾ ರಾಜ್ ತನ್ನ ಎರಡನೇ ಸಿನಿಮಾ ಇನ್ನಿಂಗ್ಸ್​​​​ ಪ್ರಾರಂಭಿಸೋ ಸಮಾಚಾರವನ್ನ ನೀಡಿದ್ದಾರೆ.. ಚಿರಂಜೀವಿ ಸರ್ಜಾ ಬರ್ತ್​ಡೇ ಪ್ರಯುಕ್ತ ಮೇಘನಾ ಅವರ ಹೊಸ ಮೂವಿ ಲಾಂಚ್ ಆಗಿದೆ.. ತನ್ನ ಮಗನ ನಾಮಕರಣವನ್ನ ಕೆಲ ದಿನಗಳ ಹಿಂದೆ ಗ್ರ್ಯಾಂಡ್ ಆಗಿ ಮಾಡಿದ್ರು ಮೇಘನಾ ರಾಜ್ ಸರ್ಜಾ.. ರಾಯನ್ ರಾಜ್ …

Read More »

ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ‘ತೀರ್ಥೋದ್ಭವ’ ಜೀವನದಿಯ ದರ್ಶನಕ್ಕೆ ಕ್ಷಣಗಣನೆ

ಮಡಿಕೇರಿ: ಕಾವೇರಿ… ಇದೊಂದು ಕೇವಲ ನದಿಯಲ್ಲ. ಕೋಟ್ಯಾಂತರ ಮಂದಿಗೆ ತಾಯಿ. ಜೀವನದಿ. ದೈವೀ ಸ್ವರೂಪಿಣಿ. ಹೀಗಾಗಿಯೇ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇವತ್ತು ಸಂಭ್ರಮ ಮನೆ ಮಾಡಿದೆ. ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳಲಿರುವ ಜೀವನದಿಯ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ‘ತೀರ್ಥೋದ್ಭವ’ ಅಗಸ್ತ್ಯ ಮುನಿಯ ಪತ್ನಿಯಾಗಿದ್ದ ಕಾವೇರಿ ಲೋಕಕಲ್ಯಾಣಕ್ಕಾಗಿ ನದಿಯಾಗಿ ಹರಿಯುತ್ತಿದ್ದಾಳೆ ಅನ್ನೋದು ಪ್ರತೀತಿ. ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಅದೇ …

Read More »

ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡಿನಲ್ಲಿ ಇಂದು ವ್ಯಾಪಕ ಮಳೆ; ಬೆಂಗಳೂರಿನಲ್ಲೂ ಹೈ ಅಲರ್ಟ್

ಬೆಂಗಳೂರು: ಕರ್ನಾಟಕದ ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದ ಬೆಂಗಳೂರಿನ ಬಹುತೇಕ ಏರಿಯಾಗಳು ನೀರಿನಿಂದ ಆವೃತವಾಗಿವೆ. ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಮಳೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಬಿಬಿಎಂಪಿಯಿಂದ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿದೆ. ಕರ್ನಾಟಕದ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ …

Read More »

ಇಂದು ತಾಲೂಕಾ ಆಡಳಿತ ಗೋಕಾಕ ವತಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ಇಂದು ತಾಲೂಕಾ ಆಡಳಿತ ಗೋಕಾಕ ವತಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ   ಕಾರ್ಯಕ್ರಮದ ಭಾಗವಾಗಿ ರಡ್ಡೆರಹಟ್ಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ 32 ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಸಿ ನೆಡುವ ಕಾರ್ಯಕ್ರಮ, ಮಕ್ಕಳೊಡನೆ ಸಂವಾದ, ಕಾನೂನು ಅರಿವು ಮತ್ತು ವಾರ್ಡ್ ಗಳ ಬೇಟಿ ಕಾರ್ಯಕ್ರಮ ಮಾಡಲಾಯಿತು. ಆರೋಗ್ಯ ಶಿಬಿರವನ್ನು ಸಹ ಆಯೋಜಿಸಲಾಗಿತ್ತು. ಸದರಿ ಶಿಬಿರದಲ್ಲಿ NCD ಕಾಯ೯ಕ್ರಮ ಒಟ್ಟು ಕೇಸ್-107 NEW BP ಕೇಸ್- …

Read More »

ಬಿ.ಎಸ್.ಯಡಿಯೂರಪ್ಪಗೆ ಪ್ರಚಾರಕ್ಕೆ ಬರಲು ಮನಸ್ಸಿಲ್ಲ: ಸಿದ್ದರಾಮಯ್ಯ ಆರೋಪಕ್ಕೆ ಬಿ.ಸಿ.ಪಾಟೀಲ್ ತಿರುಗೇಟು

ಹಾವೇರಿ: ಸಿದ್ದರಾಮಯ್ಯ ಆರೋಪಕ್ಕೆ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದು, ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಚಾರಕ್ಕೆ ಬರಲು ಮನಸ್ಸಿಲ್ಲ. ಬಿ.ಎಲ್.ಸಂತೋಷ್ ಬಲವಂತವಾಗಿ ಪ್ರಚಾರಕ್ಕೆ ಕರೆ ತರುತ್ತಿದ್ದಾರೆ. ಸಿದ್ದರಾಮಯ್ಯಗೆ ಸಂತೋಷ್ ಫೋನ್ ಮಾಡಿ ಹೇಳಿದ್ರಾ? ಬಿಎಸ್​ವೈಗೆ ದೊಣ್ಣೆ ನಾಯಕನ ಅಪ್ಪಣೆ ಏನೂ ಬೇಕಾಗಿಲ್ಲ ಎಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಉಪಚುನಾವಣೆಯ ಪ್ರಚಾರದ ವೇಳೆ ಹೇಳಿದ್ದಾರೆ. ಸಿದ್ದರಾಮಯ್ಯ ಕೇಳಿಕೊಂಡು ಯಡಿಯೂರಪ್ಪ ಬರಬೇಕಾ? ಇವರ ಊಹೆಗೆ ನಾವು ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಯಡಿಯೂರಪ್ಪ ಅವರು …

Read More »