Breaking News

ಜಿಲ್ಲೆ

ಲಾರಿ, ಬೈಕ್​​ಗಳ ನಡುವೆ ಸರಣಿ ಅಪಘಾತ-ಸ್ಥಳದಲ್ಲೇ ಮೂವರು ಸವಾರರ ಸಾವು

ತುಮಕೂರು: ಸರಣಿ ಅಪಘಾತದಲ್ಲಿ ಮೂವರು ಬೈಕ್ ಸವಾರರು ನಡುರಸ್ತೆಯಲ್ಲೇ ಪ್ರಾಣಬಿಟ್ಟಿರೋ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಬಳಿ ನಡೆದಿದೆ. ಮೊದಲು ವಿ.ಆರ್.ಎಲ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಅಪಘಾತ ನೋಡಲು ಹೋದ ಮತ್ತೊಂದು ಬೈಕ್‌ಗೆ ಮೊತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಟ್ಟಾರೆ ಎರಡು ಬೈಕ್‌‌ಗಳಲ್ಲಿದ್ದ ಒಟ್ಟು ಮೂವರು ಯುವಕರು ಸಾವನ್ನಪ್ಪಿದ್ದಾರೆ.

Read More »

ಎಪಿಎಮ್‍ಸಿ ಮಾರುಕಟ್ಟೆ ಕಾಯ್ದೆಯನ್ನು ಮರಳಿ ಪಡೆಯುವರೆಗೆ ನಿರಂತರ ಹೋರಾಟ ಮಾಡುತ್ತೇವೆ: ಸಿದ್ದಗೌಡ

ಎಪಿಎಮ್‍ಸಿ ಮಾರುಕಟ್ಟೆ ಕಾಯ್ದೆಯನ್ನು ಮರಳಿ ಪಡೆಯುವರೆಗೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಹೇಳಿದರು.ಕಳೆದ ಎರಡು ತಿಂಗಳಿನಿಂದ ಎಪಿಎಮ್‍ಸಿ ಮಾರುಕಟ್ಟೆಯು ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ರೈತರು ಸರ್ಕಾರದಿಂದ ಟೆಂಡರ್ ಮೂಲಕ ಸುಮಾರು 20 ಲಕ್ಷದಿಂದು 1 ಕೋಟಿ ರೂಪಾಯಿ ಆದಾಯ ನೀಡಿ ಪಡೆದ ಅಂಗಡಿಗಳು ಬಂದ್ ಆಗಿದ್ದರಿಂದ ವ್ಯಾಪಾರಿಗಳು ಸಂಪೂರ್ಣ ಲಾಸ್ ನಲ್ಲಿ ಇದ್ದಾರೆ. ಈ ಕೂಡಲೇ ಎಪಿಎಮ್‍ಸಿ ಕಾಯ್ದೆಯನ್ನು ಪಡೆಯಬೇಕು ಎಂದು …

Read More »

ಉಂಡು ಗೊರಕೆ ಹೊಡೆದ್ರು ಎಂದ ಅಶೋಕ್​ ವಿರುದ್ಧ ಕಾಂಗ್ರೆಸ್​​​ ಕಿಡಿ.. ಊಟದ ವೆಚ್ಚ ವಾಪಸ್​​ಗೆ ನಿರ್ಧಾರ

ಬೆಂಗಳೂರು: ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ಉಂಡು ಗೊರಕೆ ಹೊಡೆಯುತ್ತಿದ್ದಾರೆ ಎಂದು ಸಚಿವ ಆರ್ ಅಶೋಕ್ ನೀಡಿದ್ದ ಹೇಳಿಕೆಯೀಗ ರಾಜ್ಯ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸೌಧದಲ್ಲಿ ಧರಣಿ ವೇಳೆ ಊಟದ ವೆಚ್ಚವನ್ನ ಸ್ವತಃ ಭರಿಸಲು ಕಾಂಗ್ರೆಸ್​ ನಾಯಕರು ನಿರ್ಧರಿಸಿದ್ದಾರೆ. ಈ ಬಗ್ಗೆ ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಶಾಸಕರಾದ ಡಾ. ರಂಗನಾಥ್, ರಾಜಶೇಖರ ಪಾಟೀಲ್, ಬಿ.ಕೆ. ಸಂಗಮೇಶ್ವರ್, ಪ್ರಕಾಶ್ ರಾಥೋಡ್, ಯಶವಂತರಾಯ ಹಾಗೂ ವೆಂಕಟರಮಣಯ್ಯ ಚರ್ಚೆ ನಡೆಸಿದ್ದಾರೆ. ಮಾನ ಮರ್ಯಾದೆ ಇದೆಯಾ …

Read More »

ಕ್ರೀಡೆಯಿಂದ ಉತ್ತಮ ಆರೋಗ್ಯ: ಯುವ ನಾಯಕ ರಾಹುಲ್‌

ಬೆಳಗಾವಿ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು. ಹೊಸ ವಂಟಮುರಿ ಗ್ರಾಮದಲ್ಲಿ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ನಡೆದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.7 ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಹತ್ವ ಕೊಟ್ಟಷ್ಟುಕ್ರೀಡೆಗೂ ಮಹತ್ವ ನೀಡಬೇಕು. ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿದ್ದು, ಇಂತಹ ಕ್ರೀಡೆಗಳನ್ನು ಜೀವಂತವಾಗಿರಸಲು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ …

Read More »

ಫೋಟೋಶೂಟ್‍ಗೆಂದು ನದಿಗೆ ಹಾರಿ ಪ್ರಾಣ ಬಿಟ್ಟ ಯುವಕ

ಚಿಕ್ಕೋಡಿ: ಜಲಾಶಯದ ಬಳಿ ಫೋಟೋಶೂಟ್‍ಗೆ ಹೋಗಿದ್ದ ವಿದ್ಯಾರ್ಥಿ ಈಜಲು ಹೋಗಿ ಆಯತಪ್ಪಿ ನದಿಯಲ್ಲಿ ಬಿದ್ದು, ಮುಳಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯದ ಬಳಿ ನಡೆದಿದೆ. ಜಿಹಾದ ಮಸೂದ್ ಶರೀಫ (20) ಮೃತ ಯುವಕ. ಹುಕ್ಕೇರಿ ತಾಲೂಕಿನ ಯಮಕನಮರಡಿ ನಿವಾಸಿಯಾಗಿದ್ದಾನೆ. ನೀಡಸೊಸಿ ಪಾಲಿಟೆಕ್ನಿಕ್ ಕಾಲೇಜ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದನು.ಇಂದು ಘಟಪ್ರಭಾ ನದಿಯ ಹಿಡಕಲ್ಲ ಜಲಾಶಯದ ಬಳಿ ಗೆಳೆಯರೊಂದಿಗೆ ಫೋಟೋಶೂಟ್ ಮಾಡಲು ಹೋಗಿದ್ದ. ಈ ವೇಳೆ ಯುವಕ ನದಿಯಲ್ಲಿ ಈಜಲು …

Read More »

ಗೋಕಾಕ : ತಾಲೂಕಾ ಅಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ದೇಶನೂರ ಅವರನ್ನು ಅಭಿನಂದಿಸುತ್ತಿವದು.

ಗೋಕಾಕ ಫೆ 16 : ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ (ರಿ) ಗೋಕಾಕ ತಾಲೂಕಾ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಬುಧವಾದಂದು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ರಶೀದ್ ಮಕಾಂದಾರ ಅವರು ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತಾಲೂಕಾಧ್ಯಕ್ಷರಾಗಿ ಬಸವರಾಜ ದೇಶನೂರ, ಉಪಾಧ್ಯಕ್ಷರಾಗಿ ಕೃಷ್ಣಾ ಖಾನಪ್ಪನವರ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಖಂಡ್ರಿ, ಖಜಾಂಚಿಯಾಗಿ ಇಮ್ರಾನ್ ಗೊಟೇದ ಹಾಗೂ ಸಂಚಾಲಕರನ್ನಾಗಿ ಮುಗುಟ ಪೈಲವಾನ, ಬಸವರಾಜ ಬ್ಯಾಡರಟ್ಟಿ, ರವಿಕಾಂತ ರಾಜಾಪೂರ ನೇಮಕಮಾಡಲಾಗಿದೆ. …

Read More »

ಬೆಂಗಳೂರು : ರಾಷ್ಟ್ರ ಧ್ವಜ ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿದೆ. ರಾಷ್ಟ್ರ ಧ್ವಜ ವಿಚಾರವಾಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ವಾಪಾಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ‘ ಸದನ ಏನು ನಿನ್ನ ಅಪ್ಪನದಾ ? ‘ ಎಂದು ಕೇಳಿದಾಗ ಆಕ್ರೋಶಗೊಂಡ ಶಿವಕುಮಾರ್ ಸಿದ್ದರಾಮಯ್ಯ ಖುರ್ಚಿ ಮಧ್ಯದ ಜಾಗದಿಂದ ತೂರಿ ಬಂದು ತಾಕತಿದ್ದರೆ ಬಾರೋ ಎಂದು ತೊಡೆ ತಟ್ಟಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌, ‘ ಶಿವಕುಮಾರ್ ಎಲ್ಲಿ ಇದ್ದಿರೀ ? ಎಂಬ ನೆನಪಿದೆಯೇ ? ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಶಾಸಕರು ಈಶ್ವರಪ್ಪ ಅವರ ಮುಂದೆ ಬಂದು ಘೋಷಣೆ ಹಾಕಿದಾಗ ಕಾಂಗ್ರೆಸ್ ಆಡಳಿತ ಪಕ್ಷದ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸದನ ವನ್ನು ಮಧ್ಯಾಹ್ನ ೩ ಗಂಟೆಯವರೆಗೆ ಮುಙದೂಡಲಾಗಿದೆ. ಇದಕ್ಕೂ ಮು‌ನ್ನ ಈಶ್ವರಪ್ಪ ಅವರನ್ನು ಶಿವಕುಮಾರ್ ದೇಶದ್ರೋಹಿ ಎಂದು ಕರೆದಾಗ ‘ ನೀನು ಬೇಲ್ ಮೇಲೆ ಇದ್ದೀಯಾ, ಯಾವಾಗ ಜೈಲಿಗೆ ಹೋಗ್ತಿಯೋ ಗೊತ್ತಿಲ್ಲ ‘ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಅವರನ್ನು ಡಿ.ಕೆ.ಶಿವಕುಮಾರ್ ದೇಶದ್ರೋಹಿ ಎಂದು ನಿಂದಿಸಿದ್ದರಿಂದ ಕೋಪಾವಿಷ್ಠರಾದ ಈಶ್ವರಪ್ಪ, ‘ ನೀನು ರಾಷ್ಟ್ರದ ಅತಿ ದೊಡ್ಡ ಲೂಠಿಕೋರ. ಕನಕಪುರದಿಂದ ದಿಲ್ಲಿಯವರೆಗರ ಬಂಡೆ ಕಳ್ಳ ಸಾಗಣೆ ಮಾಡಿದ್ದೀಯ. ನೀನು ಈಗ ಬೇಲ್ ಮೇಲೆ ಇದ್ದೀಯಾ, ಯಾವಾಗ ಮತ್ತೆ ಜೈಲಿಗೆ ಹೋಗುತ್ತೀಯೋ ಗೊತ್ತಿಲ್ಲ ಎಂದರು. ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದಾಗ ಬಳ್ಳಾರಿ ರೆಡ್ಡಿಗಳು ಹಾಗೂ ಸಿದ್ದರಾಮಯ್ಯ ಮಧ್ಯೆ ನಡೆದಂಥ ಸನ್ನಿವೇಷವೇ ಇಂದು‌ ನಿರ್ಮಾಣಗೊಂಡಿತ್ತು.

ಬೆಂಗಳೂರು : ರಾಷ್ಟ್ರ ಧ್ವಜ ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿದೆ.   ರಾಷ್ಟ್ರ ಧ್ವಜ ವಿಚಾರವಾಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ವಾಪಾಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ‘ ಸದನ ಏನು ನಿನ್ನ ಅಪ್ಪನದಾ ? ‘ ಎಂದು ಕೇಳಿದಾಗ …

Read More »

ಕುಚಿಕು ಗೆಳೆಯರಾದ ಬಡೇಮಿಯಾ-ಛೋಟೇಮಿಯಾ..?

ಸಿಎಂ ಇಬ್ರಾಹಿಂ ರೆಬೆಲ್ ಆಗಿರೋ ವಿಚಾರ ಕಾಂಗ್ರೆಸ್​​ನಲ್ಲಿ ಹೊಸ ಚರ್ಚೆ, ಆತಂಕ ಹುಟ್ಟುಹಾಕಿತ್ತು. ಇಬ್ರಾಹಿಂ ಮನವೊಲಿಕೆಗೂ ಕಸರತ್ತು ಶುರುವಾಗಿತ್ತು. ಇದು ಈಗಲೂ ನಡೆಯುತ್ತಲೇ ಇದೆ. ಇದರ ಭಾಗವಾಗಿ ನಿನ್ನೆ ಹುಬ್ಬಳ್ಳಿಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಸಿ.ಎಂ ಇಬ್ರಾಹಿಂರನ್ನ ಭೇಟಿ ಮಾಡಿದ್ದಾರೆ. ಕೆಲ ಕಾಲ ಸೀಕ್ರೆಟ್ ಚರ್ಚೆಯನ್ನ ನಡೆಸಿರೋದು ಕುತೂಹಲಕ್ಕೆ ಕಾರಣವಾಗಿದೆ. ಭೇಟಿಯ ವೇಳೆ ಬಡೇ ಮಿಯಾಗೆ ಛೋಟೇ ಮಿಯಾ ಐಸ್​ಕ್ರೀಂ ತಿನ್ನಿಸಿದ್ದಾರೆ. ಸಿ.ಎಂ. ಇಬ್ರಾಹಿಂ ಬಾಯಿಗೆ ಖುದ್ದು, ಜಮೀರ್ …

Read More »

ಮತ್ತೆ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ‘ಹೊಸ ಸೂತ್ರ’!

2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರೋ ದೃಷ್ಟಿಯಿಂದ ತಮ್ಮದೇ ಆದ ಸೂತ್ರವನ್ನೂ ಹೆಣೆಯೋದಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿ ಖುದ್ದು ಅಖಾಡಕ್ಕಿಳಿಯೋದಕ್ಕೆ ವಿಪಕ್ಷ ನಾಯಕ ಸಜ್ಜಾಗಿದ್ದು, ಹೈಕಮಾಂಡ್​ ಮುಂದೆ ಬೇಡಿಕೆ ಮಂಡಿಸಲು ತಯಾರಿ ನಡೆಸಿದ್ದಾರೆ. 2023ರ ಚುನಾವಣೆಗೆ ಒಂದೇ ವರ್ಷ ಬಾಕಿ ಇದೆ. ಈಗಲೇ ರಾಜಕೀಯ ಪಕ್ಷಗಳ ತಂತ್ರ-ಪ್ರತಿತಂತ್ರಗಳು ಸದ್ದಿಲ್ಲದೇ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್​ ಅಧಿಕಾರಕ್ಕೆ ತರೋ ದೃಷ್ಟಿಯಿಂದ ಸಿದ್ದರಾಮಯ್ಯ ಸಿದ್ಧವಾಗ್ತಿದ್ದಾರೆ. ನಾಯಕತ್ವ ಗೊಂದಲದ ನಡುವೆಯೇ …

Read More »

ಕನ್ನಡದ ಖ್ಯಾತ ಕವಿಯ ನಿಧನಕ್ಕೆ ಸಂತಾಪ ಸೂಚಿಸಿದ ಶ್ರೀ ಸಂತೋಷ್ ಜಾರಕಿಹೊಳಿ ಅವರು

ಕನ್ನಡದ ಸಮನ್ವಯ ಕವಿ, ಕನ್ನಡದ ಖ್ಯಾತ ವಿದ್ವಾಂಸ ಧಾರವಾಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಪ್ರಸಾರಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇನ್ನೂ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ನಮ್ಮ ಹಿರಿಯರು ಆದ ಶ್ರೀ ಚನ್ನವೀರ ಕಣವಿ ಅವರು ನಿಧನರಾದ ಸುದ್ದಿ ಕೇಳಿ ಅತೀವ ಸಂತಾಪವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಅವರ ಕುಟುಂಬದವರಿಗೆ ಮತ್ತು ಅವರ ಸಾರಸ್ವತ …

Read More »