Breaking News

ಜಿಲ್ಲೆ

MES ಮುಖಂಡ ಶುಭಂ ಶಳಕೆಯಿಂದ DDPI ಕಚೇರಿಗೆ ನುಗ್ಗಿ ಪುಂಡಾಟಿಕೆ

ಬೆಳಗಾವಿ: ಗಡಿವಿವಾದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಇದೀಗ ಸರ್ಕಾರಿ ಕಚೇರಿಯಲ್ಲೂ ಪುಂಡಾಟ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿಕ್ಷಣ ಇಲಾಖೆ ಸಿಆರ್‍ಪಿ ಕೌನ್ಸೆಲಿಂಗ್ ವೇಳೆ ಮರಾಠಿ ಶಾಲೆಗೆ ಕನ್ನಡಿಗ ಸಿಆರ್‍ಪಿ ನಿಯೋಜನೆ ಮಾಡಲಾಗಿದೆ. ಮರಾಠಿ ಶಿಕ್ಷಕರ ಮೇಲೆ ಕನ್ನಡ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ …

Read More »

ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವಕ ಬರ್ಬರವಾಗಿ ಕೊಲೆ

ಚಿಕ್ಕೋಡಿ: ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ- ಕಾತ್ರಾಳ ರಸ್ತೆ ನಡುವೆ ನಡೆದಿದೆ. ಚಿಂತಾಮಣಿ ಬಂಡಗರ (26) ಕೊಲೆಯಾದ ಯುವಕನಾಗಿದ್ದು, ತಡರಾತ್ರಿ 10 ಗಂಟೆ ಸುಮಾರಿಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಐನಾಪೂರದಿಂದ ಕಾತ್ರಾಳ ಕಡೆ ಬೈಕ್ ನಲ್ಲಿ ತೆರಳುವಾಗ ಹಿಂಬದಿಯಿಂದ ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕ ಚಿಂತಾಮಣಿ ಬಂಡಗರ, …

Read More »

ಈದ್‌ ಉಲ್‌ ಫಿತ್ರ್‌’ ಹಬ್ಬ ಪೊಲೀಸ್ ರಿಂದ ಬಂದೋಬಸ್ತ್ : ಬೆಳಗಾವಿ

ಬೆಳಗಾವಿ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ‘ಈದ್‌ ಉಲ್‌ ಫಿತ್ರ್‌’ ಹಬ್ಬ, ಬಸವೇಶ್ವರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ನಿಮಿತ್ತ ಹೆಚ್ಚುವರಿ ‍ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದ್ದಾರೆ. ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿರುವ ಅವರು, ‘ಜಯಂತಿಗಳ ಹಿನ್ನೆಲೆಯಲ್ಲಿ ಪೂಜೆ, ಪ್ರಾರ್ಥನೆ, ಮೆರವಣಿಗೆಗಳು ಜರುಗಲಿರುವುದರಿಂದ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಮೂರು ದಿನದ ಸೂಕ್ತ ಬಂದೋಬಸ್ತ್‌ ಕರ್ತವ್ಯಕ್ಕೆ ರಾಜ್ಯದ ವಿವಿಧ ಜಿಲ್ಲೆ …

Read More »

ನೆರೆಯ ರಾಜ್ಯಕ್ಕೆ ಕರ್ನಾಟಕ ತನ್ನ ಒಂದು ಇಂಚು ಭೂಮಿಯನ್ನು ಸಹ ಕೊಡುವುದಿಲ್ಲ

ಬೆಂಗಳೂರು: ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ರಾಜಕೀಯ ಉಳಿವಿಗಾಗಿ ಭಾಷೆ ಅಥವಾ ಗಡಿ ವಿವಾದವನ್ನು ಬಳಸಿಕೊಳ್ಳಬೇಡಿ ಎಂದು ಒತ್ತಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೆರೆಯ ರಾಜ್ಯಕ್ಕೆ ಕರ್ನಾಟಕ ತನ್ನ ಒಂದು ಇಂಚು ಭೂಮಿಯನ್ನು ಸಹ ಕೊಡುವುದಿಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಕರ್ನಾಟಕದ ಗಡಿ ವಿಚಾರದ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ‌ ಒಂದಿಂಚೂ ಜಾಗವನ್ನೂ ಬಿಟ್ಟು ಕೊಡುವುದಿಲ್ಲ. ಮಹಾರಾಷ್ಟ್ರದಲ್ಲಿ …

Read More »

ಅಮಿತ್ ಶಾ ಸಮ್ಮುಖದಲ್ಲಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರು ಇಂದು (ಮೇ 03) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಸೇರ್ಪಡೆಯಾಗಿ ಮಾತನಾಡಿದ ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿಗೆ ಬರುವುದು ಒಳ್ಳೆಯದು ಎಂದು ಅಮಿತ್ ಶಾ ಹೇಳಿದರು. ಜೆಡಿಎಸ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ ಮತದಾರರ …

Read More »

GPL T-20 ಕ್ರಿಕೆಟ್ ಪಂದ್ಯಾವಳಿಗೆ ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಚಾಲನೆ!

    ಗೋಕಾಕ: ಗೋಕಾಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಚಾಲನೆ ನೀಡಿದರು. ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಪ್ರಾಯೋಜಕತ್ವದಲ್ಲಿ ಗೋಕಾಕ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಗೋಕಾಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಲೇದರ್ ಬಾಲ್ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ …

Read More »

ಜನ ವಿರೋಧಿ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಬಿಟ್ಟು ಬೇರೆ ಎನೂ ಕಾಣಿಸುತ್ತಿಲ್ಲ.: ಮೊಹಮ್ಮದ್ ನಲಪಾಡ್

ಬೆಳಗಾವಿ: ದೇಶದಲ್ಲಿ ಬಿಜೆಪಿಯರು ಹಿಂದುತ್ವವನ್ನು ಲೀಸ್‍ಗೆ ಪಡೆದಿದ್ದಾರಾ ಎಂದು ಸಂಸದ ಪ್ರತಾಪ್ ಸಿಂಹಗೆ ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ಖ ಜನ ವಿರೋಧಿ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಬಿಟ್ಟು ಬೇರೆ ಎನೂ ಕಾಣಿಸುತ್ತಿಲ್ಲ. ಕಳೆದ ಏಳು ವರ್ಷದಿಂದ ಪೆಟ್ರೋಲ್, ಡೀಸೆಲ್ ದರ ಡಬಲ್ ಆಗಿದೆ. ಸಾಮಾನ್ಯ ಒಬ್ಬ ವ್ಯಕ್ತಿ ಮನೆಯಿಂದ ಆಚೆ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು. …

Read More »

ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ: ಮೊಹಮ್ಮದ್ ನಲ್ ಪಾಡ

ಬೆಳಗಾವಿ: ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷಮೊಹಮ್ಮದ್ ನಲ್ ಪಾಡ ಆರೋಪ ಮಾಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಂದರೆ ಬೆಲೆ ಏರಿಕೆ ಸರ್ಕಾರ. ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ರೂಪಾಯಿ ಎರಡೂ ರೂಪಾಯಿ ಏರಿಕೆಯಾದರೂ ಬಿಜೆಪಿ ನಾಯಕರು ರಸ್ತೆಗೆ ಬಂದು ಗ್ಯಾಸ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದರು. ಈಗ ಎಲ್ಲಿದ್ದಾರೆ ಆ. ಚುನಾವಣೆ ಸಂದರ್ಭದಲ್ಲಿ ಬೆಲೆ …

Read More »

ಚಿಂಚನಸೂರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಪ್ರಶ್ನೆಗೆ ಹಾಲಪ್ಪ ಆಚಾರ್ ಹೇಳಿದ್ದು ಹೀಗೆ..!

ರಾಯಚೂರು: ಕಳೆದ ಕೆಲವು ದಿನಗಳಿಂದ ಬಾಬೂರಾವ್ ಚಿಂಚನೂರ್ ಮತ್ತೆ ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಮಾತಿದೆ. ಈ ಬಗ್ಗೆ ಸಚಿವ ಹಾಲಪ್ಪ ಆಚಾರ್ ಮಾತನಾಡಿದ್ದು, ಹೋಗೋರಿಗೆ, ಬರುವವರಿಗೆ ಬಾಗಿಲು ಯಾರು ಮುಚ್ಚೋದಕ್ಕೆ ಆಗುತ್ತೆ. ತೆಗೆಯೋದಕ್ಕೆ ಆಗುತ್ತೆ. ಬಹುಶಃ ಅವರು ಹೋಗುವುದಿಲ್ಲ. ಇವತ್ತು ಕೂಡ ನನ್ನ ಜೊತೆಯಲ್ಲಿ ಸಭೆಯಲ್ಲಿದ್ದಾರೆ ಎಂದು ಹೇಳುವ ಮೂಲಕ ವಿಚಾರ ಸುಳ್ಳು ಎಂದಿದ್ದಾರೆ. ಇದೆಲ್ಲಾ ಯಾರೋ ಹೇಳಿರುವ ವಿಚಾರವಿರಬಹುದು. ಬಿಜೆಪಿ ಪಾರ್ಟಿಯ ಸಿದ್ದಾಂತವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು, …

Read More »

ಸುಮಲತಾರನ್ನ ಬಿಜೆಪಿ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ: ಸಿ.ಪಿ ಯೋಗೇಶ್ವರ್

ರಾಮನಗರ: ಮಂಡ್ಯ ಸಂಸದೆ ಸುಮಲತಾರನ್ನ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷ ಅವರಿಗೆ ಬೆಂಬಲ ನೀಡಿತ್ತು. ಈ ಹಿನ್ನೆಲೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ಮಾಡಿದ್ದೇವೆ. ಮದುವೆ ಸಮಾರಂಭದಲ್ಲಿ ಅವರನ್ನ ಭೇಟಿ ಮಾಡಿದ್ದೆವು, ಸಿಎಂ ಸಹ ಇದ್ದರು. ಅವರು ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಮುಂದೆ ನೋಡೋಣ ಎಂದರು. ಮದ್ದೂರು ಕ್ಷೇತ್ರದಿಂದ ಅಭಿಷೇಕ್ ಅಂಬರೀಶ್ ಬಿಜೆಪಿಯಿಂದ …

Read More »