ಕಾರ ಹುಣ್ಣಿಮೆ ಎನ್ನುವುದು ಉತ್ತರ ಕರ್ನಾಟಕದ ರೈತರಿಗೆ ವಿಷೇಶ ಹಬ್ಬವಾಗಿದೆ. ಈ ಹಬ್ಬದಂದು ರೈತರು ತಾವು ಸಾಕಿರುವ ಎತ್ತುಗಳನ್ನು ವಿಶೇಷ ರೀತಿಯಲ್ಲಿ ಬಣ್ಣಗಳಿಂದ ಅಲಂಕಾರ ಮಾಡಿ ಮೆರವಣಿಗೆ ಮಾಡುವುದು ವಿಶೇಷವಾಗಿದೆ. ಇಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ಕಾರು ಹುಣ್ಣಿಮೆ ನಿಮಿತ್ಯ ಗ್ರಾಮದ ಯುವಕ ಪ್ರದೀಪ್ ಖೋತ ಇವರ ಎತ್ತುಗಳ ಮೇಲೆ ದಿವಂಗತ ಪುನೀತ್ ರಾಜಕುಮಾರ್ ಇವರ ಭಾವಚಿತ್ರ ಬಿಡಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಪುನೀತ್ ರಾಜಕುಮಾರ …
Read More »ಇಡಿ ವಿಚಾರಣೆ ಮುಗಿಯುತ್ತಿದ್ದಂತೆ ‘ಹನುಮ’ನ ದರ್ಶನಕ್ಕೆ ‘ರಾಹುಲ್’ ಆಗಮನ
ಕೊಪ್ಪಳ : ಸಧ್ಯ ಇಡಿ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ತಮ್ಮ ಸಹೋದರಿ ಪ್ರೀಯಾಂಕ ವಾದ್ರಾ ಜೊತೆಗೆ ಸಧ್ಯದಲ್ಲೇ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ಹೌದು, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಭೇಟಿಗೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಕಾತರರಾಗಿದ್ದಾರೆ ಎಂಬ ಚರ್ಚೆ ನಡೆದಿದ್ದು, ಈ ಮೂಲಕ ಸರ್ವ ಧರ್ಮ, ಸಮುದಾಯಗಳನ್ನ ಏಕಭಾವದಿಂದ ಕಾಂಗ್ರೆಸ್ ನೋಡುತ್ತದೆ ಎಂಬ ಸಂದೇಶ ಸಾರಲು ಮುಂದಾಗಿದ್ದಾರೆ …
Read More »ಸವದತ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿಯ ರೇಣುಕಾ ಯಲ್ಲಮ್ಮಾ ದೇವಸ್ಥಾನದ ವರಾಂಡಾಕ್ಕೆನುಗ್ಗಿದ ನೀರು
ಸವದತ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿಯ ರೇಣುಕಾ ಯಲ್ಲಮ್ಮಾ ದೇವಸ್ಥಾನದ ವರಾಂಡಾಕ್ಕೆ ನೀರು ನುಗ್ಗಿದ್ದು ದೇವಿಯ ದರ್ಶನವನ್ನು ಪಡೆಯಲು ಭಕ್ತರು ಪರದಾಡುವ ಪ್ರಸಂಗ ನಿರ್ಮಾಣವಾಗಿತ್ತು. ಹೌದು ಇಂದು ಗುರುವಾರ ಮಧ್ಯಾಹ್ನದ ವೇಳೆಗೆ ಸವದತ್ತಿಯಲ್ಲಿ ಸುರಿದ ಧಾರಾಕಾರ ಮಳಿಯಿಂದಾಗಿ ಸವದತ್ತಿ ಅಧಿದೇವತೆ ರೇಣುಕಾ ಯಲ್ಲಮ್ಮಾ ದೇವಸ್ಥಾನದ ವರಾಂಡಾಕ್ಕೆ ನೀರು ನುಗ್ಗಿದೆ. ಪರಿಣಾಮವಾಗಿ ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತರು ದೇವಿಯ ದರ್ಶನವನ್ನು ಪಡೆಯಲು ಪರದಾಡಬೇಕಾಯಿತು. ಏಕಾಏಕಿಯಾಗಿ ಮಳೆ ರಭಸವಾಗಿ ಬೀಳಲಾರಂಭಿಸಿದ್ದರಿಂದ ಭಕ್ತರು ಓಡಿ …
Read More »ನನ್ನ ರಾಜಕೀಯ ಕಂಡು ಹೊಟ್ಟೆ ಉರಿ: ಸಿದ್ದರಾಮಯ್ಯ
ಬೆಂಗಳೂರು: ವ್ಯಕ್ತಿ ಗೆಲ್ತಾನೆ ಎಂದರೆ ಸೋಲಿಸೋಕೆ ಕಾಯ್ತಾ ಇರ್ತಾರೆ. ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡುತ್ತಿದ್ದಾರೆ. ಅಂತವರು ನಮ್ಮನ್ನು ದ್ವೇಷಿಸಬಹುದು. ನಮ್ಮ ಪಕ್ಷದಲ್ಲಿ ಅಂತವರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ಬೇರೆ ಪಕ್ಷದಲ್ಲಿ ಹೊಟ್ಟೆ ಉರಿಯವರು ಇದ್ದಾರೆ. ನಮ್ಮ ಶಾಸಕರು ಎಲ್ಲರೂ ನನ್ನ ಪರವೇ ಇದ್ದಾರೆ. ಮುಂದೆ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿಯವರು ದೇಶವನ್ನು ಅಧೋಗತಿಗೆ …
Read More »ಲಕ್ಷ್ಮೀ ಅಕ್ಕಾ ಮನೆಯಲ್ಲಿ ಮೀಸೆ ಮಾವ..!
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ನಲ್ಲಿ ದಿನದಿಂದ ದಿನಕ್ಕೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಬೆಳಗಾವಿ ಕಾಂಗ್ರೆಸ್‍ನ ಮತ್ತೊಂದು ಪವರ್ ಸೆಂಟರ್ ಆಗಿ ಹೊರ ಹೊಮ್ಮಿದ್ದಾರೆ. ಹೌದು ಯಾವಾಗ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಿದ್ರೋ ಅವತ್ತಿನಿಂದ ಈವರೆಗೂ ಒಂದಿಲ್ಲೊಂದು ಸಂದರ್ಭಗಲ್ಲಿ ಮೇಲುಗೈ ಸಾಧಿಸುತ್ತಲೇ ಬಂದಿರುವ ಲಕ್ಷ್ಮೀ ಹೆಬ್ಬಾಳ್ಕರ್ ಸಧ್ಯ ಎರಡು ಗೆಲುವುಗಳಿಂದ ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಅದು …
Read More »ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ- ನಲಪಾಡ್
ಬೆಂಗಳೂರು: ರಾಹುಲ್ ಗಾಂಧಿ ಅತ್ಯಾಚಾರ ಮಾಡ್ತಿದ್ದಾರೆ ಎಂದು ಕರ್ನಾಟಕ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಗಂಭೀರ ಆರೋಪ ಮಾಡಿದ್ದಾರೆ. ಇ.ಡಿ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿ ಕಾಂಗ್ರೆಸ್ ನಾಯಕರು ಬೃಹತ್ ಜಾಥಾವನ್ನು ನಗರದಲ್ಲಿ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದ ನಲಪಾಡ್, ರಾಹುಲ್ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ. ಅತ್ಯಾಚಾರ ಎಂದರೇ ರೇಪ್ ಅಲ್ಲ ದೌರ್ಜನ್ಯ. ನಮ್ಮ ಮಾಜಿ ಅಧ್ಯಕ್ಷರ ಮೇಲೆ ದೌರ್ಜನ್ಯ …
Read More »ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ: CM ಸ್ಪಷ್ಟನೆ
ದಾವಣಗೆರೆ: ಕಾನೂನುಬಾಹಿರ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನವರು ಹೋರಾಟ ನಡೆಸುತ್ತಿರುವುದು ದುರಂತ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಿಂದ ರಾಜಭವನ ಚಲೋ ಪ್ರತಿಭಟನೆ ವಿಚಾರವಾಗಿ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರು ಹೋರಾಟ ಮಾಡುತ್ತಿರುವುದು ದುರಂತ. ಹೀಗೆ ಹೋರಾಟ ಮಾಡಿದರೆ ಜನರು ಅವರನ್ನು ಮನೆಗೆ ಚಲೋ ಅಂತಾರೆ ಎಂದು ಹೇಳಿದರು. *ಹಿಂದುಳಿದ ವರ್ಗಗಳ ಮೀಸಲಾತಿ ವರದಿಯ ಆಧಾರದ ಮೇಲೆ ಕ್ರಮ:* …
Read More »ಗದಗ : DC ಕಚೇರಿಯಲ್ಲೇ ಶೂಟ್ ಮಾಡಿಕೊಂಡು ಕಾನ್ ಸ್ಟೆಬಲ್ ಆತ್ಮಹತ್ಯೆ
ಗದಗ: ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಹೆಡ್ ಕಾನ್ಸ್ ಟೇಬಲ್ ಓರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಡಿಸಿ ಕಚೇರಿಯಲ್ಲಿ ನಡೆದಿದೆ. ಡಿಎಆರ್ ಮುಖ್ಯಪೇದೆ ಕೆ.ಎಸ್.ಕೊಪ್ಪದ ಆತ್ಮಹತ್ಯೆಗೆ ಶರಣಾದವರು. ಕೌಟುಂಬಿಕ ಕಲಹಕ್ಕೆ ಬೇಸತ್ತು ಕೊಪ್ಪದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಭದ್ರತಾ ಕೊಠಡಿಯಲ್ಲಿ ಗುಂಡು ಹಾರಿಸಿಕೊಂಡು ಕೊಪ್ಪದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read More »ರಾಹುಲ್ ಗಾಂಧಿಗೆ ಸಮನ್ಸ್ ರಾಜಕೀಯ ಪ್ರೇರಿತ: ಸತೀಶ್ ಜಾರಕಿಹೊಳಿ ಆರೋಪ
ಗೋಕಾಕ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಮುಂದೆ ಸಾಕಷ್ಟು ಕೇಸ್‌ಗಳಿವೆ. ಆದರೆ ಉದ್ದೇಶಪೂರಕವಾಗಿ ರಾಹುಲ್ ಗಾಂಧಿಯವರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು. ಇಡಿ, ಸಿಬಿಐನಲ್ಲಿ ಅನೇಕ ಬಿಜೆಪಿ ನಾಯಕರ ಮೇಲೆ ಕೇಸ್ ಗಳಿದ್ದು, ಅವುಗಳನ್ನು ಮಾತ್ರ ಕೇಂದ್ರ …
Read More »ಟಿಳಕವಾಡಿಯಲ್ಲಿ ಡ್ರೈನೇಜ್ ಸಮಸ್ಯೆ
ಬೆಳಗಾವಿಯ ಟಿಳಕವಾಡಿಯ ಬುಧವಾರ ಪೇಟ ಹಾಗೂ ಗುರುವಾರ ಪೇಟಗಳಲ್ಲಿ ಸಾರ್ವಜನಿಕರಿಗೆ ಡ್ರೈನೇಜ್ ಪೈಪ್‍ಲೈನ್ ಸಮಸ್ಯೆಯಿಂದಾಗಿ ಸಾಕಷ್ಟು ತೊಂದರೆಯಾಗಿತ್ತು. ಈ ಸಮಸ್ಯೆಗಳನ್ನು ಅರಿತ ನಗರಸೇವಕರಾದ ನಿತಿನ್ ಜಾಧವ್ ಕೂಡಲೇ ಸಮಸ್ಯೆಯನ್ನು ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಗರದ ಟಿಳಕವಾಡಿಯ ಬುಧವಾರ ಪೇಟ ಹಾಗೂ ಗುರುವಾರ ಪೇಟಗಳಲ್ಲಿ ಡ್ರೈನೇಜ್ ಪೈಪ್‍ಲೈನ್ ಬ್ಲಾಕ್ ಆಗಿ ಅಕ್ಕಪಕ್ಕದ ಮನೆಯಗಳ ಬಾವಿಯಲ್ಲಿ ಈ ಡ್ರೈನೇಜ್ ನೀರು ಸೇರುತ್ತಿತ್ತು. ಈ ಕುರಿತಂತೆ ಸ್ಥಳೀಯರು ನಗರ ಸೇವಕರಾದ ನಿತಿನ್ ಜಾಧವ್‍ರವರಿಗೆ …
Read More »
Laxmi News 24×7