ಸಾರ್ವಜನಿಕರ ಟೀಕೆ, ಆಗ್ರಹದಿಂದ ಎಚ್ಚೆತ್ತುಕೊಂಡಿರುವ ಬೆಳಗಾವಿಯ ಮಹಾನಗರ ಪಾಲಿಕೆ ಅಧಿಕಾರಿಗಳು ಆರ್‍ಪಿಡಿ ಕ್ರಾಸ್ ಬಳಿ ಲೀಕ್ ಆಗಿದ್ದ ಡ್ರೈನೇಜ್ ಪೈಪ್ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಹೌದು ಕಳೆದ 15 ದಿನಗಳ ಹಿಂದೆ ಆರ್‍ಪಿಡಿ ಕ್ರಾಸ್ ಬಳಿಯ ಡ್ರೈನೇಜ್ ಪೈಪ್ ಲೀಕ್ ಆಗಿ ರಸ್ತೆಯ ಮೇಲೆ ಕಲುಷಿತ ನೀರು ಹರಿಯುತ್ತಿತ್ತು. ಈ ಸಂದರ್ಭದಲ್ಲಿ ಮೊದಲೇ ದೊಡ್ಡ ಪ್ರಮಾಣದಲ್ಲಿ ಮಳೆಯಾಗುತ್ತಿತ್ತು. ಇದರಿಂದ ಮಳೆ ನೀರಿನ ಜೊತೆಗೆ ಡ್ರೈನೇಜ್ ನೀರು ಕೂಡ ರಸ್ತೆಯ ಮೇಲೆ ಹರಿಯುತ್ತಿತ್ತು. …
Read More »ಯಾವಾಗ್ಯಾವಾಗ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲ್ವೋ ಆವಾಗ ಈ ಕೂಗು ಬರುತ್ತೆ, ನಾನು ಕೂಗು ಎತ್ತೋದು ನಿಜ.
ಸಿಎಂ ಸ್ಥಾನಕ್ಕೆ ಟವೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಉಮೇಶ ಕತ್ತಿ ಸಿಎಂ ಸ್ಥಾನದ ಕನಸಲ್ಲೆ ತೇಲಾಡುತ್ತಿದ್ದಾರೆ. ನಸೀಬ್‌ನಲ್ಲಿದ್ದರೆ ಸಿಎಂ ಸ್ಥಾನ ಒಂದಿನ ಬರಬಹುದು ಎಂದು ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟರು. ವಿಜಯಪುರ ಜಿಲ್ಲೆಯ ಆಲಮಟ್ಟಿ ಯಲ್ಲಿ ಮಾದ್ಯಮಗಳ ಜೊತೆಯಲ್ಲಿ ಮಾತನಾಡಿ ನನಗಿನ್ನು 60 ವಯಸ್ಸು, 15 ವರ್ಷ ಇದೆ ಬಿಜೆಪಿ ರೂಲ್ ನಂತೆ, ಇನ್ನು 15 ವರ್ಷ ಶಾಸಕನಾಗಿ ಇರ್ತಿನಿ, ಟೈಂ ಬರಬಹುದು. ನಾವು ದಿನ ಬೇಡಿದರೇ …
Read More »ಬೆಳಗಾವಿಯ ಯುವಕ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಾದಯಾತ್ರೆ
ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ಪಾದಯಾತ್ರೆ ಹೊರಟಿದ್ದಾರೆ. ಪಾದಯಾತ್ರೆಯ ಮೂರನೇ ದಿನವಾದ ಇಂದು ಬೆಳಗಾವಿಗೆ ಬಂದು ತಲುಪಿದ್ದಾರೆ. ಬೆಳಗಾವಿಯ ಸಿದ್ದರಾಮಯ್ಯ ಅಭಿಮಾನಿಗಳು ಅವರನ್ನು ನಗರದ ಕನಕದಾಸ ಸರ್ಕಲ್‍ನಲ್ಲಿ ಸ್ವಾಗತ ಮಾಡಿದರು. ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದ ವ್ಯಕ್ತಿಯೋರ್ವ ಪಾದಯಾತ್ರೆಯನ್ನು ಕೈಗೊಂಡಿದ್ದಾನೆ. ಮೂರನೇ ದಿನವಾದ ಇಂದು ಆತ ಬೆಳಗಾವಿಗೆ ಬಂದು ತಲುಪಿದ್ದು …
Read More »ಜನನ, ಮರಣ ನೋಂದಣಿ ಕಾಯ್ದೆತಿದ್ದುಪಡಿ ರದ್ದುಗೊಳಿಸಲು ಆಗ್ರಹ
ಬೈಲಹೊಂಗಲ: ಜನನ ಮತ್ತು ಮರಣ ನೋಂದಣಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಾಂಗದ ವ್ಯಾಪ್ತಿಯನ್ನು ಬದಲಾವಣೆ ಮಾಡಿರುವುದನ್ನು ರದ್ದುಗೊಳಿಸಿ ಮೊದಲಿನಂತೆ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು. ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ವಕೀಲರು ಸೋಮವಾರ ಮನವಿ ಸಲ್ಲಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಎಂ.ಆರ್. ಸೋಮಣ್ಣವರ, ವಕೀಲರ ಸಂಘದ ಕಾರ್ಯದರ್ಶಿ ಸಂತೋಷ ಭಾವಿ ಮಾತನಾಡಿ, ‘ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ಸಂಬಂಧಿಸಿದ ವಿಷಯಗಳು …
Read More »ಬಿಜೆಪಿಯಲ್ಲಿ ಗೆಲ್ಲುವಂತವರಿದ್ದರೆ 80 ವರ್ಷದ ಮುದುಕನಿಗೂ, ಸೋನಿಯಾ ಗಾಂಧಿಗೂ ಟಿಕೆಟ್ ಕೊಡ್ತಾರೆ
ಬಾಗಲಕೋಟೆ: ಶ್ರೀರಾಮ ಸೇನೆ ಮತ್ತು ಬಿಜೆಪಿಗೆ ಏನು ಸಂಬಂಧ ಇಲ್ಲ ಎಂದು ಕಟೀಲ್ ಹೇಳಿದ್ದಾರೆ. ನಾನೂ ಕೂಡ ಹೇಳಿದ್ದೇನೆ. ನಾನೇನು ಬಿಜೆಪಿ ಸದಸ್ಯನಲ್ಲ. ಯಾವ ಪಕ್ಷದ ಸಂಬಂಧವೂ ನಮ್ಮ ಸಂಘಟನೆಗೆ ಇಲ್ಲ. ಅವರೇನು ನಿರ್ಧಾರ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂಪ್ಪ ಅವರು ತಮ್ಮ ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೇನು …
Read More »ಮೂರು ತಲೆಮಾರಿನಿಂದ ಈ ಕುಟುಂಬ ದೇಶ ಸೇವೆಗೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿದ್ದಾರೆ.
ಕಾರ್ಗಿಲ್ ಯುದ್ಧ ಎನ್ನುತ್ತಲೇ ಎಂಥವರ ಮನದಲ್ಲೂ ರೋಮಾಂಚನ ಮೂಡುತ್ತದೆ. ಎದುರಾಳಿಗಳೊಂದಿಗೆ ನಮ್ಮ ಸೈನಿಕರು ಧೈರ್ಯದಿಂದ ಸೆಣಸುವ, ಎದುರಾಳಿಗಳನ್ನು ಸದೆಬಡಿಯುವ ದೃಶ್ಯಗಳು ಕಣ್ಣೆದುರು ಬಂದುನಿಲ್ಲುತ್ತದೆ. ತಮ್ಮ ಕುಟುಂಬದ ಹಿತ ಬದಿಗೊತ್ತಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಪ್ರಾಣವನ್ನೇ ತೆತ್ತ ಸೈನಿಕರು ನಮ್ಮ ನಾಡಿನಲ್ಲಿದ್ದಾರೆ. ಅಂತಹವರಲ್ಲಿ ಬೆಳಗಾವಿಯ ಕುಟುಂಬವೂ ಒಂದಿದೆ.ಸುಮಾರು ಮೂರು ತಲೆಮಾರಿನವರೆಗೆ ದೇಶ ಸೇವೆ ಮಾಡುತ್ತಿದೆ. ಇತ್ತ ಕಾಗ್ರಿಲ್ ಯುದ್ಧದಲ್ಲಿ ಮಗನನ್ನು ಕಳೆದುಕೊಂಡ ತಾಯಿ ಹೇಳೊದಾದರೂ ಏನು ಭಾರತೀಯ ಸೇನೆಯಲ್ಲಿ ಸುಧೀರ್ಘವಾಗಿ …
Read More »ನೂರಾರು ಮಂದಿ ದೇವಿಯ ಮಂದಿರದ ಮೇಲೆ ಕೋಳಿ ಮರಿಗಳನ್ನು ಎಸೆದು ಹರಕೆ ತೀರಿಸಿದ್ದು ವಿಶೇಷವಾಗಿತ್ತು. ಪ್ರತಿ ವರ್ಷವೂ ಆμÁಢ ಮಾಸದಲ್ಲಿ ಹುಣ್ಣಿಮೆಯ ನಂತರ ಬರುವ ಮಂಗಳವಾರದಂದೇ ಈ ಜಾತ್ರೆ ನಡೆಯುತ್ತದೆ. ವಡಗಾವಿಯ ವಿಷ್ಣು ಗಲ್ಲಿ, ಪಾಟೀಲ ಗಲ್ಲಿ ಮೊದಲಾದ ಕಡೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಕೋಳಿ ಮರಿಗಳನ್ನು ಖರೀದಿಸಿದ ಭಕ್ತರು, ಅವುಗಳನ್ನು ಮಂದಿರದ ಮೇಲೆ ಎಸೆದು, ಹಾರಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಚಿಕ್ಕ ಮಕ್ಕಳು ಕೂಡ ಸಣ್ಣ ಕೋಳಿ ಮರಿಗಳನ್ನು ಹಾರಿಸಿದ್ದು ವಿಶೇಷವಾಗಿತ್ತು. ಹರಕೆ ಈಡೇರಿದ ಖುಷಿಯಲ್ಲಿ ಈ ಆಚರಣೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೆಲವು ಭಕ್ತರು ಕುರಿ ಬಲಿ ನೀಡುವುದಾಗಿಯೂ ಹರಕೆ ಹೊತ್ತುಕೊಳ್ಳುವುದು ಸಂಪ್ರದಾಯವಾಗಿದೆ.ಇನ್ನು ಬೆಳಿಗ್ಗೆ 10 ಗಂಟೆಗೆ ಮಂಗಾಯಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ 12 ಗಂಟೆಗೆ ದೇವಿಗೆ ಎರಡನೇ ಆರತಿ ಬೆಳಗಿದರು. ಕ್ಷಣ ಕ್ಷಣಕ್ಕೂ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಮಾತನಾಡಿದ ಭಕ್ತರು ನಾವು ಬಹಳ ವರ್ಷದಿಂದ ಜಾತ್ರೆ ಬರುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಕೊರೊನಾದಿಂದ ಜಾತ್ರೆ ಆಗಿರಲಿಲ್ಲ. ಈ ಬಾರಿ ಬಾಳ ಜೋರ ಜಾತ್ರೆ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬೆಳಗಾವಿಯ ವಡಗಾವಿಯ ಆರಾಧ್ಯದೇವತೆ ಶ್ರೀ ಮಂಗಾಯಿದೇವಿ ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಅದ್ಧೂರಿಯಾಗಿ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನೆರವೇರಲಿದೆ.ಹೌದು ವಡಗಾವಿಯ ಮಂಗಾಯಿದೇವಿ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗ್ರಾಮೀಣ ಸೊಗಡಿನ ಈ ಜಾತ್ರೆ ಸಾವಿರಾರು ಭಕ್ತರು ತನ್ನ ಆಕರ್ಷಿಸುತ್ತದೆ. ವಡಗಾವಿಯ ಮಂಗಾಯಿ ದೇವಸ್ಥಾನ ಆವರಣ ಭಕ್ತರಿಂದ ಕಿಕ್ಕಿರಿದು ತುಂಬಿ ಹೋಗಿತ್ತು. ಸ್ಥಳೀಯರು, ಗೋವಾ, ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು. ನೂರಾರು …
Read More »ಗಣೇಶೋತ್ಸವದಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಡಿ.ಜೆ ಬಳಕೆ ನಿಷೇಧ
ಬೆಳಗಾವಿ: ‘ಆಗಸ್ಟ್ 31ರಿಂದ ಸೆಪ್ಟೆಂಬರ್ 9 ರವರೆಗೆ ನಗರ ಹಾಗೂ ಜಿಲ್ಲೆಯಲ್ಲಿ ನಡೆಯುವ ಗಣೇಶೋತ್ಸವ ಸಂದರ್ಭದಲ್ಲಿ ಡಿ.ಜೆ ಬಳಕೆ ಮಾಡುವಂತಿಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಾಕೀತು ಮಾಡಿದರು. ಗಣೇಶೋತ್ಸವ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಗಣೇಶೋತ್ಸವ ಮಂಡಳಿಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರವೇ ಉತ್ಸವಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದರು. ‘ಉತ್ಸವದಲ್ಲಿ ಹಿಂದೆ ದೊಡ್ಡ ಶಬ್ದದ …
Read More »ನಾಪತ್ತೆಯಾಗಿದ್ದ ರಾಯಚೂರು ವಿದ್ಯಾರ್ಥಿನಿಯರು ಹುಬ್ಬಳ್ಳಿಯಲ್ಲಿ ಪತ್ತೆ
ರಾಯಚೂರು: ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಶನಿವಾರ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎಂದು ಪಾಲಕರು ಭಾನುವಾರ ಮಹಿಳಾ ಪೊಲೀಸ್ ಠಾಣೆಗೆ ನೀಡಿದ್ದ ದೂರು, ಕೊನೆಗೂ ಸೋಮವಾರ ಸುಖಾಂತ್ಯ ಕಂಡಿದೆ. ಹುಬ್ಬಳ್ಳಿಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ಗೆಳೆಯರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದ್ದು, ಪೊಲೀಸರು ವಾಪಸ್ ಕರೆತರುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿ ಓಡಾಡುತ್ತಿದ್ದ ವಿದ್ಯಾರ್ಥಿಗಳನ್ನು ರೈಲ್ವೆ ಭದ್ರತಾ ಸಿಬ್ಬಂದಿ ವಿಚಾರಿಸಿ, ಹುಬ್ಬಳ್ಳಿ ಶಹರ ಠಾಣೆಗೆ ಒಪ್ಪಿಸಿದ್ದರು. ಇದೀಗ ಅಲ್ಲಿಂದ ರಾಯಚೂರಿಗೆ …
Read More »‘ಬೆಳಿಗ್ಗೆ 10ಕ್ಕೆ ಕಚೇರಿ’ಗೆ ಹಾಜರಾಗಬೇಕು, ಇಲ್ಲವಾದಲ್ಲಿ ಶಿಸ್ತು ಕ್ರಮ: ‘ಸರ್ಕಾರಿ ನೌಕರ’ರಿಗೆ ‘ರಾಜ್ಯ ಸರ್ಕಾರ’ ಖಡಕ್ ಆದೇಶ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ನಿಗದಿತ ಅವಧಿಗೆ ಹಾಜರಾಗಲು ಹಾಗೂ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದು. ಬೆಳಿಗ್ಗೆ 10ಕ್ಕೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ, ಸರ್ಕಾರಿ ನೌಕರರಿಗೆ ಖಡಕ್ ಎಚ್ಚರಿಕೆ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು …
Read More »
Laxmi News 24×7