ಚಿರತೆ ಸಿಗದ ಕಾರಣ ಉಮೇಶ ಕತ್ತಿ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆ ವಿಜಯಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಉಮೇಶ ಕತ್ತಿ ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ ಎಂದಿದ್ದಾರೆ. ವಿಜಯಪುರದಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ.ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲಾ .ಚಿರತೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು …
Read More »ನಟ, ಸಂಸದ ಜಗ್ಗೇಶ್ ಮನೆಗೆ ನುಗ್ಗಿದ ಮಳೆ ನೀರು, ಗಮನ ಹರಿಸುವಂತೆ ಅಧಿಕಾರಿಗಳಿಗೆ ಮನವಿ
ಬೆಂಗಳೂರು: ಬಿಜೆಪಿಯ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಗ್ಗೇಶ್ ಮನವಿ ಮಾಡಿದ್ದಾರೆ. ತುಮಕೂರಿನ ಮಾಯಸಂದ್ರದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದ ನೀರು ನಮ್ಮ ಮನೆಗೆ ನುಗ್ಗಿದ್ದರಿಂದ 20 ದಿನಗಳಿಂದ ನನ್ನ ಪತ್ನಿ ನಿದ್ದೆ ಮಾಡಿಲ್ಲ~ ಎಂದು ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ನಟ ಜಗ್ಗೇಶ್ ದೂರಿದ್ದಾರೆ. ಈ ಕುರಿತು TNIE …
Read More »ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನಂದ ಪಾಟೀಲ ಸಾವು
ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರ ಪಟ್ಟು. ವಿದ್ಯುತ್ ಲೈನ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಹೆಸ್ಕಾಂ ಲೈನ್ ಮೆನ್ ಸಹಾಯಕ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದಲ್ಲಿ ಘಟನೆ ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೆಸ್ಕಾಂ ಲೈನ್ ಮನ್ …
Read More »ಟಿವಿಎಸ್ ಎಕ್ಸೆಲ್ ಗೆ ಹಿಂಬದಿಯಿಂದ ಕಾರು ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಗದಗ: ಟಿವಿಎಸ್ ಎಕ್ಸೆಲ್ ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೊಂಬಳ ರಸ್ತೆಯಲ್ಲಿ ಭಾನುವಾರ ನಡೆದಿದೆ. ಗದಗ ನಗರದ ಹಾಳದಿಬ್ಬ ನಿವಾಸಿ ಮಂಜಪ್ಪ ಬಸಪ್ಪ ಕಲಬಂಡಿ(25) ಮೃತಪಟ್ಟ ಸವಾರ. ಮಂಜಪ್ಪ ಕಲಬಂಡಿ ಅವರು ಭಾನುವಾರಬೆಳಿಗ್ಗೆ ಮನೆಯಿಂದ ಹೊಂಬಳ ರಸ್ತೆಯಲ್ಲಿನ ಜಮೀನಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಮಂಜಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ …
Read More »ಶ್ರಾವಣ ಮಾಸ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ( ಪಲ್ಲಕ್ಕಿ ) ಹಾಗೂ ಜಾತ್ರಾ ಮಹೋತ್ಸವ
ಗೋಕಾಕ: ಶ್ರಾವಣದ ಮಾಸ ಸದಾ ಹಬ್ಬ ಹರಿದಿನಿ ಭಕ್ತಿ ಗಳಿಂದ ಕೂಡಿದ ಮಾಸ ಇದರ ಪ್ರಯುಕ್ತ ನಾಡಿ ನಾದ್ಯಂತ ಸಡಗರ ಸಂಭ್ರಮ ಗಳು ಜರಗುತ್ತವೆ. ಇದರ ಪ್ರಯುಕ್ತವಾಗಿಶ್ರಾವಣ ಮಾಸ ಸಪ್ತಾಹದ ಮಂಗಳ ಮಹೋತ್ಸವದ ಅಂಗವಾಗಿ ಗೋಕಾಕ ನಗರದ ಕಿಲ್ಲಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಪಲ್ಲಕ್ಕಿಯೊಂದಿಗೆ ನಗರ ಪ್ರದಕ್ಷಿಣೆ ಜರುಗಿತು. ಈ ಕಾರ್ಯಕ್ರಮದಲ್ಲಿ ಕಿಲ್ಲಾದ ಅನೇಕ ಹಿರಿಯರು ಯುವಕರು ಪಾಲ್ಗೊಂಡಿದ್ದರು ಅನೇಕ ಸುಮಂಗಲಿಯರು ಕಳಶದೊಂದಿಗೆ …
Read More »ಸತತವಾಗಿ 20ದಿನಕ್ಕಿಂತ ಹೆಚ್ಚಾದರೂ ನೀವು ಚಿರತೆ ಹಿಡಿಯಲಿಲ್ಲ ನಾವು ಹಿಡಿತಿವಿ:ಕಾಂಗ್ರೆಸ್ ಮಹಿಳಾ ಸದಸ್ಯರು
ಸತತವಾಗಿ 20ದಿನಕ್ಕಿಂತ ಹೆಚ್ಚಾದರೂ ನೀವು ಚಿರತೆ ಹಿಡಿಯಲಿಲ್ಲ ನಾವು ಹಿಡಿತಿವಿ:ಕಾಂಗ್ರೆಸ್ ಮಹಿಳಾ ಸದಸ್ಯರು ದೊಣ್ಣೆ ಹಿಡಿದು ಸಚಿವ ಉಮೇಶ್ ವಿರುದ್ಧ ಘೋಷಣೆ ಕೂಗಿದ್ದಾರೆ. ಸುಮಾರು ದಿನಗಳಿಂದ ಎಲ್ಲಾಕಡೆ ಭಯದ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ ಶಾಲೆಗಳನ್ನು ರಜೆ ಕೂಡ ಕೊಡಲಾಗಿದೆ ಇನ್ನೇನು ಸಿಗತ್ತೆ ಎಂಬುವಷ್ಟರಲ್ಲಿ ಚಿರತೆ ಕಣ್ಮಯ ವಾಗುತ್ತಿದೆ. ನೀವೇನು ಮಾಡುತ್ತಿದ್ದೀರಿ ನಿಮ್ಮಿಂದ ಆಗದಿದ್ದರೆ ನಾವೇ ಚಿರತೆ ಹೀಡಿತಿವಿ ಎಂದು ಕಾಂಗ್ರೆಸ್ ಮಹಿಳಾ ಮಣಿಯರು ಆಕ್ರೋಶ ವ್ಯಕ್ತಪಡಿಸಿದರು. ಗಾಲ್ಫ್ ಕೋರ್ಸ್ ಮೈದಾನದ …
Read More »ಬೆಳಗಾವಿ ಜಿಲ್ಲೆಯ ಜನಪ್ರನಿಧಿಗಳು 2023 ರ ಚುನಾವಣೆಯಲ್ಲಿ ನೋಟಾ ಮತ ಪಡೆಯಲು ಸಿದ್ದರಾಗಿ: ಮೃತ್ಯುಂಜಯ ಮಹಾ ಸ್ವಾಮಿಗಳು
ಬೆಳಗಾವಿ ಜಿಲ್ಲೆಯ ಜನಪ್ರನಿಧಿಗಳು 2023 ರ ಚುನಾವಣೆಯಲ್ಲಿ ನೋಟಾ ಮತ ಪಡೆಯಲು ಸಿದ್ದರಾಗಿ ಎಂದು ಕೂಡಲ ಸಂಗಮದ ಜಯ ಮೃತ್ಯುಂಜಯ ಮಹಾ ಸ್ವಾಮಿಗಳು ಹೇಳಿದರು. ಅವರು 2ಎ ಮಿಸಲಾತಿಗಾಗಿ ಸೇಪ್ಟಂಬರ 26 ರಂದು ಮುಖ್ಯಮಂತ್ರಿಗಳ ಮನೆ ಎದುರು ಧರಣಿ ಸತ್ಯಾಗ್ರಹ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಮಾಡುವ ಕುರಿತು ರಾಜ್ಯದ ಪ್ರತಿ ತಾಲೂಕಿನಲ್ಲಿ ಜಾಗ್ರತಾ ಜಾಥಾಗಳನ್ನು ಹಮ್ಮಿಕೊಂಡು ಇಂದು ಹುಕ್ಕೇರಿ ನಗರದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಬಸವಣ್ಣವರ ಭಾವ ಚಿತ್ರಕ್ಕೆ …
Read More »ಬೆಂಗಳೂರು: ಗೃಹ ಸಚಿವರ ವಿರುದ್ಧ ಲೋಕಾಯುಕ್ತ ತನಿಖೆ ಆರಂಭ!
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿಯಮ ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿ ಲೋಕಾಯುಕ್ತ ತನಿಖೆ ಆರಂಭಿಸಿದೆ ಎಂದು ಲೋಕಾಯುಕ್ತ ಮೂಲಗಳು ಶನಿವಾರ ತಿಳಿಸಿವೆ. ಹೈಕೋರ್ಟ್‌ನ ಆದೇಶದಂತೆ ಲೋಕಾಯುಕ್ತಕ್ಕೆ ತಮ್ಮ ಸರ್ಕಾರ ಸಂಪೂರ್ಣ ಅಧಿಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಘೋಷಿಸಿದ್ದಾರೆ. ಜ್ಞಾನೇಂದ್ರ ಮತ್ತು ಇತರ ಪ್ರಭಾವಿ ನಾಯಕರಿಗೆ ಕೋಟ್ಯಂತರ ರೂಪಾಯಿ …
Read More »ಕಲ್ಲೂರ-ಮಾರಡಗಿ ಮಧ್ಯೆ ಸೇತುವೆ ನಿರ್ಮಾಣ
ರಾಮದುರ್ಗ: ಮಳೆಗಾಲದ ಸಂದರ್ಭದಲ್ಲಿ ಗ್ರಾಮದ ಜನರು ಅನುಭವಿಸುತ್ತಿದ್ದ ಸಮಸ್ಯೆ ಯನ್ನು ನಿವಾರಿಸುವ ನಿಟ್ಟಿನಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಹುಬ್ಬಳ್ಳಿ ಕೆ.ಆರ್.ಡಿ.ಸಿ.ಎಲ್ ನ 80 ಲಕ್ಷ ಅನುದಾನದಲ್ಲಿ ಕಲ್ಲೂರ-ಮಾರಡಗಿ ರಸ್ತೆಯ ಮಧ್ಯೆ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮದ ಹಾಗೂ ಮುಳ್ಳೂರ ಸುತ್ತಲಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಸೇತುವೆ ಕಾರ್ಯವನ್ನು ಕೈಗೊಂಡು ಅನುಕೂಲ ಕಲ್ಪಿಸಲಾಗುತ್ತಿದೆ. ಮಳೆ ಬಂದಾಗ …
Read More »ಗಣೇಶ ಚತುರ್ಥಿಗೆ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಮುಂದುವರಿಯಲಿದ್ದು, ಗಣೇಶ ಹಬ್ಬದ ದಿನ(ಆ.31) ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭರ್ಜರಿ ಮಳೆಯಾಗಿರುತ್ತಿರುವ ಪರಿಣಾಮ ನದಿಗಳು ಮೈದುಂಬಿ ಹರಿಯುತ್ತಿವೆ. ಇದು ಇನ್ನೂ ಒಂದು ವಾರ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಮಾಹಿತಿ ನೀಡಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, …
Read More »
Laxmi News 24×7