Breaking News

ಜಿಲ್ಲೆ

ಇನ್ನೂ 5 ದಿನಗಳ ಕಾಲ ಮಳೆರಾಯನ ಕೆಂಗಣ್ಣಿಗೆ ಗುರಿಯಾಗಲಿದೆ ಬೆಂಗಳೂರು

ಇನ್ನೂ 5 ದಿನಗಳ ಕಾಲ ಮಳೆರಾಯನ ಕೆಂಗಣ್ಣಿಗೆ ಗುರಿಯಾಗಲಿದೆ ಬೆಂಗಳೂರು ಬೆಂಗಳೂರು: ಮುಂದಿನ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ನಿರಂತರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಬುಧವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕೆಲವು ದಿನಗಳ ಕಾಲ ಜನರು ಸದ್ಯದ ಪರಿಸ್ಥಿತಿಯನ್ನು ಸಹಿಸಬೇಕಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ರೈಲ್ವೇ ಅಲರ್ಟ್ ಆಗಿರುವ ಹಿನ್ನೆಲೆಯಲ್ಲಿ ಅನಾಹುತಕ್ಕೆ ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರವಾಹ ಪೀಡಿತ ಜನರಿಗೆ ಸ್ಪಂದಿಸಲು …

Read More »

ರಾಜಹಂಸಗಡದಲ್ಲಿ ಬೋಟಿಂಗ್ ಸ್ಪರ್ಧೆ

ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ರಾಜಹಂಸಗಡ ಗ್ರಾಮದ ಕೆರೆಯಲ್ಲಿ ಮನರಂಜನಾ ಉದ್ದೇಶದಿಂದ ಗಣೇಶೋತ್ಸವ ಹಿನ್ನೆಲೆಯಲ್ಲಿ ಬೋಟ್ ಕಾಂಪಿಟೇಶನ್‌ನ್ನು ಹಮ್ಮಿಕೊಳ್ಳಲಾಗಿತ್ತು. ಹೌದು ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ರಾಜಹಂಸಗಡ ಗ್ರಾಮದ ಕೆರೆಯಲ್ಲಿ ಮನರಂಜನಾ ಉದ್ದೇಶದಿಂದ ಗಣೇಶೋತ್ಸವ ಹಿನ್ನೆಲೆಯಲ್ಲಿ ಬೋಟ್ ಕಾಂಪಿಟೇಶನ್‌ನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗ್ರಾಮದ ಉತ್ಸಾಹಿ ಯುವಕರು ಭಾಗಿಯಾಗಿದ್ದರು. ಈ ಬೋಟ್ ಕಾಂಪಿಟೇಶನ್‌ನಲ್ಲಿ ಯುವತಿಯರು ಭಾಗಿಯಾಗಿದ್ದು ವಿಶೇಷವಾಗಿದ್ದರು. ಈ ವೇಳೆ ಸ್ಪರ್ಧೆಯಲ್ಲಿ ೭೦ ವರ್ಷದ ಪರಶುರಾಮ್ ಹಲಗೇಕರ್, ಹಾಗೂ ನರ್ಮದಾ ಕಡೋಲ್ಕರ್ ಭಾಗಿಯಾಗಿದ್ದು …

Read More »

ಗುಣಮಟ್ಟದ ಶಿಕ್ಷಣದಿಂದ ದೇಶದ ಪ್ರಗತಿ: ಬಾಗೇವಾಡಿ

ಬೆಳಗಾವಿ: ಒಂದು ದೇಶದ ಪ್ರಗತಿ ಅಲ್ಲಿಯ ಶಿಕ್ಷಣದ ಗುಣಮಟ್ಟದ ಮೇಲೆ ನಿಂತಿದೆ. ಗುಣಮಟ್ಟದ ಶಿಕ್ಷಣ ಸಾಕಾರಗೊಳ್ಳಲು ಅಲ್ಲಿಯ ಶಿಕ್ಷಕರ ವೃತ್ತಿಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಮುಖೇನ ಅವರಿಗೆ ವೃತ್ತಿ ಸ್ವಾತಂತ್ರ್ಯ ನೀಡಿದರೆ ಭಾರತದ ಉಜ್ವಲ ಭವಿಷ್ಯ ಬರೆಯಬಲ್ಲ ಮಕ್ಕಳನ್ನು ತಯಾರು ಮಾಡಬಲ್ಲ ಸಾಮರ್ಥ್ಯ ಶಿಕ್ಷಕರಿಗಿದೆ ಎಂದು ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಶಂಕರ ಬಾಗೇವಾಡಿ ಅಭಿಪ್ರಾಯ ಪಟ್ಟರು.   ನಗರದ ಹೊರವಲಯದ ಕಣಬರಗಿಯ ಸಮತಾ ಶಾಲೆಯಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ …

Read More »

ಕಿಕ್‌ಬ್ಯಾಕ್‌ ಆರೋಪ: ಬಿಎಸ್‌ವೈ ವಿರುದ್ಧದ ಪ್ರಕರಣ ಮರು ವಿಚಾರಣೆಗೆ ಹೈಕೋರ್ಟ್‌ ಆದೇಶ

ಬೆಂಗಳೂರು: ಕೋಟ್ಯಂತರ ರೂಪಾಯಿ “ಕಿಕ್‌ಬ್ಯಾಕ್‌’ ಪಡೆದುಕೊಂಡಿದ್ದಾರೆ ಎಂಬ ಆರೋಪ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರು ಹಾಗೂ ಕೆಲ ಆಪ್ತರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶಿಸಿದೆ.   ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪ ಮತ್ತು ಪುತ್ರ ಬಿ.ವೈ. ವಿಜಯೇಂದ್ರ ಸಹಿತ ಅವರ ಕುಟುಂಬಸ್ಥರು ರಾಮಲಿಂಗಂ ಕನ್‌ಸ್ಟ್ರಕ್ಷನ್‌ …

Read More »

ಬಿಎಸ್​​​ವೈ ವಿರುದ್ಧದ ಭ್ರಷ್ಟಾಚಾರ ಕೇಸ್​.. ವಿಚಾರಣೆ ನಡೆಸುವಂತೆ ವಿಶೇಷ ಕೋರ್ಟ್​ಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಸರ್ಕಾರಿ ಗುತ್ತಿಗೆ ನೀಡಲು ಲಂಚ ಪಡೆದ ಆರೋಪದ ಮೇಲೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಖಾಸಗಿ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್​, ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ. ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಅಂದಿನ ರಾಜ್ಯಪಾಲರು ಒಪ್ಪಿಗೆ ನೀಡಲು ನಿರಾಕರಿಸಿದ್ದರಿಂದ ಇಲ್ಲಿನ ಸೆಷನ್ಸ್ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. …

Read More »

ನನಗೆ ಬಯ್ಯಲಾದರೂ ದೊಡ್ಡಪ್ಪ ಬರಲಿ ಎಂದು ಕಾಯುತ್ತಿದ್ದೇನೆ: ಉಮೇಶ್ ಕತ್ತಿ ಸಹೋದರ ಪುತ್ರ ಪೃಥ್ವಿ ಕಣ್ಣೀರು

ಆಹಾರ ಸಚಿವ ಉಮೇಶ್ ಕತ್ತಿ ಕಳೆದ ರಾತ್ರಿ ವಿಧಿವಶರಾಗಿದ್ದು, ಅವರ ಈ ಸಾವು ಕುಟುಂಬಸ್ಥರನ್ನು ಮಾತ್ರವಲ್ಲದೆ ರಾಜ್ಯದ ಜನತೆಯನ್ನು ದಿಗ್ಬ್ರಾಂತರನ್ನಾಗಿಸಿದೆ. ರಾತ್ರಿಯವರೆಗೆ ಲವಲವಿಕೆಯಿಂದ ಇದ್ದ ಉಮೇಶ್ ಕತ್ತಿ ಮರುಕ್ಷಣವೇ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ.   ಉಮೇಶ್ ಕತ್ತಿ ಅವರ ಹುಟ್ಟೂರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನೀರವ ಮೌನ ಆವರಿಸಿದ್ದು, ಊರಿನ ಜನತೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಬಂದ್ ಆಚರಿಸುತ್ತಿದ್ದಾರೆ. …

Read More »

ಉಮೇಶ್ ಕತ್ತಿ ನಿಧನ : ಹುಕ್ಕೇರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯೋದು ಡೌಟ್..?

ಬೆಂಗಳೂರು,ಸೆ.7-ಸಚಿವ ಉಮೇಶ್ ಕತ್ತಿ ನಿಧನದಿಂದಾಗಿ ತೆರವಾಗಿರುವ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ತೆರವಾಗಿರುವ ಲೋಕಸಭೆ, ವಿಧಾನಸಭೆ ಸೇರಿದಂತೆ ಯಾವುದೇ ಕ್ಷೇತ್ರಗಳಿಗೆ ನಿಯಮಾವಳಿ ಪ್ರಕಾರ ಆರು ತಿಂಗಳೊಳಗೆ ಮರು ಚುನಾವಣೆ ನಡೆಯಬೇಕು. ಆದರೆ ಕರ್ನಾಟಕದ ವಿಧಾನಸಭೆ ಚುನಾವಣೆ 2023ರ ಮೇ ತಿಂಗಳ ಮಧ್ಯ ಭಾಗದಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆಗಳು ಇಲ್ಲ …

Read More »

ಹಿರಿಯ ಸಚಿವ ಉಮೇಶ ಕತ್ತಿ ಅಗಲಿಕೆಯಿಂದ ಇಡೀ ರಾಜ್ಯಕ್ಕೆ ದೊಡ್ಡ ನಷ್ಠ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಹಿರಿಯ ಸಚಿವ ಉಮೇಶ ಕತ್ತಿ ಅಗಲಿಕೆಯಿಂದ ಇಡೀ ರಾಜ್ಯಕ್ಕೆ ದೊಡ್ಡ ನಷ್ಠ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಮ್ಮ ಗೃಹ ಕಛೇರಿಯಲ್ಲಿ ಉಮೇಶ ಕತ್ತಿಗೆ ಶೃದ್ಧಾಂಜಲಿ ಸಲ್ಲಿಸಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ: ಸದಾ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ನಾಡಿನ ಹಿರಿಯ ರಾಜಕಾರಣಿ, ಸಚಿವ ಉಮೇಶ ಕತ್ತಿ ಅವರ ನಿಧನದಿಂದ ಇಡೀ ರಾಜ್ಯಕ್ಕೆ ಅಪಾರ ಹಾನಿಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದರು. ಇಲ್ಲಿಯ …

Read More »

ಉಮೇಶ ಕತ್ತಿ ನಿಧನ: ಸ್ವಯಂ ಪ್ರೇರಿತ ಬಂದ್‌, ಮೃತದೇಹ ಒಯ್ಯಲು ಅಲಂಕೃತ ಸೇನಾ ವಾಹನ

ಬೆಳಗಾವಿ: ಉಮೇಶ ಕತ್ತಿ ಅವರ ಮೃತದೇಹವನ್ನು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಅವರ ಹುಟ್ಟೂರಾದ, ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಗೆ ತೆಗೆದುಕೊಂಡು ಹೋಗಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲಂಕೃತ ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲು ತಯಾರಿ ನಡೆದಿದೆ.   ಮೈನಸ್‌ 4 (-4) ಸೆಂಟಿಗ್ರೇಡ್‌ ಉಷ್ಣಾಂಶದ ಪೆಟ್ಟಿಗೆಯನ್ನು ಈ ಸೇನಾ ವಾಹನದಲ್ಲಿ ಈಗಾಗಲೇ ಇಡಲಾಗಿದೆ. ಮೂರು ಕ್ವಿಂಟಲ್‌ ಹೂವುಗಳಿಂದ ವಾಹನವನ್ನು ಅಲಂಕಾರ ಮಾಡಲಾಗಿದೆ. ಸಂಚರಿಸುವ ಮಾರ್ಗ: ಸಾಂಬ್ರಾ …

Read More »

ರಾಜ್ಯದಲ್ಲಿ 3 ದಿನ ಶೋಕಾಚರಣೆ: ಸಿ.ಎಂ ಬೊಮ್ಮಾಯಿ

ಬೆಳಗಾವಿ: ‘ಅರಣ್ಯ ಸಚಿವ ಸಚಿವ ಉಮೇಶ ಕತ್ತಿ ಅವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್ಯದಲ್ಲಿ ಬುಧವಾರದಿಂದ ಮೂರು ದಿನ ಶೋಕಾಚಾರಣೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗವುದು’ ಎಂದರು. ‘ರಾಜ್ಯದಲ್ಲಿ ಪ್ರವಾಹ ನಿರ್ವಹಣೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ. ಶೋಕಾಚರಣೆ ಕಾರಣ ಉಳಿದ ಚಟುವಟಿಕೆಗಳು ನಡೆಯುವುದಿಲ್ಲ’ ಎಂದು ತಿಳಿಸಿದರು. ‘ದೊಡ್ಡಬಳ್ಳಾಪುರದಲ್ಲಿ ಸೆ.8ರಂದು …

Read More »