Breaking News

ಜಿಲ್ಲೆ

ಈ ಗಣೇಶ ಮಂಡಳಿಯ ಒಂದು ತೆಂಗಿನಕಾಯಿ 2.65 ಲಕ್ಷ ರೂ.ಗೆ ಹರಾಜು!

ಬೆಳಗಾವಿ/ಮೂಡಲಗಿ: ಸಾರ್ವಜನಿಕ ಗಣೇಶ ಮಂಡಳಿಯ ಟೆಂಗಿನಕಾಯಿಗಳ ಹರಾಜು ಅಬ್ಬಬ್ಬಾ ಎಂದರೆ 1, 2, 5 ಸಾವಿರ ರೂ. ವರೆಗೆ ಆಗುವುದು ಸಹಜ. ಆದರೆ ಈ ಗಣಪತಿ ಎದುರು ಇಟ್ಟಿರುವ ತೆಂಗಿನಕಾಯಿ ಬರೋಬ್ಬರಿ 2.65 ಲಕ್ಷ ರೂ.ಗೆ ಹರಾಜು ಆಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ.   ಮೂಡಲಗಿ ಪಟ್ಟಣದ ವಿಜಯ ನಗರದ ಶ್ರೀ ಗಜಾನನ ಯುವಕ ಮಂಡಳಿಯ 7ನೇ ದಿನದ ಗಣಪತಿ ವಿಸರ್ಜನೆ ವೇಳೆ ಹರಾಜು ಪ್ರಕ್ರಿಯೆ ನಡೆಯಿತು. ಗಣಪತಿ ಮೂರ್ತಿ ಎದುರು …

Read More »

ತಾತನನ್ನೇ ಕೊಂದು ತೋಟದಲ್ಲಿ ಹೂತುಹಾಕಿದ್ದ ಮೊಮ್ಮಗ! ತುಮಕೂರಲ್ಲಿ 8 ತಿಂಗಳ ಬಳಿಕ ಭಯಾನಕ ರಹಸ್ಯ ಬಯಲು

ತುಮಕೂರು: ತಾತನನ್ನು ಮೊಮ್ಮಗನೇ ಕೊಲೆ ಮಾಡಿದ ರಹಸ್ಯ 8 ತಿಂಗಳ ಬಳಿಕ ಬಯಲಾಗಿದೆ. ಅದೂ ಸ್ನೇಹಿತರ ನಡುವೆ ಮನಸ್ತಾಪ ಉಂಟಾಗಿದ್ದರಿಂದ… ಇಂತಹ ವಿಚಿತ್ರ ಪ್ರಕರಣ ಗುಬ್ಬಿ ತಾಲೂಕಿನ ನಡೆದಿದೆ. ಕಲ್ಲರ್ದಗೆರೆ ಭೋವಿ ಕಾಲನಿಯ ಗೋವಿಂದಪ್ಪ (75) ಕೊಲೆಯಾಗಿದ್ದು, ಪ್ರಕರಣದ ಬೆನ್ನು ಹತ್ತಿದ ಚೇಳೂರು ಪೊಲೀಸರು ಗೋವಿಂದಪ್ಪನ ಮೊಮ್ಮಗ ಮೋಹನ್​ ಹಾಗೂ ಆತನ ಸ್ನೇಹಿತರಾದ ಪ್ರಜ್ವಲ್​, ಚೇತನ್​ ಎಂಬುವವರನ್ನು ಬಂಧಿಸಿದ್ದಾರೆ.   ಏನಿದು ಪ್ರಕರಣ?: ಗೋವಿಂದಪ್ಪಗೆ ನಾಲ್ಕು ಎಕರೆ ಜಮೀನು ಇತ್ತು. ಇವರಿಗೆ ಒಬ್ಬ …

Read More »

ಗ್ರಾಮೀಣ ಕ್ಷೇತ್ರದಲ್ಲಿ ಈಗಿನಿಂದಲೇ ಡಬ್ಬಿ ಹಂಚುವ ಕೆಲಸ ಶುರುವಾಗಿದೆ. ಆ ಡಬ್ಬಿ ಖಾಲಿ ಇದೆಯೋ..? ತುಂಬಿದೆಯೋ..? ಗೊತ್ತಿಲ್ಲ: ಸಂಜಯ ಪಾಟೀಲ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈಗಿನಿಂದಲೇ ಡಬ್ಬಿ ಹಂಚುವ ಕೆಲಸ ಶುರುವಾಗಿದೆ. ಆ ಡಬ್ಬಿ ಖಾಲಿ ಇದೆಯೋ..? ತುಂಬಿದೆಯೋ..? ಗೊತ್ತಿಲ್ಲ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಲೇವಡಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್ ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ನಾನು 10 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಶಾಸಕನಾಗಬೇಕು ಎಂಬ ಆಸೆಯಿದೆ. ಆ ಪ್ರಕಾರ …

Read More »

ಕರ್ನಾಟಕದ ನೀಟ್ ಸಾಧನೆ: ಟಾಪ್ 50 ಪಟ್ಟಿಯಲ್ಲಿ 9 ರ‌್ಯಾಂಕ್; 72000 ವಿದ್ಯಾರ್ಥಿಗಳಿಗೆ ಅರ್ಹತೆ

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ರಾಜ್ಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ. ಅಖಿಲ ಭಾರತ ಮಟ್ಟದ ಟಾಪ್ 20ರಲ್ಲಿ 6 ಹಾಗೂ 50ರ ಪಟ್ಟಿಯಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಥಾನ ಪಡೆೆದಿದ್ದಾರೆ. ಇದಲ್ಲದೆ, ವಿವಿಧ ವಿಭಾಗಗಳಲ್ಲಿನ ಟಾಪರ್​ಗಳನ್ನು ಸೇರಿಸಿದಲ್ಲಿ ಸಂಖ್ಯೆ 14ಕ್ಕೆ ಏರಿಕೆಯಾಗುತ್ತದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದಂತಾಗಿದೆ. ಅರ್ಹತೆಯಲ್ಲೂ ರೆಕಾರ್ಡ್: ಈ ಬಾರಿ ರಾಜ್ಯದ 1,22,423 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟಾರೆ 72,262 ಜನರು …

Read More »

ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

ಗದಗ: ಗಣೇಶ ವಿಸರ್ಜನೆ ವೇಳೆ ಚಾಕು ಇರಿತದಲ್ಲಿ ಯುವಕ ಸಾವನ್ನಪ್ಪಿದ ಘಟನೆ ಗದಗದ ತೋಂಟದಾರ್ಯ ಮಠದ ಬಳಿ ತಡರಾತ್ರಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ಸುದೀಪ್ ಮುಂಡೆವಾಡಿ(22) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಸ್ನೇಹಿತರೇ ಹಲ್ಲೆ ಮಾಡಿ ಚಾಕು ಇರಿದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ತೀವ್ರ ರಕ್ತಸ್ರಾವದಿಂದ ಸುದೀಪ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗದಗದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

ಮುರುಘಾ ಮಠದ ಶಿವಮೂರ್ತಿ ಶ್ರಿಗಳಿಗೆ ಆಂಜಿಯೋಪ್ಲಾಸ್ಟಿ: ವರದಿ ಕೇಳಿದ ನ್ಯಾಯಾಧೀಶರು!

ಚಿತ್ರದುರ್ಗ: ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಹೃದಯ ಚಿಕಿತ್ಸೆ ಅಗತ್ಯವಿದೆ ಎಂಬ ಅರ್ಜಿಗೆ ಸ್ಪಂದಿಸಿರುವ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಬಿ.ಕೆ.ಕೋಮಲಾ, ಶ್ರೀಗಳನ್ನು ಅತ್ಯುತ್ತಮ ಆಸ್ಪತ್ರೆಗೆ ಸ್ಥಳಾಂತರಿಸುವ ಮುನ್ನ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಉತ್ತಮ ಚಿಕಿತ್ಸೆ ಕುರಿತು ವರದಿ ಪಡೆಯುವಂತೆ ಜೈಲು ಅಧೀಕ್ಷಕರಿಗೆ ಬುಧವಾರ ಸೂಚಿಸಿದರು.   ಶ್ರೀಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಧೀಶರು, ರೋಗಿಯ ಪ್ರಾಥಮಿಕ ತಪಾಸಣೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ …

Read More »

ನೀಟ್‌: ರಾಜ್ಯದ 72,262 ವಿದ್ಯಾರ್ಥಿಗಳು ಅರ್ಹ

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ನೀಟ್‌ ಪರೀಕ್ಷೆಯಲ್ಲಿ ರಾಜ್ಯದ 72,262 ವಿದ್ಯಾರ್ಥಿ ಗಳು ಅರ್ಹತೆ ಪಡೆದಿದ್ದಾರೆ. ರಾಜ್ಯದಿಂದ 1,22,423 ವಿದ್ಯಾರ್ಥಿಗಳು ಹಾಜರಾಗಿ ದ್ದರು. ಅಖಿಲಭಾರತ ಮಟ್ಟದ ಮೊದಲ ಐದು ಸ್ಥಾನಗಳಲ್ಲಿ ರಾಜ್ಯದ ಇಬ್ಬರು, ಅಗ್ರ 10 ಸ್ಥಾನಗಳಲ್ಲಿ ಮೂವರು ವಿದ್ಯಾರ್ಥಿಗಳು ಇದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ್‍ಯಾಂಕ್ ಪಡೆದ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸ್‌ಲೆನ್ಸ್‌ನ ಹೃಷಿಕೇಶ್ ನಾಗ ಭೂಷಣ ಗಂಗುಲೆ ರಾಜ್ಯಕ್ಕೆ ಮೊದಲಿಗ. ರಾಜ್ಯ ಸಿಇಟಿಯಲ್ಲಿ ಪ್ರಕೃತಿ …

Read More »

ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ: ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ

ಗೋಕಾಕ: ” ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಜೀವನ ಯಶಸ್ಸು ಕಾಣಬೇಕು” ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ ಅವರು ಹೇಳಿದರು.   ನಗರದ ಗೃಹ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ ಅವರು ಕಟ್ಟಡ ಕಾರ್ಮಿಕ ಬಡಮಕ್ಕಳಿಗೆ ಸಹಾಯಧನ ಚೆಕ್‌ ವಿತರಿಸಿ, ಮಾತನಾಡಿದ ಅವರು,   ಕೂಲಿ ಕಾರ್ಮಿಕರ ಮಕ್ಕಳು ಇನ್ನು ಹೆಚ್ಚಿನ ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ …

Read More »

ಉಮೇಶ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ*

*ಗೋಕಾಕ:* ಅರಣ್ಯ ಹಾಗೂ ಆಹಾರ ಸಚಿವರಾಗಿದ್ದ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕತ್ತಿಯವರ ಬೆಲ್ಲದ ಬಾಗೇವಾಡಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗುರುವಾರದಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ದಿ.ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೃತ ಉಮೇಶ ಕತ್ತಿ ಸಹೋದರ ರಮೇಶ ಕತ್ತಿ, …

Read More »

ಬೆಳಗಾವಿ: ತಾಯಿಗೆ ಹೊಡೆದು ಗಾಯಗೊಳಿಸಿದ ತಂದೆಯನ್ನು ಮಚ್ಚಿನಿಂದ ಕೊಲೆಗೈದ ಪುತ್ರ

ಬೆಳಗಾವಿ: ತಾಯಿಯ ಮೇಲೆ ಮನಬಂದಂತೆ ಥಳಿಸಿ ಗಾಯಗೊಳಿಸಿದ ತಂದೆಯನ್ನು ಮಗ ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ನಡೆದಿದೆ. ಬೈಲಹೊಂಗಲ ಪಟ್ಟಣದ ರುದ್ರಪ್ಪ ತಳವಾರ (55) ಕೊಲೆಯಾದ ವ್ಯಕ್ತಿ. ಸಂತೋಷ ರುದ್ರಪ್ಪ ತಳವಾರ (30) ಆರೋಪಿಯಾಗಿದ್ದಾನೆ. ಕ್ಷುಲ್ಲಕ ಕಾರಣಗಳಿಗಾಗಿ ಪತ್ನಿಯೊಂದಿಗೆ ಜಗಳವಾಡಿದ್ದ ರುದ್ರಪ್ಪ, ಪತ್ನಿ ಮಹಾದೇವಿ ಮೇಲೆ ‌ಮನಬಂದಂತೆ ಹಲ್ಲೆಗೈದು ಗಾಯಗೊಳಿಸಿದ್ದಾನೆ. ತಂದೆ-ತಾಯಿ ಜಗಳ ಕೇಳಿ ಹೊರಹೋಗಿದ್ದ ಮಗ ಸಂತೋಷ ಮನೆಗೆ ಬಂದಿದ್ದಾನೆ. …

Read More »