Breaking News

ಜಿಲ್ಲೆ

ಉಮೇಶ್‌ ಕತ್ತಿ ಸಮಾಧಿಗೆ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ

ಚಿಕ್ಕೋಡಿ: ಹೃದಯಾಘಾತದಿಂದ ಸಾವನ್ನಪ್ಪಿದ ಉಮೇಶ್ ಕತ್ತಿ(Umesh Katti) ಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ಇಂದು ಪೂರೈಸಿದರು. ನಿನ್ನೆ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಗದ್ದೆಯಲ್ಲಿ ತಂದೆ ತಾಯಿ ಸಮಾಧಿ ಪಕ್ಕವೇ ಅವರ ಅಂತ್ಯಕ್ರಿಯೆ ನಡೆದಿತ್ತು. ಸಮಾಧಿಗೆ ತೆರಳಿ ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಪುರೋಹಿತರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದರು. ಸಮಾಧಿಗೆ ಪೂಜೆ ಮಾಡಿ ಸಮಾಧಿಯ ಮೇಲೆ ಅವರಿಷ್ಟದ ತಿಂಡಿ, …

Read More »

ಸಚಿವ ನಿತಿನ್‌ ಗಡ್ಕರಿ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಕನಕಪುರದಲ್ಲಿ ಹಾದುಹೋಗುವ ದಿಂಡಗಲ್‌-ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ- 209ರಲ್ಲಿ ಸಂಚಾರದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರ್ಕಾವತಿ ನದಿ ಉದ್ದಕ್ಕೂ ಇರುವ ಸೇತುವೆಗೆ ಹೊಂದಿಕೊಂಡಂತೆ ದ್ವಿಪಥ ಸೇತುವೆ ನಿರ್ಮಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಆಗ್ರಹಿಸಿದ್ದಾರೆ. ಶುಕ್ರವಾರ ಸಂಸದ ಡಿ.ಕೆ.ಸುರೇಶ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಜತೆಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ರಾಷ್ಟ್ರೀಯ ಹೆದ್ದಾರಿ-209ರಲ್ಲಿ ಕಿ.ಮೀ. 419.550ರಿಂದ …

Read More »

ವಿವಿಧ ಆರೋಪಗಳನ್ನು ಹೊತ್ತಿರುವ 33 ಕ್ಷೇತ್ರ ಶಿಕ್ಷಣಾಧಿ ಕಾರಿಗಳನ್ನು ಸರ್ಕಾರ ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ವರ್ಗಾಯಿಸಿದೆ.

ಬೆಂಗಳೂರು: ಲೋಕಾಯುಕ್ತ, ಇಲಾಖಾ ವಿಚಾರಣೆ ಸೇರಿದಂತೆ ವಿವಿಧ ಆರೋಪಗಳನ್ನು ಹೊತ್ತಿರುವ 33 ಕ್ಷೇತ್ರ ಶಿಕ್ಷಣಾಧಿ ಕಾರಿಗಳನ್ನು ಸರ್ಕಾರ ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ವರ್ಗಾಯಿಸಿದೆ. ಜತೆಗೆ ನಾಲ್ವರು ಶಿಕ್ಷಣಾಧಿ ಕಾರಿಗಳನ್ನೂ ವಿವಿಧ ಹುದ್ದೆ ಗಳಿಗೆ ವರ್ಗಾಯಿಸಲಾಗಿದೆ. ಎಕ್ಸಿಕ್ಯೂಟಿವ್‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪಗಳು ಕೇಳಿಬಂದರೆ, ಅವರ ವಿರುದ್ಧ ತನಿಖೆ, ವಿಚಾರಣೆ ನಡೆಯುತ್ತಿದ್ದರೆ. ಅಂಥವರನ್ನು ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ವರ್ಗಾಯಿಸಬೇಕು ಎಂಬ ನಿಯಮದ ಅನ್ವಯ ಈ ವರ್ಗಾ ವಣೆ ಮಾಡಲಾಗಿದೆ ಎಂದು …

Read More »

ಹೈಕೋರ್ಟ್‌ ಆದೇಶದಂತೆ ಎಸಿಬಿ ರದ್ದು: ಲೋಕಾಯುಕ್ತಕ್ಕೆ ಬಲ

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿರುವ ರಾಜ್ಯ ಸರ್ಕಾರ, ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹಿಂದೆ ನೀಡಿದ್ದ ಅಧಿಕಾರಗಳನ್ನು ಮರುಸ್ಥಾಪಿಸಿ ಶುಕ್ರವಾರ ಆದೇಶ ಹೊರಡಿಸಿದೆ.   ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಪ್ರಕರಣಗಳು, ಬಾಕಿ ಇರುವ ವಿಚಾರಣೆಗಳು, ಶಿಸ್ತುಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳು ಮತ್ತು ಖಾಸಗಿ ದೂರುಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. 2016ರಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು, ಭ್ರಷ್ಟಾಚಾರ …

Read More »

ಕರ್ನಾಟಕ ಸಂಪುಟ: ಸಿಎಂ ಬಸವರಾಜ ಬೊಮ್ಮಾಯಿಗೆ 8 ಖಾತೆಗಳ ಜವಾಬ್ದಾರಿ ಒತ್ತಡ!

ಬೆಂಗಳೂರು, ಸೆಪ್ಟೆಂಬರ್, 09: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸಂಕಟಕ್ಕೆ ಮುಕ್ತಿ ಯಾವಾಗ ಅನ್ನೋ ಪ್ರಶ್ನೆ ಮೂಡಿದೆ. ಬಸವರಾಜ ಬೊಮ್ಮಾಯಿ ಹೆಗಲ ಮೇಲೆ ಮತ್ತಷ್ಟು ಹೊರೆ ಹೆಚ್ಚಾಗುತ್ತಿದೆ. ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆಯಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಖಾತೆ ಸೇರಿದಂತೆ ಉಮೇಶ್ ಕತ್ತಿ ಸಾವಿನಿಂದ ಅರಣ್ಯ ಖಾತೆಯ ಜವಾಬ್ದಾರಿಯು ಸಿಎಂ ಲಭಿಸಿದೆ.   ಬಸವರಾಜ ಬೊಮ್ಮಾಯಿ ಪ್ರಸ್ತುತ 8 ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಹಣಕಾಸು, ಬೆಂಗಳೂರು ನಗರಾಭಿವೃದ್ದಿ, ಗುಪ್ತಚರ, …

Read More »

ಉಮೇಶ್ ಕತ್ತಿ ಜೀವನದ ಕುರಿತು ಪುಸ್ತಕ ಹೊರತರಬೇಕು: ಅರುಣ್ ಸಿಂಗ್

ಬೆಳಗಾವಿ: ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ. ಕೆ. ಸುಧಾಕರ್, ಮುನಿರತ್ನ ಭೈರತಿ ಬಸವರಾಜ ಸೇರಿದಂತೆ ಹಲವು ಗಣ್ಯರು ಬೆಲ್ಲದ ಬಾಗೇವಾಡಿಯ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.   ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಗಣ್ಯರು, ಉಮೇಶ್ ಕತ್ತಿ ಅವರ ಪತ್ನಿ …

Read More »

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಆಗ್ರಹ

ಬೆಳಗಾವಿ: ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶವನ್ನು ಬೇಗನೇ ನೀಡಬೇಕು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.   ಇಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ …

Read More »

‘ಸೈನಿಕರ ಸಾಹಸ ಯುವಕರಿಗೆ ಪ್ರೇರಣೆ’

ಸವದತ್ತಿ: 1965ರ ಸೆಪ್ಟೆಂಬರ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಆಧೀನಕ್ಕೊಳಪಟ್ಟ ಮಹಾರಾಜ ಕೆ ಗ್ರಾಮವನ್ನು ಯುದ್ಧದಿಂದ ಮರಳಿ ಪಡೆಯುವ ಸಂದರ್ಭದಲ್ಲಿ ಕರ್ನಲ್ ಹನಬರಲಾಲ್ ಮೆಹ್ತಾ, ಸುಬೇದಾರ ನಂಬಿಯಾರ್, ಸಿಪಾಯಿ ಕನ್ನನ್, ಸಿ.ಬಿ. ಪಾಟೀಲ ಸೇರಿ ಹುತಾತ್ಮರಾದ ಯೋಧರಿಗೆ ಗುರುವಾರ ನವಿಲುತೀರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.   ನಾಲ್ಕನೇ ಮದ್ರಾಸ್ ಬಟಾಲಿಯನ್‍ದಲ್ಲಿ ಸೇವೆ ಸಲ್ಲಿಸಿದ 55 ಮಾಜಿ ಸೈನಿಕರು ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಗಿಲ್, ಪಂಜಾಬ ಸುವರ್ಣ ಸೌಧದಲ್ಲಿ …

Read More »

ಪರೀಕ್ಷೆ ಅಕ್ರಮ| ಎಲೆಕ್ಟ್ರಾನಿಕ್ ಉಪಕರಣ ಮಾರುತ್ತಿದ್ದ ಬೆಂಗಳೂರಿನ ಆರೋಪಿ ಬಂಧನ

ಬೆಳಗಾವಿ: ಜಿಲ್ಲೆಯ ಗೋಕಾಕ ನಗರದಲ್ಲಿ ಈಚೆಗೆ ನಡೆದ ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ, ಎಲೆಕ್ಟ್ರಾನಿಕ್‌ ಡಿವೈಸ್‌ ಹಾಗೂ ಸ್ಮಾರ್ಟ್‌ ವಾಚ್‌ ಪೂರೈಸಿದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ರಾಜ್ಯದ ವಿವಿಧ ಪರೀಕ್ಷೆಗಳಲ್ಲೂ ಅಕ್ರಮ ಎಸಗಲು ಅವಕಾಶ ಮಾಡಿಕೊಟ್ಟ ಪ್ರಕರಣಗಳಿಗೂ ಸಾಕ್ಷ್ಯ ಸಿಕ್ಕಂತಾಗಿದೆ. ಬೆಂಗಳೂರಿನ ದೇವಸಂದ್ರದ ನಿವಾಸಿ, ಎಸ್ಪಿ ರಸ್ತೆಯಲ್ಲಿ ‘ಸ್ಪೈ ಜೋನ್‌’ ಎಂಬ ಎಲೆಕ್ಟ್ರಾನಿಕ್‌ ಮಳಿಗೆ ಇಟ್ಟುಕೊಂಡ ಮಹಮ್ಮದ್‌ ಅಜೀಮುದ್ದೀನ್‌ (37) ಬಂಧಿತ …

Read More »

ನೀಟ್‌ನಲ್ಲಿ ದೇಶಕ್ಕೆ 4ನೇ ರ್‍ಯಾಂಕ್‌: ಬೆಳಗಾವಿ ತಾಲ್ಲೂಕಿನ ರುಚಾ ಪಾವಶೆ ಸಾಧನೆ

ಬೆಳಗಾವಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌)ಯಲ್ಲಿ ತಾಲ್ಲೂಕಿನ ಉಚಗಾವಿಯ ರುಚಾ ಪಾವಶೆ ದೇಶಕ್ಕೆ 4ನೇ ಮತ್ತು ರಾಜ್ಯಕ್ಕೆ 2ನೇ ರ್‍ಯಾಂಕ್‌ ಗಳಿಸಿದ್ದಾರೆ. ‘ನಾನು ಅಗ್ರ 10 ಸ್ಥಾನದೊಳಗೆ ರ್‍ಯಾಂಕ್‌ ಗಳಿಸುತ್ತೇನೆಂಬ ವಿಶ್ವಾಸವಿರಲಿಲ್ಲ.   ‘ನಾನು ಅಗ್ರ 10 ಸ್ಥಾನದೊಳಗೆ ರ್‍ಯಾಂಕ್‌ ಗಳಿಸುತ್ತೇನೆಂಬ ವಿಶ್ವಾಸವಿರಲಿಲ್ಲ. ಆದರೆ, ಉತ್ತಮ ರ್‍ಯಾಂಕ್‌ ಸಿಗುವ ನಿರೀಕ್ಷೆಯಿತ್ತು. ಈಗ ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮ ಫಲಿತಾಂಶ ಬಂದಿರುವುದಕ್ಕೆ ಸಂತಸದೊಂದಿಗೆ ಅಚ್ಚರಿಯೂ ಆಗಿದೆ’ ಎಂದು ರುಚಾ  …

Read More »