ಬೆಳಗಾವಿ: ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಬೆಳಗಾವಿ ಜಿಲ್ಲೆಗೆ ಗೃಹಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಸಿ. ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ, ಸಚಿವ ನಾರಾಯಣ ಗೌಡ ಹಂಪಿಯಿಂದ ನೇರವಾಗಿ ಬೆಳಗಾವಿ ಸುವರ್ಣ ಸೌಧದ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಈ ವೇಳೆ, ನಾಲ್ವರು ಸಚಿವರನ್ನು ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ್ ಸ್ವಾಗತಿಸಿಕೊಂಡರು. ಪ್ರಧಾನಿಯಿಂದ ಲೋಕಾರ್ಪಣೆ: ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಆರಗ …
Read More »ಗೋಕಾಕ ತಾಲೂಕಿನ ಫಾಲ್ಸ್ ದಲ್ಲಿ ಕಾಣಿಸಿಕೊಂಡ ಮೊಸಳೆ.
ಗೋಕಾಕ ಫಾಲ್ಸ್ ದಲ್ಲಿ ಮೊಸಳೆ ಪ್ರತ್ಯೇಕ್ಷ. (ನೇಗಿನಾಳ ತೋಟ ( ತಡಸಲ ತೋಟ ) ಕೆಳೆದ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡಿತ್ತು ಮೊಸಳೆ. ಮೊಸಳೆ ಪತ್ತೆ ಹಚ್ಚಲು ಅಯೂಬ್ ಖಾನ್ ಟೀಂ ಹಾಗೂ ಅರಣ್ಯ ಇಲಾಖೆ ಸತತ ಪ್ರಯತ್ನ. ಇಂದು ಮತ್ತೆ ಪ್ರತ್ಯೇಕ್ಷವಾದ ಮೊಸಳೆ ಗೋಕಾಕ ತಾಲೂಕಿನ ಫಾಲ್ಸ್ ದಲ್ಲಿ ಕಾಣಿಸಿಕೊಂಡ ಮೊಸಳೆ. ಮೊಸಳೆ ಪತ್ತೆ ಹಚ್ಚಲು ಶೋಧ ಕಾರ್ಯ ಮುಂದುವರೆದಿದೆ.
Read More »ತುಕ್ಕಾನಟ್ಟಿ-ಕಲ್ಲೋಳಿ ರಸ್ತೆ ಸುಧಾರಣೆಗೆ 9.60 ಕೋಟಿ ರೂ.: ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಸಾರ್ವಜನಿಕರ ಸುಗಮ ಸಂಚಾರಕ್ಕೆ ತುಕ್ಕಾನಟ್ಟಿಯಿಂದ ಕಲ್ಲೋಳಿವರೆಗಿನ ರಸ್ತೆ ಸುಧಾರಣಾ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸಿದರು. ಗುರುವಾರದಂದು ಲೋಕೋಪಯೋಗಿ ಇಲಾಖೆಯಿಂದ 9.60 ಕೋಟಿ ರೂ. ವೆಚ್ಚದ ತುಕ್ಕಾನಟ್ಟಿ-ಕಲ್ಲೋಳಿ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಅಭಿವೃದ್ಧಿಯಿಂದ ಕಲ್ಲೋಳಿಯಿಂದ ಸಂಚರಿಸುವ ತುಕ್ಕಾನಟ್ಟಿ ಮತ್ತು ರಾಯಬಾಗ ತಾಲೂಕಿನ ಗ್ರಾಮಗಳಿಗೆ …
Read More »ಎಂಎಲ್‌ಸಿ ಚುನಾವಣೆ: ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕಿಲ್ಲ: ಹೈಕೋರ್ಟ್
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ನಡೆಯವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಸಲ್ಲಿಸಿದ್ದ ಚುನಾವಣ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ …
Read More »ಮೂಲಾ ನಕ್ಷತ್ರದಲ್ಲಿ ಹುಟ್ಟಿದೆ ಎಂದು ಮಗು ಸಮೇತ ಪತ್ನಿಯನ್ನು ಹೊರಗಟ್ಟಿದ ಪತಿ.!
ಮಗು ಮೂಲಾ ನಕ್ಷತ್ರದಲ್ಲಿ ಹುಟ್ಟಿದೆ ಹಾಗೂ ಇದರಿಂದ ಕುಟುಂಬಕ್ಕೆ ಅಪಶಕುನವಾಗಲಿದೆ ಎಂಬ ಮೂಢ ನಂಬಿಕೆಗೆ ಜೋತುಬಿದ್ದ ವ್ಯಕ್ತಿಯೊಬ್ಬ ಮಗು ಹಾಗೂ ಪತ್ನಿಯನ್ನು ಮನೆಯಿಂದ ಹೊರಗಟ್ಟಿರುವ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದ ವಿವರ: ಚನ್ನಪಟ್ಟಣದ ಮಂಜುನಾಥ ಬಡಾವಣೆಯ ವಿನಯ್ ಎಂಬಾತ 2019ರಲ್ಲಿ ಶೃತಿ ಎಂಬವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ವರ್ಷಗಳ ಬಳಿಕ ಮಗು ಜನಿಸಿತ್ತು. ಮಗು ಮೂಲಾ ನಕ್ಷತ್ರದಲ್ಲಿ ಜನಿಸಿರುವುದರಿಂದ ಕುಟುಂಬಕ್ಕೆ ಕೇಡಾಗಲಿದೆ ಎಂಬ ಮೂಢನಂಬಿಕೆಯಿಂದ ವಿನಯ್ ಮತ್ತು …
Read More »ಚಿಕ್ಕೋಡಿ ಉಪವಿಭಾಗಾಧಿಕಾರಿ ವರ್ಗಾವಣೆಗೆ ಜನಾಕ್ರೋಶ: ಜನಪರವಾಗಿರೋದು ಸರ್ಕಾರದ ದೃಷ್ಟಿಯಲ್ಲಿ ತಪ್ಪೇ?
ಚಿಕ್ಕೋಡಿ ಉಪವಿಭಾಗಾಧಿಕಾರಿ ವರ್ಗಾವಣೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಜನಪರವಾಗಿರೋದು ಸರ್ಕಾರದ ದೃಷ್ಟಿಯಲ್ಲಿ ತಪ್ಪೇ ಎಂದು ಸರ್ಕಾರವನ್ನು ಪ್ರಶ್ನಿಸಲಾಗುತ್ತಿದೆ. ಬೆಳಗಾವಿ: ಜನರ ಮನಸ್ಸು ಗೆದ್ದ ಪ್ರಮಾಣಿಕ, ದಕ್ಷ ಆಡಳಿತಗಾರರಾಗಿದ್ದ ಚಿಕ್ಕೋಡಿ ಉಪವಿಭಾಗಾಧಿಕಾರಿ ವರ್ಗಾವಣೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜನರ ಪರವಾಗಿ ಇರುವುದು ಸರ್ಕಾರದ ದೃಷ್ಟಿಯಲ್ಲಿ ತಪ್ಪೇ ಎಂದು ಸಾಮಾಜಿಕ ಜಾಲತಾಣದಲ್ಲಿ ಚಿಕ್ಕೋಡಿ ಜನರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡರ ದಿಡೀರ್ ವರ್ಗಾವಣೆ ಮಾಡಿರುವ ಸರ್ಕಾರದ ವಿರುದ್ಧ ಜನರು …
Read More »ಕರ್ನಾಟಕವು ಸೌಹಾರ್ದತೆಗೆ ಹೆಸರುವಾಸಿಯಾದ ಹೆಮ್ಮೆಯ ನಾಡು- ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ*: ಜಾತಿ, ಧರ್ಮ, ಮೇಲು, ಕೀಳು ಭಾವನೆಗಳು ತೊರೆದು ಕರ್ನಾಟಕವು ಸೌಹಾರ್ದತೆಗೆ ಹೆಸರುವಾಸಿಯಾದ ಹೆಮ್ಮೆಯ ನಾಡು ಎಂದು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮೂಡಲಗಿಯಲ್ಲಿ ತಾಲ್ಲೂಕು ರಾಜ್ಯೋತ್ಸವ ಸಮಿತಿಯಿಂದ ಗುರುವಾರ ಆಚರಿಸಿದ 67ನೇ ಕರ್ನಾಟಕ ರಾಜ್ಯೋತ್ಸವದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಪ್ರತಿಯೊಬ್ಬರೂ ಕನ್ನಡ ಭಾಷೆ, ನಾಡು, ನುಡಿಯ ಬಗ್ಗೆ ಅಭಿಮಾನ ಗೌರವವನ್ನು ಹೊಂದಿರಬೇಕು ಎಂದರು. ಮೂಡಲಗಿಯ ರಾಜ್ಯೋತ್ಸವದ …
Read More »ರಿಂಗ್ ರೋಡ್ ನಿರ್ಮಾಣಕ್ಕೆ ವಿರೋಧಿಸಿ ರೈತರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಮನವಿ
ಬೆಳಗಾವಿ: ನಗರದ ಹೊರವಲಯದಲ್ಲಿ ಕೈಗೊಂಡಿರುವ ವರ್ತುಲ ರಸ್ತೆ (ರಿಂಗ್ ರೋಡ್) ಯೋಜನೆ ಕಾಮಗಾರಿ ಕೈ ಬೀಡುವಂತೆ ಒತ್ತಾಯಿಸಿ ಕಡೋಲಿ, ಬೆನ್ನಾಳಿ, ದೇವಗಿರಿ, ಅಗಸಗಾ, ಅಂಬೇವಾಡಿ ಗ್ರಾಮದ ರೈತರು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ರೈತರ ಮನವಿ ಸ್ವೀಕರಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು,ಈ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ಕ್ರಮ …
Read More »ಹುಬ್ಬಳ್ಳಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ!
ದಶಕಗಳ ಕಾಲ ಜೊತೆಗೂಡಿ ಸಂಸಾರ ನಡೆಸಿದ್ದ ದಂಪತಿ ಸಾವಿನಲ್ಲೂ ಒಂದಾದ ಘಟನೆ ಹುಬ್ಬಳ್ಳಿ-ಧಾರವಾಡದಲ್ಲಿ ಸಂಭವಿಸಿದೆ. ಹುಬ್ಬಳ್ಳಿತಾಲೂಕಿನಶಿರಗುಪ್ಪಗ್ರಾಮದ ನಿವಾಸಿಗಳಾದ ಶಿವಪುತ್ರಪ್ಪನೆಲಗುಡ್ಡ (90) ಹಾಗೂಬಸಮ್ಮ (86) ಸಾವಿನಲ್ಲೂಒಂದಾದದಂಪತಿ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ಅವರು ವಯೋಸಹಜ ಮರಣವನ್ನು ಹೊಂದಿದ್ದರು . ತನ್ನ ಪತಿಯ ಸಾವಿನಿಂದ ತೀವ್ರ ನೋವಿನಲ್ಲಿದ್ದ ಪತ್ನಿ ಬಸಮ್ಮ , ಶಿವಪುತ್ರಪ್ಪ ಅವರ ಅಂತ್ಯಕ್ರಿಯೆ ಸಮಯದಲ್ಲಿ ಹೃದಯಾಘಾತದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ . ಕುಟುಂಬಸ್ಥರು ಅಕ್ಕಪಕ್ಕವೇ ದಂಪತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ದಂಪತಿಯ …
Read More »ಬಡವರ ಊಟಕ್ಕೆ ಕಲ್ಲು ಹಾಕ್ತಾ ಬೊಮ್ಮಾಯಿ ಸರ್ಕಾರ?: 40 ಇಂದಿರಾ ಕ್ಯಾಂಟೀನ್ ಕ್ಲೋಸ್
ಬೆಂಗಳೂರು: ಬಡವರಿಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಬೆಂಗಳೂರಿನ 40 ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚಲಾಗಿದೆ. ಆರ್ ಆರ್ ನಗರ ವಲಯದಲ್ಲಿ ಒಟ್ಟು 8 ಕ್ಯಾಂಟೀನ್ಗಳನ್ನು ಕ್ಲೋಸ್ ಮಾಡಲಾಗಿದೆ. ಬಿಬಿಎಂಪಿಯಿಂದ ಸಬ್ಸಿಡಿ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ ಎನ್ನುವ ಕಾರಣವನ್ನು ನೀಡಿ ಸಾಕಷ್ಟು ಕಡೆ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ. ಹಾಗೂ ಕೆಲವೇ …
Read More »
Laxmi News 24×7